ನಿರೀಕ್ಷಿಸದೇ ಬರುವ ಸಂಪತ್ತನ್ನು (Property) ತುಂಬಾ ಎಚ್ಚರಿಕೆಯಿಂದ ಹಾಗೂ ಮುತುವರ್ಜಿಯಿಂದ ಖರ್ಚುಮಾಡಬೇಕು ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ದೊಡ್ಡ ಮೊತ್ತದ ಪಿಂಚಣಿ ಹಣ, ಹೇರಳವಾದ ಪಿತ್ರಾರ್ಜಿತ ಆಸ್ತಿ, ನ್ಯಾಯಾಂಗ ಮೊಕದ್ದಮೆಯ ಗೆಲುವು, ವ್ಯಾಪಾರದ ಲಾಭದಿಂದ ಬಂದ ಹಣ ಇವೆಲ್ಲವೂ ನಿರೀಕ್ಷಿಸದೇ ಬರುವ ಸಂಪತ್ತಾಗಿದೆ. ಈ ಹಣವನ್ನು (Money) ನಾವು ಹೇಗೆ ನಿರ್ವಹಿಸುತ್ತೇವೆ ಮತ್ತು ವಿನಿಯೋಗಿಸುತ್ತೇವೆ ಎಂಬುದನ್ನು ಆಧರಿಸಿ ಸಂಪತ್ತು ಹೊಂದಿರುವವರ ಸುಖ ಸಂತೋಷ ನೆಲೆ ನಿಂತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಅನಿರೀಕ್ಷಿತ ಸಂಪತ್ತಿನ ನಿರ್ವಹಣೆ ಹೇಗಿರಬೇಕು?
ನಿಮ್ಮ ಬಳಿ ಇರುವ ಅನಿರೀಕ್ಷಿತ ಸಂಪತ್ತನ್ನು ನಿಭಾಯಿಸಲು ಕೆಲವೊಂದು ಅಂಶಗಳನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಹಣಕಾಸು ಯೋಜಕ ಮತ್ತು ಸಡನ್ ವೆಲ್ತ್ ಇನ್ಸ್ಟಿಟ್ಯೂಟ್ನ ಸಂಸ್ಥಾಪಕ ಸುಸಾನ್ ಕೆ. ಬ್ರಾಡ್ಲಿ ತಿಳಿಸಿರುವಂತೆ ಅನಿರೀಕ್ಷಿತವಾಗಿ ಬರುವ ಸಂಪತ್ತನ್ನು ನಿಭಾಯಿಸುವ ಆರಂಭದ ಹಂತಗಳು ಹೆಚ್ಚು ಒತ್ತಡದಿಂದ ಕೂಡಿರುತ್ತವೆ ಎಂದಾಗಿದೆ. ನಿಮ್ಮ ಮನಸ್ಸು ಹಾಗೂ ದೇಹವನ್ನು ಈ ಒತ್ತಡವನ್ನು ನಿಭಾಯಿಸುವಂತೆ ಸರಿಹೊಂದಿಸಿಕೊಳ್ಳಬೇಕು ಎಂದು ಬ್ರಾಡ್ಲಿ ಸಲಹೆ ನೀಡುತ್ತಾರೆ.
ಸಂಪತ್ತಿನ ನಿರ್ವಹಣೆಗೆ ಎರಡು ಮುಖ್ಯ ಅಂಶಗಳು
ಬ್ರಾಡ್ಲಿ ತಿಳಿಸುವಂತೆ ಇಂತಹ ಸಂಪತ್ತನ್ನು ನಿಭಾಯಿಸಲು ಎರಡು ಮುಖ್ಯ ಅಂಶಗಳು ನಿರ್ಣಾಯಕವಾಗಿರುತ್ತವೆ ಎಂದಾಗಿದೆ. ಮೊದಲನೆಯ ಅಂಶ ವಿಶ್ವಾಸಾರ್ಹ ಸ್ನೇಹಿತ ಇಲ್ಲವೇ ಕುಟುಂಬ ಸದಸ್ಯರ ನೆರವನ್ನು ಪಡೆದುಕೊಳ್ಳುವುದಾಗಿದೆ. ಇನ್ನೊಂದು ಅಂಶ ಸಲಹೆಗಾರರ ಒಂದು ತಂಡವನ್ನು ಹೊಂದಿರುವುದಾಗಿದೆ. ಈ ಸಲಹೆಗಾರರು ಪ್ರಸ್ತುತ ಹಣಕಾಸಿನ ವಿಮರ್ಶೆ ನಡೆಸುತ್ತಾರೆ ಹಾಗೂ ಹೂಡಿಕೆ ಆಯ್ಕೆಗಳನ್ನು ನೀಡುತ್ತಾರೆ. ಮುಂದಿನ ಭವಿಷ್ಯಕ್ಕೆ ಅನುಗುಣವಾದ ವಿಮೆ ಕವರೇಜ್ಗಳ ಸಲಹೆ, ತೆರಿಗೆಗಳ ನಿರ್ವಹಣೆ, ಉಳಿತಾಯ ಯೋಜನೆಗಳ ಸಲಹೆಯನ್ನು ನೀಡತ್ತಾರೆ ಎಂಬುದು ಬ್ರಾಡ್ಲಿ ಅಭಿಪ್ರಾಯವಾಗಿದೆ.
ಮಾನಸಿಕ ಆರೋಗ್ಯ ವೃತ್ತಿಪರರ ಸಲಹೆ
ಅನಿರೀಕ್ಷಿತ ಸಂಪತ್ತಿನ ಆಗಮನ ಮುಖ್ಯವಾಗಿ ಮಾನಸಿಕ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಬ್ರಾಡ್ಲಿ ಅವರ ಹೇಳಿಕೆಯಾಗಿದೆ. ಇದಕ್ಕಾಗಿ ಮಾನಸಿಕ ಆರೋಗ್ಯ ವೃತ್ತಿಪರರ ಸಲಹೆಯನ್ನು ಕೇಳುವುದು ಒಳಿತು ಎಂಬ ಸಲಹೆಯನ್ನು ನೀಡುತ್ತಾರೆ. ಹಣಕಾಸು ನಿರ್ವಹಣೆಗೆ ಕುಟುಂಬದವರೇ ಆಗಿರುವ ಬೋರ್ಡ್ ಸದಸ್ಯರನ್ನು ಹೊಂದಿದ್ದೀರಿ ಎಂದಾದಲ್ಲಿ ಲೆಕ್ಕಪತ್ರ ನಿರ್ವಹಣೆಯನ್ನು ಪಾರದರ್ಶಕವಾಗಿರಿಸಿಕೊಳ್ಳಿ ಎಂಬ ಸೂಚನೆಯನ್ನು ಬ್ರಾಡ್ಲಿ ನೀಡುತ್ತಾರೆ. ಹಣವನ್ನು ಕದಿಯುವ ಇಲ್ಲವೇ ದುರುಪಯೋಗ ಪಡಿಸಿಕೊಳ್ಳುವ ಯೋಜನೆಗಳನ್ನು ಗುರುತಿಸುವ ಚೆಕ್ ಹಾಗೂ ಬ್ಯಾಲೆನ್ಸ್ ವ್ಯವಸ್ಥೆಯನ್ನು ಹೊಂದಿರಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಿನ್ನೆ ಚಿನ್ನ ಖರೀದಿ ಮಾಡೋದನ್ನ ಮಿಸ್ ಮಾಡ್ಕೊಂಡಿದ್ದೀರಾ? ಚಿಂತೆ ಬೇಡ ಇಂದು ಖರೀದಿಸಿ
ಸೂಕ್ಷ್ಮ ಯೋಜನೆ ಏಕೆ ಮುಖ್ಯ?
ಬುಲೆವಾರ್ಡ್ ಫ್ಯಾಮಿಲಿ ವೆಲ್ತ್ ಎಂಬುದು ಕುಟುಂಬಗಳ ಆದಾಯವನ್ನು ನಿರ್ವಹಿಸುವ ಸಂಸ್ಥೆಯಾಗಿದ್ದು ಲಕ್ಷಾಂತರ ಡಾಲರ್ಗಳನ್ನು ಪಡೆದ ಉತ್ತರಾಧಿಕಾರಿ ಹಾಗೂ ವ್ಯಾಪಾರದಿಂದ ಬಂದ ಲಾಭಗಳನ್ನು ಪಡೆದ ಹಲವಾರು ಗ್ರಾಹಕರೊಂದಿಗೆ ಕೆಲಸ ಮಾಡಿದೆ. ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ತಮ್ಮ ಗ್ರಾಹಕರೊಂದಿಗೆ ಕೆಲಸಮಾಡುವ ಈ ಸಂಸ್ಥೆ, ಪ್ರತಿಯೊಂದನ್ನು ಜಾಗರೂಕವಾಗಿ ಯೋಜಿಸುತ್ತದೆ ಹಾಗೂ ಪರಿಶೀಲನೆ ನಡೆಸುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಮ್ಯಾಟ್ ಸೆಲೆನ್ಜಾ ತಿಳಿಸುತ್ತಾರೆ. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಳೆರಡಕ್ಕೂ ಪ್ರಯೋಜನವಾಗುವ ಸ್ವತ್ತುಗಳನ್ನು ರಕ್ಷಿಸುವುದು ಮತ್ತು ಹೆಚ್ಚಿಸುವುದು ಸಂಸ್ಥೆಯ ಗುರಿಯಾಗಿದೆ ಎಂದು ಮ್ಯಾಟ್ ತಿಳಿಸಿದ್ದಾರೆ.
ಹಣ ಹಾಗೂ ಸಂತೋಷ
ಅನಿರೀಕ್ಷಿತ ಆರ್ಥಿಕ ಲಾಭವು ಉಂಟಾದಾಗ ಸಾಕಷ್ಟು ಹಣವನ್ನು ಗಳಿಸಿದ್ದೇವೆ ಎಂಬುದನ್ನು ಪರಿಶೀಲಿಸುವುದರ ಜೊತೆಗೆ ಇತರರನ್ನು ಸಂತೋಷಪಡಿಸಲು ಈ ಹಣವನ್ನು ಬಳಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂಬುದು ಬ್ರಾಡ್ಲಿ ಹೇಳಿಕೆಯಾಗಿದೆ.
ಜನರು ಅನಿರೀಕ್ಷಿತ ಧನಲಾಭವನ್ನು ಹೇಗೆ ವಿನಿಯೋಗಿಸಲು ಬಯಸುತ್ತಾರೆ ಎಂಬುದನ್ನು ಕುರಿತು 2019 ರಲ್ಲಿ ಅಧ್ಯಯನ ನಡೆಸಿದಾಗ ಜನರ ಒಟ್ಟಾರೆ ಸಂತೋಷದ ಮೇಲೆ ಇದು ಅವಲಂಬಿತವಾಗಿದೆ ಎಂಬ ಅಂಶವನ್ನು ಇದು ಖಚಿತಪಡಿಸಿದೆ. ಸಾಮಾಜಿಕ ಅನ್ವೇಷಣೆ, ಪ್ರವಾಸ, ಹವ್ಯಾಸಕ್ಕೆ ಇಂತಹ ಆರ್ಥಿಕ ಲಾಭವನ್ನು ವಿನಿಯೋಗಿಸುವವರು ನಿಷ್ಕ್ರಿಯ ವಿರಾಮ ಜೀವನಶೈಲಿಯಲ್ಲಿ ತೊಡಗಿಸಿದವರಿಗಿಂತ ಹೆಚ್ಚು ಸಂತೋಷವನ್ನು ಹೊಂದಿರುತ್ತಾರೆ ಎಂಬುದಾಗಿ ಈ ಅಧ್ಯಯನ ಪತ್ತೆಹಚ್ಚಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ