Agriculture: ಗಾಳಿಯಲ್ಲಿ ಆಲೂಗೆಡ್ಡೆ ಬೆಳೆದ ರೈತ, ಇಳುವರಿಯನ್ನು 10 ಪಟ್ಟು ಹೆಚ್ಚಿಸುತ್ತದೆ ಈ ಕೃಷಿ ಪದ್ಧತಿ..!

ಇಲ್ಲೊಬ್ಬ ರೈತ ಸಂಪೂರ್ಣವಾಗಿ ಮಣ್ಣನ್ನು ಬಳಸದೆ ಗಾಳಿಯಲ್ಲಿ ಆಲೂಗೆಡ್ಡೆಯನ್ನು ಬೆಳೆದಿದ್ದಾರೆ. ಮಣ್ಣಿಲ್ಲದೆ ಕೃಷಿ ಹೇಗೆ ಮಾಡಿದ್ದಾರೆ ಎಂದು ಯೋಚಿಸುತ್ತಿದ್ದರೆ ಉತ್ತರ ಇಲ್ಲಿದೆ.

ಏರೋಪೋನಿಕ್ ಕೃಷಿ

ಏರೋಪೋನಿಕ್ ಕೃಷಿ

  • Share this:
ನಮಗೆ ನಿಮಗೆ ಗೊತ್ತಿರುವ ಸರ್ವೋತ್ಕೃಷ್ಟವಾದ ಸಾಂಪ್ರದಾಯಿಕ ಕೃಷಿಯು (Agriculture) ಕುಂಡಗಳಲ್ಲಿ ತುಂಬಿದ ಮಣ್ಣು, ಬ್ಯಾಗ್‌ಗಳು ಅಥವಾ ನೇರವಾಗಿ ನೆಲದಲ್ಲಿ ಸಸಿಗಳನ್ನು ನೆಡುವುದನ್ನು ಒಳಗೊಂಡಿದೆ. ಮಣ್ಣು (Soil) ಕೃಷಿ ಮಾಡಲು ಬೇಕಾಗಿರುವ ಅಗತ್ಯ ಪರಿಕರವಾಗಿದೆ. ಆದರೂ ಇಲ್ಲೊಬ್ಬ ರೈತ ಸಂಪೂರ್ಣವಾಗಿ ಮಣ್ಣನ್ನು ಬಳಸದೆ ಗಾಳಿಯಲ್ಲಿ ಆಲೂಗೆಡ್ಡೆಯನ್ನು (Potato) ಬೆಳೆದಿದ್ದಾರೆ. ಮಣ್ಣಿಲ್ಲದೆ ಕೃಷಿ ಹೇಗೆ ಮಾಡಿದ್ದಾರೆ ಎಂದು ಯೋಚಿಸುತ್ತಿದ್ದರೆ ಉತ್ತರ ಇಲ್ಲಿದೆ. ರೈತರು ಕೃಷಿಯಲ್ಲಿ ಹೈಡ್ರೋಪೋನಿಕ್ (Hydroponic) ತಂತ್ರವನ್ನು ಸಾಮಾನ್ಯವಾಗಿ ಅಳವಡಿಸಿಕೊಳ್ಳುತ್ತಾರೆ. ಹೀಗೆ ಈ ರೈತ ಹೈಡ್ರೋಪೋನಿಕ್ ಕೃಷಿಯಂತೆ ಏರೋಪೋನಿಕ್ (Aeroponic) ಕೃಷಿಯಲ್ಲಿ ಬೆಳೆ ಬೆಳೆಯಲು ಅಳವಡಿಸಿಕೊಂಡಿದ್ದಾರೆ. ಇದು ಮಣ್ಣುರಹಿತ ಕೃಷಿ ತಂತ್ರವಾಗಿದ್ದು, ನೀರು ಮತ್ತು ಇತರ ಸಂಪನ್ಮೂಲಗಳ ಸೀಮಿತ ಬಳಕೆಯಿಂದ ಹೆಚ್ಚು ಬೆಳೆಗಳನ್ನು ವೇಗವಾಗಿ ಬೆಳೆಯಲು ಸಹಕಾರಿಯಾಗಿದೆ. ಇದು ಹೈಡ್ರೋಪೋನಿಕ್ ಕೃಷಿಯನ್ನು ಹೋಲುತ್ತದೆ.

ಮಣ್ಣಿನ ಅಡಿಯಲ್ಲಿ ಬೆಳೆಯುವ ಆಲೂಗೆಡ್ಡೆಯಂತಹ ಗೆಡ್ಡೆಗಳನ್ನು ಸಹ ಈ ವಿಧಾನವನ್ನು ಬಳಸಿ ಬೆಳೆಸಬಹುದು ಎಂದು ಅನಿಲ್ ಎಂಬ ರೈತ ತೋರಿಸಿಕೊಟ್ಟಿದ್ದಾರೆ. ಪ್ರಸ್ತುತ ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿರುವ ಆಲೂಗೆಡ್ಡೆ ತಂತ್ರಜ್ಞಾನ ಕೇಂದ್ರವು ಮಣ್ಣಿಲ್ಲದ ಕೃಷಿಯೊಂದಿಗೆ ರೈತರಿಗೆ ಬೆಳೆ ಬೆಳೆಯಲು ಸಹಾಯ ಮಾಡಲು ಮುಂದಿನ ದಾರಿಯನ್ನು ಸುಗಮಗೊಳಿಸುತ್ತಿದೆ.

ಏರೋಪೋನಿಕ್ ಕೃಷಿಯ ಮೂಲಕ ಆಲೂಗೆಡ್ಡೆ ಉತ್ತಮ ಫಸಲು ಪಡೆಯಲು ಸಹಕಾರಿಯಾಗಿದೆ. ಹೀಗಾಗಿ ಕೃಷಿ ಇಲಾಖೆಯು ಇತರ ರಾಜ್ಯಗಳಲ್ಲಿಯೂ ಈ ತಂತ್ರದ ಬಗ್ಗೆ ರೈತರಿಗೆ ಅರಿವು ಮೂಡಿಸಲು ನಿರ್ಧರಿಸಿದೆ.

ಇದನ್ನೂ ಓದಿ: Hydroponic Farming: ಮಹಿಳೆಯರಿಗೆ ಹೈಡ್ರೋಪೋನಿಕ್ ಕೃಷಿ ವಿಶೇಷ ತರಬೇತಿ! ಸರ್ಕಾರದ ಈ ಯೋಜನೆ ಬಗ್ಗೆ ತಿಳಿಯಿರಿ

10 ಪಟ್ಟು ಇಳುವರಿ ಹೆಚ್ಚಳ:

ಏರೋಪೋನಿಕ್ ಕೃಷಿಯನ್ನು ಅಭ್ಯಾಸ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಭೂಮಿಯ ಕೊರತೆಯ ಸಮಸ್ಯೆಯನ್ನು ನೀಗಿಸುವುದು ಮಾತ್ರವಲ್ಲದೆ ಇಳುವರಿಯನ್ನು 10 ಪಟ್ಟು ಹೆಚ್ಚಿಸುತ್ತದೆ. ಇದು ಕಡಿಮೆ ಪ್ರಮಾಣದ ನೀರು ಮತ್ತು ಪೋಷಕಾಂಶಗಳನ್ನು ಬಳಸಿಕೊಳ್ಳುತ್ತದೆ, ಮತ್ತು ಸಾಂಪ್ರದಾಯಿಕ ಕೃಷಿಯ ವೆಚ್ಚದ ಒಂದು ಭಾಗಕ್ಕೆ ಉತ್ತಮ ಇಳುವರಿಯನ್ನು ನೀಡುವ ವ್ಯವಸ್ಥೆಯಾಗಿದೆ.

ಗಾಳಿಯಲ್ಲಿ ಬೆಳೆಯುವ ಆಲೂಗೆಡ್ಡೆ ಕೃಷಿ ತಂತ್ರಜ್ಞಾನದಲ್ಲಿ, ನೇತಾಡುವ ಬೇರುಗಳ ಮೂಲಕ ಸಸ್ಯಕ್ಕೆ ಪೋಷಕಾಂಶಗಳನ್ನು ಒದಗಿಸಲಾಗುತ್ತದೆ. ಕೃಷಿ ಸಂಸ್ಥೆಯು ಈ ವಿಧಾನವನ್ನು ಬಳಸುವ ಮೂಲಕ ಆರೋಗ್ಯಕರ 'ಬೀಜ ಆಲೂಗೆಡ್ಡೆ' ಸಂಗ್ರಹಿಸಲು ಸಾಧ್ಯವಾಗುತ್ತದೆ' ಎಂದು ಕೃಷಿ ತಜ್ಞ ಅನಿಲ್ ಥಡಾನಿ ಹೇಳಿದ್ದಾರೆ.

ಏರೋಪೋನಿಕ್ v/s ಹೈಡ್ರೋಪೋನಿಕ್:

ಏರೋಪೋನಿಕ್ ಮತ್ತು ಹೈಡ್ರೋಪೋನಿಕ್ ಕೃಷಿ ತಂತ್ರಗಳು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗಿವೆ. ಈ ಪದ್ಧತಿ ಮಣ್ಣನ್ನು ಒಳಗೊಂಡಿಲ್ಲದ ಹೋಲಿಕೆಯನ್ನು ಹಂಚಿಕೊಂಡರೂ ಸಹ, ಬೆಳೆಗಳಿಗೆ ಪೋಷಕಾಂಶಗಳನ್ನು ತಲುಪಿಸುವ ವಿಧಾನವು ವಿಭಿನ್ನವಾಗಿದೆ.

ಹೈಡ್ರೋಪೋನಿಕ್ಸ್‌ನಲ್ಲಿ, ಸಸ್ಯಗಳನ್ನು ಯಾವಾಗಲೂ ನೀರಿನಲ್ಲಿ ಇರಿಸಲಾಗುತ್ತದೆ. ಈ ಮೂಲಕ ಅವುಗಳಿಗೆ ಪೋಷಕಾಂಶಗಳನ್ನು ಸರಬರಾಜು ಮಾಡಲಾಗುತ್ತದೆ. ಆದರೆ, ಏರೋಪೋನಿಕ್ ಕೃಷಿಯಲ್ಲಿ ನೀರನ್ನು ಸಿಂಪಡಿಸುವ ಮೂಲಕ ಪೋಷಕಾಂಶಗಳನ್ನು ಒದಗಿಸಲಾಗುತ್ತದೆ.

ಮುಚ್ಚಿದ ವಾತಾವರಣದಲ್ಲಿ ಕೃಷಿ:

ಅನಿಲ್ ಹೇಳುವ ಪ್ರಕಾರ , ಆಲೂಗೆಡ್ಡೆ ಗಿಡವನ್ನು ಮುಚ್ಚಿದ ವಾತಾವರಣದಲ್ಲಿ ಬೆಳೆಸಲಾಗುತ್ತದೆ, ಸಸ್ಯವು ಮೇಲಕ್ಕೆ ಮತ್ತು ಬೇರುಗಳು ಕೆಳಗೆ ಇರುತ್ತದೆ. ಕೆಳಭಾಗದಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದ್ದು, ನೀರಿಗೆ ಪೋಷಕಾಂಶಗಳನ್ನು ಬೆರೆಸಿ ಬೇರುಗಳಿಗೆ ಸಾಗಿಸಲಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಸ್ಯವು ಮೇಲಿನಿಂದ ಸೂರ್ಯನ ಬೆಳಕನ್ನು ಪಡೆಯುತ್ತದೆ ಮತ್ತು ಭೂಮಿಯಲ್ಲಿರುವಂತೆಯೇ ಪೋಷಕಾಂಶಗಳನ್ನು ಕೆಳಗಿನಿಂದ ಪಡೆಯುತ್ತದೆ.

ಇದನ್ನೂ ಓದಿ: Business Idea: ಬೇವು ಬದುಕಿಗೆ ಸಿಹಿ ತರಬಲ್ಲದು! ಹೆಬ್ಬೇವು ಬೆಳೆದು ಕೈತುಂಬಾ ಸಂಪಾದಿಸುವುದು ಹೇಗೆ ತಿಳಿಯಿರಿ

ಉತ್ಪಾದನೆಯ ವಿಷಯದಲ್ಲಿ ತಂತ್ರಜ್ಞಾನವು ಅದ್ಭುತವಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ, ಆದರೆ ಕೃಷಿ ಆರಂಭಿಕ ಸೆಟಪ್‌ಗೆ ಹೂಡಿಕೆ ಮಾಡಬೇಕಾಗುತ್ತದೆ ಎಂದಿದ್ದಾರೆ. ನೀವು ತೋಟಗಾರಿಕೆಯಲ್ಲಿ ಅನುಭವಿಗಳಾಗಿದ್ದರೆ, ಏರೋಪೋನಿಕ್ ಆಲೂಗಡ್ಡೆ ಕೃಷಿಯನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು.

ಏರೋಪೋನಿಕ್ ಕೃಷಿಗೆ ತಜ್ಞರಿಂದ ಕೆಲವು ಸಲಹೆಗಳು:

- ಮೊದಲನೆಯದಾಗಿ, ಕೃಷಿಯನ್ನು ಲಂಬವಾಗಿ ಮಾಡುವುದರಿಂದ ಸಣ್ಣ ಜಾಗವನ್ನು ಆವರಿಸುವ ಪಾಲಿಹೌಸ್ ಅಗತ್ಯವಿರುತ್ತದೆ.
- ಈ ಕ್ಷೇತ್ರದಲ್ಲಿ ಅನುಭವ ಇರುವವರ ಸಹಾಯದಿಂದ ಏರೋಪೋನಿಕ್ ಕೃಷಿ ವ್ಯವಸ್ಥೆಯನ್ನು ಸ್ಥಾಪಿಸಿ ಅಥವಾ ಅವರ ಮಾರ್ಗದರ್ಶನದಲ್ಲಿ ನೀವೇ ಮಾಡಬಹುದು.
- ಆರೋಗ್ಯಕರ ಆಲೂಗೆಡ್ಡೆ ಬೀಜಗಳನ್ನು ಫೋಮ್ ಸ್ಟಫ್ಡ್ ಸಣ್ಣ ಮಡಿಕೆಗಳಲ್ಲಿ ನೆಡಬೇಕು ಮತ್ತು ಸೂರ್ಯನ ಬೆಳಕನ್ನು ಪಡೆಯುವ ಸ್ಥಳದಲ್ಲಿ ಅವುಗಳನ್ನು ಇಡಿ.
- ಕೆಲವೇ ದಿನಗಳಲ್ಲಿ, ಬೇರುಗಳು ಕಾಣಿಸಿಕೊಳ್ಳುತ್ತವೆ. ಅದು ಕೆಳಗಿರುವ ನೀರನ್ನು ಮುಟ್ಟುವಂತೆ ನೋಡಿಕೊಳ್ಳಿ.
- ನಿರ್ದಿಷ್ಟ ಮಧ್ಯಂತರಗಳಲ್ಲಿ, ನೀರಿನಲ್ಲಿ ಪೋಷಕಾಂಶಗಳನ್ನು ಮಿಶ್ರಣ ಮಾಡಿ.
- ಹೀಗೆ ಮಾಡಿದ್ದಲ್ಲಿ 70-80 ದಿನಗಳಲ್ಲಿ ಮೊದಲ ಕೊಯ್ಲು ಮಾಡಬಹುದು.
Published by:shrikrishna bhat
First published: