Online Police Complaint: ಮನೆಯಲ್ಲೇ ಕುಳಿತು ಪೊಲೀಸ್ ಕಂಪ್ಲೇಂಟ್ ಕೊಡೋದು ಹೇಗೆ?

ಸುಲಭವಾಗಿ ಪೊಲೀಸ್ ಕಂಪ್ಲೇಂಟ್ ಕೊಡೋದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಆದರೆ ಸುಳ್ಳು ದೂರು ದಾಖಲಿಸಿದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಬಹುದು ಹುಷಾರ್!

ಪೊಲೀಸ್ ಎಂದರೆ ಭಯ ಬೇಡ

ಪೊಲೀಸ್ ಎಂದರೆ ಭಯ ಬೇಡ

  • Share this:
ಪೊಲೀಸ್ ಎಂದರೆ ಭಯ ಬೀಳುವ ಕಾಲ ಇದಲ್ಲ. ಅಸಹಜವಾಗಿ ಏನೇ ಆದರೂ ಮೊದಲು ಪೊಲೀಸರಿಗೆ ಮಾಹಿತಿ ತಿಳಿಸಬೇಕು ಎಂದು ಎಲ್ಲರೂ ಅರಿತಿದ್ದರೂ ಜನರಲ್ಲಿ ಪೊಲೀಸರ ಬಗ್ಗೆ ಕೊಂಚ ಭಯ ಇದ್ದೇ ಇದೆ. ಇದೇ ಭಯವೇ ಅಪರಾಧಗಳನ್ನು ತಡೆಯಲು ಅಡ್ಡಿ ಮಾಡುತ್ತದೆ. ಪೊಲೀಸ್ ಸ್ಟೇಶನ್ (Police Station) ಎಂದರೇ ಎಷ್ಟೋ ಜನರಿಗೆ ಭಯ, ಹೆದರಿಕೆ. ಪೊಲೀಸ್ ಸ್ಟೇಶನ್ ಮೆಟ್ಟಿಲು ಹತ್ತಲು ಹಿಂಜರಿಕೆ. ಆದರೆ ಏನಾದರೂ ಸಮಸ್ಯೆ ಆದರೆ ಪೊಲೀಸರೇ (Karnataka Police) ಬೇಕು ಎಂಬುದನ್ನು ಮರೆಯದಿರಿ. ಇದೇ ಕಾರಣಕ್ಕೆ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲು ಮನೆಯಲ್ಲೇ ಕುಳಿತು ನಿಮ್ಮ ಕೈಲಿರುವ ಮೊಬೈಲ್​ನಿಂದಲೇ ಪೊಲೀಸರಿಗೆ ಕಂಪ್ಲೇಂಟ್ (Online Police Complaint) ಕೊಡಬಹುದು. ಅದೂ ಬಹಳ ಸುಲಭವಾಗಿ. ಅದು ಹೇಗೆಂಬ ವಿವರ ಇಲ್ಲಿದೆ.

ಜನಸಾಮಾನ್ಯರು ತಮ್ಮ ಮೊಬೈಲ್‌, ಪರ್ಸ್‌ ಅಥವಾ ಎಂಟಿಎಂ ಕಾರ್ಡ್​ನಂತರ ಅಮೂಲ್ಯ ವಸ್ತುಗಳು ಕಳುವಾದರೆ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ.  ಮನೆಯಲ್ಲೇ ಕುಳಿತೂ ದೂರು ಸಲ್ಲಿಸಬಹುದು. ನಿಮ್ಮ ಅತ್ಯಮೂಲ್ಯ ವಸ್ತು ಕಳುವಾದ ಕುರಿತು ರಾಜ್ಯ ಪೊಲೀಸ್‌ ಇಲಾಖೆಯ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಿ ಎಫ್‌ಐಆರ್​ ಸಹ ಪಡೆಯಬಹುದಾಗಿದೆ. ಈ ವ್ಯವಸ್ಥೆಯಿಂದ ಜನರ ಸಮಯ, ಶ್ರಮ ಉಳಿತಾಯವಾಗುತ್ತದೆ. ಅಷ್ಟೇ ಅಲ್ಲದೇ ಪೊಲೀಸ್ ವ್ಯವಸ್ಥೆಯ ಬಗ್ಗೆ ಜನರಲ್ಲಿ ನಂಬಿಕೆ ದೃಢವಾಗುತ್ತದೆ.

ಆನ್​ಲೈನ್​ನಲ್ಲಿ ದೂರು ನೀಡುವುದು ಹೇಗೆ?

http://www.bmtf.gov.in ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ ಅಥವಾ ಇನ್ನೂ ಸುಲಭವಾಗಿ ಕಂಪ್ಲೇಂಟ್ ಕೊಡಲು ಇಲ್ಲಿ ಕ್ಲಿಕ್ ಮಾಡಿ

ಆನ್‌ಲೈನ್ ದೂರುಗಳ ಮೇಲೆ ಕ್ಲಿಕ್ ಮಾಡಿ.

ಇ-ಲಾಸ್ಟ್ ರಿಪೋರ್ಟ್ (ಅಪ್ಲಿಕೇಶನ್) ವೆಬ್ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ

Lost Lodge Report ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ

ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ

ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ -ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಹುಟ್ಟಿದ ದಿನಾಂಕ

ಪಟ್ಟಿಯಿಂದ ID ಕಾರ್ಡ್ ಪ್ರಕಾರವನ್ನು ಆಯ್ಕೆಮಾಡಿ, ID ಕಾರ್ಡ್ ಸಂಖ್ಯೆಯನ್ನು ನಮೂದಿಸಿ.

ನಿಮ್ಮ ಮೊಬೈಲ್​ ನಂಬರ್​ಗೆ ಒಟಿಪಿ ಬರುತ್ತದೆ. ಅದನ್ನು ಮತ್ತು ಕಾಣಿಸುವ ಕ್ಯಾಚ್ಪಾ ಕೋಡ್ ನಮೂದಿಸಿ.

ನಂತರ ನಿಮ್ಮ ದೂರು ದಾಖಲಾದ ಬಗ್ಗೆ ಮಾಹಿತಿ ಕಾಣಿಸುತ್ತದೆ.

ನೀವು ಸಲ್ಲಿಸಿದ ಪೊಲೀಸ್ ಕಂಪ್ಲೇಂಟ್ ಸ್ಥಿತಿಯನ್ನು ಹೇಗೆ ವೀಕ್ಷಿಸುವುದು?

ನಿಮ್ಮ ದೂರಿನ ಸ್ಥಿತಿಯನ್ನು ತಿಳಿಯಿರಿ ಆಯ್ಕೆಮಾಡಿ.

ದೂರಿನ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ನೋಡಬಹುದು.

ದೂರಿನ ಪಕ್ಕದಲ್ಲಿ ಸಂಪರ್ಕ ಮಟ್ಟದ ಅಧಿಕಾರಿಗಳ ವಿವರಗಳನ್ನು ನವೀಕರಿಸಲಾಗುತ್ತದೆ.

ಇದನ್ನೂ ಓದಿ: ಮಕ್ಕಳೂ e-Shram ಯೋಜನೆ ಅಡಿ ನೋಂದಾಯಿಸಿಕೊಳ್ಳಬಹುದೇ? ಏನೆಲ್ಲ ಪ್ರಯೋಜನ ಸಿಗುತ್ತೆ?

ಪ್ರಥಮ ಮಾಹಿತಿ ವರದಿಯನ್ನು ಅಥವಾ ಎಫ್​ಐಆರ್​ ಅನ್ನು ಮನೆಯಲ್ಲೇ ಕುಳಿತು ಆನ್​ಲೈನ್ ಮೂಲಕ ಸಲ್ಲಿಸಲು ಬಯಸುವ ಜನರಿಗೆ ಆನ್‌ಲೈನ್‌ನಲ್ಲಿ ಎಫ್‌ಐಆರ್ ದಾಖಲಿಸಲು ಕರ್ನಾಟಕದ ಬೆಂಗಳೂರಿನಲ್ಲಿ ಪರಿಚಯಿಸಲಾದ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ನೀವು ಬೆಂಗಳೂರು ಪೊಲೀಸರಿಗೆ ನಿಮ್ಮ ದೂರುಗಳನ್ನು ನಿಮ್ಮ ಮೊಬೈಲ್ ಮೂಲಕವೇ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಎಫ್‌ಐಆರ್ ದಾಖಲಿಸಬಹುದು. ದಿನದ ಯಾವುದೇ ಸಮಯದಲ್ಲಿ ಯಾವುದೇ ಪೊಲೀಸ್ ಠಾಣೆಗಳಿಗೆ ಹೋಗದೆ ವೆಬ್ ಅಪ್ಲಿಕೇಶನ್ ಮೂಲಕ ದಾಖಲಿಸಬಹುದು

ಇದನ್ನೂ ಓದಿ: MGNREGA 2022: ಉದ್ಯೋಗ ಖಾತ್ರಿ ಯೋಜನೆಯಡಿ ನೀವು ಉದ್ಯೋಗ ಪಡೆಯಬಹುದೇ? ಇಲ್ಲಿ ಚೆಕ್ ಮಾಡಿ

ಹಾ! ಇನ್ನೊಂದು ವಿಷಯ ನೆನಪಿಡಿ. ನೀವು ಸುಳ್ಳು ದೂರು ದಾಖಲಿಸಿದರೆ ನಿಮ್ಮ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬಹುದು ಹುಷಾರ್!
Published by:guruganesh bhat
First published: