ಉದ್ಯೋಗದಾತರು ಪ್ರಸಕ್ತ ಹಣಕಾಸು ವರ್ಷದಲ್ಲಿ ಉದ್ಯೋಗಿಗಳು (Employee) ಯಾವ ತೆರಿಗೆ ಪದ್ಧತಿಯನ್ನು (Tax System) ಆರಿಸಿಕೊಳ್ಳುತ್ತಾರೆ ಎಂಬ ವಿವರಗಳನ್ನು ಪಡೆಯಬೇಕು. ಅದಕ್ಕೆ ಅನುಗುಣವಾಗಿ ಟಿಡಿಎಸ್ (TDS) ಅನ್ನು ಕಡಿತಗೊಳಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಉದ್ಯೋಗಿಯು ತನ್ನ ಸಂಸ್ಥೆಗೆ ಯಾವ ತೆರಿಗೆ ಪದ್ಧತಿಯನ್ನು ಆಯ್ದುಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿಸದೇ ಇದ್ದರೆ 2023-24ರ ಬಜೆಟ್‌ನಲ್ಲಿ ಘೋಷಿಸಲಾದ ಹೊಸ ಪರಿಷ್ಕೃತ ತೆರಿಗೆ ಪದ್ಧತಿಯ ಪ್ರಕಾರ ಉದ್ಯೋಗದಾತರು ಸಂಬಳದಿಂದ ಟಿಡಿಎಸ್ ಅನ್ನು ಕಡಿತಗೊಳಿಸಬೇಕಾಗುತ್ತದೆ ಎಂದು ತಿಳಿಸಿದೆ.
ಹಳೆಯ ತೆರಿಗೆ ಪದ್ಧತಿ
ವೈಯಕ್ತಿಕ ತೆರಿಗೆದಾರರು ಅವರು ಹಳೆಯ ತೆರಿಗೆ ಪದ್ಧತಿಯಲ್ಲಿರಲು ಬಯಸುತ್ತಾರೆಯೇ ಎಂಬುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ವಿನಾಯಿತಿಗಳು ಮತ್ತು ಕಡಿತಗಳನ್ನು ಒದಗಿಸುತ್ತದೆ ಅಥವಾ ಕಡಿಮೆ ತೆರಿಗೆ ದರಗಳನ್ನು ನೀಡುವ ಹೊಸ ತೆರಿಗೆ ಆಡಳಿತಕ್ಕೆ ಬದಲಾಯಿಸುವ ಆಯ್ಕೆ ಕೂಡ ಇದೆ ಆದರೆ ಇದರಲ್ಲಿ ವಿನಾಯಿತಿಗಳಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.
ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ಹೆಚ್ಚು ಜನಪ್ರಿಯ ಮತ್ತು ಆಗಾಗ್ಗೆ ಬಳಸಲಾಗುವ ಕಡಿತಗಳನ್ನು ಅನುಮತಿಸಲಾಗಿದೆ. ತೆರಿಗೆ ಪ್ರಯೋಜನಕ್ಕಾಗಿ ಕೆಲವು ಇತರ ವಿಭಾಗಗಳು ವಿಭಾಗ 80D, ವಿಭಾಗ 24(b), ವಿಭಾಗ 80EE, ವಿಭಾಗ G ಇತರವುಗಳಲ್ಲಿ ಸೇರಿವೆ.
ಯಾರು ತೆರಿಗೆಗೆ ಒಳಪಡುವುದಿಲ್ಲ
ಹೊಸ ತೆರಿಗೆ ಪದ್ಧತಿಯಲ್ಲಿ, ಬಜೆಟ್‌ನಲ್ಲಿ ಘೋಷಿಸಿದಂತೆ ವಾರ್ಷಿಕ ರೂ. 7 ಲಕ್ಷದವರೆಗಿನ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಇರುವುದಿಲ್ಲ. ರೂ 50,000 ಪ್ರಮಾಣಿತ ಕಡಿತವನ್ನು ಸಹ ಅನುಮತಿಸಲಾಗಿದೆ ಮತ್ತು ಮೂಲ ವಿನಾಯಿತಿ ಮಿತಿಯನ್ನು ರೂ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ರೂ 3-6 ಲಕ್ಷದ ನಡುವಿನ ಆದಾಯಕ್ಕೆ 5% ತೆರಿಗೆ ವಿಧಿಸಲಾಗುತ್ತದೆ; ರೂ 6-9 ಲಕ್ಷದ ಆದಾಯಕ್ಕೆ 10%, ರೂ 9-12 ಲಕ್ಷ ಆದಾಯಕ್ಕೆ 15%, ರೂ 12-15 ಲಕ್ಷ ಆದಾಯಕ್ಕೆ 20% ಹಾಗೂ ರೂ15 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆದಾಯಕ್ಕೆ 30% ತೆರಿಗೆ ವಿಧಿಸಲಾಗುತ್ತದೆ.
ವಿನಾಯಿತಿಗಳು ಮತ್ತು ಕಡಿತಗಳಿಗೆ ಅವಕಾಶ ನೀಡುವ ಹಳೆಯ ತೆರಿಗೆ ಪದ್ಧತಿಯು ರೂ 2.5 ಲಕ್ಷದ ಮೂಲ ವಿನಾಯಿತಿ ಮಿತಿಯನ್ನು ಹೊಂದಿದೆ. ಅಲ್ಲದೆ, ವಾರ್ಷಿಕ ರೂ 5 ಲಕ್ಷ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.
ಎಷ್ಟೆಷ್ಟು ತೆರಿಗೆ ವಿಧಿಸಲಾಗಿದೆ?
ರೂ 2.5 ಲಕ್ಷದಿಂದ ರೂ 5 ಲಕ್ಷದವರೆಗಿನ ಆದಾಯಕ್ಕೆ 5% ದಷ್ಟು ತೆರಿಗೆ ವಿಧಿಸಿದರೆ, ರೂ 5 ಲಕ್ಷದಿಂದ ರೂ 10 ಲಕ್ಷದವರೆಗೆ 20% ದಷ್ಟು ತೆರಿಗೆ ವಿಧಿಸಲಾಗುತ್ತದೆ. ರೂ 10 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ 30% ದಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದು ವರದಿ ತಿಳಿಸಿದೆ.
ಟಿಡಿಎಸ್ ಯಾವುದನ್ನು ಆಧರಿಸಿದೆ?
ವರ್ಷದಲ್ಲಿ ಅವರು ಕೈಗೊಳ್ಳಲು ಬಯಸುವ ಕಡಿತಗಳಿಗೆ (ವಿಭಾಗ 80C ಇತ್ಯಾದಿ) ಪ್ರಸ್ತಾವಿತ ಹೂಡಿಕೆಗಳನ್ನು ಸೂಚಿಸುವ ತೆರಿಗೆ ಘೋಷಣೆ ಹೇಳಿಕೆಯನ್ನು ಒದಗಿಸುವಂತೆ ನೌಕರರನ್ನು ಕೇಳಲಾಗುತ್ತದೆ.
ಉದ್ಯೋಗಿಯು ಅಂತಹ ಯಾವುದೇ ಘೋಷಣೆಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರ ಟಿಡಿಎಸ್ ಕಡಿತವು ಸಂಭವಿಸುತ್ತದೆ. ಇಂತಹ ಘೋಷಣೆಗಳನ್ನು ಸಾಮಾನ್ಯವಾಗಿ ಆರ್ಥಿಕ ವರ್ಷದ ಆರಂಭದಲ್ಲಿ ಉದ್ಯೋಗದಾತರು ಕೇಳುತ್ತಾರೆ.
ಇದನ್ನೂ ಓದಿ: Lottery Tax Rules: ಬರೋಬ್ಬರಿ 1 ಕೋಟಿ ರೂಪಾಯಿ ಲಾಟರಿ ಗೆದ್ರೆ, ಎಷ್ಟು ಲಕ್ಷ ತೆರಿಗೆ ಕಟ್ ಆಗುತ್ತೆ ಗೊತ್ತೇ?
ಅಸಲಿ ಟಿಡಿಎಸ್ ಕಡಿತಗಳು
ಆರ್ಥಿಕ ವರ್ಷ ಕೊನೆಯ ಮೂರು ತಿಂಗಳುಗಳಲ್ಲಿ, ಉದ್ಯೋಗದಾತರು ಉದ್ಯೋಗಿಗಳು ಮಾಡಿದ ಹೂಡಿಕೆ ಘೋಷಣೆಯ ಪುರಾವೆಯನ್ನು ಕೇಳುತ್ತಾರೆ. ಇದು ಸಂಸ್ಥೆಗಳಿಗೆ ಅಥವಾ ಉದ್ಯೋಗದಾತರಿಗೆ ನಿಜವಾದ ಹೂಡಿಕೆಗಳ ಆಧಾರದ ಮೇಲೆ ಟಿಡಿಎಸ್ ಕಡಿತಗೊಳಿಸಲು ಸಹಾಯ ಮಾಡುತ್ತದೆ.
ಉದ್ಯೋಗದಾತರು ಈಗಾಗಲೇ ಕಡಿತಗೊಳಿಸಿರುವ ತೆರಿಗೆಯು ಅಧಿಕವಾಗಿದ್ದರೆ ಮತ್ತು ಆರ್ಥಿಕ ವರ್ಷದ ಕೊನೆಯ 2-3 ತಿಂಗಳುಗಳಲ್ಲಿ ಸರಿಹೊಂದಿಸಲು ಸಾಧ್ಯವಾಗದಿದ್ದರೆ, ಅಂತಹ ಯಾವುದೇ ಹೆಚ್ಚುವರಿ TDS ಫಾರ್ಮ್ 16 ರಲ್ಲಿ ಗೋಚರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ