Income Tax: ಗೃಹ ಸಾಲದಿಂದ ಆದಾಯ ತೆರಿಗೆ ವಿನಾಯಿತಿ ಪಡೆಯೋದು ಹೇಗೆ? ಇಲ್ಲಿದೆ ವಿವರ

ಮನೆಯ ಮೇಲೆ ತೆರಿಗೆ

ಮನೆಯ ಮೇಲೆ ತೆರಿಗೆ

ಹೋಮ್ ಲೋನ್ ಪಾವತಿಯಲ್ಲಿ ಎರಡು ವಿಧಗಳಿದ್ದು ಅಸಲು ಮೊತ್ತ ಒಂದು ವಿಧವಾಗಿದ್ದರೆ ಸಾಲ ಪಡೆದ ಮೊತ್ತಕ್ಕೆ ಪಾವತಿಸುವ ಬಡ್ಡಿ ಇನ್ನೊಂದು ವಿಧವಾಗಿದೆ.

  • Share this:
  • published by :

ಹೋಮ್ ಲೋನ್ (Home Loan) ಎಂಬುದು ತೆರಿಗೆ ಉಳಿತಾಯದಾರರಿಗೆ ಅತ್ಯುತ್ತಮ ಪರಿಹಾರವಾಗಿದ್ದು ನಿಮ್ಮ ಕನಸನ್ನು ನನಸಾಗಿಸುವ ಸುಲಭ ಮಾರ್ಗವಾಗಿದೆ. 1961 ರ ಆದಾಯ ತೆರಿಗೆ ಕಾಯಿದೆ ಅಡಿಯಲ್ಲಿ ತೆರಿಗೆ ಕಡಿತಗಳ ಮೂಲಕ ಮರುಪಾವತಿಯ ಮೇಲೆ ಹೋಮ್ ಲೋನ್ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಹೋಮ್ ಲೋನ್ ಪಾವತಿಯಲ್ಲಿ ಎರಡು ವಿಧಗಳಿದ್ದು ಅಸಲು ಮೊತ್ತ ಒಂದು ವಿಧವಾಗಿದ್ದರೆ ಸಾಲ ಪಡೆದ ಮೊತ್ತಕ್ಕೆ ಪಾವತಿಸುವ ಬಡ್ಡಿ ಇನ್ನೊಂದು ವಿಧವಾಗಿದೆ. 1961 ರ ಆದಾಯ ತೆರಿಗೆ (Tax) ಕಾಯಿದೆಯ ಸೆಕ್ಷನ್ 80C ಮತ್ತು 24(b) ಅಡಿಯಲ್ಲಿ, ಈ ಪ್ರತಿಯೊಂದು ವರ್ಗದ ಮೇಲೆ ತೆರಿಗೆ ಪ್ರಯೋಜನಗಳನ್ನು(Use) ಪಡೆಯಲು ತೆರಿಗೆದಾರರು ಅರ್ಹರಾಗಿದ್ದಾರೆ. ಹಾಗಿದ್ದರೆ ಈ ಪ್ರಯೋಜನಗಳ ಕುರಿತು ಮತ್ತು ತೆರಿಗೆ ಉಳಿತಾಯ ಮಾಡುವ ವಿಧಾನಗಳನ್ನು ಈ ಲೇಖನದಲ್ಲಿ ಪರಿಣಿತರು ತಿಳಿಸಿದ್ದು ಅದೇನು ಎಂಬುದನ್ನು ಅರಿತುಕೊಳ್ಳೋಣ.


ಆಸ್ತಿ ನಿರ್ಮಾಣ ಹಾಗೂ ಖರೀದಿ ಖಾತ್ರಿಪಡಿಸಬೇಕು:


ಫೈನಾನ್ಸ್ ಕಂಟೆಂಟ್ ಕ್ರಿಯೇಟರ್ ಅನಾಮಿಕಾ ರಾಣಾ ತಿಳಿಸುವಂತೆ ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಹೋಮ್ ಲೋನ್ ತೆಗೆದುಕೊಂಡಿದ್ದರೆ ಹೋಮ್ ಲೋನ್‌ಗೆ ಪಾವತಿಸಿದ ಬಡ್ಡಿಯ ಮೇಲೆ ತೆರಿಗೆ ಕಡಿತಕ್ಕೆ ಅರ್ಹರಾಗಿರುತ್ತೀರಿ ಎಂದಾಗಿದೆ.


ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 24(ಬಿ) ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಗೃಹ ಸಾಲಕ್ಕೆ ಪಾವತಿಸಿದ ಬಡ್ಡಿಯ ಮೇಲೆ ರೂ.2 ಲಕ್ಷದವರೆಗೆ ಕಡಿತಕ್ಕೆ ಅವಕಾಶವಿದೆ.


ಈ ಕಡಿತವನ್ನು ಪಡೆಯಲು, ಕಡಿತವನ್ನು ಕ್ಲೈಮ್ ಮಾಡುವ ಮೊದಲು ನೀವು ಆಸ್ತಿಯ ನಿರ್ಮಾಣ ಅಥವಾ ಸ್ವಾಧೀನವನ್ನು ಪೂರ್ಣಗೊಳಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಬೇಕು.


ಹೋಮ್ ಲೋನ್ ತೆರಿಗೆ ಪ್ರಯೋಜನಗಳು:


ಚಾರ್ಟರ್ಡ್ ಅಕೌಂಟೆಂಟ್ ಮತ್ತು DigiWhistle ನ ಸಹ-ಸಂಸ್ಥಾಪಕ ದೀಪಕ್ ಭಾಟಿ ಹೇಳುವಂತೆ 2023 ರಲ್ಲಿ, ಆರ್‌ಬಿಐ ವಿವಿಧ ಬಡ್ಡಿದರ ಹೆಚ್ಚಳದ ಹೊರತಾಗಿಯೂ ಹೊಸ ಮನೆಯನ್ನು ಖರೀದಿಸುವುದು ಚಾಲ್ತಿಯಲ್ಲಿದೆ.


ಇದನ್ನೂ ಓದಿ: ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 500 ರೂ.ಇಳಿಕೆ: ಅತ್ತ ಕೊಂಚ ಮುಗ್ಗರಿಸಿದ ಬಂಗಾರದ ಬೆಲೆ


ಆದ್ದರಿಂದ, ನೀವು ಹೊಸ ಮನೆ ಅಥವಾ ಫ್ಲಾಟ್ ಅನ್ನು ಬುಕ್ ಮಾಡಲು ಯೋಜಿಸುತ್ತಿದ್ದರೆ - ನಿಮ್ಮ ಹೋಮ್ ಲೋನ್‌ನಲ್ಲಿ ನೀವು ಪಡೆದುಕೊಳ್ಳಬಹುದಾದ ಕೆಲವು ತೆರಿಗೆ ಪ್ರಯೋಜನಗಳು ಹೀಗಿವೆ


ಅಸಲು ಮೊತ್ತದ ಮರುಪಾವತಿ:


ಸೆಕ್ಷನ್ 80ಸಿ ಅಡಿಯಲ್ಲಿ ಗೃಹ ಸಾಲದ ಅಸಲು ಮೊತ್ತದ ಮರುಪಾವತಿಯು ವಾರ್ಷಿಕ 1.5 ಲಕ್ಷ ರೂ ಕಡಿತಕ್ಕೆ ಅರ್ಹವಾಗಿದೆ.


ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕಗಳು: ಸ್ಟ್ಯಾಂಪ್ ಡ್ಯೂಟಿ ಮತ್ತು ಮನೆಯನ್ನು ಖರೀದಿಸಲು ನೋಂದಣಿ ಶುಲ್ಕಗಳು ಸೆಕ್ಷನ್ 80 ಸಿ ಅಡಿಯಲ್ಲಿ ಕಡಿತಕ್ಕೆ ಅರ್ಹವಾಗಿವೆ.


ನಿರ್ಮಾಣ ಪೂರ್ವ ಬಡ್ಡಿ: ಆಸ್ತಿಯ ನಿರ್ಮಾಣದ ಅವಧಿಯಲ್ಲಿ ಪಾವತಿಸಿದ ಬಡ್ಡಿಯು ನಿರ್ಮಾಣ ಪೂರ್ಣಗೊಂಡ ವರ್ಷದಿಂದ ಪ್ರಾರಂಭವಾಗುವ ಐದು ಸಮಾನ ಕಂತುಗಳಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿದೆ.


ಸೆಕ್ಷನ್ 80EEA ಯ ಪ್ರಯೋಜನ:


ಫೈನಾನ್ಸ್ ಕಂಟೆಂಟ್ ಕ್ರಿಯೇಟರ್ ನಿಧಿ ನಾಗರ್ ಹೇಳುವಂತೆ ನಿಮ್ಮ ಮೊದಲ ಮನೆಯನ್ನು ನೀವು ಖರೀದಿಸಿದ್ದರೆ ನಿಮ್ಮ ಹೋಮ್ ಲೋನ್ ಬಡ್ಡಿಯ ಮೇಲೆ ನೀವು ಹೆಚ್ಚುವರಿ ತೆರಿಗೆ ಕಡಿತವನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿಯನ್ನು ನೀಡುತ್ತಾರೆ.


ಎಲ್ಲರಿಗೂ ತಿಳಿದಿರುವಂತೆ ಸೆಕ್ಷನ್ 24 ಬಿ ಅಡಿಯಲ್ಲಿ ನಾವು ಗೃಹ ಸಾಲದ ಬಡ್ಡಿಯ ಮೇಲೆ 2 ಲಕ್ಷದವರೆಗೆ ಕಡಿತವನ್ನು ಪಡೆಯಬಹುದು ಆದರೆ ನೀವು ಸೆಕ್ಷನ್ 80EEA ಅಡಿಯಲ್ಲಿ ರೂ 1,50,000 ವರೆಗೆ ಕಡಿತವನ್ನು ಪಡೆಯಬಹುದು ಎಂಬುದು ನಿಧಿ ಸಲಹೆಯಾಗಿದೆ.


ಸೆಕ್ಷನ್ 80EE ಅಡಿಯಲ್ಲಿ ಅನುಮತಿಸಲಾದ 1 ಲಕ್ಷ ಪ್ರಯೋಜನಗಳನ್ನು ವಿಸ್ತರಿಸಲು ಈ ವಿಭಾಗವನ್ನು ಪರಿಚಯಿಸಲಾಗಿದೆ. 80EEA ಕಡಿಮೆ ವೆಚ್ಚದ ವಸತಿಗಾಗಿ, ಆದ್ದರಿಂದ ನಿಮ್ಮ ಮನೆಯ ಬೆಲೆ 45 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.


ಗೃಹ ಸಾಲದ ಮೇಲೆ ತೆರಿಗೆ ಉಳಿಸುವ ವಿಧಾನಗಳು:


ಫೈನಾನ್ಸ್ ಕಂಟೆಂಟ್ ಕ್ರಿಯೇಟರ್ ತರುಣ್ ಮಲ್ಹೋತ್ರಾ ತಿಳಿಸುವಂತೆ ಗೃಹ ಸಾಲದ ಮೇಲೆ ತೆರಿಗೆ ಉಳಿಸಲು ಹಲವಾರು ಮಾರ್ಗಗಳಿವೆ. ಆದರೆ ಜಂಟಿ ಗೃಹ ಸಾಲವನ್ನು ಪಡೆದುಕೊಂಡಲ್ಲಿ ಅಂದರೆ ಸಂಗಾತಿಯೊಂದಿಗೆ ಅಥವಾ ಇನ್ನೊಬ್ಬ ವ್ಯಕ್ತಿಯೊಂದಿಗೆ ಕ್ಲೈಮ್ ಮಾಡಿದಾಗ ಒಟ್ಟಾರೆ ತೆರಿಗೆ ಪ್ರಯೋಜನಗಳನ್ನು ಹೆಚ್ಚಿಸಬಹುದು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ವಿಶ್ವದ ಅತ್ಯಂತ ಹಳೆಯ ಮುತ್ತಿನ ನಗರ ಪತ್ತೆ! ಸಖತ್​ ಇಂಟ್ರೆಸ್ಟಿಂಗ್​ ಸುದ್ಧಿ


ಮೊದಲನೆಯದಾಗಿ, ಜಂಟಿ ಗೃಹ ಸಾಲಗಳ ಮೇಲಿನ ಬಡ್ಡಿ ದರಗಳು ವೈಯಕ್ತಿಕ ದರಗಳಿಗಿಂತ ಸಾಮಾನ್ಯವಾಗಿ ತುಂಬಾ ಕಡಿಮೆ ಎಂಬುದು ಅವರ ಸಲಹೆಯಾಗಿದೆ.


ಮೊದಲ ಬಾರಿಗೆ ಮನೆ ಖರೀದಿದಾರರಿಗೆ ಹೆಚ್ಚುವರಿ ತೆರಿಗೆ ಪ್ರಯೋಜನಗಳು:


ಫೈನಾನ್ಸ್ ಕಂಟೆಂಟ್ ಕ್ರಿಯೇಟರ್ ಆದರ್ಶ್ ಗುಪ್ತಾ ತಿಳಿಸುವಂತೆ ಭಾರತದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದಾಗಿದೆ. ಆದರೆ ಇದು ದುಬಾರಿ ಉದ್ಯಮ ಕೂಡ ಹೌದು.


top videos



    ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80EE ಅಡಿಯಲ್ಲಿ ನೀವು ಇನ್ನೂ ಗೃಹ ಸಾಲಗಳ ಮೇಲಿನ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಈ ಕಾಯ್ದೆಯು ಮೊದಲ ಬಾರಿಗೆ ಮನೆ ಖರೀದಿದಾರರಿಗೆ ಹೆಚ್ಚುವರಿ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ.

    First published: