ಹಣ ಉಳಿಸುವ ಯೋಚನೆ ಎಲ್ಲರಲ್ಲೂ ಇರುತ್ತದೆ. ಮಾಡುವ ಕೆಲಸಕ್ಕೆ ಸರಿಯಾಗಿ ಮತ್ತು ಉತ್ತಮವಾದ ಸಂಬಳ ಸಿಗದೇ ಬಹುತೇಕ ಜನರು ಬಸವಳಿದಿರುತ್ತಾರೆ. ಆದರೂ ಹಣವನ್ನು ಉಳಿಸಲು (Money Savings) ಸಾವಿರ ಸಾವಿರ ರೂಪಾಯಿಗಳ ಅಗತ್ಯವಿಲ್ಲ. ನೀವು ತಿಂಗಳಿಗೆ 1,000 ರೂ.ವರೆಗೆ ಉಳಿಸುವ ಮೂಲಕವೂ ನೀವು ಮಿಲಿಯನೇರ್ ಆಗಬಹುದು! ಆದರೆ ನಿಮ್ಮ ಗಳಿಕೆ ಹೆಚ್ಚಾದಂತೆ ನಿಮ್ಮ ಉಳಿತಾಯದ ಪ್ರಮಾಣವೂ ಹೆಚ್ಕ್ಷಾಗಬೇಕು. ಆಗ ಮಾತ್ರ ನೀವು ಆದಷ್ಟು ಬೇಗ Millionaire ಆಗುವ ಅವಕಾಶವನ್ನು ಹೊಂದಿರುತ್ತೀರಿ. ಇದಕ್ಕಾಗಿ ಮ್ಯೂಚುಯಲ್ ಫಂಡ್ (Mutual Fund) ಯೋಜನೆಗಳು ಉಪಯುಕ್ತವಾಗಿವೆ. ಅನೇಕ ಮ್ಯೂಚುವಲ್ ಫಂಡ್ ಯೋಜನೆಗಳಿವೆ. ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಉಳಿತಾಯ ಮಾಡುವುದು ಹೇಗೆ? ಇಲ್ಲಿ ಓದಿ ತಿಳಿದುಕೊಳ್ಳಿ.
ಮ್ಯೂಚುವಲ್ ಫಂಡ್ನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಉಳಿತಾಯ ಮಾಡಬಹುದು. ಅಂದರೆ ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತವನ್ನು ಉಳಿಸುವುದು. ಯಾವುದೇ ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ತಿಂಗಳಿಗೆ ರೂ.1,000 ದರದಲ್ಲಿ ದೀರ್ಘಾವಧಿಯ ಉಳಿತಾಯವು ಉತ್ತಮ ಆದಾಯವನ್ನು ತರುತ್ತದೆ.
ಮ್ಯೂಚುವಲ್ ಫಂಡ್ಗಳು ವರ್ಷಕ್ಕೆ ಸರಾಸರಿ ಶೇ.15 ಗಳಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಈ ಲೆಕ್ಕದಲ್ಲಿ 30 ವರ್ಷಗಳವರೆಗೆ ತಿಂಗಳಿಗೆ ರೂ.1,000 ಉಳಿಸಿದರೆ ರೂ.70 ಲಕ್ಷಕ್ಕೂ ಅಧಿಕ ಆದಾಯ ಸಿಗುತ್ತದೆ.
ಮ್ಯೂಚುವಲ್ ಫಂಡ್ ಸ್ಟೆಪ್ ಅಪ್ ಎಸ್ಐಪಿ ಮ್ಯೂಚುವಲ್ ಫಂಡ್ ಕಂಪನಿಗಳು ಸ್ಟೆಪ್ ಅಪ್ ಎಸ್ಐಪಿ ಎಂಬ ವಿಶಿಷ್ಟ ಫೀಚರ್ಗಳನ್ನು ನೀಡುತ್ತವೆ. ಸ್ಟೆಪ್ ಅಪ್ ಎಂದರೆ ಒಂದು ವರ್ಷದ ನಂತರ ನೀವು ನಿಮ್ಮ ಉಳಿತಾಯವನ್ನು ನಿರ್ದಿಷ್ಟ ಶೇಕಡಾವಾರು ಹೆಚ್ಚಿಸಬೇಕು. ಉದಾಹರಣೆಗೆ ನೀವು ಮೊದಲ ವರ್ಷಕ್ಕೆ ತಿಂಗಳಿಗೆ ರೂ 1,000 ಉಳಿಸಲು ಬಯಸಿದರೆ ನೀವು ಪ್ರತಿ ವರ್ಷ 5 ಶೇಕಡಾ ಸ್ಟೆಪ್-ಅಪ್ ಅನ್ನು ಆಯ್ಕೆ ಮಾಡಬಹುದು.
5% ಸ್ಟೆಪ್ ಅಪ್ ಆಯ್ಕೆಯೊಂದಿಗೆ, ಎರಡನೇ ವರ್ಷಕ್ಕೆ ನಿಮ್ಮ ಉಳಿತಾಯವು ಸುಮಾರು 1,050 ರೂ. ಆಗಿರಲಿದೆ. ನೀವು ಶೇಕಡಾ 10 ಸ್ಟೆಪ್-ಅಪ್ ಆಯ್ಕೆಯನ್ನು ಆರಿಸಿಕೊಂಡರೆ ನೀವು ಎರಡನೇ ವರ್ಷಕ್ಕೆ ತಿಂಗಳಿಗೆ 1,100 ರೂ. ಆಗಿರಲಿದೆ.
ಸ್ಟೆಪ್ ಅಪ್ ಎಸ್ಐಪಿ ಆಯ್ಕೆಯೊಂದಿಗೆ ಮಿಲಿಯನೇರ್ ಆಗುವುದು ಹೇಗೆ ಎಂದು ತಿಳಿಯೋಣ. ನೀವು ಮೊದಲ ವರ್ಷದಲ್ಲಿ ರೂ. 1,000 ನೊಂದಿಗೆ ಮ್ಯೂಚುವಲ್ ಫಂಡ್ ಎಸ್ಐಪಿ ಅನ್ನು ಪ್ರಾರಂಭಿಸಬೇಕು.
1 ಕೋಟಿಗೂ ಹೆಚ್ಚು ಆದಾಯ! ಶೇಕಡಾ 10 ರಷ್ಟು ಸ್ಟೆಪ್ ಅಪ್ ಎಸ್ಐಪಿ ಅನ್ನು ಆಯ್ಕೆ ಮಾಡಬೇಕು. ಮ್ಯೂಚುವಲ್ ಫಂಡ್ ರಿಟರ್ನ್ಸ್ ಶೇಕಡಾ 15 ರಷ್ಟು ಬರುತ್ತದೆ ಎಂದು ಭಾವಿಸಿದರೆ ನೀವು 28 ವರ್ಷಗಳಲ್ಲಿ 1 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ಪಡೆಯಬಹುದು. ನೀವು ಇದೇ ರೀತಿಯಲ್ಲಿ 30 ವರ್ಷಗಳವರೆಗೆ ಉಳಿಸಿದರೆ ನೀವು 1,30,00,000 ರೂಪಾಯಿಗಳನ್ನು ಜೇಬಿಗಿಳಿಸಬಹುದು.
ಹೆಚ್ಚಿನ ಜನರು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುತ್ತಾರೆ ಆದರೆ ಕೆಲವರು ಸ್ಟೆಪ್ ಅಪ್ ಜಿಪ್ ಆಯ್ಕೆಯನ್ನು ಆರಿಸಿಕೊಳ್ಳುತ್ತಾರೆ. ಭವಿಷ್ಯದಲ್ಲಿ ನಿಮ್ಮ ಗಳಿಕೆಯು ಹೇಗಾದರೂ ಹೆಚ್ಚಾಗುವುದರಿಂದ ನೀವು ಸ್ಟೆಪ್ ಅಪ್ ಜಿಪ್ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇದು ದೀರ್ಘಾವಧಿಯಲ್ಲಿ ನಿಮಗೆ ಉತ್ತಮ ಆದಾಯವನ್ನು ನೀಡುತ್ತದೆ.
ಹಕ್ಕುತ್ಯಾಗ: ನೆನಪಿಡಿ, ಇದು ಹಣ ಉಳಿತಾಯ ಮತ್ತು ಹಣ ಹೂಡಿಕೆಯ ಸಲಹೆ ಮಾತ್ರವೇ ಆಗಿದ್ದು ಹಣ ಹೂಡಿಕೆ ಮಾಡುವ ಮುನ್ನ ನಿಮಗೆ ಪರಿಚಿತರಾದ ಪರಿಣಿತರಿಂದ ಸಲಹೆ ಸ್ವೀಕರಿಸಬೇಕು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ