PAN Card Update: ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ Last Name ಬದಲಿಸಬೇಕಾ? ಹೀಗೆ ಮಾಡಿ  

ಪ್ಯಾನ್ ಕಾರ್ಡ್ ಅನ್ನು ಅನೇಕ ಸಂದರ್ಭಗಳಲ್ಲಿ ID ಪುರಾವೆಯಾಗಿ ಬಳಸಲಾಗುತ್ತದೆ. ಆದ್ದರಿಂದ ಅದಕ್ಕಾಗಿ ಬಳಕೆದಾರರು ಪ್ಯಾನ್ ಕಾರ್ಡ್‌ನಲ್ಲಿ ಕೊನೆಯ ಹೆಸರು ಮತ್ತು ವಿಳಾಸವನ್ನು ಬದಲಾಯಿಸಬಹುದು.

PAN Card

PAN Card

  • Share this:
PAN Card Update: ಪ್ಯಾನ್ ಕಾರ್ಡ್ ಅಥವಾ ಶಾಶ್ವತ ಖಾತೆ ಸಂಖ್ಯೆ (Permanent Account Number) ಎಲ್ಲಾ ರೀತಿಯ ಹಣಕಾಸು ವಹಿವಾಟುಗಳಿಗೆ ಅತ್ಯಂತ ಅಗತ್ಯವಾದ ದಾಖಲೆಯಾಗಿದೆ. ಪ್ಯಾನ್ ಕಾರ್ಡ್ 10 ಅಂಕೆಗಳ ಆಲ್ಫಾನ್ಯೂಮರಿಕ್ ಸಂಖ್ಯೆಯನ್ನು ಹೊಂದಿರುರತ್ತದೆ. ಅದರ ಬಳಕೆಯಿಲ್ಲದೆ ಯಾವುದೇ ಹಣಕಾಸಿನ ವಹಿವಾಟು (Finance Transaction) ನಡೆಯುವುದಿಲ್ಲ. ವ್ಯಕ್ತಿ ಅಥವಾ ಕಂಪನಿಗಳ ತೆರಿಗೆ (Tax)ಹೊಣೆಗಾರಿಕೆಯನ್ನು ನಿರ್ಣಯಿಸುವಲ್ಲಿ ಅತ್ಯಗತ್ಯವಾಗಿರುವ ಎಲ್ಲಾ ಹಣಕಾಸು ವಹಿವಾಟುಗಳ ಜಾಡನ್ನು ಇರಿಸಿಕೊಳ್ಳಲು ಆದಾಯ ತೆರಿಗೆ ಪ್ರಾಧಿಕಾರಕ್ಕೆ (Income Tax Department) ಸಹಾಯ ಮಾಡುವ ಪ್ರಮುಖ ದಾಖಲೆಯೂ PAN ಕಾರ್ಡ್ ಆಗಿದೆ, ಇದು ತೆರಿಗೆ ವಂಚನೆಯ (Tax Cheating) ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪ್ಯಾನ್ ಕಾರ್ಡ್ ಅನ್ನು ಅನೇಕ ಸಂದರ್ಭಗಳಲ್ಲಿ ID ಪುರಾವೆಯಾಗಿ ಬಳಸಲಾಗುತ್ತದೆ. ಆದ್ದರಿಂದ ಅದಕ್ಕಾಗಿ ಬಳಕೆದಾರರು ಪ್ಯಾನ್ ಕಾರ್ಡ್‌ನಲ್ಲಿ ಕೊನೆಯ ಹೆಸರು ಮತ್ತು ವಿಳಾಸವನ್ನು ಬದಲಾಯಿಸಬಹುದು. ವಿಶೇಷವಾಗಿ ಮದುವೆಯ ನಂತರ ಮಹಿಳೆಯರು ತಂದೆಯ ಹೆಸರಿನ ಬದಲಾಗಿ ಪತಿ ಹೆಸರು ಬಳಸುತ್ತಾರೆ. ಹಾಗಾಗಿ ಹೆಸರು ಬದಲಾವಣೆಗೆ ಅವಕಾಶ ಸಹ ನೀಡಲಾಗಿದೆ.

ಮನೆಯಲ್ಲಿ ಕುಳಿತು Last Name ಬದಲಿಸಿ

ಅದು ಬ್ಯಾಂಕ್ ಆಗಿರಲಿ ಅಥವಾ ಯಾವುದೇ ಇತರ ಹಣಕಾಸಿನ ವಹಿವಾಟು ಆಗಿರಲಿ, ನಿಮ್ಮ ಪ್ಯಾನ್ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಾಗಿದೆ. ನಿಮ್ಮ ಪ್ಯಾನ್ ಕಾರ್ಡ್‌ ನಲ್ಲಿ ಉಪನಾಮಗಳ ಬದಲಾವಣೆಯಂತಹ ಬದಲಾವಣೆಗಳನ್ನು ಮಾಡಬೇಕಾದ ಸಂದರ್ಭಗಳಿವೆ. ನಿಮ್ಮ ಮನೆಯ ಸೌಕರ್ಯಗಳಿಂದಲೇ ಪ್ಯಾನ್ ಕಾರ್ಡ್‌ನಲ್ಲಿ ಉಪನಾಮವನ್ನು ಬದಲಾಯಿಸುವ ಹಂತ ಹಂತದ ಪ್ರಕ್ರಿಯೆಯನ್ನು ಇಂದು ನಿಮಗೆ ಹೇಳುತ್ತಿದ್ದೇವೆ.

ಇದನ್ನೂ ಓದಿ:  Cost Of Living: ಜಗತ್ತಿನಲ್ಲಿ ಜೀವನ ನಡೆಸೋದು ದುಬಾರಿ ಆಗ್ತಿರೋದೇಕೆ? ಇಲ್ಲಿವೆ 5 ಕಾರಣಗಳು

PAN ಕಾರ್ಡ್‌ನಲ್ಲಿ ನಿಮ್ಮ ವಿವರಗಳನ್ನು ನವೀಕರಿಸಲು, ನಿಮ್ಮ PAN ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಸರಿಪಡಿಸಲು ಈ ರೀತಿ ಮಾಡಿ

>> ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (National Securities Depository Limited) ವೆಬ್‌ಸೈಟ್‌ಗೆ ಭೇಟಿ ನೀಡಿ

>> Correction in Existing PAN  ಆಯ್ಕೆಯನ್ನು ಆರಿಸಿ

>>  Category ಪ್ರಕಾರವನ್ನು ಆರಿಸಿ

>> ಬದಲಿಸಬೇಕಾದ ಸರಿಯಾದ ಹೆಸರು ಮತ್ತು ಅದಕ್ಕೆ ಸಂಬಂಧಿಸಿದಂತಹ ದಾಖಲೆಗಳನ್ನು ಲಗತ್ತಿಸಬೇಕು.

>> ವಿಳಾಸ ಅಥವಾ ಕೊನೆಯ ಹೆಸರನ್ನು ಬದಲಾಯಿಸಲು ಕಾರ್ಡ್‌ ದಾರರು 110 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

>> ಸಬ್‌ಮಿಟ್ (Submit) ಆಯ್ಕೆಯ ಮೇಲೆ ಕ್ಲಿಕ್ ಮಾಡಿ/ಅಪ್ಲಿಕೇಶನ್ ಅನ್ನು ಆದಾಯ ತೆರಿಗೆ ಪ್ಯಾನ್ ಸೇವೆಗಳ ಘಟಕಕ್ಕೆ (ಎನ್‌ಎಸ್‌ಡಿಎಲ್ e-Governance Infrastructure Limitedನಿಂದ ನಿರ್ವಹಿಸಲಾಗಿದೆ) ಎನ್‌ಎಸ್‌ಡಿಎಲ್ ವಿಳಾಸಕ್ಕೆ ಕಳುಹಿಸಿ.

>> ನವೀಕರಿಸಿದ PAN ಕಾರ್ಡ್ ಅರ್ಜಿ ಸಲ್ಲಿಸಿದ ದಿನದಿಂದ 45 ದಿನಗಳಲ್ಲಿ ನೋಂದಾಯಿತ ವಿಳಾಸಕ್ಕೆ ಕಳುಹಿಸಲಾಗುತ್ತದೆ.

ಮಕ್ಕಳಿಗೂ ಸಿಗಲಿದೆ ಪ್ಯಾನ್ ಕಾರ್ಡ್

ಪ್ಯಾನ್​ ಕಾರ್ಡ್​​ನ್ನು 18 ವರ್ಷ ಮೇಲ್ಪಟ್ಟವರು ಯಾರೂ ಬೇಕಾದರೂ ಹೊಂದಬಹುದು ಎಂದು ಎಲ್ಲರಿಗೂ ತಿಳಿದಿದೆ. ಆಧಾರ್ ನಂಬರ್ ಇದ್ದರೆ ಸಾಕು, 10 ನಿಮಿಷದಲ್ಲಿ ಪ್ಯಾನ್​ ಕಾರ್ಡ್​​​ನ್ನು ಪಡೆದುಕೊಳ್ಳಬಹುದು. 18 ವರ್ಷಕ್ಕಿಂತ ಕೆಳಗಿನವರೂ ಸಹ ಈಗ ಪ್ಯಾನ್​ ಕಾರ್ಡ್​​ನ್ನು ಸುಲಭವಾಗಿ​​ ಪಡೆದುಕೊಳ್ಳಬಹುದು. ಆದಾಯ ತೆರಿಗೆ ಇಲಾಖೆ ಈ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ. ಪ್ಯಾನ್​ ಕಾರ್ಡ್​ ಪಡೆಯಲು ನ್ಯಾಷನಲ್​ ಸೆಕ್ಯುರಿಟೀಸ್​ ಡಿಪಾಸಿಟರಿ ಲಿಮಿಲೆಡ್​​​(NSDL)​​​ನ ಅಧಿಕೃತ ವೆಬ್​ಸೈಟ್​​​ನಲ್ಲಿ PAN ಕಾರ್ಡ್​​​ಗಾಗಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ:  Gold Investment: ತನ್ನ ಎಲ್ಲ ದಾಖಲೆಗಳನ್ನು ಮುರಿಯಲಿದೆ ಚಿನ್ನ: ತಜ್ಞರ ಪ್ರಕಾರ ಇದುವೇ ಹೂಡಿಕೆ ಸಮಯ!

ಅಪ್ರಾಪ್ತ ವಯಸ್ಕರು ಸ್ವತಃ ಪ್ಯಾನ್​ ಕಾರ್ಡ್​​ಗೆ ಅರ್ಜಿ ಸಲ್ಲಿಸುವಂತಿಲ್ಲ. ಬದಲಾಗಿ ಅವರ ಪೋಷಕರು ಅರ್ಜಿ ಸಲ್ಲಿಸಬೇಕು. ಈ ಹಿಂದೆ ಪ್ಯಾನ್​ ಕಾರ್ಡ್​​ ಪಡೆದುಕೊಳ್ಳಲು ಹರಸಾಹಸ ಪಡಬೇಕಿತ್ತು. ಆದರೆ ಈಗ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿ ಸುಲಭವಾಗಿ ಪ್ಯಾನ್​ ಕಾರ್ಡ್​​ ಪಡೆಯಬಹುದಾಗಿದೆ. 18 ವರ್ಷ ಮೇಲ್ಪಟ್ಟವರು ಮಾತ್ರವಲ್ಲ, 18 ವರ್ಷದೊಳಗಿನವರೂ ಈಗ ಪ್ಯಾನ್​ ಕಾರ್ಡ್​ ಹೊಂದಬಹುದು. ಅದಕ್ಕಾಗಿ ಅವರ ಪೋಷಕರು ಅರ್ಜಿ ಸಲ್ಲಿಸಬೇಕು.
Published by:Mahmadrafik K
First published: