PAN Card Delink: ನಿಮ್ಮ ಆಧಾರ್ ಅನ್ನು ತಪ್ಪಾದ ಪ್ಯಾನ್​ಗೆ ಲಿಂಕ್ ಮಾಡಿದ್ದೀರಾ? ಹೀಗೆ ಡೀಲಿಂಕ್ ಮಾಡಿ!

ಹಾಗಾಗಿ ನೀವು ಪ್ಯಾನ್ ಮತ್ತು ಆಧಾರ್ ಅನ್ನು ತಪ್ಪಾಗಿ ಲಿಂಕ್ ಮಾಡಿದ್ದಲ್ಲಿ, ಅದನ್ನು ಮತ್ತೆ ಡೀಲಿಂಕ್ ಮಾಡುವುದು ಹೇಗೆ ಅಂತ ಇಲ್ಲಿ ವಿವರವಾಗಿ ತಿಳಿದುಕೊಳ್ಳಿ.

ಹಾಗಾಗಿ ನೀವು ಪ್ಯಾನ್ ಮತ್ತು ಆಧಾರ್ ಅನ್ನು ತಪ್ಪಾಗಿ ಲಿಂಕ್ ಮಾಡಿದ್ದಲ್ಲಿ, ಅದನ್ನು ಮತ್ತೆ ಡೀಲಿಂಕ್ ಮಾಡುವುದು ಹೇಗೆ ಅಂತ ಇಲ್ಲಿ ವಿವರವಾಗಿ ತಿಳಿದುಕೊಳ್ಳಿ.

ಹಾಗಾಗಿ ನೀವು ಪ್ಯಾನ್ ಮತ್ತು ಆಧಾರ್ ಅನ್ನು ತಪ್ಪಾಗಿ ಲಿಂಕ್ ಮಾಡಿದ್ದಲ್ಲಿ, ಅದನ್ನು ಮತ್ತೆ ಡೀಲಿಂಕ್ ಮಾಡುವುದು ಹೇಗೆ ಅಂತ ಇಲ್ಲಿ ವಿವರವಾಗಿ ತಿಳಿದುಕೊಳ್ಳಿ.

  • Share this:

ಪ್ಯಾನ್ ಕಾರ್ಡ್ (PAN Card) ಅನ್ನು ಆಧಾರ್ ಕಾರ್ಡ್ (Aadhaar Link) ನೊಂದಿಗೆ ಲಿಂಕ್ ಮಾಡುವ ಗಡುವನ್ನು ಈಗಾಗಲೇ ಭಾರತೀಯ ಆದಾಯ ತೆರಿಗೆ (Income Tax) ಇಲಾಖೆಯು ಜೂನ್ 30, 2023 ರವರೆಗೆ ವಿಸ್ತರಿಸಿದ್ದು ಅನೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ. ಮೊದಲೆಲ್ಲಾ ಈ ಗಡುವು (Deadline) ಮಾರ್ಚ್ 31 ಆಗಿತ್ತು, ಆದ್ದರಿಂದ ಅವಸರವಸರದಲ್ಲಿ ಅನೇಕ ಜನರು ತಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಅನೇಕ ರೀತಿಯ ತೊಂದರೆಗಳನ್ನು ಎದುರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.


ಪ್ಯಾನ್ ಮತ್ತು ಆಧಾರ್ ಅನ್ನು ತಪ್ಪಾಗಿ ಲಿಂಕ್ ಆಗಿದ್ಯಾ?


ಅದರಲ್ಲೂ ವಿಶೇಷವಾಗಿ ಹೆಚ್ಚು ಜನರು ತಮ್ಮ ಆಧಾರ್ ಅನ್ನು ಈಗಾಗಲೇ ತಪ್ಪು ಪ್ಯಾನ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಹೀಗೆ ಮಾಡಿರುವುದನ್ನು ಮತ್ತೆ ಹೇಗೆ ಸರಿಪಡಿಸಬಹುದು ಅಂತ ಅನೇಕರು ಗೊಂದಲದಲ್ಲಿರಬಹುದು. ಹೀಗೆ ತಪ್ಪಾಗಿ ಲಿಂಕ್ ಮಾಡಿದ ಪ್ರಕ್ರಿಯೆ ನೀವು ಆದಾಯ ತೆರಿಗೆ ಫೈಲ್ ಮಾಡುವಾಗ ಅಲ್ಲಿ ವ್ಯತ್ಯಾಸಗಳನ್ನು ತೋರಿಸುತ್ತದೆ.


ಹಾಗಾಗಿ ನೀವು ಪ್ಯಾನ್ ಮತ್ತು ಆಧಾರ್ ಅನ್ನು ತಪ್ಪಾಗಿ ಲಿಂಕ್ ಮಾಡಿದ್ದಲ್ಲಿ, ಅದನ್ನು ಮತ್ತೆ ಡೀಲಿಂಕ್ ಮಾಡುವುದು ಹೇಗೆ ಅಂತ ಇಲ್ಲಿ ವಿವರವಾಗಿ ತಿಳಿದುಕೊಳ್ಳಿ.


ಯಾವಾಗ ಆಧಾರ್ ನೊಂದಿಗೆ ಡೀಲಿಂಕ್ ಮಾಡಬೇಕು?


ಒಬ್ಬ ವ್ಯಕ್ತಿಯು ಯಾವ ಸಂದರ್ಭದಲ್ಲಿ ತಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಡೀಲಿಂಕ್ ಮಾಡಬಹುದು ಇಲ್ಲಿ ನೋಡಿಕೊಳ್ಳಿ. ಒಂದೇ ಪ್ಯಾನ್ ಅನ್ನು ಒಂದಕ್ಕಿಂತ ಹೆಚ್ಚು ಮೌಲ್ಯಮಾಪಕರಿಗೆ ನೀಡುವುದು ಅಥವಾ ಒಬ್ಬ ಮೌಲ್ಯಮಾಪಕರಿಗೆ ಅನೇಕ ಪ್ಯಾನ್ ಕಾರ್ಡ್ ಗಳನ್ನು ವಿತರಿಸುವುದು ಅತ್ಯಂತ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ.


ಇದನ್ನೂ ಓದಿ: Pan-Aadhar ಲಿಂಕ್ ಅವಧಿ 3 ತಿಂಗಳು ವಿಸ್ತರಣೆ! ಪದೇ ಪದೇ ಡೆಡ್‌ಲೈನ್ ಮುಂದೂಡುತ್ತಿರುವುದೇಕೆ ಸರ್ಕಾರ?


ಅಂತಹ ಸಂದರ್ಭಗಳಲ್ಲಿ, ಅನೇಕ ಪ್ಯಾನ್ ಕಾರ್ಡ್ ಗಳ ಸಂಖ್ಯೆಯನ್ನು ಹೊಂದಿರುವುದು ಮತ್ತು ಅದಕ್ಕೆ ಯಾವುದೇ ದಂಡ ಬೀಳುವುದನ್ನು ತಪ್ಪಿಸಲು ಪ್ಯಾನ್ ನಿಂದ ಆಧಾರ್ ಅನ್ನು ಡೀಲಿಂಕ್ ಮಾಡುವುದು ಅತ್ಯಗತ್ಯ. ಅಲ್ಲದೆ, ಪ್ಯಾನ್ ಮತ್ತು ಆಧಾರ್ ಅನ್ನು ತಪ್ಪಾಗಿ ಲಿಂಕ್ ಮಾಡುವುದು, ನಕಲಿ ಪ್ಯಾನ್ ಕಾರ್ಡ್ ಗಳು ಮತ್ತು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆಗಳು ಸಹ ಡೀಲಿಂಕ್ ಮಾಡುವುದಕ್ಕೆ ಅಗತ್ಯವಾಗಬಹುದು.


ಪ್ಯಾನ್-ಆಧಾರ್ ಡೀಲಿಂಕ್ ಪ್ರಕ್ರಿಯೆಗೆ ಅಗತ್ಯವಿರುವ ದಾಖಲೆಗಳು!


ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಡೀಲಿಂಕ್ ಮಾಡಲು, ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನ ನಕಲು, ನಿಮ್ಮ ಅಂಚೆ ವಿಳಾಸ ಇರುವ ದಾಖಲೆ, ಕುಂದುಕೊರತೆ ಪತ್ರದ ಪ್ರತಿ ಮತ್ತು ನಿಮ್ಮ ಇ-ಮೇಲ್ ವಿಳಾಸದ ಅಗತ್ಯವಿದೆ.


ಪ್ಯಾನ್-ಆಧಾರ್ ಡೀಲಿಂಕ್ ಮಾಡುವುದು ಹೇಗೆ?


ಒಂದೇ ಪ್ಯಾನ್ ಸಂಖ್ಯೆಯನ್ನು ವಿಭಿನ್ನ ವ್ಯಕ್ತಿಗಳಿಗೆ ನೀಡಿದರೆ, ನೀವು ಪ್ಯಾನ್ ಕಾರ್ಡ್ ಸಂಸ್ಕರಣಾ ವಿವರಗಳನ್ನು ಪ್ಯಾನ್ ಸೇವಾ ಪೂರೈಕೆದಾರರಿಂದ ಪಡೆಯಬೇಕು, ಪ್ಯಾನ್ ಕಾರ್ಡ್ ನ ಆರಂಭಿಕ ಮತ್ತು ನಂತರದ ಹಂಚಿಕೆದಾರರನ್ನು ಗುರುತಿಸಲು ವಿನಂತಿಸಬೇಕು, ಅಗತ್ಯ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು ಮತ್ತು ನಂತರ ಹೊಸ ಪ್ಯಾನ್ ಕಾರ್ಡ್ ಅನ್ನು ಪಡೆಯಬೇಕು.


ಮೌಲ್ಯಮಾಪಕರು ಎರಡು ಪ್ಯಾನ್ ಕಾರ್ಡ್ ಗಳನ್ನು ಹೊಂದಿದ್ದರೆ ಮತ್ತು ಆಧಾರ್ ಅನ್ನು ನಿಷ್ಕ್ರಿಯಗೊಳಿಸಿದ ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡಿದ್ದರೆ, ನೀವು ಪ್ಯಾನ್ ಕಾರ್ಡ್ ನ ಸ್ಟೇಟಸ್ ಅನ್ನು ಪರಿಶೀಲಿಸಬೇಕು. ಕಾರ್ಡ್ ಗಳು ನಕಲು ಹಂತದಲ್ಲಿವೆಯೇ ಎಂದು ನೋಡಬೇಕು, ಆದಾಯ ತೆರಿಗೆ ಮೌಲ್ಯಮಾಪನ ಅಧಿಕಾರಿಯನ್ನು ಸಂಪರ್ಕಿಸಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.


top videos



    ನಿಮ್ಮ ಪ್ಯಾನ್-ಆಧಾರ್ ಡೀಲಿಂಕ್ ವಿನಂತಿಯನ್ನು ಸಲ್ಲಿಸುವುದು ಹೇಗೆ?


    • ನಿಮ್ಮ ಆಧಾರ್ ಅನ್ನು ತಪ್ಪು ಪ್ಯಾನ್ ಗೆ ಲಿಂಕ್ ಮಾಡಿದ್ದರೆ, ಪ್ಯಾನ್ ನಿಂದ ಆಧಾರ್ ಅನ್ನು ಡೀಲಿಂಕ್ ಮಾಡಲು ನೀವು ನಿಮ್ಮ ಜೆಎಒಗೆ ವಿನಂತಿಯನ್ನು ಸಲ್ಲಿಸಬೇಕಾಗುತ್ತದೆ.

    • ಒಮ್ಮೆ ನೀವು ಈ ಎರಡು ಕಾರ್ಡ್ ಗಳ ನಡುವಿನ ಲಿಂಕ್ ಅನ್ನು ತೆಗೆದು ಹಾಕಿದ ನಂತರ, ವಿನಂತಿಯನ್ನು ಸಲ್ಲಿಸುವ ಮತ್ತು ಶುಲ್ಕವನ್ನು ಪಾವತಿಸುವ ಮೂಲಕ ಅವುಗಳನ್ನು ಮತ್ತೆ ಲಿಂಕ್ ಮಾಡಲು ನೀವು ಕೇಳಬಹುದು.

    • ನಿಮ್ಮ ಜೆಎಒ ಹುಡುಕಲು, ನೀವು ಇ-ಪೋರ್ಟಲ್ ಗೆ ಭೇಟಿ ನೀಡಬಹುದು, ಇ-ಫೈಲಿಂಗ್ ಪೋರ್ಟಲ್ ಗೆ ಲಾಗ್ ಇನ್ ಮಾಡಬಹುದು ಮತ್ತು ‘ಮೈ ಪ್ರೊಫೈಲ್’ ಗೆ ಹೋಗಬಹುದು ಮತ್ತು ನ್ಯಾಯವ್ಯಾಪ್ತಿಯ ವಿವರಗಳ ಮೇಲೆ ಕ್ಲಿಕ್ ಮಾಡಬಹುದು.

    • ಇ-ಪೋರ್ಟಲ್ ನಲ್ಲಿ ಲಭ್ಯವಿರುವ ಇ-ಮೇಲ್ ಐಡಿ ಮೂಲಕ ನಿಮ್ಮ ಜೆಎಒ ಅಧಿಕಾರಿಯೊಂದಿಗೆ ನೀವು ಸಂಪರ್ಕಿಸಬಹುದು.

    First published: