ಸಾಲ (Loan) ಕ್ಕೆ ಅರ್ಜಿಹಾಕಿದ ಸಮಯದಲ್ಲಿ ಹೆಚ್ಚಾಗಿ ಸಾಲದಾತ ಬ್ಯಾಂಕ್ (Bank) ಗಳು ಸಲ್ಲಿಸಿದ ಅರ್ಜಿಯನ್ನು ಮೌಲ್ಯಮಾಪನ ಮಾಡುತ್ತಾರೆ ಹಾಗೂ ಸಾಲವನ್ನು ಅನುಮೋದಿಸಲು ಕೆಲವು ಅಗತ್ಯ ದಾಖಲೆಗಳನ್ನು (Documents) ಸಲ್ಲಿಸಲು ತಿಳಿಸುತ್ತಾರೆ ಈ ದಾಖಲೆಗಳಲ್ಲಿ ಅತ್ಯಗತ್ಯವಾಗಿರುವುದು ಆದಾಯ ತೆರಿಗೆ ರಿಟರ್ನ್ (ITR) ಆಗಿದೆ. ಸಂಬಳ ಪಡೆಯುವವರು ಐಟಿಆರ್ ಅನ್ನು ಸಲ್ಲಿಸಬಹುದು ಆದರೆ ಸಂಬಳ ಪಡೆಯದವರು, ಉದ್ಯೋಗಿಗಳಲ್ಲದವರು ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಐಟಿಆರ್ ಸಲ್ಲಿಕೆ ಅವರಿಗೆ ಸವಾಲಾಗಿ ಪರಿಣಮಿಸಬಹುದು. ಹಾಗಿದ್ದರೆ ಐಟಿಆರ್ ಸಲ್ಲಿಸದೆಯೇ ಲೋನ್ ಪಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ವೈಯಕ್ತಿಕ ಸಾಲ
ವೈಯಕ್ತಿಕ ಸಾಲಗಳು ಅಸುರಕ್ಷಿತ ಕ್ರೆಡಿಟ್ನ ಒಂದು ರೂಪವಾಗಿದ್ದು, ಹಣವನ್ನು ವಿತರಿಸಲು ಸಾಲದಾತನು ಮೇಲಾಧಾರದ ಅಗತ್ಯವಿರುವುದಿಲ್ಲ. ಈ ಸಾಲಗಳನ್ನು ಪ್ರಾಥಮಿಕವಾಗಿ ಅರ್ಜಿದಾರರ ಆದಾಯ ಮತ್ತು KYC ವಿವರಗಳ ಆಧಾರದ ಮೇಲೆ ಅನುಮೋದಿಸಲಾಗುತ್ತದೆ. ಸಾಲದ ಮೊತ್ತವು ಹೆಚ್ಚಾಗಿದ್ದರೆ ಸಂಬಳ ರಹಿತ ವ್ಯಕ್ತಿಗಳು ಐಟಿಆರ್ ಅನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
ಆದರೆ ಸಂಬಳ ಪಡೆಯುವವರು ಫಾರ್ಮ್ 16 ಮತ್ತು ಆದಾಯ ಪುರಾವೆಗಳಂತಹ ಪರ್ಯಾಯ ದಾಖಲೆಗಳನ್ನು ತೋರಿಸಬಹುದು. ಸ್ವಯಂ ಉದ್ಯೋಗಿಗಳು ಆದಾಯ ಹಾಗೂ ಸರಿಯಾದ ಹಣಕಾಸಿನ ವಿನಿಮಯ ಮಾಹಿತಿಯ ಆಧಾರಗಳನ್ನು ಸಾಲದಾತರಿಗೆ ತೋರಿಸಿ ಅದರಿಂದ ಅವರು ತೃಪ್ತರಾದಲ್ಲಿ ಸಾಲ ಪಡೆಯಬಹುದು.
ಜಾಮೀನಿನ ಮೇಲೆ ಸಾಲ ಪಡೆಯುವುದು
ಸಾಲವನ್ನು ಪಡೆಯುವಾಗ ಜಾಮೀನು ಇಲ್ಲವೇ ಮೇಲಾಧಾರವನ್ನು ಬಳಸುವುದರಿಂದ ಇದನ್ನು ಹಣಕಾಸು ಸಂಸ್ಥೆಗಳು ಕಡಿಮೆ ಅಪಾಯಕಾರಿ ಎಂದು ಪರಿಗಣಿಸುತ್ತದೆ. ಹಾಗೂ ಐಟಿಆರ್ ಇಲ್ಲದೆಯೇ ಸಾಲವನ್ನು ವಿತರಿಸುತ್ತದೆ. ಸ್ಥಿರ ಠೇವಣಿಗಳು, ಮ್ಯೂಚುವಲ್ ಫಂಡ್ಗಳು ಮೊದಲಾದ ಹೂಡಿಕೆಯನ್ನು ಮೇಲಾಧಾರವಾಗಿ ಸಲ್ಲಿಸುವ ಮೂಲಕ ಬ್ಯಾಂಕ್ಗಳಿಗೆ ಲೋನ್ಗಾಗಿ ಅರ್ಜಿ ಸಲ್ಲಿಸಬಹುದು. ಹೀಗೆ ಮೇಲಾಧಾರಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಿದರೆ ಸಾಲ ಶೀಘ್ರವೇ ದೊರೆಯುತ್ತದೆ.
ಸಹ-ಅರ್ಜಿದಾರರೊಂದಿಗೆ ಅರ್ಜಿ ಸಲ್ಲಿಸಿ
ನೀವು ಐಟಿಆರ್ ಹೊಂದಿಲ್ಲದಿದ್ದರೆ, ವಿಶೇಷವಾಗಿ ನೀವು ಸ್ವಯಂ ಉದ್ಯೋಗಿಯಾಗಿದ್ದರೆ, ಐಆಟಿಆರ್ ಅಥವಾ ಇತರ ಆದಾಯ ಪುರಾವೆಗಳೊಂದಿಗೆ ಸಹ-ಅರ್ಜಿದಾರರೊಂದಿಗೆ ಜಂಟಿ ಸಾಲಕ್ಕೆ ಅರ್ಜಿ ಸಲ್ಲಿಸುವುದನ್ನು ಪರಿಗಣಿಸಿ.
ಸಣ್ಣ ಲೋನ್ಗಳಿಗೆ ಅರ್ಜಿಸಲ್ಲಿಸಿ
ನೀವು ಬಯಸಿದ ಸಾಲಕ್ಕೆ ಐಟಿಆರ್ ಅಥವಾ ಇತರ ಅಗತ್ಯ ದಾಖಲೆಗಳನ್ನು ನೀವು ಹೊಂದಿಲ್ಲದಿದ್ದರೆ, ಸಣ್ಣ ಸಾಲಕ್ಕೆ ಅರ್ಜಿ ಸಲ್ಲಿಸುವುದನ್ನು ಪರಿಗಣಿಸಿ. ಈ ಸಮಯದಲ್ಲಿ ಸಣ್ಣ ಮೊತ್ತದ ಸಾಲ ಕೂಡ ಶೀಘ್ರವೇ ಮಂಜೂರಾಗುತ್ತದೆ ಜೊತೆಗೆ ಸಂಸ್ಥೆಗಳು ಹೆಚ್ಚಿನ ದಾಖಲೆಗಳನ್ನು ಕೇಳುವುದಿಲ್ಲ. ಸಣ್ಣ ಸಾಲಗಳಿಗೆ ಅನುಮೋದನೆಯ ಸಮಯವೂ ವೇಗವಾಗಿರುತ್ತದೆ.
ರಿಲೇಶನ್ಶಿಪ್ ಮ್ಯಾನೇಜರ್ ಅನ್ನು ಸಂಪರ್ಕಿಸಿ
ನಿಮ್ಮ ಬ್ಯಾಂಕ್ನಲ್ಲಿ ದೀರ್ಘಕಾಲದಿಂದ ನೀವು ಖಾತೆಯನ್ನು ಹೊಂದಿದ್ದರೆ, ರಿಲೇಶನ್ಶಿಪ್ ಮ್ಯಾನೇಜರ್ ಅನ್ನು ಸಂಪರ್ಕಿಸುವ ಮೂಲಕ ಸಾಲ ಪಡೆದುಕೊಳ್ಳಬಹುದು. ಸ್ಥಿರ ಆದಾಯ ಹಾಗೂ ಸಾಲ ಮರುಪಾವತಿ ಸಾಮರ್ಥ್ಯದ ಪುರಾವೆಯನ್ನು ಒದಗಿಸುವ ಮೂಲಕ ನೀವು ಸಾಲವನ್ನು ಮರುಪಾವತಿಸಲು ಸಮರ್ಥರು ಎಂಬುದನ್ನು ತಿಳಿಸಿ. ಉತ್ತಮ ಕ್ರೆಡಿಟ್ ಸ್ಕೋರ್ ಹಾಗೂ ಸರಿಯಾದ ಸೂಕ್ತ ಕ್ರೆಡಿಟ್ ವಿವರ ಈ ಹಿನ್ನಲೆಯಲ್ಲಿ ಸಹಕಾರಿಯಾಗಿದೆ.
ವಿಶೇಷ ಯೋಜನೆಗಳ ಅಡಿಯಲ್ಲಿ ಸಾಲಗಳನ್ನು ಅನ್ವೇಷಿಸಿ
ಬ್ಯಾಂಕ್ಗಳು ಕೆಲವೊಮ್ಮೆ ನಿರ್ದಿಷ್ಟ ಸ್ಕೀಮ್ಗಳನ್ನು ಹೊಂದಿದ್ದು, ಅದರ ಅಡಿಯಲ್ಲಿ ಅವರು ಐಟಿಆರ್ ಇಲ್ಲದಿರುವಂತಹ ಆಯ್ಕೆಯಲ್ಲಿ ಅರ್ಜಿದಾರರಿಗೆ ಸಾಲವನ್ನು ನೀಡುತ್ತಾರೆ. ಯೋಜನೆಯ ಅರ್ಹತಾ ಮಾನದಂಡಗಳನ್ನು ಹಾಗೂ ನಿಯಮಗಳನ್ನು ಪೂರೈಸಿದ ನಂತರ ಸಂಬಳ ಪಡೆಯುವ ಮತ್ತು ಸಂಬಳ ಪಡೆಯದ ಅರ್ಜಿದಾರರು ಈ ಲೋನ್ಗಳಿಗೆ ಅರ್ಜಿ ಸಲ್ಲಿಸಬಹುದು. ಖಾತೆಯಲ್ಲಿ ನಿಯಮಿತ ವಹಿವಾಟುಗಳೊಂದಿಗೆ ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಒದಗಿಸುವುದರಿಂದ ಅಂತಹ ಸಾಲಗಳಿಗೆ ಅನುಮೋದನೆ ಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಹೀಗೆ ಐಟಿಆರ್ ಇಲ್ಲದೆಯೇ ಸಾಲ ಪಡೆಯುವ ಕೆಲವು ವಿಧಾನಗಳು ಇವುಗಳಾಗಿದ್ದು ಸಾಲ ಪಡೆಯುವ ಸಮಯದಲ್ಲಿ ಸಹಕಾರಿಯಾಗಿವೆ. ಆದರೆ ಸಾಲವನ್ನು ಅನುಮೋದಿಸುವ ವಿಧಿ ವಿಧಾನಗಳು, ನಿಯಮಗಳು ಪ್ರತಿಯೊಂದು ಸಂಸ್ಥೆಗಳಿಗೆ ಭಿನ್ನವಾಗಿರುತ್ತವೆ ಹಾಗಾಗಿ ಸಾಲವನ್ನು ಪಡೆಯುವ ಮುನ್ನ ನಿಯಮಾವಳಿಗಳನ್ನು ಓದಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ