Insurance: ನಿಮ್ಮ ಹೆಂಡತಿ-ಮಕ್ಕಳ ಸೌಖ್ಯಕ್ಕಾಗಿ ಎಷ್ಟು ಮೌಲ್ಯದ ಆರೋಗ್ಯ ವಿಮೆ ಬೇಕು?

Insurance: ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವ ಈಗಿನ ಜಗತ್ತಿನಲ್ಲಿ ನಾವೆಲ್ಲ ಕಠಿಣ ವೈದ್ಯಕೀಯ ತುರ್ತು ಸ್ಥಿತಿಗೆ ಸಾಕ್ಷಿಯಾಗಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಸೂಕ್ತ ಆರೋಗ್ಯ ವಿಮೆ ಇಲ್ಲವಾದರೆ ನಿಮ್ಮ ಭವಿಷ್ಯದ ಉಳಿತಾಯ ಹಾಗೂ ಉತ್ತಮ ಬದುಕು ಎರಡರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತೀಯ ಜೀವ ವಿಮಾ ನಿಗಮ ( Life Insurance) ಸ್ಥಾಪನೆಯಾಗಿದ್ದು ಸೆಪ್ಟೆಂಬರ್(September) 1, 1956ರಲ್ಲಿ. ತನ್ನ ಸ್ಥಾಪನೆಯೊಂದಿಗೇ ದೊಡ್ಡ ಸಂಚಲನ ಸೃಷ್ಟಿಸಿದ ಭಾರತೀಯ ಜೀವ ವಿಮಾ ನಿಗಮ ಈಗಲೂ ಕೂಡಾ ವಿಶ್ವಾಸಾರ್ಹ ಜೀವ ವಿಮೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಬೆನ್ನಿಗೆ ಗೃಹ ಸುರಕ್ಷತಾ ವಿಮೆ, ವಾಹನ ವಿಮೆ ಸೇರಿದಂತೆ ಹಲವಾರು ವಿಮೆಗಳು ಚಾಲ್ತಿಗೆ ಬಂದವು. ವಿಮಾ ವಲಯವನ್ನು ಖಾಸಗಿ (Private sector) ವಲಯಕ್ಕೆ ಮುಕ್ತಗೊಳಿಸಿದ ನಂತರವಂತೂ ಭಾರಿ ಪೈಪೋಟಿ (Competition) ಶುರುವಾಗಿದೆ. ನಿತ್ಯವೂ ಒಂದಲ್ಲ ಒಂದು ಹೊಸ ವಿಮಾ ಯೋಜನೆ ಜಾರಿಗೆ ಬರತೊಡಗಿವೆ. ಈ ಪೈಕಿ ಆಧುನಿಕ ಬದುಕಿನ ಅವಿಭಾಜ್ಯ (Integral part )ಅಂಗವಾಗಿ ಬದಲಾಗಿರುವುದು ಆರೋಗ್ಯ ವಿಮೆ.

ಆರೋಗ್ಯ ವಿಮೆ ಅವಿಭಾಜ್ಯ ಅಂಗ
ಆಧುನಿಕ ಬದುಕಿನ ಜಂಜಡ, ಅದರಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳು, ಖಾಸಗಿ ಆಸ್ಪತ್ರೆಗಳಲ್ಲಿನ ದುಬಾರಿ ಶುಲ್ಕ ಆರೋಗ್ಯ ವಿಮೆಯನ್ನು ಪ್ರತಿ ವ್ಯಕ್ತಿಯ ಬದುಕಿನ ಅವಿಭಾಜ್ಯ ಅಂಗವನ್ನಾಗಿಸಿವೆ. ಪತ್ನಿ ಮಕ್ಕಳು ಇದ್ದವರಿಗಂತೂ ಆರೋಗ್ಯ ವಿಮೆ ಏನಕ್ಕೂ ಸಾಲದಾಗುತ್ತಿದೆ. ಇಂತಹ ಹೊತ್ತಿನಲ್ಲಿ ರೋಗ ಪತ್ತೆ ಪರೀಕ್ಷೆ, ಚಿಕಿತ್ಸೆ ಹಾಗೂ ಆರೋಗ್ಯ ಸೇವೆಯನ್ನು ಘನತೆಯಿಂದ ಪಡೆಯಲು ಸೂಕ್ತ ಆರೋಗ್ಯ ವಿಮೆ ಅತ್ಯವಶ್ಯಕವಾಗಿದೆ.

ಇದನ್ನೂ ಓದಿ: Viral News: ದೇಹದ ಒಂದು ಅಂಗಕ್ಕೆ ರೂಪದರ್ಶಿಯ 13 ಕೋಟಿ ವಿಮೆ

ಪರಿಶೀಲಿಸುವುದು ಉತ್ತಮ
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವಿವಿಧ ರಾಜ್ಯಗಳನ್ನು ಆಧರಿಸಿ ವೈದ್ಯಕೀಯ ಸೇವೆಗಳ ವೆಚ್ಚ ಶೇ. 8ರಿಂದ 23ರಷ್ಟು ದುಬಾರಿಯಾಗಿದೆ. ನಿರಂತರವಾಗಿ ಏರಿಕೆಯಾಗುತ್ತಿರುವ ಔಷಧಗಳ ಬೆಲೆ, ವೈದ್ಯಕೀಯ ಪರೀಕ್ಷೆ ದರ, ಆಸ್ಪತ್ರೆಯಲ್ಲಿನ ಆರೈಕೆ ವೆಚ್ಚ ಹಾಗೂ ಸಮಾಲೋಚನಾ ಶುಲ್ಕದಿಂದ ಜನಸಾಮಾನ್ಯರು ಬಸವಳಿಯತೊಡಗಿದ್ದಾರೆ. ಹೀಗಾಗಿ ನೀವು ಈಗಾಗಲೇ ಮಾಡಿಸಿಕೊಂಡಿರುವ ಆರೋಗ್ಯ ವಿಮೆಯ ಮೊತ್ತ ಅನಿವಾರ್ಯವಾಗಿ ಏರಿಕೆಯಾಗಲೇಬೇಕಿದೆ. ಬದಲಾಗುತ್ತಿರುವ ಬದುಕಿನ ವಿವಿಧ ಹಂತಗಳು, ಏರಿಳಿತವಿರುವ ಆದಾಯ ಹಾಗೂ ತಪ್ಪಿಸಿಕೊಳ್ಳಲಾಗದ ಹಣದುಬ್ಬರದ ಕಾರಣಕ್ಕೆ ನೀವು ಪ್ರತಿ 3 ವರ್ಷಕ್ಕೊಮ್ಮೆ ಆರೋಗ್ಯ ವಿಮೆ ಪರಿಶೀಲಿಸುವುದು ಉತ್ತಮ ಅಭ್ಯಾಸವಾಗಿದೆ.

ಸುರಕ್ಷೆ ಇರುವ ವಿಮೆ
ಸರಾಸರಿ ವೈದ್ಯಕೀಯ ವೆಚ್ಚದ ಏರಿಕೆಯಿಂದಾಗಿ ಆಸ್ಪತ್ರೆಯಲ್ಲಿ ಆರೈಕೆ ಪಡೆಯುವುದು ಶೇ. 15ರಷ್ಟು ದುಬಾರಿಯಾಗುತ್ತದೆ ಎಂದು ಊಹಿಸಿಕೊಳ್ಳೋಣ. ಆಗ ಈಗಿರುವ 4 ಲಕ್ಷ ರೂ. ಮೌಲ್ಯದ ಚಿಕಿತ್ಸಾ ವೆಚ್ಚ ಇನ್ನು 10 ವರ್ಷಗಳ ನಂತರ 16 ಲಕ್ಷ ರೂ.ಗೆ ಏರಿಕೆಯಾಗಿರುತ್ತದೆ. ಅದೇ 20 ವರ್ಷಗಳ ನಂತರ 65 ಲಕ್ಷ ರೂ.ಗೆ ಏರಿಕೆಯಾಗಿರುತ್ತದೆ. ಒಂದು ವೇಳೆ ದೀರ್ಘಾವಧಿಗೆ ವಿಮೆ ಕೊಂಡುಕೊಂಡಿದ್ದರೆ, ಪ್ರೀಮಿಯಂ ದರ ನಿರಂತರವಾಗಿ ಏರಿಕೆಯಾಗುತ್ತಿರುತ್ತದೆ. ಹೀಗಾಗಿ ಯಾವಾಗಲೂ ಕಡಿಮೆ ವೆಚ್ಚದಲ್ಲಿ ದೊಡ್ಡ ಮೊತ್ತದ ವಿಮಾ ಸುರಕ್ಷೆ ಇರುವ ವಿಮೆ ಮಾಡಿಸುವುದು ಸೂಕ್ತ.

ಸಣ್ಣ ಮಕ್ಕಳು ಹಾಗೂ ಹಿರಿಯ ಪೋಷಕರಿಬ್ಬರನ್ನೂ ಒಳಗೊಂಡಿರುವ ಕುಟುಂಬಕ್ಕೆ 5 ಲಕ್ಷ ರೂ. ಮೌಲ್ಯದ ಕೌಟುಂಬಿಕ ಆರೋಗ್ಯ ವಿಮೆ ಯಾವುದಕ್ಕೂ ಸಾಲುವುದಿಲ್ಲ. ಸೂಕ್ತ ಆರೋಗ್ಯ ವಿಮೆಯ ಗೈರಿನಲ್ಲಿ ದಿನಚರಿಯ ವೈದ್ಯೋಪಚಾರದಿಂದ ಮೊದಲ್ಗೊಂಡು ತಪ್ಪಿಸಿಕೊಳ್ಳಲಾಗದ ಶಸ್ತ್ರಚಿಕಿತ್ಸೆವರೆಗಿನ ವೈದ್ಯಕೀಯ ವೆಚ್ಚಗಳು, ಗಂಭೀರ ಸ್ವರೂಪದ ಕಾಯಿಲೆಗಳೆಲ್ಲ ನಿಮ್ಮ ಹಣದ ಹರಿವಿಗೆ ಭಾರಿ ಮುಕ್ಕು ಮಾಡುತ್ತವೆ.

ಬದುಕಿನ ಮೇಲೆ ಪರಿಣಾಮ
ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವ ಈಗಿನ ಜಗತ್ತಿನಲ್ಲಿ ನಾವೆಲ್ಲ ಕಠಿಣ ವೈದ್ಯಕೀಯ ತುರ್ತು ಸ್ಥಿತಿಗೆ ಸಾಕ್ಷಿಯಾಗಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಸೂಕ್ತ ಆರೋಗ್ಯ ವಿಮೆ ಇಲ್ಲವಾದರೆ ನಿಮ್ಮ ಭವಿಷ್ಯದ ಉಳಿತಾಯ ಹಾಗೂ ಉತ್ತಮ ಬದುಕು ಎರಡರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: LIC scheme: ದಿನಕ್ಕೆ 29 ರೂ. ಉಳಿಸಿ 4 ಲಕ್ಷದವರೆಗೆ ಲಾಭ ಗಳಿಸಿ; ಮಹಿಳೆಯರಿಗೆ ಅದ್ಭುತ ಯೋಜನೆ ಇದು

ಪ್ರತಿ ವಯಸ್ಸಿನ ಗುಂಪುಗಳೂ ತಮ್ಮದೇ ಆದ ವೈದ್ಯಕೀಯ ಅಪಾಯ ಹಾಗೂ ವಿಮಾ ಸುರಕ್ಷತೆ ಹೊಂದಿರುತ್ತವೆ. ನಿಮ್ಮ ಎಳೆ ಮಕ್ಕಳು ಮನೆ ಹೊರಗೆ ಗಾಯಕ್ಕೀಡಾಗುವ ಸಾಧ್ಯತೆಯಿದ್ದರೆ, ವಯಸ್ಕರು ರಸ್ತೆ ಅಪಘಾತಕ್ಕೆ ತುತ್ತಾಗುವ ಸಂಭವವಿರುತ್ತದೆ. ಈ ಪೈಕಿ ಬಹುತೇಕ ವಯಸ್ಕರು ಈಗಾಗಲೇ ಇರುವ ವಿಮಾ ಸುರಕ್ಷೆ ಹೊಂದಿರುತ್ತಾರೆ. ಹೀಗಾಗಿ ಮಕ್ಕಳು, ವಯಸ್ಕರು ಹಾಗೂ ಹಿರಿಯ ಸದಸ್ಯರನ್ನು ಹೊಂದಿರುವ ಕುಟುಂಬಗಳು ಲಭ್ಯವಿರುವ ವಿವಿಧ ವಿಮೆಗಳನ್ನು ಮಾಡಿಸಿಕೊಳ್ಳುವುದು ಹೆಚ್ಚು ಸೂಕ್ತ.
Published by:vanithasanjevani vanithasanjevani
First published: