ಮನೆಯಲ್ಲಿಯೇ ಬಗೆ ಬಗೆ ಹೂವಿನ ಗಿಡಗಳು (Flowers), ಅಲಂಕಾರಿಕ ಸಸ್ಯಗಳು (Ornamental Plants), ತರಕಾರಿ ಗಿಡಗಳನ್ನು (Vegetables Plant) ನೆಟ್ಟು, ನೀರೆರೆದು ಪೋಷಿಸುವುದು ಎಂದರೆ ಎಲ್ಲರಿಗೂ ಪ್ರೀತಿ. ಆದರೆ ಅಂದದ ಗೊಂಬೆಗೆ ದೃಷ್ಟಿ ಬೊಟ್ಟು ಎನ್ನವಂತೆ ಕೈತೋಟದಲ್ಲಿ ಕಳೆಗಳು ಸಹಜ. ಈ ಕಳೆಗಳು ನಮ್ಮ ಕೈತೋಟವನ್ನು ಹಾಳುಗೆಡುವಬಹುದು, ಹೂಗಳ ತೋಟವಿದ್ದರೆ ಹೂಗಳ ಗಿಡ ಮತ್ತು ಹೂಗಳನ್ನು ಚೆನ್ನಾಗಿ ಬೆಳೆಯದಂತೆ ಮಾಡುತ್ತವೆ. ನಾವು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ನಮ್ಮ ಪುಟ್ಟ ಕೈತೋಟದ ಅಂದವನ್ನೇ ಈ ಕಳೆಗಳು ಕೆಡಿಸಿಬಿಡುತ್ತವೆ. ಅದರಲ್ಲೂ ಮುಖ್ಯವಾಗಿ ಗಿಡಗಳಿಗೆ ಅಗತ್ಯವಿರುವ ಭೂಮಿಯಲ್ಲಿನ ಪೋಷಕಾಂಶ, ಸತ್ವಗಳನ್ನು ಇವೇ ಹೆಚ್ಚಾಗಿ ಹೀರಿಕೊಂಡು ಬಿಡುತ್ತವೆ.
ಹೂ ತೋಟದಲ್ಲಿನ ಕಳೆ ನಿವಾರಣೆ ಹೇಗೆ?
ತೋಟಗಾರರು ತಮ್ಮ ಹೂವಿನ ಗಿಡಗಳಿರುವ ಸ್ಥಳಕ್ಕೆ ಸಸ್ಯಗಳನ್ನು ನೆಡಲು, ನೀರುಹಾಕಲು ಮತ್ತು ಗೊಬ್ಬರ ಹಾಕಲು ಸಮಯ, ಶ್ರಮ ವ್ಯವ ಮಾಡಬೇಕೇ ಹೊರತು ಕಳೆ ಕೀಳಲು ಸಮಯ ವ್ಯರ್ಥ ಮಾಡಬಾರದು.ಹಾಗಾದರೆ ಹೂವಿನ ಕೈತೋಟದಲ್ಲಿನ ಕಳೆಗಳನ್ನು ಶ್ರಮ ಹಾಕದೇ ಹೇಗೆ ನಿವಾರಿಸುವುದು? ಇದಕ್ಕಿರುವ ಸಿಂಪಲ್ ಸಲಹೆಗಳೇನು ಅಂತಾ ಇಲ್ಲಿ ತಿಳಿಯಿರಿ.
ಕೈತೋಟದಲ್ಲಿ ಕಳೆ!
ಕೆಲವು ಸಾಮಾನ್ಯ ತಪ್ಪುಗಳನ್ನು ತಪ್ಪಿಸುವ ಮೂಲಕ ಮತ್ತು ಒಂದೆರಡು ಸರಳ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೂದೋಟದಲ್ಲಿರುವ ಕಳೆಯನ್ನು ಸುಲಭವಾಗಿ ನಿವಾರಿಸಬಹುದು.
1. ಹೋದೋಟದ ಮಣ್ಣನ್ನು ಯಾವಾಗಲೂ ಮುಚ್ಚಿಡಿ
ತೆರೆದ ಮಣ್ಣು ಕಳೆ ಬೀಜಗಳು ಸಸ್ಯವಾಗಲು ಸಹಾಯ ಮಾಡುತ್ತವೆ. ಆದ್ದರಿಂದ ತೋಟದಲ್ಲಿ ಕಳೆಗಳನ್ನು ತಪ್ಪಿಸಲು ಎಲ್ಲಾ ಕಾಲದಲ್ಲೂ ಮಣ್ಣನ್ನು ಮುಚ್ಚಿಡುವ ಪ್ರಯತ್ನ ಮಾಡಿ.
ಒಮ್ಮೆ ಕಳೆಗಳು ಮಣ್ಣಲ್ಲಿ ಇದ್ದರೆ ಸಾಕು ಕಳೆ ಬೀಜಗಳು ತ್ವರಿತವಾಗಿ ಮೊಳಕೆಯೊಡೆದು ಬೇರು ಬಿಟ್ಟು ಬಿಡುತ್ತವೆ. ಹೀಗಾಗಿ ನಿಮ್ಮ ತೋಟದ ಮಣ್ಣನ್ನು ಹಸಿಗೊಬ್ಬರದ ದಟ್ಟವಾದ ಹೊದಿಕೆಯಿಂದ ಮುಚ್ಚುವ ಮೂಲಕ ಕಳೆಗಳನ್ನು ತಡೆಯಬಹುದು.
2. ಹಸಿಗೊಬ್ಬರದ ತಡೆಗೋಡೆ
ಮೇಲೆ ಹೇಳಿದಂತೆ ಕಳೆಗಳನ್ನು ತಡೆಯಲು ತೋಟದಲ್ಲಿ ಹಸಿಗೊಬ್ಬರದ ಹೊದಿಕೆ ಪ್ರಯೋಜನಕಾರಿಯಾಗಿದೆ. ಹಸಿಗೊಬ್ಬರವು ಮಣ್ಣನ್ನು ತಂಪಾಗಿ ಮತ್ತು ತೇವಾಂಶದಿಂದ ಇರಿಸುವ ಮೂಲಕ ಮತ್ತು ಕಳೆಗಳನ್ನು ಬೆಳಕಿಗೆ ಒಡ್ಡುವುದನ್ನು ತಡೆದು ಹೂದೋಟದಲ್ಲಿ ಕಳೆಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ: ಹಸುವಿನ ಸಗಣಿ ಅಂತ ಮೂಗು ಮುರಿಯಬೇಡಿ, ಇದ್ರಲ್ಲಿದೆ ಲಕ್ಷ ಲಕ್ಷ ಹಣ!
ಕಳೆ ತಡೆಗೋಡೆಯಾಗಿ ಹಸಿಗೊಬ್ಬರವನ್ನು ಪರಿಣಾಮಕಾರಿಯಾಗಿರಲು, ಹೂವಿನ ತೋಟದಲ್ಲಿ ಈ ಗೊಬ್ಬರವನ್ನು ಕನಿಷ್ಠ ನಾಲ್ಕು ಇಂಚುಗಳಷ್ಟು ಹಾಕಬೇಕಾಗುತ್ತದೆ.
3. ಹಸಿಗೊಬ್ಬರದ ಪದರವನ್ನು ತಿರುಚಿ ಮತ್ತೆ ಹಾಕಬೇಡಿ
ಹೂವಿನ ತೋಟದಲ್ಲಿ ಈ ಗೊಬ್ಬರವನ್ನು ಕನಿಷ್ಠ ನಾಲ್ಕು ಇಂಚುಗಳಷ್ಟು ಹಾಕಿ ಬಿಟ್ಟ ಮೇಲೆ ಮತ್ತೆ ಅದನ್ನು ತಿರುಗಿಸಿ ಅಂದರೆ ಉಲ್ಟಾ ಮತ್ತೊಂದು ಬದಿಯನ್ನು ಹಾಕಬೇಡಿ. ಸಾಮಾನ್ಯವಾಗಿ ತೋಟಗಾರರು ಈ ತಪ್ಪನ್ನು ಮಾಡುತ್ತಾರೆ.
ಇದು ಹೆಚ್ಚಿನ ಕಳೆಗಳನ್ನು ಬೆಳೆಯಲು ಸಹಾಯ ಮಾಡುತ್ತದೆ. ಗೊಬ್ಬರದ ಪದರದಲ್ಲಿ ಕಳೆ ಬೀಜಗಳು ಅವಿತಿರುತ್ತವೆ. ಅದನ್ನು ಉಲ್ಟಾ ಮಾಡಿ ಹಾಕಿದಾಗ ಅದು ಮಣ್ಣಿಗೆ ಹೋಗಿ ಕಳೆ ಗಿಡಗಳಾಗಿ ಬೆಳೆಯಬಹುದು.
4. ನಿಮ್ಮ ಹೂವಿನ ತೋಟದಲ್ಲಿ ಹೆಚ್ಚೆಚ್ಚು ಸಸ್ಯಗಳನ್ನು ಬೆಳೆಸಿ
ಹೂದೋಟದಲ್ಲಿ ಸಂಪೂರ್ಣವಾಗಿ ಕಳೆಗಳನ್ನು ನಾಶಮಾಡಲು ಇದಕ್ಕಿಂತ ಬೇರೆ ಉಪಾಯ ಇಲ್ಲ ನೋಡಿ. ಕಳೆಗಳನ್ನು ನಾಶಮಾಡಲು ಹೆಚ್ಚೆಚ್ಚು ಸಸ್ಯಗಳನ್ನು ಬೆಳೆಸಿ. ಇದು ನಿಮ್ಮ ಕೈತೋಟದ ಅಂದ ಹೆಚ್ಚಿಸುವುದರ ಜೊತೆಗೆ ಭವಿಷ್ಯದ ಕಳೆಗಳನ್ನು ಕಡಿಮೆ ಮಾಡುತ್ತದೆ.
ಕೈತೋಟದಲ್ಲಿ ಹೆಚ್ಚು ದಟ್ಟವಾದ ಸಸ್ಯಗಳ ಇರುವಿಕೆ ಕಳೆಗಳನ್ನು ಭೂಮಿಯಿಂದ ಹೊರಬರದಂತೆ ನೋಡಿಕೊಳ್ಳಲು ಸಹಕಾರಿಯಾಗಿದೆ. ಅಷ್ಟೇ ಅಲ್ಲ ಈ ಕ್ರಮ ಮಣ್ಣಿನಲ್ಲಿ ತೇವಾಂಶವನ್ನು ಸಂರಕ್ಷಿಸಲು ಸಹ ಸಹಾಯ ಮಾಡುತ್ತದೆ.
ಹೀಗೆ ಈ ನಾಲ್ಕು ಪರಿಣಾಮಕಾರಿ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಹೂವಿನ ತೋಟದಲ್ಲಿ ಕಳೆಗಳನ್ನು ನಿವಾರಣೆ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ