ಹಳೆಯ ಕಂಪನಿಯ PF ವಿಲೀನಗೊಳಿಸುವುದು ಹೇಗೆ? 5 ನಿಮಿಷದ ಕೆಲಸ, ಸಿಗುತ್ತೆ ಭಾರೀ ಬಡ್ಡಿ!

PFಗೆ ಸಂಬಂಧಿಸಿದ ಯಾವುದೇ ರೀತಿಯ ಆನ್‌ಲೈನ್ ಸೌಲಭ್ಯವನ್ನು ಪಡೆಯಲು, ನಿಮ್ಮ UAN (ಯುನಿವರ್ಸಲ್ ಖಾತೆ ಸಂಖ್ಯೆ) ತಿಳಿದಿರಬೇಕು. ಇದರೊಂದಿಗೆ, UAN ಕೂಡಾ ಸಕ್ರಿಯವಾಗಿರುವುದೂ ಕೂಡಾ ಅಗತ್ಯವಾಗಿದೆ. EPFO ನ ಅಸ್ತಿತ್ವದಲ್ಲಿರುವ ಎರಡು ಖಾತೆಗಳನ್ನು ವಿಲೀನಗೊಳಿಸಲು, ನೀವು ಮೊದಲು ಇಪಿಎಫ್​ ವೆಬ್‌ಸೈಟ್‌ಗೆ ಹೋಗಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಆ.06):  ಇಂದಿನ ಕಾಲದಲ್ಲಿ ಖಾಸಗಿ ವಲಯದಲ್ಲಿ ಜನರು ವೇಗವಾಗಿ ಕೆಲಸ ಬದಲಾಯಿಸುತ್ತಿದ್ದಾರೆ. ಪ್ರತಿ ಬಾರಿ ಹೊಸ ಕಂಪನಿಗೆ ಸೇರುವ ಸಮಯದಲ್ಲಿ, ಹಳೆಯ UAN ಸಂಖ್ಯೆಯಿಂದ ಹೊಸ PF (Provident Fund) ಖಾತೆಯು ಪ್ರಾರಂಭವಾಗುತ್ತದೆ. ಆದರೆ, ಹಳೆಯ ಕಂಪನಿಗಳ ಹಣವನ್ನು ಹೊಸ ಪಿಎಫ್ ಖಾತೆಗೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ, PF ಖಾತೆದಾರರು EPFO ​​ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಖಾತೆಯನ್ನು ವಿಲೀನಗೊಳಿಸಬೇಕು. ಇದರ ನಂತರವೇ ನಿಮ್ಮ ಒಟ್ಟು ಪಿಎಫ್ ಮೊತ್ತವು ಅದೇ ಖಾತೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

UAN ಸಂಖ್ಯೆ ಅಗತ್ಯ

EPFOನ ಅಸ್ತಿತ್ವದಲ್ಲಿರುವ ಎರಡು ಖಾತೆಗಳನ್ನು ವಿಲೀನಗೊಳಿಸಲು, ನೀವು ಮೊದಲು ಅದರ ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ ನೀವು ಸರ್ವಿಸಸ್​ ಆಯ್ಕೆ ಕ್ಲಿಕ್ ಮಾಡಬೇಕು. ಬಳಿಕ One Employee- One EPF Account ಕ್ಲಿಕ್ ಮಾಡಿ. ಇದರ ನಂತರ ಇಪಿಎಫ್ ಖಾತೆಯನ್ನು ವಿಲೀನಗೊಳಿಸುವ ಫಾರ್ಮ್ ತೆರೆದುಕೊಳ್ಳುತ್ತದೆ. ಇಲ್ಲಿ ಪಿಎಫ್ ಖಾತೆದಾರರು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಇದರ ನಂತರ, UAN ಮತ್ತು ಪ್ರಸ್ತುತ ಸದಸ್ಯರ ID ಅನ್ನು ನಮೂದಿಸಬೇಕಾಗುತ್ತದೆ.

ಇದನ್ನೂ ಓದಿ:  EPF Balance: ಉಮಂಗ್​ ಆ್ಯಪ್​ ಮುಖಾಂತರ ನಿಮ್ಮ ಪಿಎಫ್​ ಚೆಕ್​ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ

ನೀವು ಎಲ್ಲಾ ವಿವರಗಳನ್ನು ತುಂಬಿದ ಬಳಿಕ ದೃಢೀಕರಣಕ್ಕಾಗಿ OTP ಅನ್ನು ನೀಡಬೇಕಾಗುತ್ತದೆ. ಇದು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ. ನೀವು OTP ಸಂಖ್ಯೆಯನ್ನು ನಮೂದಿಸಿದ ತಕ್ಷಣ. ನಿಮ್ಮ ಹಳೆಯ PF ಖಾತೆಯು ಕಾಣಿಸಿಕೊಳ್ಳುತ್ತದೆ. ನಂತರ ಪಿಎಫ್ ಖಾತೆ ಸಂಖ್ಯೆಯನ್ನು ನಮೂದಿಸಿ, ಘೋಷಣೆಯನ್ನು ಸ್ವೀಕರಿಸಿ, ಅದನ್ನು ಸಲ್ಲಿಸಿ. ನಿಮ್ಮ ವಿಲೀನ ವಿನಂತಿಯನ್ನು ಸ್ವೀಕರಿಸಲಾಗುತ್ತದೆ. ಕೆಲವು ದಿನಗಳ ಬಳಿಕ ಪರಿಶೀಲಿಸಿ, ಆಗ ನಿಮ್ಮ PF ಖಾತೆಯನ್ನು ವಿಲೀನಗೊಳಿಸಲಾಗುತ್ತದೆ.

ಯುಎಎನ್ ಸಂಖ್ಯೆ ತಿಳಿದಿರಬೇಕು

PFಗೆ ಸಂಬಂಧಿಸಿದ ಯಾವುದೇ ರೀತಿಯ ಆನ್‌ಲೈನ್ ಸೌಲಭ್ಯವನ್ನು ಪಡೆಯಲು, ನಿಮ್ಮ UAN (Universal Account No) ಅನ್ನು ನೀವು ತಿಳಿದಿರಬೇಕು. ಇದರೊಂದಿಗೆ, ಸಕ್ರಿಯ UAN ಅನ್ನು ಹೊಂದಿರುವುದು ಸಹ ಅಗತ್ಯವಾಗಿದೆ. ಆದರೆ ನಿಮಗೆ UAN ತಿಳಿದಿಲ್ಲದಿದ್ದರೆ, ಕೆಳಗೆ ನೀಡಲಾದ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನಿಮ್ಮ UAN ಅನ್ನು ನೀವು ತಿಳಿದುಕೊಳ್ಳಬಹುದು.

ಇದನ್ನೂ ಓದಿ:  EPFO Withdraw: EPF ಹಣ ಹಿಂಪಡೆಯುವ ಮುನ್ನ ಎಚ್ಚರ! ಈ ವಿಷಯಗಳನ್ನು ಗಮನದಲ್ಲಿಡಿ

ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಆನ್‌ಲೈನ್ ಮಾರ್ಗ

ಮೊದಲು ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನ ಬ್ರೌಸರ್‌ನಲ್ಲಿ https://passbook.epfindia.gov.in/MemberPassBook/Login ಅನ್ನು ತೆರೆಯಿರಿ. ಇದರ ನಂತರ, ಈಗ UAN ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ. ನಂತರ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ. ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಈ ಪುಟದಲ್ಲಿರುವ ಡ್ರಾಪ್ ಡೌನ್ ಪಟ್ಟಿಯಿಂದ ನಿಮ್ಮ PF ಸಂಖ್ಯೆಯನ್ನು ಆಯ್ಕೆಮಾಡಿ. ಇದರ ನಂತರ, ಪಿಎಫ್ ಖಾತೆಯ ವಿವರಗಳು ನಿಮ್ಮ ಮುಂದೆ ತೆರೆದಿರುತ್ತವೆ.

EPFO ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ಮಾಡುವ ಮೂಲಕ ನಿಮ್ಮ PF ಬ್ಯಾಲೆನ್ಸ್ ಅನ್ನು ಸಹ ನೀವು ಪರಿಶೀಲಿಸಬಹುದು. ಇಪಿಎಫ್‌ಒ ಸಂದೇಶದ ಮೂಲಕ ಪಿಎಫ್ ವಿವರಗಳು ಲಭ್ಯವಿರುತ್ತವೆ.

PF ಬಡ್ಡಿ ಹಣ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPF) ಠೇವಣಿ ಇಡುವ ಮೊತ್ತದ ಬಡ್ಡಿ ದರಕ್ಕೂ ಸರ್ಕಾರ ಮುದ್ರೆಯೊತ್ತಿದೆ. 2021-22 ರ ಹಣಕಾಸು ವರ್ಷಕ್ಕೆ, ಇಪಿಎಫ್ ಮೇಲಿನ ಬಡ್ಡಿ ದರವನ್ನು 8.01 ಕ್ಕೆ ನಿಗದಿಪಡಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ, ಪಿಎಫ್‌ಗೆ 8.5% ಬಡ್ಡಿ ಸಿಗುತ್ತಿತ್ತು. ಆಗಸ್ಟ್‌ನಲ್ಲಿ ಸರ್ಕಾರವು ಪಿಎಫ್ ಬಡ್ಡಿಯ ಹಣವನ್ನು ನೌಕರರ ಖಾತೆಗೆ ಹಾಕಬಹುದು ಎಂದು ನಿರೀಕ್ಷಿಸಲಾಗಿದೆ.
Published by:Precilla Olivia Dias
First published: