FaceBook Money: ಫೇಸ್‌ಬುಕ್ ಪೇಜ್‌ಯಿಂದ ಸಹ ನೀವು ಹಣ ಗಳಿಸಬಹುದಂತೆ? ಇಲ್ಲಿದೆ ನೋಡಿ ಐಡಿಯಾ!

ನಿಮ್ಮ ಫೇಸ್‌ಬುಕ್ ಪುಟವು ಗಣನೀಯ ಪ್ರಮಾಣದ ಲೈಕ್ ಗಳು ಮತ್ತು ಅನುಯಾಯಿಗಳನ್ನು ಹೊಂದಿರುವಾಗ ಅದನ್ನು ಮಾರಾಟ ಮಾಡುವುದರಿಂದಲೂ ಸಹ ನೀವು ಹಣ ಗಳಿಸಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಂತೂ ಬಹುತೇಕರು ತಮ್ಮ ಮೊಬೈಲ್‌ನಲ್ಲಿ (Mobile) ಕಣ್ಣು ಮಿಟುಕಿಸದೇ ತಮ್ಮ ಕೈಬೆರಳಿನಿಂದ ಸಾಮಾಜಿಕ ಮಾಧ್ಯಮಗಳ (Social Media) ಖಾತೆಗಳನ್ನು, ಪುಟಗಳನ್ನು ಮೇಲಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಸರಿಸುತ್ತಾ ಗಂಟೆಗಟ್ಟಲೆ ಅಲ್ಲಿ ಹಾಕಿರುವ ಪೋಸ್ಟ್‌ ಮತ್ತು ವಿಡಿಯೋಗಳನ್ನು (Post And Video) ನೋಡುತ್ತಲೇ ತಮ್ಮ ದಿನ ಕಳೆಯುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಫೇಸ್‌ಬುಕ್ (Facebook) ಜನಪ್ರಿಯತೆಯು ಯಾರಿಗೂ ರಹಸ್ಯವಾಗಿ ಉಳಿದಿಲ್ಲ. ವಾಸ್ತವವಾಗಿ, ಜನರು ಅತಿ ಹೆಚ್ಚು ಸಾಮಾಜಿಕವಾಗಿ ಬೆರೆಯಲು, ಸಂವಹನ ನಡೆಸಲು ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಇದನ್ನೇ ಬಳಸುತ್ತಾರೆ ಎಂದು ಹೇಳಬಹುದು. ಇದನ್ನು ನೀವು ಒಳ್ಳೆಯ ಮನೋರಂಜನೆ ಮಾಧ್ಯಮವಾಗಿ ಸಹ ಬಳಸಬಹುದು ಮತ್ತು ಹಾಗೆಯೇ ಇದರಿಂದ ದುಡ್ಡು ಮಾಡಬಹುದು ಎಂದು ಹೇಳಿದರೆ ನೀವು ನಂಬಲಿಕ್ಕಿಲ್ಲ.

ಹೌದು..ಇದು ನಿಜವಾದ ಸಂಗತಿಯಾಗಿದೆ, ಈ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆ ಜಾಗತಿಕ ವ್ಯಾಪ್ತಿ ಹೊಂದಿದ್ದು, ಸಂತೋಷದ ಸುದ್ದಿಯೆಂದರೆ ಫೇಸ್‌ಬುಕ್ ಮಾರ್ಕೆಟಿಂಗ್ ಅಭಿಯಾನಗಳು, ಫೇಸ್‌ಬುಕ್ ಅಭಿಮಾನಿಗಳ ಪುಟಗಳಿಂದ ಫೇಸ್‌ಬುಕ್ ನಿಮಗೆ ಹಣ ಗಳಿಸಲು ಸಾಕಷ್ಟು ಉತ್ತಮ ಅವಕಾಶಗಳನ್ನು ನೀಡುತ್ತದೆ. ನಿಮ್ಮ ಫೇಸ್‌ಬುಕ್ ಪುಟದಿಂದ ಹಣ ಗಳಿಸುವುದು ಹೇಗೆ ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.

ಇದನ್ನೂ ಓದಿ:  Make Money: ನಿಮ್ಮ ಕಾರಿನ ಮೂಲಕ ಹೆಚ್ಚುವರಿ ಹಣ ಸಂಪಾದಿಸಲು ಇಲ್ಲಿವೆ ನೋಡಿ ಟ್ರಿಕ್ಸ್..‌!

ನಿಮ್ಮ ಫೇಸ್ಬುಕ್ ಪುಟದಿಂದ ದುಡ್ಡು ಮಾಡುವುದು ಹೇಗೆ?

ಫೇಸ್‌ಬುಕ್ ಅಭಿಮಾನಿ ಪುಟದ ಕೆಲಸ ಮತ್ತು ಬಳಕೆಯ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ ಎಂದು ಪರಿಗಣಿಸಿ, ಅದರಿಂದ ನೀವು ಹೇಗೆ ಹಣ ಗಳಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಈ ಕೆಳಗಿನವುಗಳನ್ನು ಒಮ್ಮೆ ಓದಿಕೊಂಡು ನಿಮ್ಮ ಅನುಕೂಲ ಮತ್ತು ಪರಿಣತಿಗೆ ಅನುಗುಣವಾಗಿ ನೀವು ಆಯ್ಕೆ ಮಾಡಿಕೊಳ್ಳಬಹುದು.

1. ಫೇಸ್ಬುಕ್ ಲೈಕ್ ಗಳನ್ನು ಮಾರಾಟ ಮಾಡುವ ಮೂಲಕ ಹಣ ಸಂಪಾದಿಸಿ

ಯಾವುದೇ ಫೇಸ್‌ಬುಕ್ ಅಭಿಮಾನಿ ಪುಟದಲ್ಲಿ ಗರಿಷ್ಠ ಲೈಕ್‌ಗಳನ್ನು ಪಡೆಯಲು ತುಂಬಾನೇ ಸ್ಪರ್ಧೆ ಇದೆ ಎಂದು ಹೇಳಬಹುದು. ಜನರು ದೊಡ್ಡ ಸಂಖ್ಯೆಯ ಲೈಕ್‌ಗಳನ್ನು ನೋಡಲು ಎಷ್ಟು ಹತಾಶರಾಗಿದ್ದಾರೆಂದರೆ, ಅವರು ಸಾವಿರಾರು ರೂಪಾಯಿಗಳನ್ನು ಸಹ ಪಾವತಿಸಲು ಹಿಂಜರಿಯುವುದಿಲ್ಲ. ಆದರೆ ಇದಕ್ಕಾಗಿ, ನೀವು ಫೇಸ್‌ಬುಕ್ ಲೈಕ್‌ಗಳನ್ನು ಉತ್ಪಾದಿಸುವಲ್ಲಿ ಅನುಭವ ಹೊಂದಿರಬೇಕು.

2. ಪ್ರಾಯೋಜಿತ ಪೋಸ್ಟ್‌ಗಳನ್ನು ಪ್ರಕಟಿಸಿ

ನೀವು ನಿಮ್ಮ ಫೇಸ್‌ಬುಕ್ ಪುಟದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದರೆ, ನಿಮ್ಮ ಅಭಿಮಾನಿ ಪುಟದಲ್ಲಿ ಇತರ ವ್ಯವಹಾರಗಳು ಅಥವಾ ಜನರ ಜಾಹೀರಾತುಗಳನ್ನು ಪೋಸ್ಟ್ ಮಾಡುವ ಮೂಲಕ ನೀವು ಹಣ ಗಳಿಸಬಹುದು.

ಇದನ್ನೂ ಓದಿ:  ATM ಕಾರ್ಡ್ ಬ್ಲಾಕ್ ಆಗಿದೆಯಾ? Activate ಮಾಡಿಕೊಳ್ಳೋದು ಹೇಗೆ?

ನೀವು 'ವರ್ಡ್‌ಪ್ರೆಸ್ ಟ್ಯುಟೋರಿಯಲ್ಸ್'ನಲ್ಲಿ ಅಭಿಮಾನಿ ಪುಟ ಹೊಂದಿದ್ದೀರಿ ಮತ್ತು ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದರೆ, ' ವರ್ಡ್‌ಪ್ರೆಸ್ ಡೆವಲಪ್‌ಮೆಂಟ್' ಸೇವೆಗಳನ್ನು ಮಾರಾಟ ಮಾಡುವ ಏಜೆನ್ಸಿಗಳು ನಿಮ್ಮ ಪುಟದಲ್ಲಿ ತಮ್ಮ ವ್ಯವಹಾರದ ಜಾಹೀರಾತುಗಳನ್ನು ಪೋಸ್ಟ್ ಮಾಡಲು ನಿಮ್ಮನ್ನು ಕೇಳಬಹುದು ಮತ್ತು ಪ್ರತಿಯಾಗಿ, ನೀವು ಉತ್ತಮ ಪ್ರಮಾಣದ ಹಣವನ್ನು ಅವರಿಗೆ ಕೇಳಬಹುದು.

3. ಮಾರ್ಕೆಟಿಂಗ್ ಲಿಂಕ್‌ಗಳೊಂದಿಗೆ ವಿಷಯವನ್ನು ಪೋಸ್ಟ್ ಮಾಡಿ

ಅಮೆಜಾನ್, ಫ್ಲಿಪ್ ಕಾರ್ಟ್, ವಿಕಮಿಷನ್ ಮತ್ತು ಮೇಕ್ ಮೈ ಟ್ರಿಪ್‌ನಂತಹ ಕಮಿಷನ್ ಆಧಾರದ ಮೇಲೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರ್ಕೆಟಿಂಗ್ ಕಾರ್ಯಕ್ರಮಗಳನ್ನು ನೀಡುವ ವಿವಿಧ ಸೈಟ್‌ಗಳಿವೆ. ಈ ರೀತಿಯಾಗಿ, ಅಫಿಲಿಯೇಟ್ ಮಾರ್ಕೆಟಿಂಗ್ ಮತ್ತು ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಜೊತೆ ಜೊತೆಯಾಗಿ ಕೆಲಸ ಮಾಡುತ್ತವೆ.

ಈ ಯಾವುದಾದರೂ ಸಂಸ್ಥೆ ಮಾರ್ಕೆಟಿಂಗ್ ಪ್ರೋಗ್ರಾಂಗಳಲ್ಲಿ ನಿಮ್ಮನ್ನು ನೋಂದಾಯಿಸಿ. ನಿಮ್ಮ ಫ್ಯಾನ್ ಪುಟದಲ್ಲಿ ಉತ್ಪನ್ನ ಮತ್ತು ಸೇವೆಗಳ ಲಿಂಕ್ ಪೋಸ್ಟ್ ಮಾಡಿ ಮತ್ತು ಪ್ರತಿ ಮಾರಾಟದಲ್ಲಿ ಕಮಿಷನ್ ಸಂಪಾದಿಸಿ.

4. ನಿಮ್ಮ ಅಭಿಮಾನಿ ಪುಟದಲ್ಲಿ ಆಫರ್ ರಚಿಸಿ

ನೀವು ನಿಮ್ಮ ವ್ಯವಹಾರ ಅಥವಾ ಬ್ರ್ಯಾಂಡ್ ಫ್ಯಾನ್ ಪುಟ ಹೊಂದಿದ್ದರೆ, ಕೂಪನ್, ರಿಯಾಯಿತಿ ಅಥವಾ ಮಾರಾಟ ಯೋಜನೆಗಳನ್ನು ಘೋಷಿಸಲು ಇದು ಅತ್ಯುತ್ತಮ ವೇದಿಕೆಯಾಗಬಹುದು. ಫ್ಯಾನ್ ಪುಟದಲ್ಲಿ ನೀವು ಎಲ್ಲಾ ವಿವರಗಳನ್ನು ವಿವರಿಸಬಹುದಾದ ಕೊಡುಗೆ ರಚಿಸುವ ಆಯ್ಕೆ ಇದೆ ಮತ್ತು ಒಮ್ಮೆ ನೀವು ಪೋಸ್ಟ್ ಸಲ್ಲಿಸಿದ ನಂತರ, ಅದು ನೇರವಾಗಿ ನಿಮ್ಮ ಲಕ್ಷಾಂತರ ಅನುಯಾಯಿಗಳನ್ನು ತಲುಪುತ್ತದೆ.

5. ಪ್ರಭಾವಶಾಲಿ ಮಾರ್ಕೆಟರ್ ಆಗಿ

ನಿಮ್ಮನ್ನು ಸಂಪರ್ಕಿಸುವ ಯಾವುದೇ ಏಜೆನ್ಸಿಗಳಿಗೆ ನೀವು ಒಬ್ಬ ಪ್ರಭಾವಶಾಲಿ ಮಾರ್ಕೆಟರ್ ಆಗಿದ್ದೀರಿ ಎಂದು ತಿಳಿದರೆ ಸಾಕು, ಪ್ರಾಯೋಜಿತ ಜಾಹೀರಾತುಗಳಿಗಿಂತ ಭಿನ್ನವಾಗಿ, ಮಾರುಕಟ್ಟೆಯಲ್ಲಿ ಉತ್ಪನ್ನಗಳು ಅಥವಾ ಸೇವೆಗಳ ಬ್ರ್ಯಾಂಡ್ ಬಹು ಬೇಗನೆ ನಿಮ್ಮಿಂದ ಜನಪ್ರಿಯವಾಗುತ್ತದೆ.

6. ನಿಮ್ಮ ಅಭಿಮಾನಿ ಪುಟ ಮಾರಾಟ ಮಾಡಿ

ನಿಮ್ಮ ಫೇಸ್‌ಬುಕ್ ಪುಟವು ಗಣನೀಯ ಪ್ರಮಾಣದ ಲೈಕ್ ಗಳು ಮತ್ತು ಅನುಯಾಯಿಗಳನ್ನು ಹೊಂದಿರುವಾಗ ಅದನ್ನು ಮಾರಾಟ ಮಾಡುವುದರಿಂದಲೂ ಸಹ ನೀವು ಹಣ ಗಳಿಸಬಹುದು. ನೀವು ನಿಯಮಿತವಾಗಿ ಪೋಸ್ಟ್ ಮಾಡಲು ಅಭಿಮಾನಿ ಪುಟ ರಚಿಸುತ್ತೀರಿ ಮತ್ತು ಈ ರೀತಿಯ ಅಭಿಮಾನಿ ಪುಟಗಳನ್ನು ಹರಾಜು ಮಾಡುವ ಅನೇಕ ಆನ್‌ಲೈನ್ ವೇದಿಕೆಗಳಿವೆ.

ಇಷ್ಟೇ ಅಲ್ಲದೆ ನೀವು ಫೇಸ್‌ಬುಕ್ ಗ್ರೂಪ್, ಫೇಸ್‌ಬುಕ್ ಮಾರುಕಟ್ಟೆ ಸ್ಥಳ, ಫೇಸ್‌ಬುಕ್ ಖಾತೆಗಳನ್ನು ಮಾರಾಟ ಮಾಡುವುದು, ಫೇಸ್‌ಬುಕ್ ಜಾಹೀರಾತುಗಳು ಮುಂತಾದ ನಿಯಮಿತವಾಗಿ ನೀವು ಉತ್ತಮ ಪ್ರಮಾಣದ ಆದಾಯ ಗಳಿಸಬಹುದಾಗಿದೆ.
Published by:vanithasanjevani vanithasanjevani
First published: