Vegetable Grafting: ತರಕಾರಿ ಸಸಿಗಳನ್ನು ನಾಟಿ ಮಾಡುವುದು ಹೇಗೆ? ಇವರು ಹೇಳಿದಂತೆ ಮಾಡಿ ದಿನಕ್ಕೆ 4 ಸಾವಿರ ಗಳಿಸಿ

ಕೆಲವೊಂದು ತರಕಾರಿಗಳನ್ನು ಬೆಳೆಯಯುವುದಕ್ಕೆ ರೈತರು ಹಿಂಜರಿಯಲು ಮುಖ್ಯ ಕಾರಣದ ಕುರಿತು "ರೈತರು ಅವುಗಳನ್ನು ಬೆಳೆಯಲು ಹಿಂಜರಿಯುವುದಕ್ಕೆ ಒಂದು ಪ್ರಮುಖ ಕಾರಣವೆಂದರೆ, ಸಾಮಾನ್ಯವಾಗಿ ಈ ಬೆಳೆಗಳನ್ನು ಸಸಿಗಳಿಂದ ಅಭಿವೃದ್ಧಿಪಡಿಸುತ್ತಾರೆ. ಬೀಜಗಳಿಂದ ಈ ತರಕಾರಿಗಳನ್ನು ಬೆಳೆಯುವುದಿಲ್ಲ. ವಿಶೇಷವಾಗಿ ಕೇರಳದಲ್ಲಿ, ಬೀಜಗಳಿಂದ ಮಾತ್ರ ತರಕಾರಿಗಳನ್ನು ಬೆಳೆಯುವ ಅಭ್ಯಾಸವನ್ನು ಹೆಚ್ಚಿನ ರೈತರು ಹೊಂದಿದ್ದಾರೆ.

ಡಾ. ನಾರಾಯಣನ್ ಕುಟ್ಟಿ

ಡಾ. ನಾರಾಯಣನ್ ಕುಟ್ಟಿ

  • Share this:
ತೋಟಗಾರಿಕೆಯು ಭಾರತದ ಆರ್ಥಿಕತೆಯಲ್ಲಿ (Indian economy) ಮಹತ್ವದ ಪಾತ್ರವನ್ನು ವಹಿಸುತ್ತದೆ. ಭಾರತವು ಒಟ್ಟು 320.48 ಮಿಲಿಯನ್ ಟನ್ ತರಕಾರಿಗಳು (Vegetables) ಮತ್ತು ಹಣ್ಣುಗಳನ್ನು (Fruits) ಉತ್ಪಾದಿಸುತ್ತದೆ. ಇದು ದೇಶದ ಆಹಾರ ಧಾನ್ಯ ಉತ್ಪಾದನೆಗಿಂತ ಹೆಚ್ಚು ಪಟ್ಟಾಗಿದೆ. ಆದರೆ ಕೃಷಿಯಲ್ಲಿ ಆಗುತ್ತಿರುವ ಮಹತ್ತರ ಪ್ರಯೋಗಗಳು ಈ ತೋಟಗಾರಿಕೆಯಲ್ಲಿ ನಡೆಯುತ್ತಿಲ್ಲ. ಉದಾಹರಣೆಗೆ, ಈ ಶತಮಾನದ ಆರಂಭದ ಕೆಲವು ವರ್ಷಗಳವರೆಗೆ, ಕೇರಳದಲ್ಲಿ (Kerala) ಎಲೆಕೋಸು ಮತ್ತು ಹೂಕೋಸುಗಳಂತಹ ಚಳಿಗಾಲ ಋತುವಿನಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಯಲಾಗಲಿಲ್ಲ. ಕೇರಳದ ಹಲವು ಪ್ರದೇಶಗಳು ಸೂಕ್ತವಲ್ಲದ ಹವಾಮಾನವನ್ನು (weather) ಹೊಂದಿದೆ ಎಂದು ಊಹೆ ಮಾಡಲಾಗಿದೆ ಎಂದು ಕೇರಳ ಕೃಷಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಮತ್ತು ಸಂಶೋಧನಾ ನಿರ್ದೇಶಕ ಡಾ. ಸಿ. ನಾರಾಯಣನ್ ಕುಟ್ಟಿ ಹೇಳುತ್ತಾರೆ.

ಕೇರಳದಲ್ಲಿ ಹೆಚ್ಚಾಗಿ ಬಳಸುವ ತರಕಾರಿಗಳು 
"ಎಲೆಕೋಸು ತರಕಾರಿಯನ್ನು ತೋರನ್ ಎಂಬ ಕೇರಳದ ವಿಶೇಷ ರೆಸಿಪಿಯಲ್ಲಿ ಹೆಚ್ಚು ಬಳಕೆ ಮಾಡುತ್ತಾರೆ, ಅಲ್ಲದೆ ಇದನ್ನು ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ವಿವಿಧ ರೀತಿಯ ಭಕ್ಷ್ಯಗಳಲ್ಲಿ ಬಳಕೆ ಮಾಡುತ್ತಾರೆ. ಆದರೂ ಕೂಡ ಕೇರಳದ ಬಹಳಷ್ಟು ರೈತರು ಎಲೆಕೋಸು ಮತ್ತು ಹೂಕೋಸು ಬೆಳೆಗಳನ್ನು ಬೆಳೆಯಲು ಹಿಂಜರಿಯುತ್ತಾರೆ" ಎಂದು ನಾರಾಯಣನ್ ಹೇಳುತ್ತಾರೆ.

ಡಾ. ನಾರಾಯಣನ್ ಕುಟ್ಟಿ ಅವರು ತಮ್ಮ ವಿಶ್ವವಿದ್ಯಾನಿಲಯದಲ್ಲಿ ನಾಟಿ ಮಾಡುವ ಮೂಲಕ ತರಕಾರಿಗಳನ್ನು ಬೆಳೆದ ಮೊದಲ ಕೆಲವರಲ್ಲಿ ಒಬ್ಬರಾಗಿದ್ದಾರೆ. ಅದರಿಂದ ಬಂದಂತಹ ಫಲಿತಾಂಶಗಳು ಸಹ ಅದ್ಭುತವಾಗಿವೆ ಎಂದು ಅವರು ಹೇಳುತ್ತಾರೆ. ಅವರು ಇಲ್ಲಿಯವರೆಗೂ ತಲಾ 1 ರಿಂದ 1.5 ಕೆಜಿ ತೂಕವಿರುವ ಎಲೆಕೋಸು ಮತ್ತು ಹೂಕೋಸುಗಳನ್ನು ಬೆಳೆದಿದ್ದಾರೆ. ಶೀಘ್ರದಲ್ಲೇ, ಈ ತರಕಾರಿ ಬೆಳೆಗಳನ್ನು ರಾಜ್ಯದಲ್ಲಿ ಹೆಚ್ಚು ಬೆಳೆಯಲು ಪ್ರೋತ್ಸಾಹ ನೀಡುತ್ತೇವೆ ಎಂದು ಹೇಳಲು ಅವರು ಮರೆಯುವುದಿಲ್ಲ.

ಈ ತರಕಾರಿ ಬೆಳೆಗಳನ್ನು ಬೆಳೆಯುವುದಕ್ಕೆ ರೈತರೇಕೆ ಹಿಂಜರಿಯುತ್ತಾರೆ?
ಈ ತರಕಾರಿಗಳನ್ನು ಬೆಳೆಯಯುವುದಕ್ಕೆ ರೈತರು ಹಿಂಜರಿಯಲು ಮುಖ್ಯ ಕಾರಣದ ಕುರಿತು "ರೈತರು ಅವುಗಳನ್ನು ಬೆಳೆಯಲು ಹಿಂಜರಿಯುವುದಕ್ಕೆ ಒಂದು ಪ್ರಮುಖ ಕಾರಣವೆಂದರೆ, ಸಾಮಾನ್ಯವಾಗಿ ಈ ಬೆಳೆಗಳನ್ನು ಸಸಿಗಳಿಂದ ಅಭಿವೃದ್ಧಿಪಡಿಸುತ್ತಾರೆ. ಬೀಜಗಳಿಂದ ಈ ತರಕಾರಿಗಳನ್ನು ಬೆಳೆಯುವುದಿಲ್ಲ. ವಿಶೇಷವಾಗಿ ಕೇರಳದಲ್ಲಿ, ಬೀಜಗಳಿಂದ ಮಾತ್ರ ತರಕಾರಿಗಳನ್ನು ಬೆಳೆಯುವ ಅಭ್ಯಾಸವನ್ನು ಹೆಚ್ಚಿನ ರೈತರು ಹೊಂದಿದ್ದಾರೆ. ಇದಕ್ಕೆ ಕಾರಣ ಬ್ಯಾಕ್ಟೀರಿಯಾ ವಿಲ್ಟ್ ಎಂಬ ಕಾಯಿಲೆಯ ಭಯ. ಬ್ಯಾಕ್ಟೀರಿಯಾದ ದಾಳಿಯನ್ನು ತಡೆದುಕೊಳ್ಳಬಲ್ಲ ಸ್ಥಳೀಯ ವೈವಿಧ್ಯಮಯ ತರಕಾರಿ ಸಸಿಗಳನ್ನು ಕಸಿ ಮಾಡುವುದೇ ಇದಕ್ಕೆ ಇರುವ ಏಕೈಕ ಮಾರ್ಗ ”ಎಂದು 61 ವರ್ಷದ ಕೃಷಿಕ ಸಹ ಆಗಿರುವ ಡಾ. ನಾರಾಯಣನ್ ಕುಟ್ಟಿ ವಿವರಿಸುತ್ತಾರೆ.

ಇದನ್ನೂ ಓದಿ: Wild Fruit: ಅಪರೂಪದ ಕಾಡು ಹಣ್ಣನ್ನು ಬೆಳೆದು ಲಕ್ಷಾಧಿಪತಿಯಾದ ರೈತ! ಕೃಷಿ ಮಾಡ್ತಿನಿ ಅನ್ನುವವರು ಒಮ್ಮೆ ಇವ್ರನ್ನು ನೋಡಿ

ಸಸ್ಯಗಳನ್ನು ನಾಟಿ ಮಾಡುವುದು ಹೇಗೆ?
ನಾಟಿ ಮಾಡುವ ವಿಧಾನದ ಮೂಲಕ ಪ್ರತಿದಿನ ಲಕ್ಷಾಂತರ ಸಸಿಗಳನ್ನು ಉತ್ಪಾದಿಸುವ ದೇಶವಾದ ಇಸ್ರೇಲ್‌ನಲ್ಲಿ ನಡೆದ ತರಬೇತಿ ಅಧಿವೇಶನದಲ್ಲಿ ಭಾಗವಹಿಸುವ ಮೂಲಕ ಡಾ. ನಾರಾಯಣನ್ ಕುಟ್ಟಿ ಅವರು ಸಸ್ಯಗಳನ್ನು ನಾಟಿ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡಿದ್ದಾರೆ. ಈ ವಿಧಾನವನ್ನು ಕೃಷಿ ಮತ್ತು ತೋಟಗಾರಿಕೆಯಲ್ಲಿ ಅಳವಡಿಸಿಕೊಳ್ಳುವುದರಿಂದ ರೈತರಿಗೆ ಅನೇಕ ದಿನಗಳ ಕೆಲಸ ಉಳಿಯುತ್ತದೆ ಮತ್ತು ಸಾಮಾನ್ಯ ಬೀಜ ಕೃಷಿಗೆ ಹೋಲಿಸಿದರೆ ಈ ವಿಧಾನವು ಹೆಚ್ಚಿನ ಇಳುವರಿಯನ್ನು ಕೂಡ ನೀಡುತ್ತದೆ. ಇದರ ಜೊತೆಗೆ ಈ ವಿಧಾನದಿಂದ ಬೆಳೆದಿರುವ ಬೆಳೆಗಳು ಶೇಕಡಾ 30 ರಷ್ಟು ಹೆಚ್ಚು ಇಳುವರಿಯನ್ನು ಕಂಡು ಸಸ್ಯಗಳನ್ನು ನಾಟಿ ಮಾಡುವುದು ನಿಜಕ್ಕೂ ಉತ್ತಮ ಎಂದು ಅವರು ಗಮನಿಸುತ್ತಾರೆ.



“ನಾನು ಎಲೆಕೋಸು, ಹೂಕೋಸು ತರಕಾರಿಗಳ ನಂತರ ಟೊಮೆಟೊ, ಬದನೆ ಮತ್ತು ಮೆಣಸಿನಕಾಯಿಗಳೊಂದಿಗೆ ನನ್ನ ಸಸಿಗಳನ್ನು ನಾಟಿ ಮಾಡುವ ವಿಧಾನದವನ್ನು ಪ್ರಾರಂಭಿಸಿದೆ. 100 ರಂಧ್ರಗಳಿರುವ ಟ್ರೇಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪ್ರಮಾಣೀಕರಿಸಲು ಮುಂದಾದೆ. ಇದನ್ನು ಅನುಸರಿಸಿ, ನಾವು ಉದ್ಯಾನ ನರ್ಸರಿಗಳನ್ನು ಹೆಚ್ಚು ಬೆಳೆದಿದ್ದೇವೆ. ಇದರಿಂದ ಅನೇಕ ರೈತರು ಈ ಸಸ್ಯಗಳನ್ನು ಖರೀದಿ ಮಾಡಲು ಆರ್ಡರ್ ಕೂಡ ಮಾಡುತ್ತಿದ್ದಾರೆ. ಈ ನಾಟಿ ಮಾಡುವ ವಿಧಾನದಿಂದ ಬೆಳೆದ ಬೆಳವಣಿಗೆಯನ್ನು ಅಧ್ಯಯನ ಮಾಡಲು ಹಲವಾರು ಕೃಷಿ ಅಧಿಕಾರಿಗಳು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಈ ವಿಧಾನವು ಅತ್ಯಂತ ಪರಿಣಾಮಕಾರಿ ಮತ್ತು ಪ್ರಯೋಜಕಾರಿ" ಎಂದು ದೃಢಪಡಿಸಿರುವುದಾಗಿ ನಾರಾಯಣನ್ ಅವರು ವಿವರಿಸುತ್ತಾರೆ.

ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, “ನಂತರದ ದಿನಗಳಲ್ಲಿ ಕೇರಳದ ಪ್ರಮುಖ ಗಾರ್ಡನ್ ನರ್ಸರಿಗಳು ಮತ್ತು ಅನೇಕ ರೈತರು ಸಸ್ಯಗಳನ್ನು ಕಸಿ ಮಾಡುವ ವಿಧಾನವನ್ನು ಕೈಗೆತ್ತಿಕೊಂಡರು. 2011 ರಿಂದ ರಾಜ್ಯ ತೋಟಗಾರಿಕಾ ಮಿಷನ್ ರಾಜ್ಯವು ತೋಟಗಾರಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಪ್ರತಿ ಕುಟುಂಬಕ್ಕೆ ಗ್ರೋ ಬ್ಯಾಗ್‌ಗಳನ್ನು ವಿತರಿಸಲು ಪ್ರಾರಂಭಿಸಿತು. ಈ ಗ್ರೋ ಬ್ಯಾಗ್‌ಗಳ ಜೊತೆಗೆ, ಅವರು ಕಸಿ ವಿಧಾನವನ್ನು ಬಳಸಿ ಟ್ರೇಗಳಲ್ಲಿ ಬೆಳೆದ ತರಕಾರಿ ಸಸಿಗಳನ್ನು ಸಹ ನೀಡಲು ಮುಂದಾದರು. ಅದು ಇಂದಿಗೂ ಮುಂದುವರಿದಿರುವ ಪ್ರಕ್ರಿಯೆ ಆಗಿದೆ.

ಸಸ್ಯಗಳನ್ನು ನಾಟಿ ಮಾಡುವುದಕ್ಕೆ ತರಬೇತಿ ಎಲ್ಲಿ ಸಿಗುತ್ತದೆ?
“ಸಸ್ಯಗಳನ್ನು ನಾಟಿ ಮಾಡುವುದು ನಿಜಕ್ಕೂ ನುರಿತ ಕೆಲಸ ಆಗಿದೆ. ಇದರ ಜೊತೆಗೆ ಈ ವಿಧಾನವನ್ನು ಕಲಿಯಲು ವಿಶೇಷ ತರಬೇತಿಯ ಅಗತ್ಯವಿದೆ. ಪ್ರಸ್ತುತ, ಕೇರಳದ ಕೃಷಿ ವಿಶ್ವವಿದ್ಯಾನಿಲಯವು ವಾಣಿಜ್ಯ ಆಧಾರದ ಮೇಲೆ ತರಕಾರಿ ಕೃಷಿ ಮಾಡಲು ಬಯಸುವವರಿಗೆ ಇದರ ತರಗತಿಗಳನ್ನು ಒದಗಿಸುತ್ತದೆ ”ಎಂದು ಡಾ. ನಾರಾಯಣನ್ ಕುಟ್ಟಿ ಹೇಳಿದ್ದಾರೆ .

ಇದನ್ನೂ ಓದಿ:  Business: ದಿನಕ್ಕೆ 12 ಟನ್ ಕೋಕಮ್ ಶರ್ಬತ್ ತಯಾರಿಸಿ ಕೋಟಿ ಹಣ ಸಂಪಾದಿಸಿ ಯಶಸ್ಸು ಕಂಡ ಮಹಿಳೆ

“ಈ ವಿಧಾನದಿಂದ ಬೆಳೆದ ಸಸಿಗಳನ್ನು ವಿಶ್ವವಿದ್ಯಾನಿಲಯದ ಹೊರತಾಗಿ, ತ್ರಿಶೂರ್‌ನಲ್ಲಿ ಕವುಂಗಲ್ ಆಗ್ರೋ ಟೆಕ್‌ನಂತಹ ಕೆಲವು ಉದ್ಯಾನ ನರ್ಸರಿಗಳು ರೈತರಿಗೆ ಒದಗಿಸುತ್ತವೆ. ಹೆಚ್ಚಿನ ನರ್ಸರಿಗಳು ಮತ್ತು ರೈತರು ಈ ವಿಧಾನವನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಇದು ಸಾಮಾನ್ಯ ತರಕಾರಿ ಕೃಷಿಗಿಂತ ಹೆಚ್ಚು ಪರಿಣಾಮಕಾರಿ. ಈ ವಿಧಾನದಲ್ಲಿ ಬೆಳೆಗಳು ವೇಗವಾಗಿ ಬೆಳೆಯುತ್ತವೆ. ಈ ನಾಟಿ ಮಾಡಿದ ವಿಧಾನದಿಂದ ಬೆಳೆದ ಸಸಿಗಳನ್ನು ಸಿದ್ಧಪಡಿಸಿದ ಭೂಮಿಯಲ್ಲಿ ನೆಡಬಹುದು ”ಎಂದು ಈಗ ಸ್ವತಂತ್ರ ಕೃಷಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಪ್ರಾಧ್ಯಾಪಕರಾದ ನಾರಾಯಣನ್ ಕುಟ್ಟಿ ಅವರು ತಿಳಿಸಿದ್ದಾರೆ .

ಒಂದು ದಿನದಲ್ಲಿ ಸರಾಸರಿ 1,000 ಗಿಡಗಳ ನಾಟಿ 
"ಸಾಮಾನ್ಯ ಕೃಷಿ ಬೀಜ ಬಿತ್ತನೆ ವಿಧಾನದ ಸರಾಸರಿ ಬೆಳೆಗಳ ಪ್ರಮಾಣವು ಶೇಕಡಾ 60 ರಷ್ಟಿದ್ದರೆ, ಈ ವಿಧಾನದಲ್ಲಿ ಬೆಳೆಗಳ ಪ್ರಮಾಣವು ಶೇಕಡಾ 90 ರಷ್ಟಿದೆ" ಎಂದು 2014 ರ ಕೃಷಿ ವಿಜ್ಞಾನ ಪ್ರಶಸ್ತಿ ಪುರಸ್ಕೃತ ಡಾ. ನಾರಾಯಣನ್ ಕುಟ್ಟಿ ಹೇಳುತ್ತಾರೆ. ಈ ನಾಟಿ ಮಾಡುವ ವಿಧಾನದಿಂದ ಬೆಳೆಯುವ ಸಸಿಗಳನ್ನು ಬಿಡುವಿಲ್ಲದೆ ಮಾಡಿದರೆ ಒಂದು ದಿನದಲ್ಲಿ ಸರಾಸರಿ 1,000 ಗಿಡಗಳನ್ನು ನಾಟಿ ಮಾಡಬಹುದು. ಪ್ರತಿ ಸಸಿಗೆ ಅಂದಾಜು 4 ರೂ. ವೆಚ್ಚವಾಗುತ್ತದೆ. ಅಂದರೆ ಒಂದು ದಿನಕ್ಕೆ 4,000 ರೂ. ಹಾಗಿದ್ರೆ ಒಂದು ಒಟ್ಟು 1000 ಸಸಿಗಳಿಗೆ ನೀವು ರೂ. 4000 ಗಳಿಸುವ ಅವಕಾಶ ಈ ವಿಧಾನದಿಂದ ದೊರಕುತ್ತದೆ.



"ನಿಮಗೆ ಸಸಿಗಳನ್ನು ನಾಟಿ ಮಾಡಲು ಸಾಧ್ಯವಾಗದಿದ್ದರೆ, ಅಂತಹ ಸಸಿಗಳನ್ನು ನರ್ಸರಿಗಳಿಂದ ಸಂಗ್ರಹಿಸಿ, ನಾಟಿ ಸಸಿಗಳನ್ನು ಬೆಳೆಯಲು ಪ್ರಯತ್ನಿಸಿ. ಈ ವಿಧಾನವನ್ನು ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಕರ್ನಾಟಕದ ರೈತರು ವ್ಯಾಪಕವಾಗಿ ಬಳಸುತ್ತಾರೆ. ಕೇರಳ ಈಗ ನಿಧಾನವಾಗಿ ಈ ವಿಧಾನವನ್ನು ತನ್ನ ಕೃಷಿಯಲ್ಲಿ ಬಳಕೆ ಮಾಡುತ್ತಿದೆ” ಎಂದು ಅವರು ಸಲಹೆ ನೀಡುತ್ತಾರೆ.

ನೀವು ಸಸಿಗಳನ್ನು ನಾಟಿ ಮಾಡುವ ಮೂಲಕ ತರಕಾರಿಗಳನ್ನು ಬೆಳೆಯಬೇಕೆಂದರೆ ಅನುಸರಿಸಬೇಕಾದ ಕೆಲವು ಹಂತಗಳನ್ನು ಡಾ. ನಾರಾಯಣನ್ ಕುಟ್ಟಿ ಅವರು ಇಲ್ಲಿ ತಿಳಿಸಿದ್ದಾರೆ:

  • ರೋಗಗಳನ್ನು ತಡೆದುಕೊಳ್ಳುವ ಉತ್ತಮ ಗುಣಮಟ್ಟದ ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ನಾಟಿ ಮಾಡಬೇಕು. ಹಾಗೆಯೇ ಸ್ಥಳೀಯ ಪ್ರಭೇದಗಳನ್ನು ಪ್ರತ್ಯೇಕವಾಗಿ ನಾಟಿ ಮಾಡಬೇಕು.

  • ಮೇಲ್ಭಾಗದಲ್ಲಿ ಎರಡು ಎಲೆಗಳನ್ನು ಬಿಡುವ ಮೂಲಕ ಕೋಟಿಲ್ಡನ್‌ಗಳ ಮೇಲೆ ಎರಡೂ ಸಸ್ಯಗಳನ್ನು ಕತ್ತರಿಸಿಬೇಕು.

  • ಕತ್ತರಿಸಿದ ಮೇಲ್ಮೈಗಳು ಒಣಗದಂತೆ ನೋಡಿಕೊಳ್ಳಲು ಕತ್ತರಿಸಿದ ಕೆಲವೇ ನಿಮಿಷಗಳಲ್ಲಿ ನಾಟಿ ಮಾಡಬೇಕು.

  • ಸಸಿಗಳನ್ನು ನಾಟಿ ಮಾಡುವುದು ತಾಳ್ಮೆ ಮತ್ತು ಕೌಶಲ್ಯವನ್ನು ಬೇಡುವ ಕೃಷಿ ಕಲೆಯಾಗಿದೆ.

  • ಇದನ್ನು ಕಲಿಯಲು ತಜ್ಞರ ಸಹಾಯ ಪಡೆಯಬೇಕು.

  • ಸಸ್ಯವನ್ನು ನಾಟಿ ಮಾಡುವ ತಟ್ಟೆಯಲ್ಲಿ ಇರಿಸಿ, ಪ್ರತಿಯೊಂದೂ ಸುಮಾರು 100 ರಂಧ್ರಗಳನ್ನು ಹೊಂದಿರಬೇಕು.

  • ನಾಟಿ ಮಾಡುವ 24 ಗಂಟೆಗಳ ಮೊದಲು ಬೇರುಕಾಂಡ ಮತ್ತು ಚಿಗುರುಗಳಿಗೆ ನೀರು ಹಾಕಿ ಮತ್ತು ನಾಟಿ ಮಾಡಿದ ತಕ್ಷಣ ನಿಧಾನವಾಗಿ ನೀರು ಹಾಕಿ.

  • ಒಂದು ಕೋಣೆಯಲ್ಲಿ ಸಸ್ಯಗಳನ್ನು ಇರಿಸಿ ಮತ್ತು 26 - 29 ಡಿಗ್ರಿ ಸೆಲ್ಸಿಯಸ್ ನಡುವೆ ತಾಪಮಾನ ಇರುವಂತೆ ನೋಡಿಕೊಳ್ಳಿ.

  • ಎರಡು ದಿನಗಳಲ್ಲಿ ಸಸಿ ಬಾಡಿದರೆ ನಾಟಿ ವಿಫಲವಾಗಿದೆ ಎಂದರ್ಥ.

  • ನೆಟ್ಟ ನಂತರ, ಉತ್ತಮ ಬೆಳವಣಿಗೆಗಾಗಿ ಆಗಾಗ ಸಸ್ಯದ ಮುಂಭಾಗವನ್ನು ಕತ್ತರಿಸಬೇಕು.

  • ನಾಟಿ ವಿಧಾನವನ್ನು ಬಳಸಿ ಉತ್ಪಾದಿಸಿದ ಸಸ್ಯಗಳು ವೇಗವಾಗಿ ಬೆಳೆಯುತ್ತವೆ ಮತ್ತು ಉತ್ತಮ ಇಳುವರಿಯನ್ನು ನೀಡುತ್ತವೆ.


ಇದನ್ನೂ ಓದಿ:  Wild Mango: ಕಾಡಲ್ಲಿ ಸಿಗೋ ಮಾವನ್ನೂ ಈಗ ಕೃಷಿ ಮಾಡ್ತಿದ್ದಾರೆ, ಹೊಸ ಪ್ರಯತ್ನವಿದು

ಕೊನೆಯ ಮಾತು: ಹೀಗೆಯೇ ಕೃಷಿ ವಿಧಾನದಲ್ಲಿ ನಾಟಿ ಮಾಡುವ ವಿಧಾನವನ್ನು ಬಳಕೆ ಮಾಡುವುದು ನಿಜಕ್ಕೂ ಒಂದು ಉತ್ತಮ ಪ್ರಯೋಗ ಮತ್ತು ಈ ವಿಧಾನದಿಂದ ಉತ್ತಮ ಇಳುವರಿಯನ್ನು ಸಹ ರೈತರು ಪಡೆಯಬಹುದಾಗಿದೆ.
Published by:Ashwini Prabhu
First published: