ಹೊಸ ತೆರಿಗೆ e-filing ಪೋರ್ಟಲ್ ಮೂಲಕ ITR ಫೈಲ್ ಮಾಡುವುದು ಹೇಗೆ ಗೊತ್ತೇ? ಇಲ್ಲಿದೆ ವಿವರ

ITR Filling: ನೀವು ಯಶಸ್ವಿಯಾಗಿ ಲಾಗ್ ಇನ್ ಮಾಡಿದ ನಂತರ, ನೀವು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ‘ಎಫ್ ವೈ 21-22’ ಗೆ ಸಲ್ಲಿಸಬೇಕು. ಇದು ವಿಫಲವಾದರೆ, ನಂತರದ ದಿನಾಂಕದಂದು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ನೀವು ದಂಡವನ್ನು ಪಾವತಿಸಬೇಕು. ಆದ್ದರಿಂದ ಗಡುವಿನೊಳಗೆ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಬಳಸಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಸೂಕ್ತ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆದಾಯ ತೆರಿಗೆ ಪಾವತಿಸುವ (Income Tax Returns) ವ್ಯಾಪ್ತಿಗೆ ಬರುವ ಎಲ್ಲಾ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇನ್ನೂ 25 ದಿನಗಳು ಮಾತ್ರ ಬಾಕಿ ಉಳಿದಿದ್ದು ಅನೇಕ ಹೊಸ ತೆರಿಗೆದಾರರಿಗೆ ಐಟಿಆರ್ (ITR) ಅನ್ನು ಹೇಗೆ ಸಲ್ಲಿಸುವುದು ಎಂಬುದರ ಬಗ್ಗೆ ಅನೇಕ ಗೊಂದಲಗಳಿರುತ್ತವೆ.

ಅವರಿಗಾಗಿ ಹೊಸ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಮೂಲಕ ಐಟಿಆರ್ ಅನ್ನು ಹೇಗೆ ಫೈಲ್ ಮಾಡುವುದು ಎಂದು ಇಲ್ಲಿ ಹಂತ ಹಂತವಾಗಿ ತಿಳಿಸಿಕೊಡಲಾಗಿದೆ. ಈ ತಿಂಗಳ ಅಂತ್ಯದೊಳಗೆ, ಅಂದರೆ ಡಿಸೆಂಬರ್ 31, 2021 ರೊಳಗೆ ತಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕು.

ಈ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲಿಂಗ್ ಅನ್ನು 2021-22 ರ ಹಣಕಾಸು ವರ್ಷಕ್ಕೆ ಮಾಡಬೇಕಾಗಿದ್ದು, ಇದನ್ನು ಮಾಡಲು ವಿಫಲವಾದರೆ ತೆರಿಗೆದಾರರು ಸಾಕಷ್ಟು ತೊಂದರೆಗಳಿಗೆ ಸಿಲುಕಬಹುದು. ಈ ವರ್ಷದ ಆರಂಭದಲ್ಲಿ ಘೋಷಿಸಲಾದ ಹೊಸ ಕ್ರಮದಲ್ಲಿ, ಸರ್ಕಾರವು ಇ-ಫೈಲಿಂಗ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದನ್ನು ಬಳಸಿಕೊಂಡು ತೆರಿಗೆದಾರರು ಮನೆಯಲ್ಲಿಯೇ ಕುಳಿತುಕೊಂಡು ತಮ್ಮ ಕಂಪ್ಯೂಟರ್ ನಲ್ಲಿ ಆನ್‌ಲೈನ್ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬಹುದು. ಇದಕ್ಕೆ ಬಳಕೆದಾರರು ಆದಾಯ ತೆರಿಗೆ ಇ-ಪೋರ್ಟಲ್ ಗೆ ಲಾಗ್ ಇನ್ ಆಗಬೇಕಾಗುತ್ತದೆ.

ಜೂನ್ 7 ರಂದು ಪ್ರಾರಂಭಿಸಲಾದ ಪೋರ್ಟಲ್ ನಿಖರವಾಗಿ "ತೆರಿಗೆದಾರ ಸ್ನೇಹಿ" ಅಲ್ಲ ಎಂಬುದಾಗಿ ಗುರುತಿಸಲಾಗಿತ್ತು. ಇ-ಫೈಲಿಂಗ್ ಪೋರ್ಟಲ್ ಹಲವಾರು ತೊಂದರೆಗಳನ್ನು ಹೊಂದಿತ್ತು, ಅವುಗಳನ್ನು ಬಳಕೆದಾರರು ತೋರಿಸಿದಾಗ ತದ ನಂತರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಫೋಸಿಸ್‌ಗೆ ಸಮನ್ಸ್ ಜಾರಿ ಮಾಡಿದರು ಮತ್ತು ಸಮಸ್ಯೆಗಳನ್ನು ಸರಿಪಡಿಸಲು ಸೆಪ್ಟೆಂಬರ್ 15 ರ ಗಡುವನ್ನು ನಿಗದಿಪಡಿಸಿದರು.

ಇದನ್ನೂ ಓದಿ: ಐಪಿಒಗೆ ತೆರೆದುಕೊಂಡ ಮೆಡ್​ಪ್ಲಸ್; ಹೂಡಿಕೆಯಿಂದ ಲಾಭದ ಸಾಧ್ಯಾ ಸಾಧ್ಯತೆ

2021-22ರ ಮೌಲ್ಯಮಾಪನ ವರ್ಷದಲ್ಲಿ ಆದಾಯದ ವಾಪಸಾತಿಯನ್ನು ಒದಗಿಸುವ ನಿಗದಿತ ದಿನಾಂಕ 30 ಸೆಪ್ಟೆಂಬರ್ 2021 ರವರೆಗೆ ವಿಸ್ತರಿಸಿದಂತೆ ಹೇಳಲಾಗಿತ್ತು. ನಂತರದಲ್ಲಿ ಅದನ್ನು ಡಿಸೆಂಬರ್ 31, 2021 ಕ್ಕೆ ವಿಸ್ತರಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಕ್ಟೋಬರ್ ನಲ್ಲಿ ಇನ್ಫೊಸಿಸ್ ತನ್ನ ಶೇಕಡಾ 90 ರಷ್ಟು ತೊಂದರೆಗಳನ್ನು ಸರಿಪಡಿಸಿದ್ದು, ಬಳಕೆದಾರರು ಆದಾಯ ತೆರಿಗೆ ಇ-ಪೋರ್ಟಲ್ ಬಳಸಿ ಸುಲಭವಾಗಿ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬಹುದು ಎಂದು ಹೇಳಿದೆ.

ಆದಾಯ ತೆರಿಗೆ ಇ-ಪೋರ್ಟಲ್‌ಗೆ ಹೇಗೆ ಲಾಗ್ ಇನ್ ಮಾಡಬಹುದು ತಿಳಿಯಿರಿ

1. ಲಿಂಕ್ ಬಳಸಿ ಆದಾಯ ತೆರಿಗೆ ಇ-ಪೋರ್ಟಲ್ ಗೆ ಹೋಗಿhttps://www.incometax.gov.in

2. ಮುಖಪುಟದಲ್ಲಿ ‘ಲಾಗಿನ್ ಹಿಯರ್’ (Login Here) ಆಯ್ಕೆಯನ್ನು ಒತ್ತಿರಿ

3. ನಿಮ್ಮ ಬಳಕೆದಾರ ಐಡಿ ಆಯ್ಕೆಯಲ್ಲಿ, ನಿಮ್ಮ ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ ಅನ್ನು ಭರ್ತಿ ಮಾಡಿ ಮತ್ತು ನಂತರ ಮುಂದುವರಿಸಿ ಕ್ಲಿಕ್ ಮಾಡಿ.

4. ಇದರ ನಂತರ, ನೀವು ಸ್ವೀಕರಿಸಿದ ಸುರಕ್ಷಿತ ಪ್ರವೇಶ ಸಂದೇಶವನ್ನು ನೀವು ದೃಢೀಕರಿಸಬೇಕಾಗುತ್ತದೆ. ಇದರ ನಂತರ ‘ಕಂಟಿನ್ಯೂ’ (ಮುಂದುವರಿಸಿ) ಆಯ್ಕೆಯನ್ನು ಕ್ಲಿಕ್ ಮಾಡಿ.

5. ಇಲ್ಲಿಂದ, ನೀವು ಪಠ್ಯ ಸಂದೇಶ ಅಥವಾ ಧ್ವನಿ ಕರೆ ಮೂಲಕ 6 ಅಂಕಿಗಳ ಒಟಿಪಿಯನ್ನು ಪಡೆಯಬೇಕಾದರೆ ನೀವು ಆಯ್ಕೆ ಮಾಡಬೇಕು. ನೀವು ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ, ಎಂಟರ್ ಕ್ಲಿಕ್ ಮಾಡಿ. ಒಟಿಪಿ 15 ನಿಮಿಷಗಳ ಕಾಲ ಮಾನ್ಯವಾಗಿರುತ್ತದೆ, ಅದರ ನಂತರ ನೀವು ಹೊಸದನ್ನು ಪಡೆಯಬೇಕು. ಸರಿಯಾದ ಒಟಿಪಿ (OTP) ಯನ್ನು ನಮೂದಿಸಲು ನಿಮಗೆ ಮೂರು ಅವಕಾಶಗಳಿರುತ್ತವೆ.

6. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ನೀವು ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ ಮತ್ತು ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಿ. ಯಶಸ್ವಿ ಪರಿಶೀಲನೆಯ ನಂತರ ಆದಾಯ ತೆರಿಗೆ ಇ-ಫೈಲಿಂಗ್ ಡ್ಯಾಶ್ ಬೋರ್ಡ್ ಕಾಣಿಸಿಕೊಳ್ಳುತ್ತದೆ.

7. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಗೆ ಲಾಗ್ ಇನ್ ಆಗಲು ನೀವು ನಿಮ್ಮ ನೋಂದಾಯಿತ ಆಧಾರ್ ಸಂಖ್ಯೆ ಅಥವಾ ನೆಟ್ ಬ್ಯಾಂಕಿಂಗ್ ಅನ್ನು ಸಹ ಬಳಸಬಹುದು. ಆಧಾರ್ ಲಾಗಿನ್‌ಗಾಗಿ, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ನಿರ್ದೇಶಿಸಿದಂತೆ ಒಟಿಪಿಯನ್ನು ಒದಗಿಸಬೇಕು. ನೆಟ್ ಬ್ಯಾಂಕಿಂಗ್ ಗಾಗಿ, ನಿಮ್ಮ ಖಾತೆಯನ್ನು ಪ್ರವೇಶಿಸಲು ನೀವು ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗುತ್ತದೆ.

ಇದನ್ನೂ ಓದಿ: ಡಿಮ್ಯಾಂಡಪ್ಪೋ ಡಿಮ್ಯಾಂಡು... ಡಿಸೆಂಬರ್‌ನಲ್ಲಿ ಅತಿ ಹೆಚ್ಚು ಬೇಡಿಕೆ ಕಂಡ ಎಸ್‍ಯುವಿಗಳ ಪಟ್ಟಿ ಇಲ್ಲಿದೆ

ನೀವು ಯಶಸ್ವಿಯಾಗಿ ಲಾಗ್ ಇನ್ ಮಾಡಿದ ನಂತರ, ನೀವು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ‘ಎಫ್ ವೈ 21-22’ ಗೆ ಸಲ್ಲಿಸಬೇಕು. ಇದು ವಿಫಲವಾದರೆ, ನಂತರದ ದಿನಾಂಕದಂದು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ನೀವು ದಂಡವನ್ನು ಪಾವತಿಸಬೇಕು. ಆದ್ದರಿಂದ ಗಡುವಿನೊಳಗೆ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಬಳಸಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಸೂಕ್ತ.
Published by:Sandhya M
First published: