Karnataka Farmers: ನಿಮ್ಮ ಸಾಲ ಇನ್ನೂ ಮನ್ನಾ ಆಗಿಲ್ಲ ಏಕೆ? ಹೀಗೆ ಚೆಕ್ ಮಾಡಿ!

ಈ ವಿಧಾನದ ಮೂಲಕ ಕರ್ನಾಟಕದ ಕೃಷಿಕರು ಮನೆಯಲ್ಲಿಯೇ ಕುಳಿತು ಸಾಲಮನ್ನಾ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದರೂ ಯಾವ ಕಾರಣದಿಂದ ತಮ್ಮ ಸಾಲ ಮನ್ನಾ ಆಗಿಲ್ಲ ಎಂದು ಸಹ ಚೆಕ್ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕರ್ನಾಟಕದ ರೈತರಿಗೆ ಇತ್ತೀಚಿಗೆ ರಾಜ್ಯ ಸರ್ಕಾರ ಒಂದು ಸಿಹಿ ಸುದ್ದಿ ನೀಡಿತ್ತು. ಯಾವುದೇ ಕಾರಣದಿಂದ ಅಥವಾ ವಿಧಿಸಲಾದ ಷರತ್ತುಗಳನ್ನು ಪೂರೈಸದೇ ಇರುವ ಕಾರಣ ರೈತರ ಸಹಕಾರ ಸಾಲವನ್ನು ಮನ್ನಾ ಮಾಡಲು ಮತ್ತೊಂದು ಅವಕಾಶ ನೀಡುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್  (Minister ST Somashekar) ಘೋಷಿಸಿದ್ದರು. ಇದರಿಂದ ರಾಜ್ಯದ ಸಾವಿರಾರು ರೈತರಿಗೆ (Karnataka Farmers) ಮತ್ತೊಂದು ಅವಕಾಶ ದೊರೆತಂತಾಗಿತ್ತು. ಆದರೆ ಈ ಸಾಲಮನ್ನಾಕ್ಕೆ ಸಂಬಂಧಿಸಿ ರೈತರು ತಮ್ಮ ಸಾಲ ಮನ್ನಾ(Farmers Loan Waiver) ಆಗಿದೆಯೇ ಇಲ್ಲವೇ? ಎಂದು ಅತ್ಯಂತ ಸುಲಭವಾಗಿ ಚೆಕ್ ಮಾಡುವುದು ಹೇಗೆ? (How to check Loan Waive) ಎಂಬ ಮಾಹಿತಿ ಇಲ್ಲಿದೆ.

  ಇಷ್ಟು ವರ್ಷವಾದರೂ ಏಕೆ ಸಿಕ್ಕಿಲ್ಲ ಫಲಾನುಭವ?
  2017-18ನೇ ಸಾಲಿನ ಬಾಕಿ ಇದ್ದ ಸಹಕಾರ ಸಂಘದಿಂದ ಪಡೆದ ಅಲ್ಪಾವಧಿ ಸಾಲ‌ಮನ್ನಾ ಮಾಡಲಾಗಿತ್ತು. ಆದರೆ  ಸಾವಿರಾರು ರೈತರ ಸಾಲ ವಿವಿಧ ಕಾರಣಗಳಿಂದ ಇನ್ನೂ ಮನ್ನಾ ಆಗಿರಲಿಲ್ಲ. ಹಾಗಾದರೆ ಅವರ ಸಾಲ ಏಕೆ ಮನ್ನಾ ಆಗಿರಲಿಲ್ಲ? ಏಕೆ ಅಷ್ಟೊಂದು ರೈತರು ಕರ್ನಾಟಕ ಸರ್ಕಾರದ ಸಾಲ ಮನ್ನಾ ಯೋಜನೆಯಿಂದ ಇಷ್ಟು ವರ್ಷ ಆದರೂ ಫಲಾನುಭವ ಪಡೆದಿರಲಿಲ್ಲ ಎಂದು ತಿಳಿಯಲು ಇಲ್ಲಿದೆ ಸುಲಭ ದಾರಿ.

  ಮನೆಯಲ್ಲೇ ಕುಳಿತು ಚೆಕ್ ಮಾಡಿ
  ಅಲ್ಲದೇ ಈ ವಿಧಾನದ ಮೂಲಕ ಕರ್ನಾಟಕದ ಕೃಷಿಕರು ಮನೆಯಲ್ಲಿಯೇ ಕುಳಿತು ಸಾಲಮನ್ನಾ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದರೂ ಯಾವ ಕಾರಣದಿಂದ ತಮ್ಮ ಸಾಲ ಮನ್ನಾ ಆಗಿಲ್ಲ ಎಂದು ಸಹ ಚೆಕ್ ಮಾಡಬಹುದು.

  ಈ ಯೋಜನೆಯ ಅಡಿ ಒಳಪಡುವ ರೈತರು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಬಾರದು. ಪಿಂಚಣಿ ಯೋಜನೆ ಅವರ ಹೆಸರಲ್ಲಿ ಇರಬಾರದು ಎಂಬ ಕೆಲವು ಷರತ್ತುಗಳಿವೆ. ಈ ಕಾರಣಗಳಿಂದಲೂ ಕೆಲವು ರೈತರು ಸಾಲಮನ್ನ ಯೋಜನೆಯಿಂದ ವಂಚಿತರಾಗಿದ್ದರು.

  ಇದನ್ನೂ ಓದಿ: Monthly Pension: ಇಂದೇ ಈ ಪಾಲಿಸಿ ಮಾಡಿಸಿ 10 ವರ್ಷದವರೆಗೆ ತಿಂಗಳಿಗೆ 9,250 ರೂ. ಪಿಂಚಣಿ ಪಡೆಯಿರಿ!

  ರೈತರ ಸಾಲಮನ್ನಾ ಪಟ್ಟಿಯಲ್ಲಿ ರೈತರ ಬ್ಯಾಂಕ್ ಅಕೌಂಟ್, ಯಾವ ಪ್ರಕಾರದ ಸಾಲವಿದೆ, ಸಾಲ ಪಡೆದ ದಿನಾಂಕ, ಸಾಲಮನ್ನಾ ಆಗಲು ಅನುಮತಿ ದೊರೆತಿದೆಯೋ ಇಲ್ಲವೋ ಎಂದು ಪರಿಶೀಲಿಸಬಹುದು. ಈಮೂಲಕ ನಿಮ್ಮ ಸಾಲ ಮನ್ನಾದ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಕೊಳ್ಳಬಹುದು.

  ನಿಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿಯ ಪರಿಶೀಲಿಸಲ್ಪಟ್ಟಿದೆಯೋ ಇಲ್ಲವೋ ಎಂದು ಸಹ ನೀವು ಇಲ್ಲಿ ಖಚಿತತೆ ಪಡೆಯಬಹುದು.

  ಹೇಗೆ ಚೆಕ್ ಮಾಡುವುದು?

  ಇಲ್ಲಿದೆ ಲಿಂಕ್: https://clws.karnataka.gov.in/clws/bank/fsd_report/BANK_IFR.aspx/

  ಅಥವಾ ಇಲ್ಲಿ ಕ್ಲಿಕ್ ಮಾಡಿ  ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ 2017-18ನೇ ಸಾಲಿನ ಬೆಳೆ ಸಾಲಮನ್ನಾ ಪೇಜ್ ಓಪನ್ ಆಗಲಿದೆ. ಮೊದಲು ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ.  ನಂತರ ಬ್ಯಾಂಕ್ ಮತ್ತು ನಿಮ್ಮ ಅಕೌಂಟ್ ಇರುವ ಬ್ಯಾಂಕ್ ಅನ್ನು ಆಯ್ಕೆ ಮಾಡಿ. ಮುಂದೆ ಕಾಣಿಸುವ ಫೆಚ್ ಡಿಟೇಲ್ಸ್ ಕ್ಲಿಕ್ ಮಾಡಿ. ಆಗ ನಿಮ್ಮ ಸಾಲದ ಮಾಹಿತಿ ಕಾಣಿಸುತ್ತದೆ.

  ಕೃಷಿಕರ ಬ್ಯಾಂಕ್ ಅಕೌಂಟ್, ಸಾಲದ ಪ್ರಕಾರ, ದಿನಾಂಕ, ಸಾಲಮನ್ನಾ ಆಗಲು ಅನುಮತಿ ಸಿಕ್ಕಿದೆಯೋ ಇಲ್ಲವೋ ಎಂದು ಹೀಗೆ ಪರಿಶೀಲಿಸಬಹುದು.

  ಇದನ್ನೂ ಓದಿ: Bank Holidays in April: ಬ್ಯಾಂಕ್​ಗಳಿಗೆ ಸರಣಿ ರಜೆ! ನಿಮ್ಮೂರಲ್ಲಿ ಯಾವಾಗ ಬ್ಯಾಂಕ್ ಮುಚ್ಚಿರುತ್ತೆ?

  ನೀವು ಕೃಷಿಕರಾಗಿದ್ದು ಇದುವರೆಗೂ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಸಾಲ ಮನ್ನಾ ಆಗದೇ ಇದ್ದಲ್ಲಿ ಈ ವೆಬ್​ಸೈಟ್ ಮೂಲಕ ಆರಾಮವಾಗಿ ಮಾಹಿತಿಯನ್ನು ಪರಿಶೀಲನೆ ಮಾಡಬಹುದು. ಅಲ್ಲದೇ ಯಾವ ಕಾರಣಕ್ಕೆ ನಿಮ್ಮ ಸಾಲ ಮನ್ನಾ ಆಗಿಲ್ಲ ಎಂದು ಸಹ ನೀವು ಇಲ್ಲಿ ತಿಳಿದುಕೊಳ್ಳಬಹುದು.
  Published by:guruganesh bhat
  First published: