ಶಾಶ್ವತ ಖಾತೆ ಸಂಖ್ಯೆ (PAN) ಎಂಬುದು ತೆರಿಗೆ ಪಾವತಿಸುವ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ನೀಡಲಾಗುವ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಯಾವುದೇ ರೀತಿಯ ಹಣಕಾಸಿನ (Money) ವಹಿವಾಟಿನಲ್ಲಿ ಪಾನ್ ಮಹತ್ತರ ಪಾತ್ರ ವಹಿಸುತ್ತದೆ. ವಯಸ್ಕರು ಮಾತ್ರವಲ್ಲದೆ ಅಪ್ರಾಪ್ತರು ಕೂಡ ಪಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಿದ್ದರೆ ಅಪ್ಲೈ ಮಾಡುವುದು ಹೇಗೆ? ಯಾವ್ಯಾವ ದಾಖಲೆಗಳು ಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಐಟಿಆರ್ ಸಲ್ಲಿಸಲು ಪಾನ್ ಕಾರ್ಡ್ ಅಗತ್ಯ:
ಜನರು ಮಾತ್ರವಲ್ಲದೆ ನಿಗಮಗಳು, ಸಂಸ್ಥೆಗಳು, ಸ್ಥಳೀಯ ಸರಕಾರಗಳೂ ಸೇರಿದಂತೆ ತೆರಿಗೆ ಪಾವತಿಸುವ ಪ್ರತಿಯೊಬ್ಬರಿಗೂ ಪಾನ್ ಕಾರ್ಡ್ ಅವಶ್ಯವಾಗಿದೆ. ಭಾರತದಲ್ಲಿ ಆದಾಯ ತೆರಿಗೆ ಫೈಲ್ ಮಾಡಲು ವಯಸ್ಸಿನ ಯಾವುದೇ ಮಿತಿಯಿಲ್ಲ.
ಹಾಗಾಗಿ ಅಪ್ರಾಪ್ತರು ಕೂಡ ತಮ್ಮ ಮಾಸಿಕ ಆದಾಯ ರೂ 15,000 ಮೀರಿದರೆ ಐಟಿಆರ್ ಅನ್ನು ಸಲ್ಲಿಸಬಹುದಾಗಿದೆ. ಐಟಿಆರ್ ಸಲ್ಲಿಸಲು ಪಾನ್ ಕಾರ್ಡ್ ಹೊಂದಿರುವುದು ಮುಖ್ಯವಾಗಿದೆ. ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಪಡೆಯಲು ಕನಿಷ್ಠ ವಯಸ್ಸಿನ ಮಿತಿಯನ್ನು ನಿಗದಿಪಡಿಸಿಲ್ಲ.
ಅಪ್ರಾಪ್ತರಿಗೆ ಪಾನ್ ಕಾರ್ಡ್ ಯಾವಾಗ ಅಗತ್ಯ?:
ಪೋಷಕರು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡಿದಾಗ ಮಗುವನ್ನು ನಾಮಿನಿ ಮಾಡಲು ಉದ್ದೇಶಿಸಿದಾಗ ಪಾನ್ ಕಾರ್ಡ್ ಅಗತ್ಯವಿದೆ. ಪೋಷಕರು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡಿದಾಗ ಪಾನ್ ಕಾರ್ಡ್ ಅಗತ್ಯವಿದೆ. ಮಗುವಿಗೆ ಬ್ಯಾಂಕ್ ಖಾತೆ ತೆರೆಯಬೇಕಾದಾಗ ಅಥವಾ ಅಪ್ರಾಪ್ತ ಮಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ತೆರೆಯವ ಸಂದರ್ಭದಲ್ಲಿ ಪಾನ್ ಕಾರ್ಡ್ ಅಗತ್ಯವಿದೆ.
ಅಪ್ರಾಪ್ತರು ಪಾನ್ ಕಾರ್ಡ್ಗೆ ಅಪ್ಲೈ ಮಾಡುವುದು ಹೇಗೆ?:
ಮಗುವಿನ ಪೋಷಕರು ಮಗುವಿನ ಪರವಾಗಿ ಅಪ್ರಾಪ್ತ ವಯಸ್ಕರ ಪಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು. ಆ ಸಂದರ್ಭದಲ್ಲಿ ಮಗುವಿನ ಪರವಾಗಿ ಐಟಿಆರ್ ಸಲ್ಲಿಸಲು ಪೋಷಕರು ಜವಾಬ್ದಾರರಾಗುತ್ತಾರೆ.
ಈ ಪಾನ್ಕಾರ್ಡ್ನ ವಿಶೇಷತೆ ಎಂದರೆ ಇದು ಅಪ್ರಾಪ್ತರ ಸಹಿ ಹಾಗೂ ಫೋಟೋವನ್ನು ಹೊಂದಿರುವುದಿಲ್ಲ. ಹಾಗಾಗಿ ಇದನ್ನು ಗುರುತಿನ ರೂಪದಲ್ಲಿ ಬಳಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಮಗುವಿಗೆ 18 ವರ್ಷ ತುಂಬಿದ ನಂತರ ಪಾನ್ ಕಾರ್ಡ್ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: PM Kisan: ಪಿಎಂ ಕಿಸಾನ್ ರೈತರೇ ಇತ್ತ ಗಮನಿಸಿ, ಆ ದಿನ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ!
ಆನ್ಲೈನ್ನಲ್ಲಿ ಪಾನ್ ಕಾರ್ಡ್ಗೆ ಅಪ್ಲೈ ಮಾಡುವುದು ಹೇಗೆ?:
ಹಂತ 1: NSDL ವೆಬ್ಸೈಟ್ಗೆ ಭೇಟಿ ನೀಡಿ
ಹಂತ 2 : ಫಾರ್ಮ್ 49 ಎ ಅನ್ನು ತುಂಬುವ ಮೊದಲು ಜಾಗರೂಕರಾಗಿ ನಿರ್ದೇಶನಗಳನ್ನು ಓದಿ. ಅಪ್ಲಿಕೇಶನ್ ಪ್ರಕಾರವನ್ನು 'ಹೊಸ ಪ್ಯಾನ್ - ಭಾರತೀಯ ನಾಗರಿಕ (ಫಾರ್ಮ್ 49A)' ಮತ್ತು ವರ್ಗವನ್ನು 'ವೈಯಕ್ತಿಕ' ಎಂದು ಆಯ್ಕೆಮಾಡಿ.
ಹಂತ 3: ಅಪ್ರಾಪ್ತರ ಜನನ ಪ್ರಮಾಣ ಪತ್ರ, ಇತರ ಅಗತ್ಯ ದಾಖಲೆಗಳು ಅಂದರೆ ಪೋಷಕರ ಚಿತ್ರಗಳನ್ನೊಳಗೊಂಡ ದಾಖಲೆಗಳನ್ನು ಅಪ್ಲೋಡ್ ಮಾಡಿ. ಪೋಷಕರ ಸಹಿಯನ್ನು ಅಪ್ಲೋಡ್ ಮಾಡಬೇಕು
ಹಂತ 4: ರೂ 107 ಅನ್ನು ಪಾವತಿಸುವ ಮೂಲಕ ಪ್ರಕ್ರಿಯೆಯನ್ನು ಅರ್ಜಿದಾರರು ಪೂರ್ಣಗೊಳಿಸಬೇಕು. ಈ ಸಮಯದಲ್ಲಿ ದೃಢೀಕರಣ ಸಂಖ್ಯೆಯನ್ನು ನೀಡಲಾಗುತ್ತದೆ.
ಇದರಿಂದ ಅಪ್ಲಿಕೇಶನ್ನ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ. ಪರಿಶೀಲನೆ ಯಶಸ್ವಿಯಾದ ನಂತರ 15 ದಿನಗಳ ಒಳಗಾಗಿ ಪಾನ್ ಕಾರ್ಡ್ ಅನ್ನು ವಿತರಿಸಲಾಗುತ್ತದೆ.
ಆಫ್ಲೈನ್ನಲ್ಲಿ ಪಾನ್ಕಾರ್ಡ್ಗೆ ಅಪ್ಲೈ ಮಾಡುವುದು ಹೇಗೆ?
ಹಂತ 1: ಅಧಿಕೃತ NSDL ವೆಬ್ಸೈಟ್ನಿಂದ 49 ಎ ಡೌನ್ಲೋಡ್ ಮಾಡಿ
ಹಂತ 2: ಸೂಚನೆಗಳನ್ನು ಓದಿಕೊಳ್ಳಿ
ಹಂತ 3: ಸೂಚನೆಗಳಿಗೆ ಅನುಸಾರವಾಗಿ ವಿವರಗಳನ್ನು ತುಂಬಿ
ಹಂತ 4: ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ
ಹಂತ 5: ಮಗುವಿನ ಫೋಟೋ ಲಗತ್ತಿಸಿ
ಹಂತ 6: ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ UTIITSL/NSDL ಕಚೇರಿ ಅಥವಾ TIN ಸೌಲಭ್ಯ ಕೇಂದ್ರಕ್ಕೆ ಶುಲ್ಕದೊಂದಿಗೆ ಸಲ್ಲಿಸಿ.
ಹಂತ 7: ಅರ್ಜಿಯನ್ನು ಸಲ್ಲಿಸಿದ ನಂತರ ಸ್ವೀಕೃತಿ ಸಂಖ್ಯೆಯನ್ನು ನೀಡಲಾಗುತ್ತದೆ. ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಸ್ವೀಕೃತಿ ಸಂಖ್ಯೆಯನ್ನು ಬಳಸಬಹುದು.
ಹಂತ 8: ಅರ್ಜಿಯ ಯಶಸ್ವಿ ಪರಿಶೀಲನೆಯ ನಂತರ, ಪ್ಯಾನ್ ಕಾರ್ಡ್ ಅನ್ನು ನಮೂದಿಸಿದ ವಿಳಾಸಕ್ಕೆ ಕಳುಹಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ