Google CEO: ಉದ್ಯೋಗಿಗಳಿಗೆ ಗೂಗಲ್‌ ಸಿಇಒ ಸುಂದರ್‌ ಪಿಚೈ ಸಲಹೆ!

ಕಂಪನಿಯ ಉತ್ಪಾದಕತೆ ಹೆಚ್ಚಿಸಲು ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರು "ಉದ್ಯೋಗಿಗಳು ನಿಜವಾಗಿಯೂ ಉತ್ಪಾದಕರಾಗಿದ್ದಾರೆ..?" ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವ ಮೂಲಕ ಗೂಗಲ್‌ ಸಂಸ್ಥೆಯನ್ನು 20% ರಷ್ಟು ಹೆಚ್ಚು ಪರಿಣಾಮಕಾರಿಯಾಗಬೇಕು ಎಂದು ಬಯಸುತ್ತೇನೆ ಎಂದು ಅವರು ಹೇಳಿದರು.

ಗೂಗಲ್‌ ಸಿಇಒ ಸುಂದರ್‌ ಪಿಚೈ

ಗೂಗಲ್‌ ಸಿಇಒ ಸುಂದರ್‌ ಪಿಚೈ

  • Share this:
ಟೆಕ್ ದೈತ್ಯ ಗೂಗಲ್ (Google) ಕಂಪನಿಯನ್ನು ಉತ್ಪಾದಕ ಕಂಪನಿಯನ್ನಾಗಿ ಮಾಡಬೇಕೆಂದು ಗೂಗಲ್‌ ಕಂಪನಿಯ ಸಿಇಒ ಹೆಚ್ಚಿನ ಉದ್ಯೋಗಗಳನ್ನು (Employees) ಕಡಿತಗೊಳಿಸಬೇಕೆಂದು ಸೂಚಿಸಿದ್ದಾರೆ. ಕಂಪನಿಯ ಉತ್ಪಾದಕತೆ ದಿನದಿಂದ ದಿನಕ್ಕೆ ಬಹಳಷ್ಟು ಕಡಿಮೆ ಆಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕಂಪನಿಯ (Company) ಉತ್ಪಾದಕತೆ ಹೆಚ್ಚಿಸಲು ಗೂಗಲ್‌ ಸಿಇಒ ಸುಂದರ್‌ ಪಿಚೈ (Google CEO Sundar Pichai) ಅವರು "ಉದ್ಯೋಗಿಗಳು ನಿಜವಾಗಿಯೂ ಉತ್ಪಾದಕರಾಗಿದ್ದಾರೆ..?" ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವ ಮೂಲಕ ಗೂಗಲ್‌ ಸಂಸ್ಥೆಯನ್ನು 20% ರಷ್ಟು ಹೆಚ್ಚು ಪರಿಣಾಮಕಾರಿಯಾಗಬೇಕು ಎಂದು ಬಯಸುತ್ತೇನೆ ಎಂದು ಅವರು ಹೇಳಿದರು.

ಉದ್ಯೋಗಿಗಳಿಗೆ ಗೂಗಲ್‌ ಸಿಇಒ ಸುಂದರ್‌ ಪಿಚೈ ಸಲಹೆ ಏನು
ಸುಂದರ ಪಿಚೈ ಲಾಸ್ ಏಂಜಲೀಸ್‌ನಲ್ಲಿ ನಡೆದ ಕೋಡ್ ಕಾನ್ಫರೆನ್ಸ್‌ನಲ್ಲಿ ಮಾತನಾಡುತ್ತಾ, “ಗೂಗಲ್ ಮತ್ತು ಆಲ್ಫಾಬೆಟ್ ಮುಖ್ಯಸ್ಥರು ಆರ್ಥಿಕ ಅನಿಶ್ಚಿತತೆ ಮತ್ತು ಜಾಹೀರಾತು ವೆಚ್ಚದಲ್ಲಿ ಬಹಳಷ್ಟು ನಿಧಾನಗತಿಯ ಪ್ರಗತಿ ಕಾಣುತ್ತಿದೆ. ಇದರ ನಡುವೆ ಕಂಪನಿಯನ್ನು ಹೇಗೆ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಬೇಕು ಎಂಬುದರ ಕುರಿತು ಹಲವು ಯೋಜನೆಗಳ ಬಗ್ಗೆ ವಿವರಿಸುವುದರ ಜೊತೆಗೆ, ಗೂಗಲ್‌ ಇಲ್ಲಿಯವರೆಗೂ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಗ್ರಾಹಕರಿಗೆ ನಮ್ಮ ಕಡೆಯಿಂದ ಯಾವುದೇ ತೊಂದರೆ ಆಗಬಾರದು. ಆದ್ದರಿಂದ ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳುತ್ತವೆ” ಎಂದು ಹೇಳಿದರು.

ಕೆಲಸದಲ್ಲಿರುವ ಸೂಕ್ತ ವಿಷಯಗಳಿಗೆ ಆದ್ಯತೆ ನೀಡಬೇಕು 
ತಮ್ಮ ಮಾತನ್ನು ಮುಂದುವರಿಸುತ್ತಾ, “ಒಂದು ಕಂಪನಿಯನ್ನು ಬಲವಾಗಿ ಬೆಳೆಸಬೇಕೆಂದರೆ ನೀವು ಹೆಚ್ಚು ಸೂಕ್ತವಾಗಿ ಕೆಲಸ ಮಾಡಬೇಕಾಗುತ್ತದೆ. ನೀವು ಮೊದಲಿಗಿಂತ ಕಡಿಮೆ ಸಂಪನ್ಮೂಲಗಳನ್ನು ಹೊಂದಿರುವಾಗ, ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡುವ ಅಗತ್ಯ ಖಂಡಿತ ಇರುತ್ತದೆ.

ಇದನ್ನೂ ಓದಿ: Best Business Idea: ಭಾರತದ ಟಾಪ್ 10 ಬ್ಯುಸಿನೆಸ್​ ಐಡಿಯಾಗಳು! ಕಡಿಮೆ ಹೂಡಿಕೆ, ಹೆಚ್ಚಿನ ಲಾಭ

ನೀವು ಕೆಲಸದಲ್ಲಿರುವ ಸೂಕ್ತ ವಿಷಯಗಳಿಗೆ ಆದ್ಯತೆ ನೀಡಬೇಕು ಮತ್ತು ನಿಮ್ಮ ಉದ್ಯೋಗಿಗಳು ನಿಜವಾಗಿಯೂ ಉತ್ಪಾದಕರಾಗಿದ್ದಾರೆಯೇ ಎಂಬುದನ್ನು ತಿಳಿಯಲು ಹಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಏಕೆಂದರೆ ಉದ್ಯೋಗಿಗಳು ಕಂಪನಿಯ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಲು ತರಬೇತಿಯನ್ನು ನೀಡಬೇಕು. ಇದರಿಂದ ಅವರು ಮಾಡುವ ಕೆಲಸಗಳ ಮೇಲೆ ಇದು ಸಾಕಷ್ಟು ಪ್ರಭಾವ ಬೀರುತ್ತದೆ. ನಾವು ಕೂಡ ಇಂತಹದೇ ಕೆಲಸ ಮಾಡುವುದಕ್ಕಾಗಿ ನಮ್ಮ ಸಮಯವನ್ನು ವಿನಿಯೋಗಿಸುತ್ತಿದ್ದೆವೆ” ಎಂದು ಸುಂದರ್‌ ಪಿಚೈ ಹೇಳಿದರು.

ಕಂಪನಿಯನ್ನು 20% ರಷ್ಟು ಹೆಚ್ಚು ಉತ್ಪಾದಕವಾಗಿಸುವುದು ಹೇಗೆ
ಗೂಗಲ್‌ನ ಸಿಇಒ ಆಗಿರುವ ಸುಂದರ್‌ ಪಿಚೈ ಅವರು “ಕಂಪನಿಯ ಬೆಳವಣಿಗೆ ಮೊದಲಿಗಿಂತ ನಿಧಾನವಾಗಿದೆ. ಇದಕ್ಕೆ ಕಾರಣವೆನೇಂದು ಹೆಚ್ಚಿನ ಜನ ಕೇಳುತ್ತಿದ್ದಾರೆ” ಎಂದು ಹೇಳಿದರು. “ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಹಾಗೂ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ಸ್ವಲ್ಪ ನಿಧಾನವಾಗಿರಬಹುದು. ಆದರೆ ನೀವು ಕೊನೆಯಿಂದ ಕಂಪನಿಯನ್ನು ಒಂದು ವಿಶ್ಲೇಷಿಸಿ ಮತ್ತು ಕಂಪನಿಯನ್ನು ಶೇಕಡಾ 20 ರಷ್ಟು ಹೆಚ್ಚು ಉತ್ಪಾದಕವಾಗಿಸುವುದು ಹೇಗೆ ಎಂದು ಲೆಕ್ಕಾಚಾರ ಮಾಡಿ" ಎಂದು ಅವರು ಹೇಳಿದರು.

ಇದನ್ನೂ ಓದಿ:  Business: ಕಾರ್ಪೊರೇಟ್ ಉದ್ಯೋಗಕ್ಕಿಂತ ಈ ಉದ್ಯಮವೇ ಬೆಸ್ಟ್; MBA ಪದವಿ ಪಡೆದು ಆಹಾರೋದ್ಯಮದಲ್ಲಿ ಯಶಸ್ಸು ಕಂಡವರಿವರು

"ಕೆಲವೊಮ್ಮೆ ಪ್ರಗತಿಯನ್ನು ಸಾಧಿಸುವ ಹಲವು ಕ್ಷೇತ್ರಗಳು ಇರುತ್ತವೆ. ಆದರೆ ಜನರು ಯಾವು ಕ್ಷೇತ್ರಗಳು ಕಡಿಮೆ ಪ್ರಗತಿಯನ್ನು‌ ಹೊಂದಿರುತ್ತವೆಯೋ ಅಂತಹ ಕ್ಷೇತ್ರಗಳ ಮೇಲೆ ಹೆಚ್ಚಿನ ಒತ್ತಡ ಹಾಕುತ್ತಾರೆ. ಅಲ್ಲಿ ಹಲವಾರು ಜನರು ಕಂಪನಿಗೆ ಅಗತ್ಯವಾಗಿ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದನ್ನು ಹೇಗೆ ಅರ್ಥಮಾಡಿಕೊಳ್ಳುವುದು ಮತ್ತು ಆದ್ದರಿಂದ ಒಬ್ಬರೇ ಕಂಪನಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಇದರಿಂದ ಕಂಪನಿ ಉದ್ಯೋಗಿಗಳ ಕಾರ್ಯ ದಕ್ಷತೆಯನ್ನು 20% ರಷ್ಟು ಹೆಚ್ಚಿಸಿ ಕಂಪನಿಯ ಬೆಳವಣಿಗೆಯನ್ನು ಸಹ ಸುಧಾರಿಸುತ್ತದೆ" ಎಂದು ಅವರು ಮತ್ತೊಂದು ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ.

ಉದ್ಯೋಗಗಳನ್ನು ಕಡಿತಗೊಳಿಸುವ ಸೂಚನೆ
ಟೆಕ್‌ ದೈತ್ಯ ಗೂಗಲ್‌ ಕಂಪನಿಯಲ್ಲಿ ಉದ್ಯೋಗಗಳನ್ನು ಕಡಿತಗೊಳಿಸುವ ಬಗ್ಗೆ ಸುಂದರ್‌ ಪಿಚೈ ಸುಳಿವು ನೀಡಿರುವುದು ಇದೇ ಮೊದಲಲ್ಲ. ಇದೇ ವರ್ಷದ ಜುಲೈನಲ್ಲಿ, ಕೂಡ ಪಿಚೈ ತಮ್ಮ ಉದ್ಯೋಗಿಗಳಿಗೆ ಒಂದು ಮೆಮೊ “ಕಂಪನಿಯು ವರ್ಷದ ಉಳಿದ ಅವಧಿಗೆ ನೇಮಕಾತಿಯ ವೇಗವನ್ನು ನಿಧಾನಗೊಳಿಸುತ್ತದೆ" ಎಂದು ಅವರು ಬರೆದಿದ್ದರು. ಕಂಪನಿಯು "ಹೆಚ್ಚು ಉದ್ಯಮಶೀಲವಾಗಿರಬೇಕು" ಮತ್ತು "ಹೆಚ್ಚು ತುರ್ತು, ತೀಕ್ಷ್ಣವಾದ ಗಮನ ಮತ್ತು ಕೆಲಸದ ಮೇಲೆ ನಮಗೆ ತೀವ್ರವಾದ ಆಸಕ್ತಿ ಇರಬೇಕು. ಆ ರೀತಿಯಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ “ ಎಂದು ಗೂಗಲ್‌ ಸಿಇಒ ಸುಂದರ್‌ ಪಿಚೈ ಕಂಪನಿಯ ಉದ್ಯೋಗಿಗಳನ್ನು ಎಚ್ಚರಿಸಿದ್ದರು.
Published by:Ashwini Prabhu
First published: