Ramadan Month: ರಂಜಾನ್ ತಿಂಗಳಲ್ಲಿ ದುಂದುವೆಚ್ಚ ಆಗದಂತೆ ಬಜೆಟ್ ಈ ರೀತಿ ಇರಲಿ..

ರಂಜಾನ್ ಈಗಾಗಲೇ ಪ್ರಾರಂಭವಾಗಿದೆಯಾದರೂ ದುಂದು ವೆಚ್ಚಗಳಾಗದಂತೆ ನಿಮ್ಮ ಖರ್ಚಿನ ಮೇಲೆ ಹಿಡಿತವನ್ನು ಪಡೆಯಲು ಇನ್ನೂ ತಡವಾಗಿಲ್ಲ. ರಜಾ ದಿನಗಳಲ್ಲಿ ನಿಮ್ಮ ಖರ್ಚುಗಳನ್ನು ನೀವು ಹೇಗೆ ನಿರ್ವಹಿಸಬಹುದು ಎಂಬುವುದನ್ನು ಇಲ್ಲಿ ನೋಡಿ

ರಂಜಾನ್

ರಂಜಾನ್

 • Share this:
  ಮುಸ್ಲಿಮರಿಗೆ ರಂಜಾನ್ ಮಾಸ (Ramadan Month) ಪವಿತ್ರವಾದದ್ದು. ಅಲ್ಲದೆ ಸಾಕಷ್ಟು ಸಂಭ್ರಮಿಸುವ ಕುಟುಂಬದವರೊಡನೆ ಬೆರೆಯುವ ಸಂದರ್ಭವೂ ಇದಾಗಿದೆ. ಹಾಗಾಗಿ, ನೀವು ನಿಕಟ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇಫ್ತಾರ್‌ಗಳಿಗೆ (Iftar) ಹೋಗುವಾಗ, ಈದ್‌ಗಾಗಿ ಶಾಪಿಂಗ್ (Eid Shopping) ಮಾಡುವಾಗ ಮತ್ತು ಚಾರಿಟಿಗೆ ದೇಣಿಗೆ ನೀಡುವಾಗ ಈ ಪವಿತ್ರ ರಂಜಾನ್ ತಿಂಗಳಲ್ಲಿ ನಿಮ್ಮ ಹಣಕಾಸಿನ ಟ್ರ್ಯಾಕ್ ಅನ್ನು ನೀವು ಸುಲಭವಾಗಿ ಕಳೆದುಕೊಳ್ಳಬಹುದು. ಅತಿಯಾದ ಖರ್ಚು ವಿಶೇಷವಾಗಿ ಕ್ರೆಡಿಟ್ ಕಾರ್ಡ್ (Credit Card) ಸಾಲ, ಯೋಜಿತವಲ್ಲದ ವೆಚ್ಚಗಳು ನಿಮ್ಮ ಅಥವಾ ನಿಮ್ಮ ಕುಟುಂಬದ ಅಲ್ಪಾವಧಿಯ ಆರ್ಥಿಕ ಗುರಿಗಳಿಗೆ ತೊಂದರೆ ಕೊಡಬಹುದು. ರಂಜಾನ್ ಈಗಾಗಲೇ ಪ್ರಾರಂಭವಾಗಿದೆಯಾದರೂ ದುಂದು ವೆಚ್ಚಗಳಾಗದಂತೆ ನಿಮ್ಮ ಖರ್ಚಿನ ಮೇಲೆ ಹಿಡಿತವನ್ನು ಪಡೆಯಲು ಇನ್ನೂ ತಡವಾಗಿಲ್ಲ. ರಜಾದಿನಗಳಲ್ಲಿ ನಿಮ್ಮ ಖರ್ಚುಗಳನ್ನು ನೀವು ಹೇಗೆ ನಿರ್ವಹಿಸಬಹುದು ಎಂಬಂತೆಯೇ ನಿಮ್ಮ ಭವಿಷ್ಯಕ್ಕಾಗಿ ಆರೋಗ್ಯಕರ ಆರ್ಥಿಕ ಅಭ್ಯಾಸಗಳನ್ನು ಹೊಂದಿಸಲು ಈ ಪವಿತ್ರ ತಿಂಗಳು ಒಂದು ಅವಕಾಶವಾಗಬಹುದೆಂದು ಯೋಚಿಸಿ.

  ಈ ರಂಜಾನ್‌ನಲ್ಲಿ ನಿಮ್ಮ ಹಣವ್ಯಯವನ್ನು ಯೋಜಿಸಬಹುದಾದ ಕೆಲವು ವಿಧಾನಗಳು ಇಲ್ಲಿವೆ.

  ರಂಜಾನ್‌ಗಾಗಿ ಬಜೆಟ್ ರಚಿಸಿ

  ನಾವು ವರ್ಷದಲ್ಲಿ ಕೆಲವು ಸಮಯಗಳನ್ನು ವಿಶೇಷವಾಗಿರುವಂತೆ ಬಯಸುತ್ತೇವೆ, ಸಹಜವಾಗಿ ಇದು ಅತಿಯಾಗಿ ಖರ್ಚು ಮಾಡುವಿಕೆಯನ್ನು ಒಳಗೊಂಡಿರುತ್ತದೆ. ಆದ್ದರಿಂದ, ನಿಮ್ಮ ಪ್ರಸ್ತುತ ಅಥವಾ ಭವಿಷ್ಯದ ಹಣಕಾಸುಗಳನ್ನು ಗಮನದಲ್ಲಿರಿಸಿಕೊಂಡು ಹೆಚ್ಚಿನ ಹಣ ವ್ಯಯವಾಗುವಿಕೆಗೆ ರಾಜಿ ಮಾಡಿಕೊಳ್ಳದೆ ನೀವು ಎಷ್ಟು ಖರ್ಚು ಮಾಡಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಿಗದಿತ ಬಜೆಟ್ ಒಂದನ್ನು ರೂಪಿಸಿಕೊಂಡು ಆ ಮೊತ್ತದಲ್ಲೇ ಆಹಾರ, ಬಟ್ಟೆ, ಉಡುಗೊರೆಗಳು, ಮನರಂಜನೆ ಮತ್ತು ದೇಣಿಗೆಗಳಿಗಾಗಿ ಖರ್ಚಾಗುವಂತೆ ಗಮನ ಹರಿಸಿ.

  ಇದನ್ನೂ ಓದಿ: Business Idea: ಈರುಳ್ಳಿ ಪೇಸ್ಟ್ ನಿಮ್ಮ ಕಿಸೆ ತುಂಬಿಸಬಹುದು! ಇಲ್ಲಿದೆ ಸಖತ್ ಐಡಿಯಾ!

  ನಿಮ್ಮ ಬಜೆಟ್‌ಗೆ ಅಂಟಿಕೊಳ್ಳಿ ಮತ್ತು ಉಳಿತಾಯ ಮತ್ತು ಹೂಡಿಕೆಯನ್ನು ಬಿಟ್ಟುಬಿಡಬೇಡಿ. ಅಲ್ಲದೆ, ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ನೀವು ವಾಸ್ತವಿಕವಾಗಿ ಪಾವತಿಸುವುದಕ್ಕಿಂತ ಹೆಚ್ಚಿನ ಹಣ ಹಾಕಬೇಕಾದ ಸಂದರ್ಭ ತಪ್ಪಿಸಿಕೊಳ್ಳಿ.

  ಚಾಣಾಕ್ಷತನದ ಖರ್ಚು ನಿರ್ಧಾರಗಳನ್ನು ಮಾಡಿ

  ರಂಜಾನ್ ಮಾಸವು ನಿಜಕ್ಕೂ ಕೆಲ ಮೌಲ್ಯಗಳನ್ನು ರೂಪಿಸಿಕೊಳ್ಳುವಂತೆ ಕರೆ ನೀಡುತ್ತದೆ. ಉದಾಹರಣೆಗೆ, ಸ್ವಯಂ ನಿಯಂತ್ರಣ, ಸಹನೆ, ಮಿತವಾಗಿರುವಿಕೆ ಮೂಮ್ತಾದವುಗಳು. ಈ ಸಂದರ್ಭದಲ್ಲಿ ನೀವು ಚಾಣಾಕ್ಷತನದಿಂದ ನಿಮ್ಮ ಖರ್ಚುಗಳ ಮೇಲೆ ನಿಯಂತ್ರಣ ಸಧಿಸಿದಾಗ ಅದು ಒಂದು ರೀತಿಯಲ್ಲಿ ಆ ಮೌಲ್ಯಗಳಿಗೆ ಬೆಲೆ ಕೊಟ್ಟಂತೆಯೇ ಆಗುತ್ತದೆ. ಆದ್ದರಿಂದ, ನಿಮ್ಮ ಆಯ್ಕೆಗಳನ್ನು ಎಚ್ಚರಿಕೆಯಿಂದ ಅಳೆಯಿರಿ ಮತ್ತು ಅದನ್ನು ಎಲ್ಲಿ ಖರ್ಚು ಮಾಡುವುದು ಯೋಗ್ಯವಾಗಿದೆ ಮತ್ತು ಬದಲಿಗೆ ನೀವು ಅಗ್ಗದ ಪರ್ಯಾಯಗಳನ್ನು ಎಲ್ಲಿ ನೋಡಬಹುದು ಎಂಬುದನ್ನು ಪರಿಗಣಿಸಿ. ನೆನಪಿಡಿ, ವರ್ಷದ ಈ ಸಮಯದಲ್ಲಿ ನಿಮ್ಮ ವೆಚ್ಚಗಳು ತ್ವರಿತವಾಗಿ ಏರಬಹುದು.

  ಪ್ರೀತಿಪಾತ್ರರ ಜೊತೆ ಮನೆಯಲ್ಲಿ ನಿಮ್ಮ ಉಪವಾಸವನ್ನು ಮುರಿಯಿರಿ

  COVID ಕ್ರಮಗಳು ಜಾರಿಯಲ್ಲಿರುವ ಸ್ಥಳಗಳಲ್ಲಿ, ನಿಮ್ಮ ಹಣಕಾಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಇನ್ನೂ ಸುಲಭ. ಹೊರಗೆ ತಿನ್ನುವ ಬದಲು, ಪವಿತ್ರ ತಿಂಗಳಿನಲ್ಲಿ ಹೆಚ್ಚಾಗಿ ಮನೆಯಲ್ಲಿ ಉಪವಾಸವನ್ನು ಮುರಿಯುವುದನ್ನು ಪರಿಗಣಿಸಿ. ಈ ಮೂಲಕ ನೀವು ಹೊರಗೆ ದುಂದು ವೆಚ್ಚ ಮಾಡಿ ತಿನ್ನುವುದನ್ನು ತಡೆಯಬಹುದಾಗಿದೆ.

  ವಾಣಿಜ್ಯ ಉಡುಗೊರೆಗಳ ಬದಲಿಗೆ ಚಿಂತನಶೀಲ ಮತ್ತು ವೈಯಕ್ತಿಕಗೊಳಿಸಿದ ಉಡುಗೊರೆಗಳನ್ನು ನೀಡಿ

  ಈ ಸಂದರ್ಭದಲ್ಲಿ ಹಲವರು ಪರಸ್ಪರರಿಗೆ ವೈವಿಧ್ಯಮ ಉಡುಗೊರೆಗಳನ್ನು ಕೊಡುತ್ತಾರೆ. ಚಿಂತನಶೀಲ ಉಡುಗೊರೆ-ನೀಡುವಿಕೆಯನ್ನು ಅನುಸರಿಸಿ. ಸ್ವೀಕರಿಸುವವರು ಏನನ್ನು ಆನಂದಿಸುತ್ತಾರೆ ಮತ್ತು ಪ್ರಶಂಸಿಸುತ್ತಾರೆ ಎಂಬುದನ್ನು ತಿಳಿದುಕೊಂಡು ಆ ನಿಟ್ಟಿನಲ್ಲಿ ಉಡುಗೊರೆ ನೀಡಿ. ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳು ಮತ್ತು ತಿಂಡಿಗಳನ್ನು ನೀಡುವುದು ಅಥವಾ ಸ್ನೇಹಿತರು ಮತ್ತು ಕುಟುಂಬವನ್ನು ಊಟಕ್ಕೆ ಆಹ್ವಾನಿಸುವುದು ಸಾಮಾನ್ಯವಾಗಿ ವಾಣಿಜ್ಯ ಬಟ್ಟೆಗಳು, ಆಭರಣಗಳು ಅಥವಾ ಆಟಿಕೆಗಳನ್ನು ಉಡುಗೊರೆಯಾಗಿ ನೀಡುವುದಕ್ಕಿಂತ ಹೆಚ್ಚು ಗುಣಾತ್ಮಕ ಮತ್ತು ಮಿತವ್ಯಯವಾಗಿದೆ.

  ಇದನ್ನೂ ಓದಿ:Halal Shares: ಷೇರು ಮಾರ್ಕೆಟ್​ನಲ್ಲೂ ಇದೆ ಹಲಾಲ್! ಹಲಾಲ್ ಷೇರು- ಹರಾಮ್ ಷೇರು ಹೇಗೆ ಗುರುತಿಸ್ತಾರೆ?

  ಉಪವಾಸ ಮುರಿಯುವಾಗ ಹೆಚ್ಚು ಖರ್ಚು ಮಾಡಬೇಡಿ

  ಖಾಲಿ ಹೊಟ್ಟೆಯಲ್ಲಿ ನಿಮ್ಮ ಹಸಿವನ್ನು ತಪ್ಪಾಗಿ ನಿರ್ಣಯಿಸುವುದು ಮತ್ತು ಆಹಾರಕ್ಕಾಗಿ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದು ಸುಲಭ. ಅನೇಕ ಜನರು ತಮ್ಮ ಉಪವಾಸವನ್ನು ಮುರಿಯುವಾಗ ಅತಿಯಾಗಿ ತಿನ್ನುತ್ತಾರೆ ಮತ್ತು ಅದರಿಂದ ಅನರೋಗ್ಯಕ್ಕೆ ಈಡಾಗುವ ಸಾಧ್ಯತೆಯಿದೆ. ನಿಮ್ಮ ಆಹಾರದ ಬಜೆಟ್‌ಗೆ ಅಂಟಿಕೊಳ್ಳುವುದರಿಂದ ನಿಮ್ಮ ಹಣಕಾಸಿನ ಆರೋಗ್ಯವನ್ನು ನಿಯಂತ್ರಣದಲ್ಲಿಡಬಹುದು ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು.

  ಹೊಸದನ್ನು ಖರೀದಿಸುವ ಬದಲು ಮರುಬಳಕೆ ಮಾಡಿ

  ಹೊಸದನ್ನು ಖರೀದಿಸುವ ಬದಲು ನಿಮ್ಮ ಉತ್ತಮ ಬಟ್ಟೆಗಳನ್ನು ಧರಿಸುವುದನ್ನು ಒಮ್ಮೆ ಪರಿಗಣಿಸಿ ಮತ್ತು ಹಿಂದಿನ ವರ್ಷಗಳ ಆಚರಣೆಗಳಲ್ಲಿ ನೀವು ಬಳಸಿದ್ದ ದೀಪಗಳು ಮತ್ತು ಬ್ಯಾನರ್‌ಗಳನ್ನು ನೀವು ಈ ಬಾರಿಯೂ ಅಲಂಕಾರ ಮಾಡುವಾಗ ಬಳಸಿ. ಒಂದು ವೇಳೆ ನೀವು ಹೊಸ ಉಡುಪನ್ನು ಖರೀದಿಸಲು ನಿರ್ಧರಿಸಿದರೆ, ಅದನ್ನು ನೀವು ಅನೇಕ ಬಾರಿ ಧರಿಸಲು ಸಾಧ್ಯವಾಗುವಂತೆ ಹುಡುಕಿ ಖರೀದಿ ಮಾಡಿ. ಇದರಿಂದ ನೀವು ಪದೆ ಪದೆ ಬಟ್ಟೆ ಖರೀದಿಸುವ ಗೋಜು ತಪ್ಪುತ್ತದೆ ಮತ್ತು ಹಣವೂ ಉಳಿತಾಯವಾಗುತ್ತದೆ.
  Published by:Kavya V
  First published: