• Home
  • »
  • News
  • »
  • business
  • »
  • Gold Rate: ವ್ಯಾಪಾರಿಗಳು ಆಭರಣಗಳ ಬೆಲೆಯನ್ನು ಹೇಗೆ ಲೆಕ್ಕ ಹಾಕುತ್ತಾರೆ ಗೊತ್ತೆ? ಇಲ್ಲಿದೆ ವಿವರ

Gold Rate: ವ್ಯಾಪಾರಿಗಳು ಆಭರಣಗಳ ಬೆಲೆಯನ್ನು ಹೇಗೆ ಲೆಕ್ಕ ಹಾಕುತ್ತಾರೆ ಗೊತ್ತೆ? ಇಲ್ಲಿದೆ ವಿವರ

ಬಂಗಾರ

ಬಂಗಾರ

ಭಾರತದಲ್ಲಿ ಆಭರಣಗಳ ವ್ಯಾಪಾರಿಗಳಿಗೇನೂ ಕಮ್ಮಿ ಇಲ್ಲ. ನಗರದಿಂದ ಹಿಡಿದು ಹಳ್ಳಿಗಳಂತಹ ಸ್ಥಳದಲ್ಲೂ ಈ ಆಭರಣ ವ್ಯಾಪಾರಿಗಳು ಇದ್ದೇ ಇರುತ್ತಾರೆ ಮತ್ತು ಎಲ್ಲರಲ್ಲೂ ಚಿನ್ನ-ಬೆಳ್ಳಿ ಆಭರಣಗಳ ರೇಟ್ ಒಂದೇ ಆಗಿರುವುದಂತೂ ಖಂಡಿತ ಸುಳ್ಳು.

  • Share this:

ಬಂಗಾರ, ಬೆಳ್ಳಿ ಎಂಬುದು ಅನಾದಿ ಕಾಲದಿಂದಲೂ ಎಲ್ಲರಿಗೂ ಬಲು ಪ್ರೀಯವಾದ ಲೋಹಗಳಾಗಿವೆ (Metal) ಎಂಬುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಭಾರತೀಯರಿಗೆ ಬಂಗಾರ, ಬೆಳ್ಳಿ ಖರೀದಿ ಎಂದರೆ ತುಸು ಹೆಚ್ಚಿನ ಪ್ರೀತಿ. ಕಷ್ಟಕಾಲಕ್ಕೆ ದೇವರಂತೆ (God) ಕಾಪಾಡುವ ಈ ಚಿನ್ನವನ್ನು (Gold) ಬಹುತೇಕ ಎಲ್ಲ ಭಾರತೀಯರು ಕೊಳ್ಳಲು ಮುಂದಾಗುತ್ತಾರೆ. ಹಾಗಾಗಿಯೇ, ಆಭರಣಗಳ ರೂಪದಲ್ಲಿ ಹಿಂದಿನಿಂದಲೂ ಬಂಗಾರ-ಬೆಳ್ಳಿಗಳನ್ನು (Silver) ಕೊಳ್ಳಲಾಗುತ್ತಿದೆ.


ಇನ್ನು, ಭಾರತದಲ್ಲಿ ಆಭರಣಗಳ ವ್ಯಾಪಾರಿಗಳಿಗೇನೂ ಕಮ್ಮಿ ಇಲ್ಲ. ನಗರದಿಂದ ಹಿಡಿದು ಹಳ್ಳಿಗಳಂತಹ ಸ್ಥಳದಲ್ಲೂ ಈ ಆಭರಣ ವ್ಯಾಪಾರಿಗಳು ಇದ್ದೇ ಇರುತ್ತಾರೆ ಮತ್ತು ಎಲ್ಲರಲ್ಲೂ ಚಿನ್ನ-ಬೆಳ್ಳಿ ಆಭರಣಗಳ ರೇಟ್ ಒಂದೇ ಆಗಿರುವುದಂತೂ ಖಂಡಿತ ಸುಳ್ಳು. ಇದು ವಿವಿಧ ಆಭರಣ ವ್ಯಾಪಾರಿಗಳ ಮಧ್ಯೆ ಭಿನ್ನವಾಗಿಯೇ ಇರುತ್ತದೆ. ನಮ್ಮ ಭಾರತದಲ್ಲಿ ಸ್ಟ್ಯಾಂಡರ್ಡ್ ಇನ್ವಾಯ್ಸ್ ಬಿಲ್ಲಿಂಗ್ ನಂತಹ ವ್ಯವಸ್ಥೆಯಿಲ್ಲದಿರುವ ಕಾರಣಕ್ಕೆ ಬೆಲೆಗಳಲ್ಲಿ ಸಾಕಷ್ಟು ವ್ಯತ್ಯಾಸ ಗಮನಿಸಬಹುದು.


ಸ್ಟ್ಯಾಂಡರ್ಡ್ ಇನ್ವಾಯ್ಸಿಂಗ್ ವ್ಯವಸ್ಥೆ


ಟೈಟನ್ ಆಭರಣ ಮಳಿಗೆಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರಾಗಿರುವ ಸಂದೀಪ್ ಕುಲಹಳ್ಳಿ ಅವರು ಹೇಳುವಂತೆ ಭಾರತದಲ್ಲಿ ಆಭರಣಗಳ ವಿಷಯಕ್ಕೆ ಬಂದರೆ ಎಲ್ಲರೂ ಬಳಸಬಹುದಾದ ಸ್ಟ್ಯಾಂಡರ್ಡ್ ಇನ್ವಾಯ್ಸ್ ವ್ಯವಸ್ಥೆಯಿಲ್ಲ, ಹಾಗಾಗಿ ಮಳಿಗೆಯಿಂದ ಮಳಿಗೆಗೆ ಆಭರಣಗಳ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ.


ಭಾರತದ ಪ್ರತಿ ನಗರಗಳೂ ತಮ್ಮದೆ ಆಭರಣ ವ್ಯಾಪಾರಿಗಳ ಸಂಘಗಳನ್ನು ಹೊಂದಿದ್ದು ಪ್ರತಿನಿತ್ಯ ಬಂಗಾರ-ಬೆಳ್ಳಿಗಳ ಬೆಲೆ ಅಪ್ಡೇಟ್ ಆಗುತ್ತಿರುತ್ತದೆ. ಹಾಗಾಗಿ ಭಾರತದ ಒಂದು ನಗರದಲ್ಲಿ ಇರುವ ಆಭರಣಗಳ ಬೆಲೆ ಇನ್ನೊಂದು ನಗರದಲ್ಲಿ ಖಂಡಿತ ಇರುವುದಿಲ್ಲ.


ಇದನ್ನೂ ಓದಿ: ಮುಂದೆ ಒಳ್ಳೆ ಮಾತಾಡಿ ಒಳಗೊಳಗೆ ಗುನ್ನಾ ಇಡ್ತಾರೆ, ಈ ರಾಶಿಯವರು ಇವತ್ತು ಎಚ್ಚರದಿಂದಿರಿ!


ಕ್ಯಾರಟ್ಲೇನ್ ಮಳಿಗೆಯ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಅತುಲ್ ಸಿನ್ಹಾ ಆಭರಣಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದಕ್ಕೆ ಸರಳವಾದ ಸೂತ್ರವೊಂದನ್ನು ನೀಡುತ್ತಾರೆ. ಅವರ ಪ್ರಕಾರ,
ಆಭರಣದ ಅಂತಿಮ ಬೆಲೆ = ಚಿನ್ನದ (22 ಅಥವಾ 18 ಕ್ಯಾರಟ್) X (ಗ್ರಾಂಗಳಲ್ಲಿ ತೂಕ) + ಮೇಕಿಂಗ್ ಚಾರ್ಜ್ + 3% ಜಿಎಸ್ಟಿ (ಆಭರಣದ ಬೆಲೆ+ಮೇಕಿಂಗ್ ಚಾರ್ಜ್).


ಬನ್ನಿ, ಈ ಕುರಿತಂತೆ ಒಂದು ಉದಾಹರಣೆಯನ್ನು ಗಮನಿಸೋಣ


ಅಂದುಕೊಳ್ಳಿ ಒಬ್ಬ ಆಭರಣ ವ್ಯಾಪಾರಿಯು ತನ್ನ ಬಳಿ ಇರುವ 22 ಕ್ಯಾರಟ್ಟಿನ 10 ಗ್ರಾಂ ಆಭರಣದ ಬೆಲೆಯನ್ನು ರೂ. 27,350 ಎಂದು ನಮೂದಿಸಿದ್ದಾನೆಂದು. ನಿಮಗೆ 9.6 ಗ್ರಾಂ ತೂಕದ ಬಂಗಾರದ ಚೈನ್ ಬೇಕೆಂದಾಗ ಅದರ ಬೆಲೆಯನ್ನು ಹೀಗೆ ಲೆಕ್ಕ ಹಾಕಲಾಗುತ್ತದೆ.


ಹತ್ತು ಗ್ರಾಂ ಬೆಲೆ - 27,350
ಒಂದು ಗ್ರಾಂ ಬೆಲೆ - 27,350/10 = 2, 735


9.6 ಗ್ರಾಂ ಬೆಲೆ = 9.6*2,735 = 26,256


ಇದಕ್ಕೆ ಮೇಕಿಂಗ್ ಚಾರ್ಜ್ 10% ಹಿಡಿದಾಗ = 10/100*26,256 + 26,256 = 28,881.60 ಇದಕ್ಕೆ 3% ಜಿಎಸ್ಟಿ ಸೇರಿಸಿ ಮತ್ತು ಹಾಲ್ ಮಾರ್ಕಿಂಗ್ ಚಾರ್ಜ್ ರೂ. 35 ಅನ್ನು ಸೇರಿಸಿ.


ಕೊನೆಯಲ್ಲಿ ಸಿಗುವ ಮೊತ್ತವೇ ನೀವು ಕೊಳ್ಳ ಬಯಸಿರುವ ಚೈನಿನ ಅಂತಿಮ ಮೊತ್ತವಾಗಿರುತ್ತದೆ.


ಹರಳುಗಳಿರುವ ಆಭರಣ


ಒಮ್ಮೊಮ್ಮೆ ಕೆಲ ವಂಚಕ ವ್ಯಾಪಾರಿಗಳು ಹರಳುಗಳಿರುವ ಆಭರಣಗಳನ್ನು ಒಟ್ಟಾರೆಯಾಗಿ ತೂಕ ಹಾಕಿ ಅದೆಲ್ಲವನ್ನು ಬಂಗಾರದ ಲೆಕ್ಕದಲ್ಲಿ ಹಾಕಿಕೊಂಡು ಮಾರುತ್ತಾರೆ. ಆದರೆ, ಇದು ನ್ಯಾಯ ಮಾರ್ಗವಲ್ಲ. ನ್ಯಾಯಯುತ ವ್ಯಾಪಾರಿಗಳು ಮಾರುವಾಗ ಅಥವಾ ಗ್ರಾಹಕರಿಂದ ಆಭರಣ ಕೊಳ್ಳುವಾಗ ಹರಳುಗಳಿದ್ದರೆ ಅದರ ತೂಕವನ್ನು ಬೇರ್ಪಡಿಸುತ್ತಾರೆ ಹಾಗೂ ವೆಸ್ಟೇಜ್ ಇದ್ದರೆ ಅದನ್ನು ಕಳೆಯುತ್ತಾರೆ.


ಬಂಗಾರದ ಶುದ್ಧತೆ


ಬಂಗಾರದ ಆಭರಣಗಳು ವಿವಿಧ ಕ್ಯಾರಟ್ ಗಳಲ್ಲಿ ಲಭ್ಯವಿದೆ ಹಾಗೂ ಕ್ಯಾರಟ್ ಅನ್ನುವುದು ಬಂಗಾರದ ಶುದ್ಧತೆಯನ್ನು ಅಳೆಯುವ ಮಾಪಕವಾಗಿದೆ ಎನ್ನುತ್ತಾರೆ ಟೈಟನ್ ಮಳಿಗೆಯ ಸಿನ್ಹಾ. ಇದು Karats(KT)ಆಗಿದ್ದು ಇದನ್ನು Carat ನೊಂದಿಗೆ ತಪ್ಪಾಗಿ ತಿಳಿಯದಿರಿ, Carat ಎನ್ನುವುದು ವಜ್ರಗಳ ತೂಕ ಎಂದು ತಿಳಿಸುತ್ತಾರೆ ಸಿನ್ಹಾ ಅವರು.


ಇದನ್ನೂ ಓದಿ: ಚಿನ್ನದ ದರ ಏರಿಕೆಗೆ ಬಿತ್ತು ಬ್ರೇಕ್, ಹೀಗಿದೆ ಇಂದಿನ ರೇಟ್


ಇನ್ನು, 24KT ಎನ್ನುವುದು ಅತಿ ಶುದ್ಧವಾದ ಅಥವಾ ಅಪರಂಜಿ ಚಿನ್ನವಾಗಿದ್ದು ಇದು ಅತಿ ಮೃದುವಾಗಿರುತ್ತದೆ. ಇದರ ಮೃದುತ್ವ ಎಷ್ಟಿರುತ್ತದೆ ಎಂದರೆ ಇದರಿಂದ ಆಭರಣ ತಯಾರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಆಭರಣ ತಯಾರಿಕೆಗಾಗಿ 22KT ಶುದ್ಧತೆಯ ಬಂಗಾರವನ್ನೇ ಬಳಸುತ್ತಾರೆ ಎಂದು ಸಿನ್ಹಾ ವಿವರಿಸುತ್ತಾರೆ. 22KT ಚಿನ್ನದಲ್ಲಿ 91.6% ದಷ್ಟು ಶುದ್ಧವಾದ ಚಿನ್ನವಿರುತ್ತದೆ.


ಅದೇ ವಜ್ರದ ಆಭರಣಗಳನ್ನು ಕೊಳ್ಳುವಾಗ ಅಥವಾ ತಯಾರಿಸುವಾಗ 18KT ಬಂಗಾರವನ್ನು ಬಳಸಲಾಗುತ್ತದೆ ಮತ್ತು ಇದು 75% ರಷ್ಟು ಶುದ್ಧ ಬಂಗಾರವನ್ನು ಹೊಂದಿರುತ್ತದೆ ಎಂದು ಸಿನ್ಹಾ ವಿವರಿಸುತ್ತಾರೆ.

First published: