• Home
  • »
  • News
  • »
  • business
  • »
  • Business Tips: ವ್ಯಾಪಾರಕ್ಕೆ ಸರಿಹೊಂದುವ ಆರ್ಥಿಕ ನೆರವು ಪಡೆಯುವುದು ಹೇಗೆ? ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

Business Tips: ವ್ಯಾಪಾರಕ್ಕೆ ಸರಿಹೊಂದುವ ಆರ್ಥಿಕ ನೆರವು ಪಡೆಯುವುದು ಹೇಗೆ? ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವ್ಯಾಪಾರಕ್ಕಾಗಿ ಹಣ ಹೂಡಿಕೆ ಮಾಡುವಾಗ ಕೆಲವೊಂದು ಅಂಶಗಳತ್ತ ಗಮನಹರಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ. ನೀವು ಮಾಡುತ್ತಿರುವ ವ್ಯಾಪಾರ ಹಾಗೂ ಅದು ನಿಮಗೆ ನೀಡಲಿರುವ ಲಾಭ ಇದೆರಡನ್ನೂ ಗಮನದಲ್ಲಿಟ್ಟುಕೊಂಡು ಹಣ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಹಣ ಹೂಡಿಕೆ ಮಾಡಬೇಕು ಎಂದಾದಲ್ಲಿ ಅದಕ್ಕೆ ತಕ್ಕಂತಹ ಮೂಲವನ್ನು ಹುಡುಕಬೇಕಾಗುತ್ತದೆ.

ಮುಂದೆ ಓದಿ ...
  • Share this:

    ಬ್ಯುಸಿನೆಸ್ (Business) ಲಾಭದಾಯಕವಾಗಬೇಕು ಎಂದಾದಲ್ಲಿ ನೀವು ಮಾಡುತ್ತಿರುವ ಬ್ಯುಸಿನೆಸ್ ಇತರರಿಗೆ ಪ್ರಯೋಜನಕಾರಿಯಾಗಿರಬೇಕು ಅಂತೆಯೇ ನೀವು ಬ್ಯುಸಿನೆಸ್‌ಗಾಗಿ ಹೂಡಿರುವ ಫಂಡಿಂಗ್ ಚೆನ್ನಾಗಿರಬೇಕು. ವ್ಯಾಪಾರದಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದರೂ ಚೆನ್ನಾಗಿ ಹಣ ಹೂಡಿಕೆ (Investment) ಮಾಡುವುದು ಮುಖ್ಯವಾಗಿರುತ್ತದೆ ಎಂಬುದು ಪರಿಣಿತರ ಸಲಹೆಯಾಗಿದೆ. ಯಾವುದೇ ಒಂದು ಬ್ಯುಸಿನೆಸ್​ ಅನ್ನು ಪ್ರಾರಂಭಿಸುವ ಮೊದಲು ಅದರ ಹಿನ್ನಲೆಗಳನ್ನು, ಅದು ಲಾಭದಾಯಕವಾಗಲು ಏನು ಮಾಡಬೇಕೆಂದು ಮೊದಲು ಅರಿತುಕೊಳ್ಳುವುದು ಮುಖ್ಯವಾಗಿರುತ್ತೆ. ಯಾವುದೇ ವ್ಯಾಪಾರವನ್ನು ಆರಂಬಿಸುವಾಗಲೂ ನೇರವಾಗಿ ಹೂಡಿಕೆ ಮಾಡುವುದರ ಬದಲು ಅದರ ಖರ್ಚು ವೆಚ್ಚಗಳನ್ನು ತಿಳಿದುಕೊಳ್ಳಬೇಕು.


    ವ್ಯಾಪಾರಕ್ಕೆ ಹಣ ಹೂಡಿಕೆ ಮಾಡುವಾಗ ಈ ಅಂಶ ನೆನಪಿರಲಿ


    ವ್ಯಾಪಾರಕ್ಕಾಗಿ ಹಣ ಹೂಡಿಕೆ ಮಾಡುವಾಗ ಕೆಲವೊಂದು ಅಂಶಗಳತ್ತ ಗಮನಹರಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ. ನೀವು ಮಾಡುತ್ತಿರುವ ವ್ಯಾಪಾರ ಹಾಗೂ ಅದು ನಿಮಗೆ ನೀಡಲಿರುವ ಲಾಭ ಇದೆರಡನ್ನೂ ಗಮನದಲ್ಲಿಟ್ಟುಕೊಂಡು ಹಣ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಹಣ ಹೂಡಿಕೆ ಮಾಡಬೇಕು ಎಂದಾದಲ್ಲಿ ಅದಕ್ಕೆ ತಕ್ಕಂತಹ ಮೂಲವನ್ನು ಹುಡುಕಬೇಕಾಗುತ್ತದೆ.


    ಹಣ ಹೂಡಿಕೆ ಮಾಡುವ ವಿಧಗಳು


    ಬ್ಯಾಂಕ್‌ಗಳಿಂದ ಸಾಲ ಪಡೆಯುವುದು, ಬಡ್ಡಿಗೆ ಹಣ ಪಡೆದುಕೊಳ್ಳುವುದು, ಕ್ರೆಡಿಟ್ ಕಾರ್ಡ್‌ಗಳಿಂದ ಸಾಲ ಪಡೆಯುವುದು, ಸ್ನೇಹಿತರಿಂದ ಹಣ ಸಹಾಯ ಪಡೆದುಕೊಳ್ಳುವುದು ಹೀಗೆ ವ್ಯಾಪಾರಕ್ಕೆ ಹಣ ಹೂಡಿಕೆ ಮಾಡಬಹುದು. ಆದರೆ ಅದಕ್ಕೂ ಮುನ್ನ ನೀವು ಪಡೆಯುತ್ತಿರುವ ಸಾಲ ಅಥವಾ ಹಣದ ವ್ಯವಸ್ಥೆಯು ವ್ಯಾಪಾರಕ್ಕೆ ಸರಿಹೊಂದುವಂತಿರಬೇಕು. ಬನ್ನಿ ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ.




    ಹಣ ಖರ್ಚುಮಾಡುವ ಮೊದಲು ಯೋಜನೆ ರೂಪಿಸಿ


    ಬ್ಯುಸಿನೆಸ್‌ ಆರಂಭಿಸುವುದಕ್ಕಿಂತ ಮೊದಲು ಹಣಕಾಸು ಭದ್ರತೆಯನ್ನು ವ್ಯವಸ್ಥಿತಗೊಳಿಸುವುದು ಮುಖ್ಯವಾಗಿದೆ. ಎರವಲು ಪಡೆದುಕೊಂಡ ಹಣವನ್ನು ನೀವು ಹೇಗೆ ವ್ಯಯಿಸುತ್ತೀರಿ ಎಂಬುದು ಇಲ್ಲಿ ಮುಖ್ಯವಾಗಿದೆ. ಹಾಗಾಗಿ ಹಣವನ್ನು ಹೇಗೆ ಖರ್ಚುಮಾಡುತ್ತೀರಿ ಎಂಬುದನ್ನು ಮೊದಲು ಯೋಜಿಸಿ.


    ನಿಮ್ಮ ಅಗತ್ಯಗಳಿಗೆ ಎಷ್ಟು ಬೇಕೋ ಅಷ್ಟು ಮಾತ್ರವೇ ನಿಧಿ ಸಂಗ್ರಹಣೆಯನ್ನು ಮಾಡಿ. ಅತಿಯಾದ ಸಾಲ ಮುಂದೆ ಇನ್ನಿಲ್ಲದ ಸಂಕಷ್ಟಗಳನ್ನುಂಟು ಮಾಡಬಹುದು.


    ನಿಮ್ಮ ವ್ಯಾಪಾರಕ್ಕೆ ಆರಂಭದಲ್ಲಿ ವೈಯಕ್ತಿಕವಾಗಿ ಹೂಡಿಕೆ ಮಾಡಿ


    ವೈಯಕ್ತಿಕ ಹೂಡಿಕೆ ಎಂದರೆ ನೀವು ಉಳಿತಾಯ ಮಾಡಿರುವ ಹಣವನ್ನು ಬ್ಯುಸಿನೆಸ್‌ನಲ್ಲಿ ತೊಡಗಿಸಿಕೊಳ್ಳುವುದಾಗಿದೆ. ನಿಮ್ಮದೇ ಉಳಿತಾಯದ ಹಣವನ್ನು ವ್ಯಾಪಾರಕ್ಕೆ ವಿನಿಯೋಗಿಸುವುದು ಉದ್ಯಮಿಗಳಿಗೆ ಉತ್ತಮ ಆಯ್ಕೆ ಎಂದೆನಿಸಿದೆ. ನಿಮ್ಮ ವ್ಯವಹಾರ ಯಶಸ್ವಿಯಾಗುತ್ತಿದೆ ಎಂದಾದಲ್ಲಿ ಬ್ಯಾಂಕ್‌ಗಳಿಂದ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.


    ಪ್ರಾಯೋಜಕರನ್ನು ಹುಡುಕುವುದು


    ನಿಮ್ಮ ವ್ಯಾಪಾರ ಯೋಜನೆಗಳು ಇಷ್ಟಪಟ್ಟಲ್ಲಿ ಇದಕ್ಕಾಗಿ ಹೂಡಿಕೆ ಮಾಡುವ ಪ್ರಾಯೋಜಕರು ದೊರೆಯುತ್ತಾರೆ. ಈ ಪ್ರಾಯೋಜಕರು ಸ್ಟಾರ್ಟಪ್‌ಗಳಲ್ಲಿ ಹಣ ಹೂಡಿಕೆ ಮಾಡಲು ಆಸಕ್ತರಾಗಿರುತ್ತಾರೆ. ವ್ಯಾಪಾರದ ಇಂತಿಷ್ಟು ಪ್ರಮಾಣದ ಲಾಭಕ್ಕಾಗಿ ಹಣ ವಿನಿಯೋಗಿಸಲು ಈ ಪ್ರಾಯೋಜಕರು ಸಿದ್ಧರಾಗಿರುತ್ತಾರೆ.


    ಸಾಂದರ್ಭಿಕ ಚಿತ್ರ


    ಆನ್‌ಲೈನ್ ಕ್ರೌಡ್‌ಫಂಡಿಂಗ್ ನೆರವು


    ಸಾಮಾಜಿಕ ನೆಟ್‌ವರ್ಕ್ ಸೈಟ್‌ಗಳು ಹಾಗೂ ವೆಬ್ ಆಧಾರಿತ ಪ್ಲ್ಯಾಟ್‌ಫಾರ್ಮ್‌ಗಳು ಒದಗಿಸುವ ಆರ್ಥಿಕ ನೆರವಾಗಿದೆ. ಉದ್ಯಮಿಗಳಿಗೆ ಆರಂಭದಲ್ಲಿ ನೆರವನ್ನು ನೀಡುವ ಈ ಕ್ರೌಡ್‌ಫಂಡ್‌ಗಳು ವಿವಿಧ ಉದ್ದೇಶಗಳಿಗೆ ಹಣ ಸಂಗ್ರಹಿಸುತ್ತಾರೆ.


    ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕ್‌ಗಳಿಂದ ಲೋನ್ ಪಡೆಯುವುದು


    ಆರಂಭದ ಉದ್ಯಮಗಳಿಗೆ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಲೋನ್‌ಗಳನ್ನು ಒದಗಿಸುತ್ತವೆ. ಹಣ ಪಡೆಯುವ ವಿಶ್ವಾಸಾರ್ಹ ಮೂಲಗಳು ಬ್ಯಾಂಕ್‌ಗಳಾಗಿವೆ. ಬ್ಯಾಂಕ್‌ಗಳು ಪ್ರಾರಂಭಿಕ ಉದ್ಯಮಗಳಿಗೆ ಟರ್ಮ್ ಲೋನ್ ಮತ್ತು ವರ್ಕಿಂಗ್ ಕ್ಯಾಪಿಟಲ್ ಲೋನ್ ಎಂಬ ಎರಡು ರೂಪಗಳಲ್ಲಿ ಹಣವನ್ನು ಒದಗಿಸುತ್ತವೆ.


    ಬ್ಯುಸಿನೆಸ್ ಕ್ರೆಡಿಟ್ ಕಾರ್ಡ್‌ಗಳಿಂದ ಸಾಲ ಪಡೆದುಕೊಳ್ಳುವುದು


    ಸ್ಟಾರ್ಟಪ್‌ ಉದ್ಯಮಗಳಿಗೆ ಕ್ರೆಡಿಟ್ ಕಾರ್ಡ್‌ಗಳು ಈಗ ಹಣ ಒದಗಿಸುತ್ತಿವೆ. ಇದೊಂದು ಟ್ರೆಂಡ್ ಆಗಿ ಮಾರ್ಪಟ್ಟಿದೆ. ಆರಂಭದ ವ್ಯವಹಾರಕ್ಕೆ ಅಷ್ಟೊಂದು ದೊಡ್ಡ ಪ್ರಮಾಣದ ಹಣದ ಅಗತ್ಯವಿಲ್ಲ ಎಂದಾದಲ್ಲಿ ಕ್ರೆಡಿಟ್ ಕಾರ್ಡ್‌ಗಳಿಂದ ಲೋನ್ ಪಡೆದುಕೊಳ್ಳಬಹುದು.


    ಇದನ್ನೂ ಓದಿ: NPS ಯೋಜನೆಯ ಖಾತೆದಾರರು ನಾಮಿನಿ ಇಲ್ಲದೇ ಮೃತಪಟ್ಟರೆ ಏನಾಗುತ್ತೆ?


    ಸ್ನೇಹಿತರು ಹಾಗೂ ಕುಟುಂಬದ ನೆರವು


    ಇದು ಅಪಾಯಕಾರಿ ಮಾರ್ಗವಾಗಿದ್ದರೂ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ನಿಮ್ಮಲ್ಲಿದ್ದರೆ ಸ್ನೇಹಿತರಿಂದ ಹಾಗೂ ಕುಟುಂಬಸ್ಥರಿಂದ ಹಣ ಸಾಲ ಪಡೆದುಕೊಳ್ಳಬಹುದಾಗಿದೆ. ಕಂಪನಿಯಲ್ಲಿ ಅವರಿಗೆ ಈಕ್ವಿಟಿಯನ್ನು ನೀಡಬೇಕಾಗುತ್ತದೆ ಹಾಗೂ ಮಾಸಿಕ ಪಾವತಿಯನ್ನು ಒದಗಿಸಬೇಕಾಗುತ್ತದೆ. ಹೀಗೆ ಹೊಂದಾಣಿಕೆ ಹಾಗೂ ಒಪ್ಪಂದದ ಮೂಲಕ ಕುಟುಂಬಸ್ಥರು ಮತ್ತು ಸ್ನೇಹಿತರಿಂದ ಹಣ ಸಾಲವಾಗಿ ಪಡೆದುಕೊಳ್ಳಬಹುದು.

    Published by:Prajwal B
    First published: