2022ರಲ್ಲಿ ಹೆಚ್ಚುವರಿ ಆದಾಯ ಮೂಲಗಳೊಂದಿಗೆ ನಿಮ್ಮ ಹೂಡಿಕೆಯನ್ನು ಹೇಗೆ ವೈವಿಧ್ಯಗೊಳಿಸುವುದು ಎಂಬುದು ಇಲ್ಲಿದೆ

Binomo ದ ಪ್ಲಾಟ್‌ಫಾರ್ಮ್ ಅತ್ಯಂತ ಸರಳವಾಗಿದೆ ಮತ್ತು ಬಳಕೆದಾರ-ಸ್ನೇಹಿಯಾಗಿದೆ. ಆರಂಭಿಕ ಹೂಡಿಕೆದಾರರೂ ಸಹ ಒಂದು ಡೆಮೊ ಖಾತೆಯ ಮೂಲಕ ಟ್ರೇಡಿಂಗ್ ಬಗ್ಗೆ ತಿಳಿದುಕೊಳ್ಳಲು ಮತ್ತು ಜ್ಞಾನವನ್ನು ಪಡೆದುಕೊಳ್ಳಲು ಈ ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಹೆಚ್ಚಿನ ಆದಾಯ ಮೂಲಗಳು ಎಂದರೆ ಹೆಚ್ಚಿನ ಆರ್ಥಿಕ ಭದ್ರತೆ ಎಂದರ್ಥ. ನಮ್ಮ ಸಂಬಳದ ಆದಾಯವನ್ನು ಹೊರತುಪಡಿಸಿ, ಹೆಚ್ಚುತ್ತಿರುವ ನಮ್ಮ ಬೇಡಿಕೆಗಳನ್ನು ಪೂರೈಸಲು ಹಾಗೂ ಆರಾಮದಾಯಕ ಜೀವನ ನಡೆಸಲು ನಮ್ಮೆಲ್ಲರಿಗೂ ಆದಾಯದ ಹೆಚ್ಚುವರಿ ಮೂಲಗಳ ಅಗತ್ಯವಿದೆ.  ಇಂದು ಹಲವಾರು ಹೂಡಿಕೆ ವಿಧಾನಗಳು ಲಭ್ಯವಿದ್ದು, ಅವು ವ್ಯಕ್ತಿಯ ರಿಸ್ಕ್ ಪ್ರೊಫೈಲ್, ವಯೋವರ್ಗ, ಹೂಡಿಕೆಯ ಗುರಿಗಳನ್ನು ಗಣನೆಗೆ ತೆಗೆದುಕೊಂಡಿರುತ್ತವೆ. ನಿಮ್ಮ ವ್ಯಕ್ತಿಗತ ಅಗತ್ಯಗಳು ಹಾಗೂ ಗುರಿಗಳೊಂದಿಗೆ ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ವಿಧಾನಗಳಲ್ಲಿ ನೀವು ಹುಡಿಕೆ ಮಾಡಬಹುದು. 

  ಇದರ ಅರ್ಥ ಏನೆಂದರೆ, ಭಿನ್ನ ಹೂಡಿಕೆ ವಿಧಾನಗಳನ್ನು ಒಳಗೊಂಡ ವೈವಿಧ್ಯಮಯವಾದ ಪೋರ್ಟ್‌ಫೋಲಿಯೊ, ಮಾರುಕಟ್ಟೆ ಅನಿಶ್ಚಿತತೆಯ ಪರಿಣಾಮವನ್ನು ತಗ್ಗಿಸಲು ಮತ್ತು ವಿವಿಧ ಹೂಡಿಕೆ ಸಾಧನಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಈ ಹೂಡಿಕೆ ವಿಧಾನಗಳಿಂದ ದೊರೆಯುವ ಒಟ್ಟಾರೆ ಮೊತ್ತವು ದೈನಂದಿನ ಖರ್ಚುವೆಚ್ಚಗಳನ್ನು ನಿಭಾಯಿಸಲು ಸಹಾಯ ಮಾಡುವುದಲ್ಲದೇ, ತುರ್ತು ಅನಿವಾರ್ಯತೆಯ ಸಂದರ್ಭಗಳಲ್ಲಿಯೂ ಸಹಕಾರಿಯಾಗುತ್ತದೆ.

  ಹೆಚ್ಚುವರಿ ಆದಾಯ ಗಳಿಸುವ ಕೆಲವು ಜನಪ್ರಿಯ ವಿಧಾನಗಳನ್ನು ನಿಮಗಾಗಿ ನಾವಿಲ್ಲಿ ನೀಡುತ್ತಿದ್ದೇವೆ.

  ಮ್ಯೂಚುವಲ್ ಫಂಡ್‌ಗಳು

  ಮ್ಯೂಚುವಲ್ ಫಂಡ್ ಎಂಬುದು ಒಂದು ಹಣಕಾಸು ಸಲಕರಣೆಯಾಗಿದ್ದು ಅದು ವಿವಿಧ ಹೂಡಿಕೆದಾರರಿಂದ ಫಂಡ್‌ಗಳನ್ನು ಸಂಗ್ರಹಿಸುತ್ತದೆ ಮತ್ತು ಅವುಗಳನ್ನು ವಿವಿಧ ಹಣಕಾಸು ಸ್ವತ್ತುಗಳಾದ ಸ್ಟಾಕ್‌ಗಳು, ಬಾಂಡ್‌ಗಳು, ಮನಿ ಮಾರ್ಕೆಟ್ ಸೆಕ್ಯುರಿಟಿಗಳು, ಇತ್ಯಾದಿಗಳಲ್ಲಿ ಹೂಡಿಕೆ ಮಾಡುತ್ತದೆ. ವಿವಿಧ ವಲಯಗಳಾದ್ಯಂತ ವೈವಿಧ್ಯಮಯ ಪೋರ್ಟ್‌ಫೋಲಿಯೊದಲ್ಲಿ ಹೂಡಿಕೆ ಮಾಡುವ ಮೂಲಕ ಅವ್ಯವಸ್ಥಿತ ಅಪಾಯಗಳನ್ನು ವೈವಿಧ್ಯಮಗೊಳಿಸಲು ನಿಮಗೆ ಇದು ಸಹಾಯ ಮಾಡಬಹುದು. ನಿಮ್ಮ ಹೂಡಿಕೆ ಉದ್ದೇಶ ಮತ್ತು ಅಪಾಯದ ಮಟ್ಟವನ್ನು ಅವಲಂಬಿಸಿ ನೀವು ಮ್ಯೂಚುವಲ್ ಫಂಡ್ ಸ್ಕೀಂ ಅನ್ನು ಆಯ್ಕೆ ಮಾಡಬಹುದು.

  ಭಾರತದ ಆರ್ಥಿಕತೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಈಕ್ವಿಟಿಗಳು ಹಾಗೂ ಹೂಡಿಕೆದಾರರ ಆತ್ಮವಿಶ್ವಾಸಗಳಿಂದಾಗಿ, ಹೂಡಿಕೆದಾರರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಯು ಗಣನೀಯ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ. ಮ್ಯೂಚುವಲ್ ಫಂಡ್ ಹೂಡಿಕೆಗಳು ದೀರ್ಘಾವಧಿಯಲ್ಲಿ ಸಂಭಾವ್ಯ ಹೆಚ್ಚಿನ ಆದಾಯ ತಂದುಕೊಡುವ ಸಾಕಷ್ಟು ಅವಕಾಶಗಳನ್ನು ಹೊಂದಿದ್ದು, ದೀರ್ಘಾವಧಿ ಸಂಪತ್ತು ನಿರ್ಮಿಸಲು ನಿಮಗೆ ಸಹಾಯ ಮಾಡುತ್ತದೆ.

  ಚಿನ್ನ

  ಚಿನ್ನವು ಒಂದು ಅನನ್ಯ ಸ್ವತ್ತಿನ ವರ್ಗ. ಚಿನ್ನದಲ್ಲಿ 10 ರಿಂದ 15 ಪ್ರತಿಶತ ಪೋರ್ಟ್‌ಫೋಲಿಯೊ ಹಂಚಿಕೆಯು, ವೈವಿಧ್ಯಗೊಳಿಸುವ ಸಾಧನವಾಗಿ ವರ್ತಿಸುತ್ತದೆ ಮತ್ತು ಈಕ್ವಿಟಿ, ಬಾಂಡ್‌ಗಳು, ಇತ್ಯಾದಿಗಳ ಮೇಲೆ ಪ್ರಭಾವ ಬೀರುವ ಅನಿಶ್ಚಿತ ಮಾರುಕಟ್ಟೆ ಏರಿಳಿತದ ಸಂದರ್ಭಗಳಲ್ಲಿ ನಷ್ಟಗಳನ್ನು ಮಿತಗೊಳಿಸಲು ಸಹಾಯ ಮಾಡುತ್ತದೆ. ಇದರ ಜತೆಗೆ, ಇತರ ಪ್ರಮುಖ ಹಣಕಾಸು ಸ್ವತ್ತುಗಳೊಂದಿಗಿನ ತುಲನೆಯಲ್ಲಿ ಚಿನ್ನದ ಮೇಲಿನ ಹೂಡಿಕೆಯು ಸ್ಪರ್ಧಾತ್ಮಕ ಗಳಿಕೆಯನ್ನು ಒದಗಿಸಿದೆ. ಹಾಗಾಗಿ, ನಿಮ್ಮ ರಿಸ್ಕ್-ಹೊಂದಾಣಿಕೆಯ ಗಳಿಕೆಯನ್ನು ಹೆಚ್ಚಿಸಿಕೊಳ್ಳಲು ನಿಮ್ಮ ಪೋರ್ಟ್‌ಫೋಲಿಯೊಗೆ ಚಿನ್ನವನ್ನು ಸೇರಿಸುವುದು ಸುರಕ್ಷಿತ ಎಂದು ಹೇಳಬಹುದು.

  ಭೌತಿಕ ರೂಪದಲ್ಲಿ ಚಿನ್ನ ಖರೀದಿಸುವ ಬದಲಿಗೆ, ಇಂದು ನೀವು ಸಾವರೀನ್ ಗೋಲ್ಡ್‌ ಬಾಂಡ್‌ಗಳು, ಚಿನ್ನದ ETFಗಳು, ಚಿನ್ನದ ಮ್ಯೂಚುವಲ್ ಫಂಡ್‌ಗಳು ಮತ್ತು ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವ ಸೌಲಭ್ಯ ಹೊಂದಿದ್ದೀರಿ.

  ನಿಶ್ಚಿತ ಠೇವಣಿಗಳು

  ನಿಶ್ಚಿತ ಠೇವಣಿಗಳು ಬ್ಯಾಂಕ್‌ಗಳು ಒದಗಿಸುವ ಅತ್ಯಂತ ಹಳೆಯ ಹಾಗೂ ಸುರಕ್ಷಿತವಾದ ಹೂಡಿಕೆ ಸಲಕರಣೆಗಳಲ್ಲಿ ಒಂದು ಎನಿಸಿಕೊಂಡಿವೆ. ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಯಲ್ಲಿನ ಮೊತ್ತಕ್ಕೆ ನೀಡುವ ಬಡ್ಡಿಯ ತುಲನೆಯಲ್ಲಿ ನಿಶ್ಚಿತ ಠೇವಣಿಗಳು ಹೆಚ್ಚಿನ ಬಡ್ಡಿಯನ್ನು ತಂದುಕೊಡುತ್ತವೆ. ಇದರ ಅಪಾಯ-ರಹಿತ ಸ್ಥಿತಿ ಮತ್ತು ಖಾತರಿಪಡಿಸಲಾದ ನಿಶ್ಚಿತ ಆದಾಯದಿಂದಾಗಿ ಹಲವಾರು ಜನರು ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡುವುದನ್ನು ಆಯ್ಕೆ ಮಾಡುತ್ತಾರೆ. ಅದಲ್ಲದೆ, ಹಲವಾರು ಜನರಿಗೆ ಇದು ನಿಯಮಿತ ಆದಾಯದ ಮೂಲವಾಗಿ ಪ್ರಯೋಜನ ನೀಡುತ್ತಿದೆ.

  ನಿಮ್ಮ ಹೂಡಿಕೆ ಗುರಿಗಳನ್ನು ಆಧರಿಸಿ 7 ದಿನಗಳಿಂದ 10 ವರ್ಷಗಳವರೆಗಿನ ಹೂಡಿಕೆ ಅವಧಿಯನ್ನು ನೀವು ಆಯ್ಕೆ ಮಾಡಬಹುದು.

  Trading

  ಟ್ರೇಡಿಂಗ್

  ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಹಣಕಾಸು ಸಲಕರಣೆಗಳಾದ್ಯಂತ, ಹೆಚ್ಚುವರಿ ಆದಾಯ ಗಳಿಸುವ ಜನಪ್ರಿಯ ವಿಧಾನವಾಗಿ ಟ್ರೇಡಿಂಗ್ ಮುನ್ನೆಲೆಗೆ ಬಂದಿದೆ. 

  ಅಸಂಖ್ಯಾತ ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳೊಂದಿಗೆ, ಇಂದು ಟ್ರೇಡಿಂಗ್ ಎಂಬುದು ಹೆಚ್ಚು ಅನುಕೂಲಕಾರಿ ಮತ್ತು ಸುಲಭವಾಗಿ ಪರಿಣಮಿಸಿದೆ. ಹಲವು ವ್ಯಕ್ತಿಗಳು ಈಕ್ವಿಟಿಗಳು, ಸರಕುಗಳು (commodities), ಹಣಕಾಸು ಸೂಚ್ಯಂಕಗಳು ಮತ್ತು ಕರೆನ್ಸಿ ಜೋಡಿಗಳು ಸೇರಿದಂತೆ ವಿವಿಧ ಹಣಕಾಸು ಸ್ವತ್ತುಗಳಲ್ಲಿ ಟ್ರೇಡ್ ಮಾಡಲು ಈ ಸದೃಢ ಪ್ಲಾಟ್‌ಫಾರ್ಮ್‌ಗಳು ಅನುಕೂಲ ಒದಗಿಸಲು ಸಹಾಯ ಮಾಡಿವೆ.

  ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾನ್ಯತೆ ಪಡೆದಿರುವ ಜನಪ್ರಿಯ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ Binomo ಒಂದು ಎನಿಸಿಕೊಂಡಿದೆ. 133 ರಾಷ್ಟ್ರಗಳಲ್ಲಿ ಲಭ್ಯವಿರುವ Binomo, ಟ್ರೇಡ್‌ ಮಾಡಲು 73 ಹೆಚ್ಚು-ಲಾಭಗಳಿಕೆಯ ಸ್ವತ್ತುಗಳನ್ನು ಒದಗಿಸುತ್ತದೆ. ಇದು ಫಿಕ್ಸೆಡ್ ಟೈಮ್ ಟ್ರೇಡ್‌ಗಳು (FTT) ತತ್ವದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ನಿಖರವಾದ ಮುನ್ಸೂಚನೆಗೂ ಹೆಸರುವಾಸಿಯಾಗಿದೆ. ಇದರಲ್ಲಿ, ನಿರ್ದಿಷ್ಟ ಸಮಯದಲ್ಲಿ ಸ್ವತ್ತುಗಳ ಏರಿಳಿತವನ್ನು ಅಂದರೆ, ಒಂದು ಸ್ವತ್ತಿನ ದರವು ಏರಿಕೆಯಾಗುತ್ತದೋ ಅಥವಾ ಇಳಿಕೆಯಾಗುತ್ತದೋ ಎಂಬುದನ್ನು ನೀವು ಊಹಿಸಬಹುದು. ನಿಮ್ಮ ಊಹೆಯನ್ನು ಆಧರಿಸಿ ನೀವು ಹೆಚ್ಚುವರಿ ಆದಾಯವನ್ನು ಗಳಿಸಬಹುದು.

  ಇದು ಹೇಗೆ ಕೆಲಸ ಮಾಡುತ್ತದೆ ಎಂಬುದು ಇಲ್ಲಿದೆ ನೋಡಿ, ಮೊದಲಿಗೆ ನೀವು ಟ್ರೇಡ್ ಮಾಡಲು ಬಯಸುವ ಸ್ವತ್ತನ್ನು ಆಯ್ಕೆ ಮಾಡಬೇಕು ಮತ್ತು ಹೂಡಿಕೆ ಮೊತ್ತು ಹಾಗೂ ಟ್ರೇಡ್ ಮಾಡುವ ಸಮಯವನ್ನು ಸೆಟ್ ಮಾಡಬೇಕು. ಈಗ, ಒಂದು ವೇಳೆ ಟ್ರೇಡ್‌ಗಾಗಿನ ನಿಮ್ಮ ಊಹೆಯು ಸರಿಯಾಗಿದ್ದರೆ, ನೀವು ಹೆಚ್ಚುವರಿ ಆದಾಯವನ್ನು ಗಳಿಸಬಹುದು ಮತ್ತು ಒಂದು ವೇಳೆ ನಿಮ್ಮ ಊಹೆಯು ತಪ್ಪಾಗಿದ್ದರೆ, ನಿಮ್ಮ ಬ್ಯಾಲೆನ್ಸ್‌ನಿಂದ ಹೂಡಿಕೆ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳಲಾಗುತ್ತದೆ.  

  Binomo ಒಂದು ಸುರಕ್ಷಿತ ಹೂಡಿಕೆ ಪ್ಲಾಟ್‌ಫಾರ್ಮ್ ಆಗಿದೆ ಮತ್ತು ಇಂಟರ್‌ನ್ಯಾಷನಲ್ ಫೈನಾನ್ಶಿಯಲ್ ಕಮಿಷನ್‌ನ “A” ವರ್ಗದ ಸದಸ್ಯನಾಗಿದೆ. ಇದು ಕಂಪನಿಯ ವಿಶ್ವಾಸಾರ್ಹತೆಯನ್ನು ದೃಢಪಡಿಸುತ್ತದೆ ಮತ್ತು ಸೇವೆಗಳಲ್ಲಿನ ಗುಣಮಟ್ಟವನ್ನು ಮತ್ತು ಗ್ರಾಹಕ ಸಂಬಂಧಗಳಲ್ಲಿನ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ. ಇದು Verify my Trade ನಿಂದ ಪ್ರಮಾಣಿತವಾಗಿದೆ ಹಾಗೂ ಜಾಗತಿಕ ಹಣಕಾಸು ಮತ್ತು ಮಾರುಕಟ್ಟೆಗಳಲ್ಲಿನ ಶ್ರೇಷ್ಟತೆಗಾಗಿ 2015ರ FE ಅವಾರ್ಡ್ ಮತ್ತು 2016ರ IAIR ಅವಾರ್ಡ್‌ಗಳನ್ನು ಪಡೆದುಕೊಂಡಿದೆ. ಇದಿಷ್ಟೇ ಅಲ್ಲದೆ, ನಿಮ್ಮ ಎಲ್ಲಾ ವೈಯಕ್ತಿಕ ಮತ್ತು ಹಣಕಾಸು ಡೇಟಾ ಎನ್‌ಕ್ರಿಪ್ಟ್ ಆಗಿದೆ ಮತ್ತು ಸುರಕ್ಷಿತವಾಗಿದೆ ಎಂಬುದನ್ನು ಖಾತ್ರಿಪಡಿಸಲು ಈ ಪ್ಲಾಟ್‌ಫಾರ್ಮ್, ಎನ್‌ಕ್ರಿಪ್ಶನ್-ಆಧಾರಿತ ಇಂಟರ್‌ನೆಟ್ ಸೆಕ್ಯುರಿಟಿ ಪ್ರೋಟೊಕಾಲ್ SSL ಅನ್ನು ಬಳಸುತ್ತದೆ.  

  Binomo ದ ಪ್ಲಾಟ್‌ಫಾರ್ಮ್ ಅತ್ಯಂತ ಸರಳವಾಗಿದೆ ಮತ್ತು ಬಳಕೆದಾರ-ಸ್ನೇಹಿಯಾಗಿದೆ. ಆರಂಭಿಕ ಹೂಡಿಕೆದಾರರೂ ಸಹ ಒಂದು ಡೆಮೊ ಖಾತೆಯ ಮೂಲಕ ಟ್ರೇಡಿಂಗ್ ಬಗ್ಗೆ ತಿಳಿದುಕೊಳ್ಳಲು ಮತ್ತು ಜ್ಞಾನವನ್ನು ಪಡೆದುಕೊಳ್ಳಲು ಈ ಪ್ಲಾಟ್‌ಫಾರ್ಮ್ ಅನ್ನು ಬಳಸಬಹುದು. ಸುಧಾರಿತ ಟೂಲ್‌ಗಳನ್ನು ಬಳಸಿಕೊಂಡು ನಿಮ್ಮ ಟ್ರೇಡಿಂಗ್ ಕಾರ್ಯನಿರ್ವಹಣೆಯನ್ನು ನೀವು ನಿಯಂತ್ರಿಸುವ ಸೌಲಭ್ಯ ಒದಗಿಸುತ್ತದೆ.

  Binomo ದೊಂದಿಗೆ ನಿಮ್ಮ ಟ್ರೇಡಿಂಗ್ ಪ್ರಯಾಣವನ್ನು ಆರಂಭಿಸಲು, ಅವರ websiteಗೆ ಭೇಟಿ ಕೊಡಿ ಅಥವಾ Google Play Store ಅಥವಾ Apple App Store ನಿಂದ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಿ. ‘ಸೈನ್ ಅಪ್’ ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಖಾತೆಯನ್ನು ರಚಿಸಿ. ನಿಮ್ಮ ನೋಂದಣಿಯು ಪೂರ್ಣಗೊಂಡ ಮೇಲೆ, Binomo ದೊಂದಿಗೆ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುತ್ತಿರುವ 20 ಮಿಲಿಯನ್‌ಗೂ ಹೆಚ್ಚಿನ Binomistಗಳ ಸಮುದಾಯದ ಒಂದು ಭಾಗವಾಗುತ್ತೀರಿ.

  ಗಮನಿಸಿ: OTC ಹಣಕಾಸು ಸಲಕರಣೆಗಳಲ್ಲಿನ ಕಾರ್ಯಾಚರಣೆಯು ಗಣನೀಯ ಅಪಾಯಗಳೊಂದಿಗೆ ಸಂಯೋಜನೆಯಾಗಿರುವುದರಿಂದ ಹೂಡಿಕೆ ಮಾಡುವ ಮೊದಲು ನಿಮ್ಮ ಹಣಕಾಸು ಸಾಮರ್ಥ್ಯಗಳನ್ನು ವಿಶ್ಲೇಷಿಸಿ.
  Published by:Soumya KN
  First published: