• Home
  • »
  • News
  • »
  • business
  • »
  • Business Tips: ಏನೇ ಮಾಡಿದ್ರೂ ನಿಮ್ಮ ವ್ಯಾಪಾರ ಕ್ಲಿಕ್​ ಆಗ್ತಿಲ್ವಾ? ಇಲ್ಲಿರುವ ಹಾಗೇ ಮಾಡಿ, ಆಮೇಲೆ ಮ್ಯಾಜಿಕ್​ ನೋಡಿ!

Business Tips: ಏನೇ ಮಾಡಿದ್ರೂ ನಿಮ್ಮ ವ್ಯಾಪಾರ ಕ್ಲಿಕ್​ ಆಗ್ತಿಲ್ವಾ? ಇಲ್ಲಿರುವ ಹಾಗೇ ಮಾಡಿ, ಆಮೇಲೆ ಮ್ಯಾಜಿಕ್​ ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಣ್ಣ ವ್ಯವಹಾರ (Small Business) ವನ್ನು ಹೊಂದಿರುವ ಅರ್ಧಕ್ಕಿಂತ ಹೆಚ್ಚು ಮಾಲೀಕರು ತಮ್ಮ ಸ್ಟಾರ್ಟಪ್‌ (Startup) ಗಳನ್ನು ಲಾಭ (Profit) ದ ಉದ್ದೇಶವನ್ನಿಟ್ಟುಕೊಂಡೇ ನಡೆಸುತ್ತಾರೆ ಎಂದು ಕಾಕ್ಸ್ ಬ್ಯುಸಿನೆಸ್ (Cox Business)​ ನಡೆಸಿದ ಅಧ್ಯಯನವು ತಿಳಿಸಿದೆ.

  • Share this:

ಸಣ್ಣ ವ್ಯವಹಾರ (Small Business) ವನ್ನು ಹೊಂದಿರುವ ಅರ್ಧಕ್ಕಿಂತ ಹೆಚ್ಚು ಮಾಲೀಕರು ತಮ್ಮ ಸ್ಟಾರ್ಟಪ್‌ (Startup) ಗಳನ್ನು ಲಾಭ (Profit) ದ ಉದ್ದೇಶವನ್ನಿಟ್ಟುಕೊಂಡೇ ನಡೆಸುತ್ತಾರೆ ಎಂದು ಕಾಕ್ಸ್ ಬ್ಯುಸಿನೆಸ್ (Cox Business)​ ನಡೆಸಿದ ಅಧ್ಯಯನವು ತಿಳಿಸಿದೆ. ಸುಮಾರು 8% ಉದ್ಯಮೆದಾರರು ಲಾಭವೇ ತಮ್ಮ ಪ್ರಮುಖ ಪ್ರೇರಕ ಎಂದು ನಂಬುತ್ತಾರೆ. ಹಾಗಿದ್ದರೆ ಇತರರ ಅಭಿಪ್ರಾಯದ ಪ್ರಕಾರ ಸ್ಟಾರ್ಟಪ್ ಆರಂಭಿಸಲು ಅವರಿಗೆ ಪ್ರೇರಕವಾಗಿರುವುದು ಸ್ವಾತಂತ್ರ್ಯ ಹಾಗೂ ಉತ್ಸಾಹವಾಗಿದೆ. ವ್ಯವಹಾರವನ್ನು ಆರಂಭಿಸುವುದು ಅದರದ್ದೇ ಆದ ಅಪಾಯ, ಬಂಡವಾಳ ಹಾಗೂ ಮಾರುಕಟ್ಟೆ ಟ್ರೆಂಡ್ ಅನ್ನು ಒಳಗೊಂಡಿದೆ.


ಸಣ್ಣ ಹೂಡಿಕೆಯೊಂದಿಗೆ ಉತ್ತಮ ಯೋಜನೆ


ಸಣ್ಣ ಹೂಡಿಕೆಯೊಂದಿಗೆ ಉದ್ಯಮವನ್ನು ಆರಂಭಿಸುವ ಯೋಜನೆಯಲ್ಲಿ ನೀವಿರುವಿರಾ? ಕಡಿಮೆ ಬಂಡವಾಳದೊಂದಿಗೆ ಕೂಡ ಅನೇಕ ವ್ಯವಹಾರ ಯೋಜನೆಗಳನ್ನು ಆರಂಭಿಸಬಹುದಾಗಿದೆ ಎಂದೇ ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.


ಸರಕಾರದ ಯೋಜನೆಗಳು ಇಂತಹ ವ್ಯವಹಾರಗಳನ್ನು ಬೆಂಬಲಿಸುತ್ತಿದ್ದು ಅವುಗಳಿಗೆ ಸಹಕಾರವನ್ನು ನೀಡುತ್ತಿವೆ. ಭಾರತ ಸರಕಾರವು ಕೂಡ ವಿತ್ತೀಯ ನೆರವು ಹಾಗೂ ತೆರಿಗೆ ಪ್ರಯೋಜನಗಳೊಂದಿಗೆ ವ್ಯವಹಾರಗಳನ್ನು ಬೆಂಬಲಿಸುವ ಹಾಗೂ ಉದ್ಯೋಗವಕಾಶಗಳನ್ನು ಸೃಷ್ಟಿಸುವ ಯೋಜನೆಗಳ ಮೂಲಕ ಪ್ರೋತ್ಸಾಹ ನೀಡಬಹುದಾಗಿದೆ.

ಕಡಿಮೆ ಹೂಡಿಕೆಯ ವ್ಯವಹಾರ ಯೋಜನೆಗಳು


1) ತಾರಸಿ ಕೃಷಿ


ಜಾಗತಿಕವಾಗಿ ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ತಾರಸಿ ಕೃಷಿಯಂತಹ (Terrace plantation) ಯೋಜನೆಗಳನ್ನು ಕೈಗೊಳ್ಳುವುದರಿಂದ ವ್ಯವಹಾರದಲ್ಲಿ ಲಾಭ ಕೂಡ ಗಳಿಸಬಹುದು.ಸಣ್ಣ ಹೂಡಿಕೆಗಳು ಮತ್ತು ಕುಟುಂಬದ ಸದಸ್ಯರ ನೆರವಿನೊಂದಿಗೆ, ಮನೆಯಲ್ಲೇ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಯೋಗ್ಯವಾದ ಉತ್ತಮವಾದ ವೇತನವನ್ನು ಪಡೆಯಬಹುದು.


ಇದನ್ನೂ ಓದಿ: ಟ್ವಿಟರ್​ನಲ್ಲಿ ಬರೀ ಎಲಾನ್​ ಮಸ್ಕ್​ ಹಣ ಮಾತ್ರ ಇಲ್ಲ, ಇವ್ರೆಲ್ಲಾ ಇಲ್ಲಿ ಹೂಡಿಕೆ ಮಾಡಿದ್ದಾರೆ!


ಇದಲ್ಲದೆ, ಉತ್ಪನ್ನಗಳ ಗುಣಮಟ್ಟವು ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟಗಳಿಗೆ ಹೊಂದಿಕೆಯಾಗುವುದಾದರೆ, ಅವುಗಳನ್ನು ರಫ್ತು ಮಾಡಬಹುದು. ಈ ಮೂಲಕ ಉದ್ಯಮವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಬಹುದು.


2) ಟ್ಯೂಷನ್ ಮತ್ತು ಕೋಚಿಂಗ್ ತರಗತಿಗಳು


ವಿದೇಶಿ ಭಾಷೆಗಳನ್ನು ಕಲಿಯಲು ವಿದ್ಯಾರ್ಥಿಗಳಲ್ಲಿ ಉತ್ಸಾಹವು ಎಂದೂ ಬತ್ತುವುದಿಲ್ಲ. ಅಂತಹ ತರಗತಿಗಳನ್ನು ತೆರೆಯಲು ಕನಿಷ್ಠ ಪ್ರಮಾಣದ ಬಂಡವಾಳದ ಅಗತ್ಯವಿರುತ್ತದೆ. ಪಾಠಗಳನ್ನು ಕಲಿಸಲು ನೀವು ಶಿಕ್ಷಕರನ್ನು ಇರಿಸಬಹುದು ಅಥವಾ ನಿಮಗೆ ಭಾಷೆಗಳ ಮೇಲೆ ಹಿಡಿತವಿದ್ದರೆ ನೀವೇ ವಿದ್ಯಾರ್ಥಿಗಳಿಗೆ ಕಲಿಸಬಹುದು. ಯೋಜನೆಗಳು ಸರಿಯಾಗಿದ್ದರೆ ಇದು ಹೆಚ್ಚಿನ ಆದಾಯವನ್ನು ನೀಡುತ್ತದೆ.


ಉದ್ಯಮಗಳನ್ನು ನಡೆಸಲು ಸಲಹೆಗಳು


ಯೋಜನೆಗಳನ್ನು ರೂಪಿಸಿ


ಯೋಜನೆಗಳನ್ನು ದೊಡ್ಡ ಮಟ್ಟದಲ್ಲಿ ಯೋಜಿಸಿ. ಇದಕ್ಕಾಗಿ ಸಮಯ ವಿನಿಯೋಗಿಸಿ ಹಾಗೂ ನಿಮ್ಮ ಮನದಲ್ಲಿ ಮೂಡುವ ವಿಚಾರಗಳನ್ನು ನೋಟ್ ಮಾಡಿಕೊಳ್ಳಿ. ನಿಮ್ಮ ಪಟ್ಟಿಯನ್ನು ಪರಿಶೀಲಿಸಿ ಮತ್ತು ಉತ್ತಮವಾದದನ್ನು ಆಯ್ಕೆಮಾಡಿ. ಯೋಜನೆಯನ್ನು ಪರಿಶೋಧಿಸಿ ಹಾಗೂ ಮಾರುಕಟ್ಟೆಯಲ್ಲಿರುವ ಸ್ಪರ್ಧಿಗಳ ಬಗ್ಗೆ ವಿವರ ಸಂಗ್ರಹಿಸಿ.


ಇದನ್ನೂ ಓದಿ: ಏನಿದು 50-30-20 ಸೇವಿಂಗ್ಸ್​ ಸೂತ್ರ? ಇದೊಂದು ಫಾಲೋ ಮಾಡಿದ್ರೆ ದುಡ್ಡಿನ ಸಮಸ್ಯೆ ಬರಲ್ಲ!


ನಿಮ್ಮ ಕಲ್ಪನೆಯನ್ನು ಪರಿಷ್ಕರಿಸಿ


ನಿಮ್ಮ ಸಂಶೋಧನೆಯ ಆಧಾರದ ಮೇಲೆ, ನಿಮ್ಮ ಪರಿಕಲ್ಪನೆಯನ್ನು ಅಗತ್ಯವಿರುವಂತೆ ಮಾರ್ಪಡಿಸಿ. ಕಲ್ಪನೆಯು ಕಾರ್ಯನಿರ್ವಹಿಸದಿದ್ದರೆ ಅಥವಾ ಕೊನೆಯ ಎರಡು ಹಂತಗಳು ವಿಫಲವಾದರೆ, ಇನ್ನೊಂದನ್ನು ಆರಿಸಿ ಮತ್ತು ಪ್ರಯತ್ನಿಸಿ.


ಮಾರುಕಟ್ಟೆಯನ್ನು ಗುರುತಿಸಿ


ನಿಮ್ಮ ಯೋಜನೆಯು ಕಾರ್ಯಸಾಧ್ಯವಾಗಿದ್ದರೆ, ಜನರು ಅದಕ್ಕಾಗಿ ಪಾವತಿಸುತ್ತಾರೆಯೇ ಮತ್ತು ಅವರು ಎಷ್ಟು ಪಾವತಿಸಬಹುದು ಎಂಬುದನ್ನು ನಿರ್ಧರಿಸಲು ಇದು ಸೂಕ್ತ ಸಮಯವಾಗಿದೆ. ಯಾರು ಗಂಭೀರವಾಗಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ನಿರ್ಧರಿಸಲು ವಿವರವಾದ ಮಾರುಕಟ್ಟೆ ಸಂಶೋಧನೆಯ ಅಗತ್ಯವಿದೆ.

Published by:ವಾಸುದೇವ್ ಎಂ
First published: