ಇತ್ತೀಚಿನ ದಿನಗಳಲ್ಲಿ ಮ್ಯೂಚುವಲ್ ಫಂಡ್ (Mutual Fund) ಹೂಡಿಕೆಯು ಬಹಳ ಫೇಮಸ್ ಆಗಿರೋ ಉತ್ತಮ ಣಕಾಸು ಹೂಡಿಕೆ ಆಗಿದೆ. ಹಣಕಾಸು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಶ್ರೀಮಂತರಾಗಲು ಇದು ಸ್ಮಾರ್ಟ್ ಮಾರ್ಗ ಎಂದೇ ಆರ್ಥಿಕ ತಜ್ಞರು ಆಗಾಗ ಹೇಳುತ್ತಲೇ ಇರುತ್ತಾರೆ. ಪ್ರಾಥಮಿಕವಾಗಿ ಮ್ಯೂಚುವಲ್ ಫಂಡ್ ಹೂಡಿಕೆದಾರರು SIP ಮಾರ್ಗದ ಮೂಲಕ ಹೂಡಿಕೆ ಮಾಡುತ್ತಾರೆ. ಆರ್ಥಿಕ ತಜ್ಞರ ಪ್ರಕಾರ, ದೀರ್ಘಾವಧಿಯ ಹೂಡಿಕೆ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸುವ ಮತ್ತು ಷೇರು ಮಾರುಕಟ್ಟೆಯಲ್ಲಿ (Market) ಉತ್ತಮ ಜ್ಞಾನವನ್ನು ಹೊಂದಿರುವ ಹೂಡಿಕೆದಾರರಿಗೆ ದೊಡ್ಡ ಮೊತ್ತದ ಮ್ಯೂಚುವಲ್ ಫಂಡ್ ಹೂಡಿಕೆಯು ಉತ್ತಮ ಆಯ್ಕೆಯಾಗಿದೆ.
ಮ್ಯೂಚುಯಲ್ ಫಂಡ್ ಎಂದ್ರೇನು?
ಮ್ಯೂಚುಯಲ್ ಫಂಡ್ ಎನ್ನುವುದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಒಂದು ಮಾಧ್ಯಮ. ಇಲ್ಲಿ ಸಾಮಾನ್ಯ ಗುರಿಯನ್ನ ಹೊಂದಿರುವ ಅನೇಕ ಹೂಡಿಕೆದಾರರ ಹಣವನ್ನ ಒಂದೆಡೆ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹವಾದ ಹಣವನ್ನ ಅನೇಕ ಸಂಸ್ಥೆಗಳಲ್ಲಿ, ಬೇರೆ ಬೇರೆ ವಲಯಗಳಲ್ಲಿ ವೈಜ್ಞಾನಿಕ ತಳಹದಿಯ ವಿಶ್ಲೇಷಣೆಯ ಮೂಲಕ ಹೂಡಿಕೆಯನ್ನ ಮಾಡಲಾಗುತ್ತದೆ.
ಮ್ಯೂಚುಯಲ್ ಫಂಡ್‌ಗಳಲ್ಲಿ ಎಷ್ಟು ವಿಧ?
ಮ್ಯೂಚುಯಲ್ ಫಂಡ್ ಯೋಜನೆಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಅವುಗಳೆಂದರೆ ಆಕ್ಟಿವ್ ಫಂಡ್ ಮತ್ತು ಪ್ಯಾಸಿವ್ ಫಂಡ್ ಮೂಲಕ ಹೂಡಿಕೆದಾರರು ತಮ್ಮ ಹಣವನ್ನು ಹೂಡಿಕೆ ಮಾಡಬಹುದು.c
ಇದನ್ನೂ ಓದಿ: ಯಾವ್ಯಾವ ನಗರದಲ್ಲಿ ಇಂಧನ ಬೆಲೆ ಎಷ್ಟಿದೆ? ಇಲ್ಲಿದೆ ದರ ವಿವರ
ಆಕ್ಟಿವ್ ಮತ್ತು ಪ್ಯಾಸಿವ್ ಮ್ಯೂಚುಯಲ್ ಫಂಡ್‌ಗಳಲ್ಲಿ ಯಾವುದನ್ನ ಆರಿಸಿಕೊಳ್ಳಬೇಕು ಅನ್ನೋ ನಿರ್ಧಾರ ಮಾಡೋದು ಕಷ್ಟ ಆಗಿದೆಯಾ? ಹಾಗಾದರೆ, ಬನ್ನಿ ನಾವೀಗ ಅವೆರಡರ ನಡುವಿನ ವ್ಯತ್ಯಾಸಗಳನ್ನು ತಿಳ್ಕೊಳ್ಳೋ ಪ್ರಯತ್ನ ಮಾಡೋಣ.
ಆಕ್ಟಿವ್ ಫಂಡ್ ಎಂದ್ರೇನು?
ಆಕ್ಟಿವ್ ಫಂಡ್ ಒಂದರಲ್ಲಿ ಫಂಡ್ ಮ್ಯಾನೇಜರ್ ನಿಮ್ಮ ಹಣವನ್ನು ನಿರ್ವಹಿಸುತ್ತಾರೆ ಹಾಗೂ ಹೂಡಿಕೆ ಮಾಡ್ತಾರೆ. ಎಲ್ಲಾ ಹೂಡಿಕೆಯ ನಿರ್ಣಯಗಳೂ ಆ ಫಂಡ್ ಮ್ಯಾನೇಜರ್‌ನ ಕಾರ್ಯತಂತ್ರಗಳನ್ನು ಅವಲಂಬಿಸಿರುತ್ತೆ.
ಪ್ಯಾಸಿವ್ ಫಂಡ್ ಎಂದ್ರೇನು?
ಪ್ಯಾಸಿವ್ ಫಂಡ್ ಸೂಚ್ಯಂಕಗಳನ್ನು ಅನುಸರಿಸುತ್ತೆ. ಈ ಫಂಡ್‌ಗಳು ಸೂಚ್ಯಂಕಗಳ ಭಾಗವಾಗಿರುವ ಷೇರುಗಳಲ್ಲಿ ಮಾತ್ರವೇ ಹೂಡಿಕೆ ಮಾಡುತ್ತವೆ. ಅಲ್ಲದೇ ಸೂಚ್ಯಂಕಗಳಲ್ಲಿನ ಷೇರುಗಳ ಗಾತ್ರಗಳಿಗೆ ಸಮನಾದ ಗಾತ್ರಗಳಲ್ಲೇ ಹೂಡಿಕೆ ಮಾಡುತ್ತವೆ.
ಮ್ಯೂಚುಯಲ್ ಫಂಡ್ ಆಕ್ಟಿವ್ ಆಗಿದಿಯೋ ಅಥವಾ ಪ್ಯಾಸಿವ್ ಆಗಿದಿಯೋ ಎಂಬುದನ್ನು ನಿರ್ಧರಿಸಲು ನೇರವಾದ ವಿಧಾನವೆಂದರೆ ಅದರ ಸಕ್ರಿಯ ಪಾಲನ್ನು ಪರಿಶೀಲಿಸುವುದು ಉತ್ತಮವಾಗಿದೆ. ಇದು ಪೋರ್ಟ್‌ಫೋಲಿಯೊ ಸೂಚ್ಯಂಕದಿಂದ ಎಷ್ಟು ಭಿನ್ನವಾಗಿದೆ ಎಂಬುದನ್ನು ಅಳೆಯುತ್ತದೆ.
ಮ್ಯೂಚುಯಲ್ ಫಂಡ್ ಕುರಿತು ಆರ್ಥಿಕ ತಜ್ಞರೇನು ಹೇಳ್ತಿದಾರೆ?
“ಝೀರೋ, ಆಕ್ಟಿವ್ ಪಾಲು ಸೂಚ್ಯಂಕದ ನಿಖರವಾದ ಪ್ರತಿರೂಪವನ್ನು ಸೂಚಿಸುತ್ತದೆ. ಆದರೆ 100 ಆಕ್ಟಿವ್ ಷೇರು ಎಂದ್ರೆ ಸೂಚ್ಯಂಕದೊಂದಿಗೆ ಯಾವುದೇ ಸಾಮಾನ್ಯ ಹೋಲ್ಡಿಂಗ್‌ಗಳಿಲ್ಲ. ಫಂಡ್‌ನ ಆಕ್ಟಿವ್ ಷೇರು 60 ಕ್ಕಿಂತ ಕಡಿಮೆ ಇದ್ದರೆ, ಅದು ಆಕ್ಟಿವ್ ಫಂಡ್ ಆಗಿರುವುದಿಲ್ಲ. ಅದರ ಬದಲಿಗೆ ಕ್ಲೋಸೆಟ್ ಟ್ರ್ಯಾಕರ್ ಅಥವಾ ಟ್ರ್ಯಾಕರ್ ನಂತಹ ಫಂಡ್‌ಗಳಲ್ಲಿ ಹೂಡಿಕೆ ಮಾಡದಿರುವುದು ಉತ್ತಮ" ಎಂದು ಎಸ್‌ಎಜಿ ಇನ್ಫೋಟೆಕ್‌ನ ಎಂ.ಡಿ ಅಮಿತ್ ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ: ದಿನೇ ದಿನೇ ದುಬಾರಿಯಾಗುತ್ತಿದೆ ಚಿನ್ನ-ಬೆಳ್ಳಿ ದರ: ಹೀಗಿದೆ ಇಂದಿನ ರೇಟ್
ಆಪ್ಟಿಮಾ ಮನಿ ಮ್ಯಾನೇಜರ್ಸ್‌ನ ಎಂ.ಡಿ ಮತ್ತು ಸಿಇಒ ಪಂಕಜ್ ಮಠಪಾಲ್ ಆಕ್ಟಿವ್ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಕೆಲವು ಮಾರ್ಗಗಳನ್ನು ಇಲ್ಲಿ ತಿಳಿಸಿದ್ದಾರೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ ಬನ್ನಿ.
ಹೂಡಿಕೆ ಮಾಡಿ ಶ್ರೀಮಂತರಾಗುವ ಸ್ಮಾರ್ಟ್ ಮಾರ್ಗಗಳು:
1) SIP ಮತ್ತು STP ಮೂಲಕ ಉತ್ತಮವಾಗಿ ಹೂಡಿಕೆ ಮಾಡಿ
2) ಬೇರೆ-ಬೇರೆ ಫಂಡ್‌ಗಳಲ್ಲಿ ಹೂಡಿಕೆ ಮಾಡಿ
3) ಹಣವನ್ನು ಬೆಳೆಸುವುದು ಮತ್ತು ಮೌಲ್ಯದ ಹೂಡಿಕೆ ಶೈಲಿಯ ಫಂಡ್‌ಗಳ ಪೋರ್ಟ್‌ಪೋಲಿಯೋವನ್ನು ಬೇರೆ ಬೇರೆಯಾಗಿಸುವುದು.
4) ವಿವಿಧ ಫಂಡ್ ಮ್ಯಾನೇಜರ್‌ಗಳ ವಿಭಿನ್ನ ಫಂಡ್ ನಿರ್ವಹಣಾ ಶೈಲಿಗಳ ಪ್ರಯೋಜನವನ್ನು ಪಡೆಯಲು ಬಹು ಫಂಡ್ ಹೌಸ್‌ಗಳ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ. ಒಂದೇ ಫಂಡ್ ಹೌಸ್‌ನ ಹಲವಾರು ಫಂಡ್‌ಗಳು ಮತ್ತು ಬಹು ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಡಿ.
ಸೆಬಿ ನೋಂದಾಯಿತ ತೆರಿಗೆ ಮತ್ತು ಹೂಡಿಕೆ ತಜ್ಞ ಜಿತೇಂದ್ರ ಸೋಲಂಕಿ ಅವರು “ಲಾರ್ಜ್ ಕ್ಯಾಪ್ ವರ್ಗಕ್ಕೆ ಉತ್ತಮ ಹಣ ಹೂಡಿಕೆ ಎಂದ್ರೆ ಲಾರ್ಜ್ ಮತ್ತು ಮಿಡ್ ಕ್ಯಾಪ್ ಉತ್ತಮ ಆಯ್ಕೆಯಾಗಿದೆ. ಮಿಡ್ ಕ್ಯಾಪ್ ಹೂಡಿಕೆಯ ಫಂಡ್‌ಗಳು ಉತ್ತಮ ಆದಾಯವನ್ನು ಗಳಿಸಬಹುದು” ಎಂದು ಹೇಳಿದರು. ಇದರ ಹೊರತಾಗಿ ಫ್ಲೆಕ್ಸಿ ಕ್ಯಾಪ್ ಫಂಡ್‌ಗಳು ಮತ್ತು ಬಹು-ಆಸ್ತಿ ಫಂಡ್‌ಗಳು ಸಹ ಆಕ್ಟಿವ್ ಫಂಡ್‌ಗಳಲ್ಲಿ ಉತ್ತಮ ಆಯ್ಕೆಯಾಗಿರಬಹುದು ಎಂದು ಪಂಕಜ್ ಮಠಪಾಲ್ ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ