• Home
  • »
  • News
  • »
  • business
  • »
  • Cryptocurrency: ಅಬ್ಬಬ್ಬಾ ಕ್ರಿಪ್ಟೋಕರೆನ್ಸಿಯಿಂದ ಭಾರತೀಯರಿಗೆ ಈ ಲಾಭವೂ ಇದ್ಯಾ?

Cryptocurrency: ಅಬ್ಬಬ್ಬಾ ಕ್ರಿಪ್ಟೋಕರೆನ್ಸಿಯಿಂದ ಭಾರತೀಯರಿಗೆ ಈ ಲಾಭವೂ ಇದ್ಯಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸರ್ಕಾರ ಕಂಪನಿಗಳನ್ನು ಹೊರತುಪಡಿಸಿದರೆ ಭಾರತದಲ್ಲಿ ಉದ್ಯೋಗಾವಕಾಶಗಳಿಗೆ ಕೊಡುಗೆ ನೀಡಲು ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಇಲ್ಲಿ ಕೆಲ ಮಾಹಿತಿಗಳನ್ನು ತಿಳಿಯೋಣ.

  • Share this:

2020ರ ನಂತರದ ಒಂದೆರೆಡು ವರ್ಷಗಳಲ್ಲಿ ಕೊರೋನಾ, ಲಾಕ್‌ ಡೌನ್ ನಂತಹ ಪರಿಸ್ಥಿತಿಯಿಂದಾಗಿ ಜಗತ್ತಿನ ಎಲ್ಲಾ ದೇಶಗಳು ಕಂಗೆಟ್ಟು ಹೋಗಿದ್ದವು. ವ್ಯಪಾರ-ವಹಿವಾಟು, ರಫ್ತು-ಆಮದು, ಪ್ರವಾಸೋದ್ಯಮ (Tourism) ಹೀಗೆ ಎಲ್ಲಾ ಕ್ಷೇತ್ರದಲ್ಲೂ ಅಕ್ಷರಶಃ ಕುಸಿತ ಕಂಡಿದ್ದವು. ಇದೆಲ್ಲಾವುಗಳ ಬಳಿಕ ಹಲವು ದೇಶಗಳು ಆರ್ಥಿಕವಾಗಿ ಚೇತರಿಕೆ ಕಾಣುತ್ತಿವೆ. ಭಾರತ ಕೂಡ ಇದರ ಹೊರತಾಗಿಲ್ಲ, ಉದ್ಯಮಗಳು (Business) ನಿಧಾನವಾಗಿ ನೆಲೆ ಕಾಣುತ್ತಿವೆ ಎನ್ನಬಹುದು. ಉದ್ಯಮ ಸುಧಾರಿಸುತ್ತಿದ್ದಂತೆ ವಿವಿಧ ವಿಭಾಗಗಳಲ್ಲಿನ ಕಾರ್ಮಿಕರ ಬೇಡಿಕೆಯಲ್ಲಿ ತ್ವರಿತ ಏರಿಕೆ ಕಂಡುಬಂದಿದೆ. ಭಾರತದ (India) ದೊಡ್ಡ ಸಮಸ್ಯೆಗಳಲ್ಲಿ ಒಂದು ನಿರುದ್ಯೋಗ. ಎಲ್ಲರಿಗೂ ಉದ್ಯೋಗ (Employment) ಕಲ್ಪಿಸುವ ದೃಷ್ಟಿಯಿಂದ ಕೇಂದ್ರ ಕೂಡ ಹಲವಾರು ಕ್ರಮಗಳನ್ನು ಘೋಷಿಸಿದೆ.


ಭಾರತಕ್ಕೆ ಉದ್ಯೋಗದಾತವಾಗಿದೆಯೇ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ?
ಇತ್ತೀಚೆಗೆ 2024 ರ ಸಾರ್ವತ್ರಿಕ ಚುನಾವಣೆಯ ಮೊದಲು 1 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ. ಹಾಗಾದರೆ ಸರ್ಕಾರ, ಕಂಪನಿಗಳನ್ನು ಹೊರತುಪಡಿಸಿದರೆ ಭಾರತದಲ್ಲಿ ಉದ್ಯೋಗಾವಕಾಶಗಳಿಗೆ ಕೊಡುಗೆ ನೀಡಲು ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಇಲ್ಲಿ ಕೆಲ ಮಾಹಿತಿಗಳನ್ನು ತಿಳಿಯೋಣ.


ಪಕ್ವವಾಗುತ್ತಿದೆ ಡಿಜಿಟಲ್‌ ಕರೆನ್ಸಿ ಉದ್ಯಮ
ಪ್ರಸ್ತುತ ಕ್ರಿಪ್ಟೋಕರೆನ್ಸಿಗಳು ಮತ್ತು ಬ್ಲಾಕ್‌ಚೈನ್ ಉದ್ಯಮವು ಜಾಗತಿಕವಾಗಿ ವ್ಯಾಪಕವಾದ ಅಳವಡಿಕೆಯ ಹಿನ್ನೆಲೆಯಲ್ಲಿ ಉದ್ಯಮ ಸಾಕಷ್ಟು ಪ್ರಚಲಿತವಾಗಿದೆ. ಹಲವು ವಿವಾದಗಳಿಂದ ತುಂಬಿರುವ ಈ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಪಕ್ವವಾಗುತ್ತಿರುವ ಉದ್ಯಮವಾಗಿ ಬೆಳೆಯುತ್ತಿದೆ, ದೊಡ್ಡ ಹೂಡಿಕೆದಾರರು ತಮ್ಮ ಹಣವನ್ನು ಇಲ್ಲಿ ಹೂಡಿಕೆ ಮಾಡುತ್ತಿರುವುದರಿಂದ, ಈ ಮಾರುಕಟ್ಟೆ ನಿರಂತರವಾಗಿ ಅಭಿವೃದ್ಧಿ ಕಾಣುತ್ತಿದೆ.


ಇದನ್ನೂ ಓದಿ:  Train Ticket: ಗೂಗಲ್​ನಿಂದ ಹೊಸ ಫೀಚರ್​, ಸರ್ಚ್ ಪೇಜ್​ನಿಂದಲೇ ಟ್ರೈನ್​ ಟಿಕೆಟ್ ಬುಕ್​ ಮಾಡ್ಬಹುದು!


ಡಿಜಿಟಲ್‌ ಕರೆನ್ಸಿಯ ಈ ಬೆಳವಣಿಗೆಗೆ ಪುರಾವೆ ಎನ್ನುವಂತೆ FICCI ಲೀಡ್ಸ್ 2022 ರ 3 ನೇ ಆವೃತ್ತಿಯಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಕೆಲವು ವರ್ಷಗಳಲ್ಲಿ ಬ್ಲಾಕ್‌ಚೈನ್ ತಂತ್ರಜ್ಞಾನದ ಬಳಕೆಯು ಸುಮಾರು 46% ರಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.


ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕ್ರಿಪ್ಟೋ ಮಾರುಕಟ್ಟೆ ಹೇಗೆ ಸಹಾಯ ಮಾಡುತ್ತದೆ?
ಮೊದಲಿಗೆ ಕ್ರಿಪ್ಟೋ ಇದೊಂದು ಕರೆನ್ಸಿ ನೋಟು ಇದ್ದ ಹಾಗೆ. ಆದರೆ, ಕಾಗದದ ಬದಲು ಕಂಪ್ಯೂಟರಿನಲ್ಲಿರುತ್ತದೆ. ಅಂದರೆ ಇದನ್ನು ನೀವು ಡಿಜಿಟಲ್‌ ಕರೆನ್ಸಿ ಎಂದು ಅರ್ಥೈಸಿಕೊಳ್ಳಬಹುದು. ಯಾರು, ಎಲ್ಲಿ, ಎಷ್ಟನ್ನು ಬೇಕಾದರೂ ಖರೀದಿ, ಮಾರಾಟ ಮಾಡಬಹುದು. ಇದನ್ನು ನಿಯಂತ್ರಿಸುವವರಿಲ್ಲದ್ದರಿಂದ ಅಕ್ರಮ, ಸಕ್ರಮ ಎರಡಕ್ಕೂ ಬಳಕೆಯಾಗುತ್ತಿದೆ.


ಕ್ರಿಪ್ಟೋ ಕರೆನ್ಸಿ ಉದ್ಯಮದಲ್ಲಿ ಹೂಡಿಕೆ ಮಾಡಿ ಲಾಭ ಪಡೆಯುವವರು ಒಂದು ಕಡೆಯಾದರೆ, ಈ ಉದ್ಯಮದಲ್ಲಿ ಉದ್ಯೋಗಗಳನ್ನು ಹುಡುಕುವವರ ಸಂಖ್ಯೆಯೂ ಹೆಚ್ಚಿದೆ. ಭಾರತದಲ್ಲಿ ಕ್ರಿಪ್ಟೋ ಕೂಡ ಹಲವಾರು ಉದ್ಯೋಗವಕಾಶಗಳಿಗೆ ತೆರೆದುಕೊಳ್ಳುತ್ತಿದ್ದು, ಉದ್ಯೋಗಾಂಕ್ಷಿಗಳಿಗೆ ಉತ್ತಮ ಅವಕಾಶ ಎನ್ನಬಹುದು.


ಭಾರತದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕ್ರಿಪ್ಟೋ ಮಾರುಕಟ್ಟೆ ಸಹಾಯ ಮಾಡುತ್ತದೆಯೇ ಎಂಬ ವಿಚಾರವಾಗಿ ಹಲವು ಮಾರುಕಟ್ಟೆ ತಜ್ಞರು ಹೌದು ಎಂಬುವ ಉತ್ತರವನ್ನೇ ನೀಡಿದ್ದಾರೆ. ಹಾಗಾದರೆ ತಜ್ಞರ ಅಭಿಪ್ರಾಯಗಳು ಏನೆಂದು ಇಲ್ಲಿ ತಿಳಿಯಿರಿ.


ವರ್ಷದಿಂದ ವರ್ಷಕ್ಕೆ ಉದ್ಯೋಗ ಸೃಷ್ಟಿಯಲ್ಲಿ 394% ಹೆಚ್ಚಳ
ವಝಿರ್‌ಎಕ್ಸ್‌ನ ಉಪಾಧ್ಯಕ್ಷ ರಾಜಗೋಪಾಲ್ ಮೆನನ್, ಲಿಂಕ್ಡ್‌ಇನ್ ನಡೆಸಿದ ಇತ್ತೀಚಿನ ಅಧ್ಯಯನವನ್ನು ಉಲ್ಲೇಖಿಸಿ, "ಕ್ರಿಪ್ಟೋಕರೆನ್ಸಿ," "ಬಿಟ್‌ಕಾಯಿನ್" ಅಥವಾ "ಬ್ಲಾಕ್‌ಚೇನ್" ಹೊಂದಿರುವ ಉದ್ಯೋಗ ಪೋಸ್ಟಿಂಗ್‌ಗಳು 2020 ರಿಂದ 2021 ರವರೆಗೆ ವರ್ಷದಿಂದ ವರ್ಷಕ್ಕೆ 394% ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಅಂದರೆ ಸಹಜವಾಗಿಯೇ ಉದ್ಯೋಗ ಸೃಷ್ಟಿಯ ಸಾಧ್ಯತೆಯು ಮೇಲ್ನೋಟಕ್ಕೆ ಕಂಡು ಬರುತ್ತಿದೆ.


ಇದನ್ನೂ ಓದಿ: Pension Scheme: ಪ್ರತಿ ತಿಂಗಳು ₹ 18,500 ಪೆನ್ಶನ್ ಪಕ್ಕಾ! ಏನಿದು ಭರ್ಜರಿಯಾಗಿರೋ ಹೊಸ ಸ್ಕೀಮ್?


ನ್ಯೂಯಾರ್ಕ್ ಮೂಲದ ಹಣಕಾಸು ಸೇವಾ ಸಂಸ್ಥೆಯಾದ ಗ್ಯಾಲಕ್ಸಿ ಡಿಜಿಟಲ್ ರಿಸರ್ಚ್‌ನ ವರದಿಯ ಪ್ರಕಾರ, ವೆಂಚರ್ ಕ್ಯಾಪಿಟಲಿಸ್ಟ್‌ಗಳು (ವಿಸಿಗಳು) 2022 ರ ಮೊದಲ ತ್ರೈಮಾಸಿಕದಲ್ಲಿ ಕ್ರಿಪ್ಟೋ ಸ್ಟಾರ್ಟ್‌ಅಪ್‌ಗಳಲ್ಲಿ $10 ಶತಕೋಟಿಗಿಂತ ಹೆಚ್ಚು ಹಣವನ್ನು ಪಡೆದುಕೊಂಡಿದ್ದಾರೆ. ಸರಿಯಾದ ನೀತಿಗಳೊಂದಿಗೆ, ಭಾರತೀಯ ವಾಣಿಜ್ಯೋದ್ಯಮಿಗಳು ಮುಂಬೈ, ಬೆಂಗಳೂರು ಮತ್ತು ದೆಹಲಿಯಲ್ಲಿ ಮುಂದಿನ ಕೆಲವು ಕ್ರಿಪ್ಟೋ ಯುನಿಕಾರ್ನ್‌ಗಳನ್ನು ರಚಿಸಬಹುದು ಎಂದು ಮೆನನ್ ಹೇಳಿದರು.


ಎನ್‌ಎಫ್‌ಟಿ, ಬ್ಲಾಕ್‌ಚೈನ್ ಗೇಮಿಂಗ್, ಲಾಜಿಸ್ಟಿಕ್ಸ್ ಅಡಿಯಲ್ಲಿ ಉದ್ಯೋಗ ಸೃಷ್ಟಿ
WazirX VP ಪ್ರಕಾರ, Web3 ಈ ರಚನೆಕಾರರಿಗೆ ಇದು ಹಿಂದೆಂದಿಗಿಂತಲೂ ಹಣಗಳಿಸಲು ಮತ್ತು ಉದ್ಯೋಗವಕಾಶಕ್ಕೆ ಅನುವು ಮಾಡಿಕೊಡುತ್ತದೆ. ಇನ್ನೂ ಬ್ಲಾಕ್‌ಚೈನ್ ತಂತ್ರಜ್ಞಾನವು ಈಗಾಗಲೇ ಕ್ರಿಪ್ಟೋ, ಎನ್‌ಎಫ್‌ಟಿ, ಬ್ಲಾಕ್‌ಚೈನ್ ಗೇಮಿಂಗ್, ಲಾಜಿಸ್ಟಿಕ್ಸ್ ಇತ್ಯಾದಿಗಳ ಅಡಿಯಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.


ಅಮನ್ಜೋತ್ ಮಲ್ಹೋತ್ರಾ, ಕಂಟ್ರಿ ಹೆಡ್ - ಇಂಡಿಯಾ ಮಾತನಾಡಿ ಕ್ರಿಪ್ಟೋಕರೆನ್ಸಿಗಳ ಬಳಕೆಯು ಕೇಂದ್ರೀಯ ನಿಯಂತ್ರಿತ ಮತ್ತು ಲಾಭ-ಚಾಲಿತ ವಿಧಾನದ ಮೇಲೆ ಉದ್ಯೋಗ ಸೃಷ್ಟಿಗೆ ವಿಕೇಂದ್ರೀಕೃತ ಮತ್ತು ಸಾಮುದಾಯಿಕ ವಿಧಾನವನ್ನು ಒದಗಿಸುತ್ತದೆ ಎಂದಿದ್ದಾರೆ. ಕ್ರಿಪ್ಟೋಕರೆನ್ಸಿಯು ಆಸ್ತಿ ವರ್ಗದ ಒಂದು ರೂಪವಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಂತೆ ತೋರುತ್ತಿದೆ ಮತ್ತು ಅದರ ಆರ್ಥಿಕ ಪ್ರಭಾವವು ಜಾಗತಿಕವಾಗಿ ಕಂಡುಬರುವ ನಿರೀಕ್ಷೆಯಿದೆ ಎಂದು ಮಲ್ಹೋತ್ರಾ ಅಭಿಪ್ರಾಯ ಪಟ್ಟಿದ್ದಾರೆ.


ಕ್ರಿಪ್ಟೋಕರೆನ್ಸಿ ಅಥವಾ ಬ್ಲಾಕ್‌ಚೈನ್‌ನಂತಹವುಗಳಿಗೆ ಸಂಬಂಧಿಸಿದ ಉದ್ಯೋಗ ಪೋಸ್ಟಿಂಗ್‌ಗಳು ನವೆಂಬರ್ 2015 ರಿಂದ ಇಲ್ಲಿಯವರೆಗೆ 600% ಕ್ಕಿಂತ ಹೆಚ್ಚಿವೆ, ಉದ್ಯೋಗಗಳಿಗಾಗಿ ಹುಡುಕಾಟಗಳಲ್ಲಿ 1,000% ಬೆಳವಣಿಗೆಯೊಂದಿಗೆ ಉದ್ಯೋಗ ಪೋಸ್ಟ್ ಮಾಡುವ ವೇದಿಕೆಗಳ ಡೇಟಾವನ್ನು ಮಲ್ಹೋತ್ರಾ ಉಲ್ಲೇಖಿಸಿದ್ದಾರೆ.


ಹಲವು ವಿಭಾಗಗಳಲ್ಲಿವೆ ಉದ್ಯೋಗಾವಕಾಶಗಳು
ಕ್ರಿಪ್ಟೋಕರೆನ್ಸಿ ಉದ್ಯಮದಲ್ಲಿ ಉದ್ಯೋಗ ವಿಷಯಕ್ಕೆ ಬಂದರೆ ಕೇವಲ ತಾಂತ್ರಿಕ ಉದ್ಯಮ ಮಾತ್ರವಲ್ಲದೇ, ಮಾರಾಟಗಾರರು, ಲೆಕ್ಕಪರಿಶೋಧಕರು, ಸಾರ್ವಜನಿಕ ನೀತಿ ತಜ್ಞರಂತಹ ಉದ್ಯೋಗಳನ್ನು ಇದು ಸೃಷ್ಟಿಸುತ್ತದೆ. ಈ ಬಗ್ಗೆ ಹೆಚ್ಚಿಗೆ ವಿವರಿಸಿದ ಮಲ್ಹೋತ್ರಾ "ಸ್ಮಾರ್ಟ್ ಒಪ್ಪಂದಗಳಂತಹ ವಿಕೇಂದ್ರೀಕೃತ ಪ್ರೋಟೋಕಾಲ್‌ಗಳು ಮತ್ತು ಡ್ಯಾಪ್‌ಗಳ ಬಳಕೆಯು ಬ್ಯಾಂಕಿಂಗ್ ಮತ್ತು ಹಣಕಾಸು, ರಿಯಲ್ ಎಸ್ಟೇಟ್ ಮತ್ತು ಸರ್ಕಾರಿ ಅಧಿಕಾರಿಗಳಂತಹ ಉದ್ಯಮಗಳ ಉದ್ಯೋಗಕ್ಕೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ" ಎಂದರು.


ಮತ್ತೋರ್ವ ತಜ್ಞೆ ಟಕಿಯ ಸಹ-ಸಂಸ್ಥಾಪಕಿ ಸಕಿನಾ ಆರ್ಸಿವಾಲಾ, ಕ್ರಿಪ್ಟೋ ಭವಿಷ್ಯ ಉತ್ತಮವಾಗಿದೆ ಎಂದರು. ಒಂದು ಉದ್ಯಮವಾಗಿ ಕ್ರಿಪ್ಟೋ ಆರಂಭಿಕ ಹಂತದಲ್ಲಿದೆ, ಬೆಳವಣಿಗೆಯ ದರವು ಇನ್ನೂ ಹೆಚ್ಚಾಗಿರುತ್ತದೆ. ಅನಿಶ್ಚಿತತೆಯ ನಡುವೆ, ನಾವೀನ್ಯತೆಗೆ ಇನ್ನೂ ಹೆಚ್ಚಿನ ಅವಕಾಶಗಳಿವೆ. ನುರಿತ ಉದ್ಯೋಗಿಗಳ ವಿಷಯದಲ್ಲಿ ಜಾಗತಿಕ ಕಂಪನಿಗಳಿಗೆ ಭಾರತವು ಉನ್ನತ ಮಾರುಕಟ್ಟೆಯಾಗಿದೆ ಎಂದು ಟಕಿ ಸಹ-ಸಂಸ್ಥಾಪಕಿ ಅಭಿಪ್ರಾಯ ಪಟ್ಟಿದ್ದಾರೆ.


ಇದನ್ನೂ ಓದಿ: Business Idea: ಮಾರುಕಟ್ಟೆಯಲ್ಲಿ ಈ ಔಷಧಿ ಬೆಳೆಗೆ ಫುಲ್ ಡಿಮ್ಯಾಂಡ್, ರೈತರಿಗೆ ಸಿಗುತ್ತೆ ಡಬಲ್​ ಹಣ!


ಇತ್ತೀಚೆಗೆ ಬೆಟರ್‌ಪ್ಲೇಸ್‌ನ ಫ್ರಂಟ್‌ಲೈನ್ ಇಂಡೆಕ್ಸ್ ವರದಿ 2022, ಹಣಕಾಸು ವರ್ಷ 2022 ರಲ್ಲಿ ಮುಂಚೂಣಿಯ ಉದ್ಯಮದಲ್ಲಿ 8 ಮಿಲಿಯನ್‌ಗಿಂತಲೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಬಹಿರಂಗಪಡಿಸಿದೆ. ಕೋವಿಡ್‌ ನಂತರದ ಆರ್ಥಿಕತೆಯಲ್ಲಿ ಚಿಲ್ಲರೆ ಬಳಕೆ ಉತ್ತಮಗೊಂಡಂತೆ, 2022 ರ ಎರಡನೇ ತ್ರೈಮಾಸಿಕದಲ್ಲಿ ಕಾರ್ಮಿಕರ ಬೇಡಿಕೆಯಲ್ಲಿ ಏರಿಕೆ ಕಂಡಿದೆ ಎಂದಿದೆ.

Published by:Ashwini Prabhu
First published: