Petrol Bike EV Conversion: ಹೀರೋ ಸ್ಪ್ಲೆಂಡರ್ ಬೈಕ್​ನ್ನೂ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಬಹುದು!

1997 ರ ನಂತರ ಮಾರಾಟವಾದ ಯಾವುದೇ ಹೀರೋ ಹೋಂಡಾ ಸ್ಪ್ಲೆಂಡರ್ ಈ ಪರಿವರ್ತನೆಯನ್ನು ಒಂದೇ ಒಂದು ಕಿಟ್‌ ಮೂಲಕ ಮಾಡಬಹುದಾಗಿದೆ. ಅದನ್ನು RTO ಅನುಮೋದನೆ ಮಾಡಿದೆ ಎಂದು ವೀಡಿಯೊದಲ್ಲಿ ಉಲ್ಲೇಖಿಸಲಾಗಿದೆ.

ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ ಹೀರೋ ಸ್ಪ್ಲೆಂಡರ್

ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ ಹೀರೋ ಸ್ಪ್ಲೆಂಡರ್

 • Share this:
  ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್-ಡೀಸೆಲ್ ವಾಹನಗಳ ಜಾಗವನ್ನು ವೇಗವಾಗಿ ತಮ್ಮದನ್ನಾಗಿಸಿಕೊಳ್ಳುತ್ತಿವೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳೇ (Electric Vehicle) ಮೇಲುಗೈ ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಕಳೆದೆರಡು ವರ್ಷಗಳಲ್ಲಿ ನಾವು ಎಲೆಕ್ಟ್ರಿಕ್ ವಾಹನಗಳ ಜಾಗಕ್ಕೆ ಹಲವಾರು ಹೊಸ ಮಾದರಿ ವಾಹನಗಳು ಎಂಟ್ರಿ ಕೊಟ್ಟಿರೋದನ್ನು ನೋಡಿದ್ದೇವೆ. ಆದರೆ ಈಗಾಗಲೇ ನಮ್ಮ ಬಳಿ ಇರುವ ಪೆಟ್ರೋಲ್ ಬೈಕ್​ಗಳನ್ನು ಎಲೆಕ್ಟ್ರಿಕ್ ಬೈಕ್​ಗಳನ್ನಾಗಿ ಬದಲಾವಣೆ ಮಾಡಬಹುದೇ? ಈ ಪ್ರಶ್ನೆ ನಿಮಗೂ ಹೊಳದಿರಬಹುದು. ಆರ್‌ಟಿಒ ಅನುಮೋದಿತ ಎಲೆಕ್ಟ್ರಿಕ್ ಕಿಟ್‌ಗಳನ್ನು ಸ್ಥಾಪಿಸುವ ಮೂಲಕ ಸಾಮಾನ್ಯ ಪೆಟ್ರೋಲ್ ಚಾಲಿತ ಮೋಟಾರ್‌ಸೈಕಲ್ ಅನ್ನು EV ಆಗಿ ಪರಿವರ್ತಿಸಲು (Convert petrol bike into EV) ಈಗ ಆಯ್ಕೆಗಳಿವೆ. ಈಗಾಗಲೇ ಹೀಗೆ ಪರಿವರ್ತನೆ ಮಾಡಿದ ಕೆಲವು ಉದಾಹರಣೆಗಳಿವೆ.

  ಹೀರೋ ಸ್ಪ್ಲೆಂಡರ್​ನ್ನೂ ಪರಿವರ್ತಿಸಬಹುದು!
  GoGoA1 ಎಂಬ ಸಂಸ್ಥೆಯು ತನ್ನ ಯೂಟ್ಯೂಬ್ ಚಾನಲ್ ಒಂದು ತಮ್ಮ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿರುವ ಮಾಹಿತಿಯ ಪ್ರಕಾರ ಹೀರೋ ಸ್ಪ್ಲೆಂಡರ್‌ನಂತಹ ಬೈಕ್​ಗಳನ್ನು ಸಹ ಎಲೆಕ್ಟ್ರಿಕ್ ವಾಹನವನ್ನಾಗಿ ಬದಲಾವಣೆ ಮಾಡಬಹುದು. ಹೀಗೆ ಬದಲಾವಣೆ ಮಾಡಿದ ಬೈಕ್​ಗಳಲ್ಲಿ ಇರುವ ಒಂದೇ ಒಂದು ವ್ಯತ್ಯಾಸವೆಂದರೆ ಎಂಜಿನ್ ಮತ್ತು ಗೇರ್‌ಬಾಕ್ಸ್‌ಗೆ ಬದಲಾಗಿ ಇದು EV ಯ ಘಟಕಗಳನ್ನು ಹೊಂದಿರುತ್ತವೆ. ಒಂದು ಕಿಟ್ ಅಳವಡಿಸಿ ಸಾಮಾನ್ಯ ಬೈಕ್​ಗಳನ್ನು ಎಲೆಕ್ಟ್ರಿಕ್ ಬೈಕ್​ಗಳನ್ನಾಗಿ ಮಾರ್ಪಡಿಸಬಹುದು!

  ಖರ್ಚೆಷ್ಟು?
  ಈ ಕಿಟ್ ಅಳವಡಿಸಲು ಸುಮಾರು 35,000 ರೂ. ತಗುಲುತ್ತದೆ. ಇದು ಬ್ಯಾಟರಿಗಳು ಮತ್ತು ಚಾರ್ಜರ್ ಅನ್ನು ಒಳಗೊಂಡಿಲ್ಲ. ಬ್ಯಾಟರಿ ಪ್ಯಾಕ್‌ನ ಬೆಲೆ ಸುಮಾರು 50,000 ಮತ್ತು ಕಿಟ್‌ನಲ್ಲಿ ಸೇರಿಸದ ಚಾರ್ಜರ್​ಗೆ ಸುಮಾರು 5,600 ರೂ. ವೆಚ್ಚವಾಗುತ್ತದೆ.  ಕಿಟ್ ಅನ್ನು ಪ್ರಸ್ತುತ ಹೀರೋ ಸ್ಪ್ಲೆಂಡರ್‌ಗೆ ಮಾತ್ರ ಬಳಸಬಹುದಾಗಿದೆ.

  RTO ಅನುಮೋದನೆ ಇದೆಯಂತೆ!
  1997 ರ ನಂತರ ಮಾರಾಟವಾದ ಯಾವುದೇ ಹೀರೋ ಹೋಂಡಾ ಸ್ಪ್ಲೆಂಡರ್ ಈ ಪರಿವರ್ತನೆಯನ್ನು ಕಿಟ್‌ ಮೂಲಕ ಮಾಡಬಹುದಾಗಿದೆ. ಅದನ್ನು RTO ಅನುಮೋದನೆ ಮಾಡಿದೆ ಎಂದು ವೀಡಿಯೊದಲ್ಲಿ ಉಲ್ಲೇಖಿಸಲಾಗಿದೆ. ಮಾಲೀಕರು ನೋಂದಣಿ ಪ್ರಮಾಣಪತ್ರಕ್ಕೆ ಅಗತ್ಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಸಾಮಾನ್ಯ ಬೈಕ್​ನಿಂದ ಎಲೆಕ್ಟ್ರಿಕ್ ವಾಹನ ಎಂದು ದಾಖಲೆಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.  ಈ ಕಿಟ್‌ನಲ್ಲಿರುವ ನಿಯಂತ್ರಕ ಮತ್ತು ಮೋಟರ್ 3 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ಕಾರುಗಳಲ್ಲಾದರೆ ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಅನ್ನು ಸ್ಥಾಪಿಸಿದ ನಂತರ, ಅದು ಇವಿ ಹಸಿರು ನಂಬರ್ ಪ್ಲೇಟ್ ಹಾಕಬೇಕಾಗುತ್ತದೆ. ಎಲೆಕ್ಟ್ರಿಕ್ ಕನ್ವರ್ಶನ್ ಕಿಟ್ ಅನ್ನು ಸ್ಥಾಪಿಸಿದ ನಂತರ, ಮೋಟಾರ್‌ಸೈಕಲ್ ಸಂಪೂರ್ಣವಾಗಿ ಚಾರ್ಜ್ ಮಾಡಿದಾಗ 151 ಕಿಮೀ ಓಡಿಸಬಹುದು ಎಂದು ಹೇಳಲಾಗಿದೆ. ಅಂದಹಾಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಬೈಕ್‌ಗಳೊಂದಿಗೆ ಹೋಲಿಸಿದಾಗ ಇದು ವಿಶೇಷವಾಗಿ ಉತ್ತಮವಾಗಿದೆ.

  ಇದನ್ನೂ ಓದಿ: Salary in Gold: ಸಂಬಳವಾಗಿ ಚಿನ್ನ ಕೊಡ್ತಾರೆ! ಹಣ ಕೊಡದೇ ಚಿನ್ನ ಪಾವತಿಸೋ ಕಂಪನಿಯಿದು!

  ಈ ಕಿಟ್‌ಗೆ ಆರ್‌ಟಿಒ ಅನುಮೋದನೆ ನೀಡಲಾಗಿದ್ದು, ಬೈಕ್ ಅಪಘಾತಕ್ಕೀಡಾದರೆ ವಿಮಾ ಕಂಪನಿಯು ಹಾನಿಯನ್ನು ಭರಿಸಲಿದೆ ಎಂದು ವಿಡಿಯೋದಲ್ಲಿ ಉಲ್ಲೇಖಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳು ಕಡಿಮೆ ನಿರ್ವಹಣೆಯನ್ನು ಹೊಂದಿರುವುದರಿಂದ ಇದು ಬಹಳ ಮುಖ್ಯವಾಗಿದೆ. ಆದರೆ ದುರಸ್ತಿ ಅಥವಾ ಬದಲಾಯಿಸಲು ಬಂದಾಗ ಅದು ತುಂಬಾ ದುಬಾರಿಯಾಗುತ್ತದೆ.

  ಎಷ್ಟು ಫಾಸ್ಟ್ ಓಡುತ್ತೆ?
  ಹಬ್ ಮೋಟಾರ್ 127 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೋಟಾರ್‌ಸೈಕಲ್ 100 ಕೆಜಿಯಿಂದ 300 ಕೆಜಿ ವರೆಗೆ ಸಾಗಿಸುವ ಸಾಮರ್ಥ್ಯ ಹೊಂದಿದೆ. ಹೀಗೆ ಬದಲಾವಣೆ ಮಾಡಲಾದ ನಂತರ ಬೈಕ್ ಓಡಬಹುದಾದ ಗರಿಷ್ಠ ವೇಗ ವೀಡಿಯೊದಲ್ಲಿರುವಂತೆ 70 kmph ಎನ್ನಲಾಗಿದೆ.

  ಇದನ್ನೂ ಓದಿ: RBI Restrictions: ಈ ಬ್ಯಾಂಕ್​ನ ಗ್ರಾಹಕರಿಗೆ ಬರೆ, ಹಣ ವಿತ್​ಡ್ರಾ ಮಾಡೋಕೆ ನಿರ್ಬಂಧ!

  ಎಂಜಿನ್ ಅನ್ನು ಬ್ಯಾಟರಿ ಪ್ಯಾಕ್ ಮತ್ತು ನಿಯಂತ್ರಕ ಘಟಕದೊಂದಿಗೆ ಬದಲಾಯಿಸಲಾಗುತ್ತದೆ. ಕೆಲವು ಪರಿವರ್ತಕಗಳು ಮತ್ತು MCB ಅನ್ನು ಸೈಡ್ ಬಾಡಿ ಪ್ಯಾನೆಲ್‌ಗಳ ಹಿಂದೆ ಇರಿಸಲಾಗಿದೆ. ಮೋಟಾರ್‌ಸೈಕಲ್ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಪಡೆಯುವುದನ್ನು ಮುಂದುವರಿಸುತ್ತದೆ. ಹಿಂದಿನ ಚಕ್ರವನ್ನು ಬದಲಿಸಿದಂತೆ, ಈ ಮೋಟಾರ್‌ಸೈಕಲ್‌ನ ಹಿಂದಿನ ಬ್ರೇಕ್‌ಗಳನ್ನು ಬಜಾಜ್ ಪಲ್ಸರ್‌ನಿಂದ ಪಡೆಯಲಾಗಿದೆ. ಸಾಮಾನ್ಯ ಸ್ಪ್ಲೆಂಡರ್‌ನಲ್ಲಿ ನೀವು ಕಾಣುವ ಸ್ವಿಚ್‌ಗಿಯರ್ ಒಂದೇ ಆಗಿರುತ್ತದೆ.
  Published by:guruganesh bhat
  First published: