Millionaire: ಮಿಲಿಯನೇರ್ ಆಗಲು ತಿಂಗಳಿಗೆ ಎಷ್ಟು ಹಣ ಉಳಿತಾಯ ಮಾಡಬೇಕು ಗೊತ್ತೇ?

ನೀವು ನಿಮ್ಮ ಕರಿಯರ್ ಪ್ರಾರಂಭಿಸಿದಾಗಿನಿಂದ ಹಿಡಿದು 40ರ ಪ್ರಾಯದಲ್ಲಿರುವವರೆಗೂ ನಿರ್ದಿಷ್ಟ ಮೊತ್ತದಷ್ಟು ಹಣವನ್ನು ಮಾಸಿಕವಾಗಿ ಉಳಿತಾಯ ಮಾಡುತ್ತ ಹೋದರೆ ಮಿಲಿಯನೇರ್ ಆಗುವುದು ಬಹಳ ಸುಲಭವೇ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸ್ವಲ್ಪ ಸಮಯದ ಹಿಂದಷ್ಟೇ ನಾವು ಆಗಾಗ ಸಿರಿವಂತರನ್ನು (Rich People) ನೋಡಿದಾಗ ಇವರೇನು, ಬಿಡಪ್ಪಾ.. ಲಕ್ಷಾಧೀಶ್ವರರು, ಕೋಟ್ಯಧೀಶ್ವರರು ಎಂದು ಹೇಳುತ್ತಿದ್ದುದು ನೆನಪಿರಬಹುದು. ಆದರೆ ಕಾಲ ಬದಲಾದಂತೆ ನಾವೂ ಸಹ ನಮ್ಮ ಪದಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇವೆ. ಅಂದರೆ ಈಗ ನಾವು ಹೆಚ್ಚಾಗಿ ಇವನೇನು ಬಿಡಪ್ಪಾ.. ಮಿಲಿಯನೇರ್ (Millionaires) ಎಂದು ಸಂಭೋದಿಸುತ್ತೇವೆ. ಅಮೆರಿಕದಲ್ಲಿ ಇತ್ತೀಚಿಗೆ ಪ್ರಕಟವಾದ ವರದಿಯೊಂದರ ಪ್ರಕಾರ, ಅಲ್ಲಿ ಈಗ ಮಿಲಿಯನೇರ್ ವ್ಯಕ್ತಿಗಳ ಸಂಖ್ಯೆಯಲ್ಲಿ ಗಣನೀಯವಾದ ಏರಿಕೆಯಾಗಿದೆಯಂತೆ. ಇದೊಂದು ದಾಖಲೆಯ (Record) ಸಂಖ್ಯೆ ಏರಿಕೆ ಎಂದು ಬಣ್ಣಿಸಲಾಗುತ್ತಿದೆ. 2017 ರಲ್ಲಿ ಸ್ಪೆಕ್ಟ್ರೆಮ್ ಗ್ರೂಪ್ ಎಂಬ ಸಂಸ್ಥೆ ಪ್ರಕಟಿಸಿದ್ದ ವರದಿಯನ್ವಯ 2016ರ ತನಕ ಅಮೆರಿಕದಲ್ಲಿ ಮಿಲಿಯನೇರ್‌ಗಳ ಸಂಖ್ಯೆಯೇ 10.8 ಮಿಲಿಯನ್ ಆಗಿದೆಯಂತೆ.

    ಮಿಲಿಯನೇರ್ ಆಗುವುದು ಬಹಳ ಸುಲಭ

    ಒಂದೊಮ್ಮೆ ಮಿಲಿಯನೇರ್‌ ಆಗುವುದು ತುಂಬಾ ದೊಡ್ಡ ಸವಾಲಿನ ವಿಷಯದಂತಿದ್ದುದು ಇದೀಗ ಅಷ್ಟು ದೊಡ್ಡ ಸವಾಲಾಗಿ ಉಳಿದಿಲ್ಲ ಎನ್ನಲಾಗುತ್ತಿದೆ. ಶಿಸ್ತುಬದ್ಧವಾಗಿ ಗಳಿಕೆಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಹಣ ಉಳಿಸುತ್ತ ಹಾಗೂ ಆ ಹಣಕ್ಕೆ ವಿವಿಧ ಬಡ್ಡಿ ದರಗಳನ್ನು ಅನ್ವಯಿಸಿದಾಗ ಕೆಲವೇ ದಶಕಗಳ ಸಮಯದಲ್ಲಿ ಮಿಲಿಯನೇರ್ ಆಗಬಹುದಾಗಿದೆ. ನೀವು ನಿಮ್ಮ ಕರಿಯರ್ ಪ್ರಾರಂಭಿಸಿದಾಗಿನಿಂದ ಹಿಡಿದು 40ರ ಪ್ರಾಯದಲ್ಲಿರುವವರೆಗೂ ನಿರ್ದಿಷ್ಟ ಮೊತ್ತದಷ್ಟು ಹಣವನ್ನು ಮಾಸಿಕವಾಗಿ ಉಳಿತಾಯ ಮಾಡುತ್ತ ಹೋದರೆ ಮಿಲಿಯನೇರ್ ಆಗುವುದು ಬಹಳ ಸುಲಭವೇ ಆಗಿದೆ.

    ಇದನ್ನೂ ಓದಿ: ಯಾವಾಗಲು ಕೈಯಲ್ಲಿ ದುಡ್ಡಿರಬೇಕು.. ಖರ್ಚು ಮಾಡಲು freedom ಇರಬೇಕು ಎಂದರೆ ಇದನ್ನು ಮಾಡಿ

    ಈ ನಿಟ್ಟಿನಲ್ಲಿ ಸಿಎನ್‍ಬಿಸಿ ಮೇಕ್ ಇಟ್ ನೀವು ಮಾಸಿಕವಾಗಿ ಯಾವ ಯಾವ ಬಡ್ಡಿದರಗಳಲ್ಲಿ ಎಷ್ಟೆಷ್ಟು ಹಣ ಉಳಿತಾಯ ಮಾಡಿದರೆ ಮುಂದಿನ 40 ವರ್ಷಗಳಲ್ಲಿ ನಿರಾಯಾಸವಾಗಿ ಮಿಲಿಯನೇರ್‌ ಅಗಬಹುದೆಂದು ಲೆಕ್ಕಾಚಾರ ಹಾಕಿದೆ. ಹಾಗಾದರೆ ಬನ್ನಿ, ಈ ಲೆಕ್ಕಾಚಾರವನ್ನೊಮ್ಮೆ ಗಮನಿಸಿಯೇ ಬಿಡೋಣ.

    ಯಾವುದೇ ಉಳಿತಾಯ ಇಲ್ಲದೆ ಮುಂದಿನ 40 ವರ್ಷಗಳಲ್ಲಿ ಮಿಲಿಯನೇರ್ ಆಗಲು

    4 ಪರ್ಸೆಂಟ್ ರಿಟರ್ನ್ ಬಡ್ಡಿದರದೊಂದಿಗೆ : ಪ್ರತಿ ತಿಂಗಳು ಉಳಿತಾಯ ಮಾಡಬೇಕಾಗಿರುವ ಮೊತ್ತ : 66,816.02 ರೂ.
    6 ಪರ್ಸೆಂಟ್ ರಿಟರ್ನ್ ಬಡ್ಡಿದರದೊಂದಿಗೆ : ಪ್ರತಿ ತಿಂಗಳು ಉಳಿತಾಯ ಮಾಡಬೇಕಾಗಿರುವ ಮೊತ್ತ : 41,025.54 ರೂ.
    8 ಪರ್ಸೆಂಟ್ ರಿಟರ್ನ್ ಬಡ್ಡಿದರದೊಂದಿಗೆ : ಪ್ರತಿ ತಿಂಗಳು ಉಳಿತಾಯ ಮಾಡಬೇಕಾಗಿರುವ ಮೊತ್ತ : 24,508.96 ರೂ.

    3,80,000 ರೂ. ಈಗಾಗಲೇ ಉಳಿತಾಯ ಹೊಂದಿದ್ದು ಮುಂದಿನ 40 ವರ್ಷಗಳಲ್ಲಿ ಮಿಲಿಯನೇರ್ ಆಗಲು

    4 ಪರ್ಸೆಂಟ್ ರಿಟರ್ನ್ ಬಡ್ಡಿದರದೊಂದಿಗೆ : ಪ್ರತಿ ತಿಂಗಳು ಉಳಿತಾಯ ಮಾಡಬೇಕಾಗಿರುವ ಮೊತ್ತ : 65,212.21 ರೂ.
    6 ಪರ್ಸೆಂಟ್ ರಿಟರ್ನ್ ಬಡ್ಡಿದರದೊಂದಿಗೆ : ಪ್ರತಿ ತಿಂಗಳು ಉಳಿತಾಯ ಮಾಡಬೇಕಾಗಿರುವ ಮೊತ್ತ : 38,915.82 ರೂ.
    8 ಪರ್ಸೆಂಟ್ ರಿಟರ್ನ್ ಬಡ್ಡಿದರದೊಂದಿಗೆ : ಪ್ರತಿ ತಿಂಗಳು ಉಳಿತಾಯ ಮಾಡಬೇಕಾಗಿರುವ ಮೊತ್ತ : 21,846.86 ರೂ.

    7,60,000 ರೂ. ಈಗಾಗಲೇ ಉಳಿತಾಯ ಹೊಂದಿದ್ದು ಮುಂದಿನ 40 ವರ್ಷಗಳಲ್ಲಿ ಮಿಲಿಯನೇರ್ ಆಗಲು

    4 ಪರ್ಸೆಂಟ್ ರಿಟರ್ನ್ ಬಡ್ಡಿದರದೊಂದಿಗೆ : ಪ್ರತಿ ತಿಂಗಳು ಉಳಿತಾಯ ಮಾಡಬೇಕಾಗಿರುವ ಮೊತ್ತ : 63,608.40 ರೂ.
    6 ಪರ್ಸೆಂಟ್ ರಿಟರ್ನ್ ಬಡ್ಡಿದರದೊಂದಿಗೆ : ಪ್ರತಿ ತಿಂಗಳು ಉಳಿತಾಯ ಮಾಡಬೇಕಾಗಿರುವ ಮೊತ್ತ : 36,806.11 ರೂ.
    8 ಪರ್ಸೆಂಟ್ ರಿಟರ್ನ್ ಬಡ್ಡಿದರದೊಂದಿಗೆ : ಪ್ರತಿ ತಿಂಗಳು ಉಳಿತಾಯ ಮಾಡಬೇಕಾಗಿರುವ ಮೊತ್ತ : 19,184.77 ರೂ.

    ಇದನ್ನೂ ಓದಿ: Investment: ಭೂಮಿನಾ ಬಂಗಾರನಾ..? ಯಾವುದನ್ನು ಖರೀದಿಸಿದರೆ ಮುಂದೆ ಹೆಚ್ಚು ಲಾಭ ಸಿಗುತ್ತೆ?

    ಈ ಮೇಲಿನ ಲೆಕ್ಕಾಚಾರಗಳು ಸುವ್ಯವಸ್ಥಿತ ಹಾಗೂ ಶಿಸ್ತುಬದ್ಧವಾದ ನಿರ್ದಿಷ್ಟ ಮೊತ್ತವನ್ನು ಮಾಸಿಕವಾಗಿ ಉಳಿತಾಯ ಮಾಡುವ ಮೂಲಕ ತಲುಪಬಹುದಾದ ಗುರಿಯ ಮೊತ್ತವನ್ನು ನೀಡುತ್ತದೆ ಎಂಬುದನ್ನು ಗಮನಿಸಬೇಕು. ಇವು ಯಾವುದೇ ರೀತಿಯ ತುರ್ತು ಪರಿಸ್ಥಿತಿ, ಷೇರು ಮಾರುಕಟ್ಟೆ ಕುಸಿತ ಹಾಗೂ ಇತ್ಯಾದಿ ಅಂಶಗಳನ್ನು ಪರಿಗಣಿಸಿಲ್ಲ.

    ಪ್ರತಿ ತಿಂಗಳು ಇಂತಿಷ್ಟು ಹಣ ಉಳಿಸಿಕೊಂಡು ಹೋಗಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೂ ನೀವು ನಿಮಗೆ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಹಣ ಉಳಿತಾಯ ಮಾಡುತ್ತ ಸಾಗಿದಲ್ಲಿ ದೀರ್ಘಕಾಲದಲ್ಲಿ ಅದು ನಿಮಗೆ ಅತ್ಯುತ್ತಮ ಫಲಿತಾಂಶ ನೀಡಲಿದೆ ಎಂಬುದರಲ್ಲಿ ಸಂಶಯವಿಲ್ಲ. ಈಗಾಗಲೇ ಭಾರತದಲ್ಲಿ ಸರ್ಕಾರದ ವತಿಯಿಂದ ಹಾಗೂ ಹಲವು ಖಾಸಗಿ ಹಣಕಾಸು ಸಂಸ್ಥೆಗಳಿಂದ ಆಕರ್ಷಕ ರಿಟರ್ನ್ ಬಡ್ಡಿದರಗಳಲ್ಲಿ ಹಣ ಹೂಡಿಕೆ ಅಥವಾ ಮಾಸಿಕ ಉಳಿತಾಯದ ಯೋಜನೆಗಳು ಚಾಲ್ತಿಯಲ್ಲಿವೆ. ನೀವು ನಿಮ್ಮ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಮಿತವ್ಯಯ ಮಾಡುತ್ತ ಸಾಧ್ಯವಾದಷ್ಟು ಹೆಚ್ಚು ಹಣ ಉಳಿತಾಯ ಮಾಡಿ ಮಾಸಿಕವಾಗಿ ಹೂಡಿಕೆ ಮಾಡುತ್ತ ಸಾಗಿದರೆ ಕೆಲವೇ ದಶಕಗಳ ಸಮಯದಲ್ಲಿ ನೀವೂ ಒಬ್ಬ ಮಿಲಿಯನೇರ್‌ ಆಗುವುದನ್ನು ಯಾರೂ ತಪ್ಪಿಸಲಾರರು.
    Published by:Kavya V
    First published: