Gold Tax: ಮನೆಯಲ್ಲಿ ಚಿನ್ನ ಇಡುವುದಕ್ಕೂ ಇದ್ಯಾ ಮಿತಿ; ಇದಕ್ಕೆ ಹೇಗೆ ತೆರಿಗೆ ವಿಧಿಸಲಾಗುತ್ತದೆ? ಇಲ್ಲಿದೆ ಮಾಹಿತಿ

ಭಾರತೀಯ ಕಾನೂನಿನಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು ಎಂದು ಒಂದು ನಿಯಮವಿದೆ. ಒಂದು ವೇಳೆ ನೀವು ಸರಿಯಾದ ಆದಾಯ ಮೂಲ ಇದ್ದು ನೀವು ಸರಿಯಾಗಿ ಟ್ಯಾಕ್ಸ್ ಕಟ್ಟುತ್ತಿದ್ದರೆ ನೀವು ಎಷ್ಟು ಬೇಕಾದರೂ ಚಿನ್ನ ಇಟ್ಟುಕೊಳ್ಳಬಹುದು ಅದಕ್ಕೆ ಯಾವುದೇ ಮಿತಿ ಇಲ್ಲ. ಹಾಗಾದರೆ ಚಿನ್ನಕ್ಕೆ ಸಂಬಂಧಿಸಿದ ಕೆಲವು ಕಾನೂನುಗಳ ಬಗೆಗಿನ ಮಾಹಿತಿಯನ್ನು ನಾವಿಲ್ಲಿ ತಿಳಿಯೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸುರಕ್ಷಿತ ಹೂಡಿಕೆ (Investment) ಎಂದು ಪರಿಗಣಿಸಲಾಗಿರುವ ಚಿನ್ನಕ್ಕೆ (Gold) ಭಾರತದಲ್ಲಿ ಸಾಕಷ್ಟು ಮಹತ್ವ ನೀಡಲಾಗುತ್ತದೆ. ಜಗತ್ತಿನ ಪ್ರತಿ ಚಿನ್ನದ ವ್ಯಾಪಾರಿಯ ಪ್ರಮುಖ ಮಾರುಕಟ್ಟೆಯೇ ಭಾರತ (India). ಇಲ್ಲಿ ಇರುವಷ್ಟು ಚಿನ್ನದ ಬೇಡಿಕೆ ಜಗತ್ತಿನ ಬೇರೆ ಯಾವ ಭಾಗದಲ್ಲೂ ಇಲ್ಲ.  ಚಿನ್ನವನ್ನು ಹೂಡಿಕೆ ಅಥವಾ ಉಳಿತಾಯವಾಗಿ ಪರಿಗಣಿಸಿ ಖರೀದಿಸಬಹುದು. ಚಿನ್ನವನ್ನು ಹೂಡಿಕೆಯ ಆಯ್ಕೆಯಾಗಿ ಪರಿಗಣಿಸುವವರು ಚಿನ್ನವನ್ನು ನಾಣ್ಯಗಳು, ಬಾರ್‌ಗಳು, ಆಭರಣಗಳಂತಹ (jewelry) ಭೌತಿಕ ರೂಪಗಳಲ್ಲಿ ಅಥವಾ ಚಿನ್ನದ ವಿನಿಮಯ-ವಹಿವಾಟು ನಿಧಿಗಳು (ಗೋಲ್ಡ್ ಇಟಿಎಫ್‌ಗಳು), ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ನೀಡಿದ ಸಾವರಿನ್ ಗೋಲ್ಡ್ ಬಾಂಡ್‌ಗಳು (ಎಸ್‌ಜಿಬಿ) ಮತ್ತು ಕಾಗದದ ರೂಪಗಳಲ್ಲಿ ಖರೀದಿಸುತ್ತಾರೆ.

ಬಹುಪಾಲು ಭಾರತೀಯ ಕುಟುಂಬಗಳು ಚಿನ್ನವನ್ನು ಖರೀದಿಸಿ ಹೊಂದಿದ್ದರೂ ಸಹ, ಜನರು ಎಷ್ಟು ಚಿನ್ನವನ್ನು ಪಡೆದುಕೊಳ್ಳಬಹುದು ಎಂಬುದರ ಕುರಿತು ಕಾನೂನು ಮಿತಿಗಳ ಬಗ್ಗೆ ತಿಳಿದಿರಬೇಕು. ಹೌದು ಭಾರತೀಯ ಕಾನೂನಿನಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು ಎಂದು ಒಂದು ನಿಯಮವಿದೆ. ಒಂದು ವೇಳೆ ನೀವು ಸರಿಯಾದ ಆದಾಯ ಮೂಲ ಇದ್ದು ನೀವು ಸರಿಯಾಗಿ ಟ್ಯಾಕ್ಸ್ ಕಟ್ಟುತ್ತಿದ್ದರೆ ನೀವು ಎಷ್ಟು ಬೇಕಾದರೂ ಚಿನ್ನ ಇಟ್ಟುಕೊಳ್ಳಬಹುದು ಅದಕ್ಕೆ ಯಾವುದೇ ಮಿತಿ ಇಲ್ಲ. ಹಾಗಾದರೆ ಚಿನ್ನಕ್ಕೆ ಸಂಬಂಧಿಸಿದ ಕೆಲವು ಕಾನೂನುಗಳ ಬಗೆಗಿನ ಮಾಹಿತಿಯನ್ನು ನಾವಿಲ್ಲಿ ತಿಣಿಯೋಣ.

ಭಾರತದಲ್ಲಿ ಚಿನ್ನದ ಸ್ವಾಧೀನ ನಿಯಮಗಳೇನು?
ನಮ್ಮ ದೇಶವು 1968 ರಲ್ಲಿ ಚಿನ್ನದ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರುವ ಮೂಲಕ ನಾಗರಿಕರು ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ಹೊಂದುವುದನ್ನು ನಿಷೇಧಿಸಿತು. ಆದರೆ ಈ ಕಾಯಿದೆ ಹೆಚ್ಚು ಕಾಲ ಇರದೇ 1990 ರಲ್ಲಿ ರದ್ದುಗೊಂಡಿತು.

ಚಿನ್ನದ ವಿಷಯದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ವಿಭಿನ್ನವಾದ ಸೂಚನೆಗಳನ್ನು ಹೊಂದಿದ್ದಾರೆ. ವಿಶೇಷವಾಗಿ ಎಸಿಬಿ ದಾಳಿಯಂತಹ ಸಮಯದಲ್ಲಿ ವಶಪಡಿಸಿಕೊಳ್ಳುವಿಕೆಗೆ ಬಂದಾಗ, ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT), ಆದಾಯ ತೆರಿಗೆ ಅಧಿಕಾರಿಗಳಿಗೆ 11-05 ರಂದು ನೀಡಿದ ಸೂಚನೆಯ ಪ್ರಕಾರ, ವ್ಯಕ್ತಿಯ ಲಿಂಗ ಮತ್ತು ಅವರ ವೈವಾಹಿಕ ಸ್ಥಿತಿಯ ಆಧಾರದ ಮೇಲೆ ಒಂದು ನಿರ್ದಿಷ್ಟ ಮಿತಿಯವರೆಗೆ ಯಾವುದೇ ಚಿನ್ನದ ಆಭರಣಗಳು ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳವಂತಿಲ್ಲ.

ಇದನ್ನೂ ಓದಿ:  Millionaires: 2030ರಲ್ಲಿ ಶ್ರೀಮಂತ ರಾಷ್ಟ್ರವಾಗಲಿದ್ಯಾ ಭಾರತ? ಮಿಲಿಯನೇರ್‌ಗಳ ಸಂಖ್ಯೆ ಹೆಚ್ಚಾಗಲಿದೆ ಅಂತಿದೆ ಈ ರಿಪೋರ್ಟ್!

ಸುತ್ತೋಲೆಗಳ ಪ್ರಕಾರ, ಆದಾಯ ತೆರಿಗೆ ಅಧಿಕಾರಿಗಳು ವಿವಾಹಿತ ಮಹಿಳೆಯ ಬಳಿ ಇರುವ 500 ಗ್ರಾಂ ಮತ್ತು ಅವಿವಾಹಿತ ಮಹಿಳೆಯ 250 ಗ್ರಾಂ ವರೆಗಿನ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವುದಿಲ್ಲ. ಪುರುಷರಿಗೆ, ಅವರ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ, ಕುಟುಂಬದ ಪ್ರತಿಯೊಬ್ಬ ಪುರುಷ ಸದಸ್ಯರಿಗೆ 100 ಗ್ರಾಂಗಳ ಕಡಿಮೆ ಮಿತಿಯನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಸೂಚಿಸುತ್ತದೆ.

ಭಾರತದಲ್ಲಿ ಚಿನ್ನಕ್ಕೆ ಹೇಗೆ ತೆರಿಗೆ ವಿಧಿಸಲಾಗುತ್ತದೆ?
ಚಿನ್ನದ ಹೂಡಿಕೆಯ ಮೇಲಿನ ತೆರಿಗೆಯು ತೆರಿಗೆದಾರರ ಹಿಡುವಳಿ ಅವಧಿಯನ್ನು ಅವಲಂಬಿಸಿರುತ್ತದೆ. ಭೌತಿಕ ರೂಪದಲ್ಲಿ ಹೂಡಿಕೆಯು ಇತರ ಯಾವುದೇ ಬಂಡವಾಳ ಆಸ್ತಿಯಂತೆ ತೆರಿಗೆಗೆ ಒಳಪಡುತ್ತದೆ. ಚಿನ್ನವನ್ನು 3 ವರ್ಷಗಳಿಗಿಂತ ಹೆಚ್ಚು ಕಾಲ ಇಟ್ಟುಕೊಂಡರೆ, ಅದು 20 ಪ್ರತಿಶತದಷ್ಟು (ಶಿಕ್ಷಣ ಸೆಸ್ ಮತ್ತು ಹೆಚ್ಚುವರಿ ಶುಲ್ಕವನ್ನು ಹೊರತುಪಡಿಸಿ) ದೀರ್ಘಾವಧಿಯ ಕ್ಯಾಪಿಟಲ್ ಗೇನ್ (LTCG) ತೆರಿಗೆಗೆ ಒಳಪಡುತ್ತದೆ ಮತ್ತು ಹೂಡಿಕೆದಾರರಿಗೆ ಅನ್ವಯವಾಗುವ ಸಾಮಾನ್ಯ ತೆರಿಗೆ ಸ್ಲ್ಯಾಬ್‌ನಲ್ಲಿ ಅಲ್ಪಾವಧಿಯ ಬಂಡವಾಳ ಗಳಿಕೆಗೆ ತೆರಿಗೆ ವಿಧಿಸಲಾಗುತ್ತದೆ. ಜೊತೆಗೆ ಚಿನ್ನದ ಇಟಿಎಫ್‌ಗಳು/ಚಿನ್ನದ ಎಮ್‌ಎಫ್‌ಗಳು ಭೌತಿಕ ಚಿನ್ನದಂತೆ ತೆರಿಗೆಗೆ ಒಳಪಡುತ್ತವೆ.

ಮತ್ತೊಂದೆಡೆ, ಬಾಂಡ್‌ಗಳನ್ನು ಮೆಚ್ಯೂರಿಟಿಗೆ ಹಿಡಿದಿಟ್ಟುಕೊಂಡರೆ, ಬಂಡವಾಳ ಲಾಭಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ. ಆದಾಗ್ಯೂ, ಭೌತಿಕ ಚಿನ್ನ ಅಥವಾ ಇಟಿಎಫ್ ಅಥವಾ ಗೋಲ್ಡ್ ಎಮ್‌ಎಫ್‌ನ ವರ್ಗಾವಣೆಯಂತಹ SGB ವರ್ಗಾವಣೆಯ ಮೇಲೆ ಬಂಡವಾಳ ಲಾಭಗಳನ್ನು ಪಾವತಿಸಲಾಗುತ್ತದೆ. ಬಾಂಡ್‌ಗಳನ್ನು ಡಿಮ್ಯಾಟ್ ರೂಪದಲ್ಲಿ ಎಕ್ಸ್‌ಚೇಂಜ್‌ಗಳಲ್ಲಿ ಟ್ರೇಡ್ ಮಾಡಲಾಗುತ್ತದೆ ಮತ್ತು ಐದನೇ ವರ್ಷದ ನಂತರ ರಿಡೀಮ್ ಮಾಡಿಕೊಳ್ಳಬಹುದು. ಮುಕ್ತಾಯದ ಮೊದಲು ಮಾರಾಟ ಮಾಡಿದಾಗ, ಲಾಭಗಳು ದೀರ್ಘಾವಧಿಯ ಬಂಡವಾಳ ಲಾಭಗಳು ಮತ್ತು 20 ಪ್ರತಿಶತ ತೆರಿಗೆಗೆ ಒಳಪಡುತ್ತವೆ (ಜೊತೆಗೆ ಶಿಕ್ಷಣ ಸೆಸ್ ಮತ್ತು ಹೆಚ್ಚುವರಿ ಶುಲ್ಕ). ವೆಚ್ಚದ ಹಣದುಬ್ಬರ ಸೂಚ್ಯಂಕವನ್ನು ಬಳಸಿಕೊಂಡು ಖರೀದಿ ಬೆಲೆಯನ್ನು ಸೂಚಿಕೆ ಮಾಡಬಹುದು.‌

ಇದನ್ನೂ ಓದಿ:  Good News: ಕೇಂದ್ರ ಸರ್ಕಾರಿ ನೌಕರರಿಗೆ ಸೆಪ್ಟೆಂಬರ್​​ ಧಮಾಕ​, ಸಿಗಲಿವೆ ಮೂರು ಗುಡ್​ ನ್ಯೂಸ್​!

ಇನ್ನು ನೀವು ಚಿನ್ನವನ್ನು ಉಡುಗೊರೆಯಾಗಿ ಅಥವಾ ಪಿತ್ರಾರ್ಜಿತವಾಗಿ ಕೂಡ ಪಡೆದಿದ್ದರೆ ಅದನ್ನು ದಾಖಲೆ ಮೂಲಕ ತೋರಿಸಬೇಕಾಗುತ್ತದೆ. ನಿಮ್ಮ ಆದಾಯ ತೆರಿಗೆಯಲ್ಲಿ ಇವನ್ನೆಲ್ಲ ನಮೂದಿಸಬೇಕು. ಧಾರ್ಮಿಕವಾಗಿ ಕೂಡ ನಿಮ್ಮ ಬಳಿ ಪರಂಪರೆಯಿಂದ ಬಂದ ಚಿನ್ನವಿದ್ದರೆ ಅವುಗಳನ್ನು ಕೂಡ ತೆರಿಗೆ ವಿನಾಯಿತಿಗೆ ಅರ್ಜಿ ಸಲ್ಲಿಸಬಹುದು.
Published by:Ashwini Prabhu
First published: