ಭಾರತೀಯ ಜೀವ ವಿಮಾ ನಿಗಮದ ಎಲ್ಐಸಿ ಐಪಿಒ ಬಹು ನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (LIC IPO) ಸ್ಟೇಟಸ್ ಚೆಕ್ ಮಾಡೋ ಸಮಯ ಇದು. ಯಾರಿಗೆ ಎಲ್ಐಸಿ ಐಪಿಒ ಸಿಗುತ್ತೆ? ಯಾರಿಗೆ ಸಿಕ್ಕಿಲ್ಲ ಅಂತ ಎಲ್ರೂ ಕಾತುರದಿಂದ ಕಾಯ್ತಿದ್ದಾರೆ. ಎಲ್ಐಸಿ ಗುರುವಾರ, ಮೇ 12 ರೊಳಗೆ ಹಂಚಿಕೆಯನ್ನು ಅಂತಿಮಗೊಳಿಸಲಿದೆ ಎಂದು ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ಘೋಷಿಸಿದ್ದಾರೆ. LIC IPO ಮೇ 4-9 ರ ನಡುವೆ ಚಂದಾದಾರಿಕೆಗಾಗಿ ತೆರೆಯಲಾಗಿತ್ತು. ಎಲ್ಐಸಿ ಐಪಿಒಗೆ ಎಲ್ಲೆಡೆ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಹಾಗಾದರೆ ಎಲ್ಐಸಿ ಐಪಿಒ ಯಾರಿಗೆಲ್ಲ ಸಿಕ್ತು? ಯಾರಿಗೆ ಸಿಕ್ತಿಲ್ಲ? ಅಂತ ಚೆಕ್ ಮಾಡೋದು ಹೇಗೆ? ಇಲ್ಲಿದೆ ನೋಡಿ ಹಂತ ಹಂತದ ವಿವರ.
ಎಲ್ಐಸಿಯ ರೂ 20,557 ಕೋಟಿ ಐಪಿಒ ಪ್ರತಿ ಇಕ್ವಿಟಿ ಷೇರಿಗೆ ರೂ 902-949 ರ ವ್ಯಾಪ್ತಿಯಲ್ಲಿ ಮಾರಾಟವಾಗಿದೆ. ಅರ್ಹ ಪಾಲಿಸಿದಾರರು ತಲಾ ರೂ 60 ರಷ್ಟು ರಿಯಾಯಿತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಚಿಲ್ಲರೆ ವ್ಯಾಪಾರಿಗಳು ಮತ್ತು ಅರ್ಹ ಉದ್ಯೋಗಿಗಳಿಗೆ ಪ್ರತಿ ಷೇರಿಗೆ ರೂ 45 ರಷ್ಟು ರಿಯಾಯಿತಿ ನೀಡಲಾಗಿತ್ತು.
ಎಲ್ಐಸಿ ಐಪಿಒ ಆಫರ್
ಆರು ದಿನಗಳ ಕಾಲ ನಡೆದ ಐಪಿಒ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಎಲ್ಐಸಿ ಐಪಿಒ ಆಫರ್ ಮೇ 4 ರಂದು ಪ್ರಾರಂಭವಾಗಿ ಸೋಮವಾರ ಮೇ 9 ರಂದು ಸಂಜೆ 7 ಗಂಟೆಗೆ ಕೊನೆಗೊಂಡಿತು. ಎಲ್ಐಸಿ ಐಪಿಒ ಎಲ್ಲಾ ವಿಭಾಗಗಳಲ್ಲಿ ಪ್ರಚಂಡ ಯಶಸ್ಸನ್ನು ಕಂಡಿದೆ ಮತ್ತು ಎಲ್ಲಾ ವರ್ಗದ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎಂದು ಪಾಂಡೆ ಹೇಳಿದರು.
ಇಶ್ಯೂಗಾಗಿ ಬಿಡ್ ಮಾಡಿದ ಹೂಡಿಕೆದಾರರು, BSE ವೆಬ್ಸೈಟ್ನಲ್ಲಿ ಹಂಚಿಕೆ ಸ್ಥಿತಿಯನ್ನು ಪರಿಶೀಲಿಸಬಹುದು.