• Home
  • »
  • News
  • »
  • business
  • »
  • 5G Network: ನಿಮ್ಮ ಸ್ಮಾರ್ಟ್‌ಫೋನ್ 5ಜಿ ಸಪೋರ್ಟ್ ಮಾಡುತ್ತಾ ಇಲ್ವಾ ಅಂತ ಹೀಗ್​ ಚೆಕ್​ ಮಾಡಿ!

5G Network: ನಿಮ್ಮ ಸ್ಮಾರ್ಟ್‌ಫೋನ್ 5ಜಿ ಸಪೋರ್ಟ್ ಮಾಡುತ್ತಾ ಇಲ್ವಾ ಅಂತ ಹೀಗ್​ ಚೆಕ್​ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಲ್ಲಾ ಸ್ಮಾರ್ಟ್‌ಫೋನ್ ಗಳು ಏರ್‌ಟೆಲ್ ಅಥವಾ ಜಿಯೋ 5ಜಿ ಅನ್ನು ಬೆಂಬಲಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ. ಹಾಗಾದರೆ ಯಾವೆಲ್ಲಾ ಸ್ಮಾರ್ಟ್‌ಫೋನ್ ಗಳು 5ಜಿ ಸೇವೆಯನ್ನು ಬೆಂಬಲಿಸುತ್ತವೆ ಅಂತ ತಿಳಿದುಕೊಳ್ಳೋಣ ಬನ್ನಿ.

  • Share this:

ರಿಲಯನ್ಸ್ ಜಿಯೋ (Reliance Jio) ಮತ್ತು ಏರ್‌ಟೆಲ್ (Airtel) ಎರಡೂ ದೇಶಾದ್ಯಂತ ಕೆಲವು ಭಾಗಗಳಲ್ಲಿ ತಮ್ಮ 5ಜಿ ಸೇವೆ (5G Network) ಗಳನ್ನು ಪ್ರಾರಂಭಿಸಿವೆ. ಏರ್‌ಟೆಲ್ 5ಜಿ ಈಗಾಗಲೇ 8 ನಗರಗಳಲ್ಲಿ ಕಳೆದ ವಾರದಿಂದ ಲಭ್ಯವಿದೆ ಮತ್ತು ನಿನ್ನೆಯಿಂದ ಜಿಯೋ 5ಜಿ (Jio 5G) ಸೇವೆಯು 4 ನಗರಗಳಲ್ಲಿ ಪ್ರಾರಂಭವಾಗಿರುವುದು ಬಹುತೇಕರಿಗೆ ತಿಳಿದಿರುವ ವಿಚಾರವೇ ಆಗಿದೆ. ಆದರೆ ಈ ಸುದ್ದಿ ಎಲ್ಲಾ ಸ್ಮಾರ್ಟ್‌ಫೋನ್ (Smart Phone) ಬಳಕೆದಾರರಿಗೆ ಸಿಹಿ ಸುದ್ದಿ ಆಗಲಿಕ್ಕಿಲ್ಲ, ಏಕೆಂದರೆ ಎಲ್ಲಾ ಸ್ಮಾರ್ಟ್‌ಫೋನ್ ಗಳು ಏರ್‌ಟೆಲ್ ಅಥವಾ ಜಿಯೋ 5ಜಿ ಅನ್ನು ಬೆಂಬಲಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ. ಹಾಗಾದರೆ ಯಾವೆಲ್ಲಾ ಸ್ಮಾರ್ಟ್‌ಫೋನ್ ಗಳು 5ಜಿ ಸೇವೆಯನ್ನು ಬೆಂಬಲಿಸುತ್ತವೆ ಅಂತ ತಿಳಿದುಕೊಳ್ಳೋಣ ಬನ್ನಿ.


ಯಾವೆಲ್ಲಾ ಸ್ಮಾರ್ಟ್‌ಫೋನ್ ಗಳು 5ಜಿಯನ್ನು ಬೆಂಬಲಿಸುತ್ತವೆ?


5ಜಿ ನೆಟವರ್ಕ್ ಅನ್ನು ಹೊಂದಿರುವ ಸ್ಮಾರ್ಟ್‌ಫೋನ್ ಗಳು ಮಾತ್ರ ಜಿಯೋ ಮತ್ತು ಏರ್‌ಟೆಲ್ 5ಜಿ ಸೇವೆಯನ್ನು ಬೆಂಬಲಿಸಲು ಸಾಧ್ಯವಾಗುತ್ತದೆ. ಸರಳವಾಗಿ ಹೇಳುವುದಾದರೆ, ಪ್ರಸ್ತುತ 2ಜಿ, 3ಜಿ ಅಥವಾ 4ಜಿ ಸ್ಮಾರ್ಟ್‌ಫೋನ್ ಹೊಂದಿರುವ ಜನರು ತುಂಬಾ ವೇಗವಾದ 5ಜಿ ಸೇವೆಯನ್ನು ಆನಂದಿಸಲು ಸಾಧ್ಯವಾಗುವುದಿಲ್ಲ. ಹಾಗಾದರೆ, ನಿಮ್ಮ ಸ್ಮಾರ್ಟ್‌ಫೋನ್ 5ಜಿ ನೆಟವರ್ಕ್ ಅನ್ನು ಬೆಂಬಲಿಸುತ್ತದೆಯೇ? ಇಲ್ಲವೇ ಅಂತ ನೀವು ತಿಳಿದುಕೊಳ್ಳಲು ಈ ಕೆಳಗೆ ಸೂಚಿಸಿದ ಹಂತಗಳನ್ನು ಅನುಸರಿಸಿ.


ನಿಮ್ಮ ಫೋನ್ 5ಜಿ ನೆಟವರ್ಕ್ ಬೆಂಬಲಿಸುತ್ತದೆಯೇ ಅಂತ ಕಂಡುಕೊಳ್ಳುವುದು ಹೇಗೆ?


ಹಂತ 1: ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ, ಸೆಟ್ಟಿಂಗ್ಸ್ ಅಪ್ಲಿಕೇಶನ್ ಗೆ ಹೋಗಿ


ಹಂತ 2: ಆ ಸೆಟ್ಟಿಂಗ್ ಅಪ್ಲಿಕೇಶನ್ ನಲ್ಲಿ 'ವೈ-ಫೈ ಆಂಡ್ ನೆಟವರ್ಕ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ


ಹಂತ 3: 'ಸಿಮ್ ಆಂಡ್ ನೆಟವರ್ಕ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ


ಇದನ್ನೂ ಓದಿ: ಮಹಿಳಾ ನೇತೃತ್ವದ 20 ಸ್ಟಾರ್ಟಪ್‌ಗಳ ಹೆಸರು ಪ್ರಕಟಿಸಿದ ಗೂಗಲ್ ಇಂಡಿಯಾ, ಹೆಣ್ಮಕ್ಕಳೇ ಸ್ಟ್ರಾಂಗು ಗುರೂ!


ಹಂತ 4: 'ಪ್ರಿಫರ್ಡ್ ನೆಟವರ್ಕ್ ಟೈಪ್' ಆಯ್ಕೆಯ ಅಡಿಯಲ್ಲಿ ಎಲ್ಲಾ ತಂತ್ರಜ್ಞಾನಗಳ ಪಟ್ಟಿಯನ್ನು ನೀವು ನೋಡಲು ಸಾಧ್ಯವಾಗುತ್ತದೆ.


ಹಂತ 5: ನಿಮ್ಮ ಸ್ಮಾರ್ಟ್‌ಫೋನ್ 5ಜಿ ನೆಟವರ್ಕ್ ಅನ್ನು ಬೆಂಬಲಿಸಿದರೆ, ಅದನ್ನು 2ಜಿ, 3ಜಿ, 4ಜಿ, 5ಜಿ ಎಂದು ಪಟ್ಟಿ ಮಾಡಲಾಗುತ್ತದೆ.


ಏರ್‌ಟೆಲ್ ಅಥವಾ ಜಿಯೋ 5ಜಿ ಸೇವೆಗಳನ್ನು ಈಗಾಗಲೇ ಹೊರ ತಂದಿರುವ ನಗರಗಳಲ್ಲಿ ನೀವು ವಾಸಿಸುತ್ತಿದ್ದರೆ, ಅತೀ ವೇಗದ ಇಂಟರ್‌ನೆಟ್ ಅನ್ನು ಪ್ರಯತ್ನಿಸಲು ನೀವು 2ಜಿ, 3ಜಿ, 4ಜಿ, 5ಜಿ ಆಯ್ಕೆಯನ್ನು ಸರಳವಾಗಿ ಕ್ಲಿಕ್ ಮಾಡಬಹುದು.


5ಜಿ ನೆಟವರ್ಕ್ ಅನ್ನು ಆನಂದಿಸಲು 5ಜಿ ಸ್ಮಾರ್ಟ್‌ಫೋನ್ ಖರೀದಿಸಿ


ಆದ್ದರಿಂದ, ನೀವು 5ಜಿ ಅನ್ನು ಚಲಾಯಿಸಲು ಬಯಸಿದರೆ, ನೀವು ಮೊದಲು 5ಜಿ ಫೋನ್ ಅನ್ನು ಖರೀದಿಸಬೇಕಾಗುತ್ತದೆ. ಹಲವಾರು ಸ್ಮಾರ್ಟ್‌ಫೋನ್ ಕಂಪನಿಗಳು ವಿವಿಧ ಬೆಲೆಗಳಲ್ಲಿ 5ಜಿ ಸ್ಮಾರ್ಟ್‌ಫೋನ್ ಗಳನ್ನು ನೀಡುತ್ತಿವೆ. ವಾಸ್ತವವಾಗಿ, ರಿಯಲ್ ಮೀ ಮತ್ತು ಲಾವಾದಂತಹ ಬ್ರ್ಯಾಂಡ್ ಗಳು 10,000 ರೂಪಾಯಿಗಿಂತಲೂ ಕಡಿಮೆ ಬೆಲೆಗೆ 5ಜಿ ಫೋನ್ ಅನ್ನು ಬಿಡುಗಡೆ ಮಾಡುವುದನ್ನು ಖಚಿತಪಡಿಸಿವೆ.


ಇದನ್ನೂ ಓದಿ:  500 ದಿನಗಳಲ್ಲಿ 25 ಸಾವಿರ ಮೊಬೈಲ್ ಟವರ್!


ಇಂದಿನಿಂದ, ರಿಲಯನ್ಸ್ ಜಿಯೋ ಅವರು ಕೋಲ್ಕತಾ, ದೆಹಲಿ, ಮುಂಬೈ ಮತ್ತು ವಾರಣಾಸಿ ಸೇರಿದಂತೆ 4 ನಗರಗಳಲ್ಲಿ ಬೀಟ್ ಟ್ರಯಲ್ ಆಗಿ 5ಜಿ ಸೇವೆಯನ್ನು ಪರಿಚಯಿಸಿದೆ. ಮತ್ತೊಂದೆಡೆ, ಏರ್‌ಟೆಲ್ ನವರು ದೆಹಲಿ, ವಾರಣಾಸಿ, ನಾಗ್ಪುರ, ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ಸಿಲಿಗುರಿ ಸೇರಿದಂತೆ 8 ನಗರಗಳಲ್ಲಿ 5ಜಿ ಸೇವೆಗಳನ್ನು ಒದಗಿಸುತ್ತಿದೆ. ಮಾರ್ಚ್ 2024 ರ ವೇಳೆಗೆ ಪ್ಯಾನ್ ಇಂಡಿಯಾ 5ಜಿ ಸೇವೆಗಳ ರೋಲ್ಔಟ್ ನಡೆಯಲಿದೆ ಎಂದು ಏರ್‌ಟೆಲ್ ನ ಸಿಇಒ ಇತ್ತೀಚೆಗೆ ದೃಢಪಡಿಸಿದ್ದಾರೆ, ಆದರೆ, ಜಿಯೋ 5ಜಿ ಡಿಸೆಂಬರ್ 2023 ರ ವೇಳೆಗೆ ಬಹುತೇಕವಾಗಿ ಎಲ್ಲರಿಗೂ ಲಭ್ಯವಾಗಲಿದೆ.

Published by:ವಾಸುದೇವ್ ಎಂ
First published: