Gold And Silver Price: ಇವತ್ತು "ಚಿನ್ನಾ" ಅಂತ ಕರೆಯೋ ಮುನ್ನ ಸ್ವಲ್ಪ ಗೋಲ್ಡ್ ರೇಟ್ ಓದ್ಕೊಂಡ್ಬಿಡಿ!

ಇವತ್ತು ಸಂಡೇ, ನೀವು ಒಳ್ಳೆ ಮೂಡಲ್ಲಿದ್ದೀರಿ ಅಂತ ನಿಮ್ಮ ಹೆಂಡ್ತಿ "ಚಿನ್ನ ಕೊಡ್ಸಿ" ಅನ್ನಬಹುದು. ನೀವೂ ಯಾವುದೋ ಖುಷಿಯಲ್ಲಿ "ಚಿನ್ನ ಕೊಡಿಸ್ತೀನಿ ಚಿನ್ನಾ" ಅನ್ನಬಹುದು. ಆದ್ರೆ ಇವತ್ತು ಚಿನ್ನದ ರೇಟ್ ಎಷ್ಟಾಗಿದೆ ಗೊತ್ತಾ? ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 51,110 ರೂ. ಇತ್ತು. ಇಂದು 540 ರೂ. ಇಳಿಕೆಯಾಗಿ, 50,570 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 46,850 ರೂ. ಇತ್ತು. ಇಂದು 500 ರೂ. ಇಳಿಕೆಯಾಗಿ 46,350 ರೂ. ಆಗಿದೆ. ಹಾಗಿದ್ರೆ ಬೇರೆ ನಗರಗಳಲ್ಲಿ ಚಿನ್ನ, ಬೆಳ್ಳಿ ರೇಟ್ ಎಷ್ಟಾಗಿದೆ ಅಂತ ನೀವೇ ಓದಿ ತಿಳಿದುಕೊಳ್ಳಿ...

ಚಿನ್ನಾಭರಣ

ಚಿನ್ನಾಭರಣ

  • Share this:
Gold And Silver Price, Fe 27, 2022:  ಹಣದುಬ್ಬರವನ್ನು (Inflation) ಸಮರ್ಥವಾಗಿ ಎದುರಿಸಲು ಇರುವ ಒಂದು ಉತ್ತಮ ಮಾರ್ಗವೆಂದರೆ ಚಿನ್ನದ ಮೇಲೆ ಹೂಡಿಕೆ (Invest on Gold). ಅಷ್ಟೇ ಅಲ್ಲ ಇಂದು ಚಿನ್ನದ ಮೇಲಿನ ಹೂಡಿಕೆಯನ್ನು ಬಹು ಸುರಕ್ಷಿತ ಹೂಡಿಕೆ (Safe Investment) ಎಂದೂ ಸಹ ಕರೆಯಲಾಗುತ್ತದೆ. ಇನ್ನು ಇದೀಗ ಉಕ್ರೇನ್ (Ukraine) ಹಾಗೂ ರಷ್ಯಾ (Russia) ಮಧ್ಯೆ ಯುದ್ಧ (War) ನಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಚಿನ್ನದ ಬೆಲೆ (Gold Rate) ಗಗನಕ್ಕೆ ಏರುತ್ತಿದೆ. ಬೆಂಗಳೂರಿನಲ್ಲಿ (Bengaluru) ಚಿನ್ನದ ಬೆಲೆಯಲ್ಲಿ ಹಿಂದೆಂದಿಗಿಂತಲೂ ಇಂದು ಗಮನಾರ್ಹ ಏರಿಕೆ ಕಂಡುಬಂದಿದೆ. ವಾಸ್ತವವಾಗಿ, ವರ್ಷದ ಅವಧಿಯಲ್ಲಿ ಬೆಂಗಳೂರಿನಲ್ಲಿ ಚಿನ್ನಕ್ಕೆ ಉತ್ತಮ ಬೇಡಿಕೆಯಿದೆ. ನೀವು ಅಮೂಲ್ಯವಾದ ಲೋಹವನ್ನು ಖರೀದಿಸುತ್ತಿದ್ದರೆ ಬೆಂಗಳೂರಿನಲ್ಲಿ ದೈನಂದಿನ ಚಿನ್ನದ ಬೆಲೆಯನ್ನು ಪರಿಶೀಲಿಸಲೇ ಬೇಕು. ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ (24 Carrot) 1 ಗ್ರಾಂ ಚಿನ್ನಕ್ಕೆ ನಿನ್ನೆ 5,111 ರೂಪಾಯಿ ಇತ್ತು. ಇಂದು ಅದರ ಬೆಲೆ 5057 ರೂಪಾಯಿ ಆಗಿದೆ. ಅಂದರೆ 54 ರೂಪಾಯಿ ಇಳಿಕೆಯಾಗಿದೆ. ಇನ್ನು 22 ಕ್ಯಾರೆಟ್‌  ಗೋಲ್ಡ್ (22 Carrot Gold) ನಿನ್ನೆ 1 ಗ್ರಾಂಗೆ 4,685 ರೂಪಾಯಿ ಇದ್ದರೆ, ಇಂದು ಅದೇ ಬಂಗಾರಕ್ಕೆ 4635 ರೂಪಾಯಿಗಳಾಗಿವೆ. ಅಂದರೆ 50 ರೂಪಾಯಿ ಇಳಿದಂತಾಗಿದೆ.

 ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?

ನೀವು ಚಿನ್ನ ಖರೀದಿಸುವ ಪ್ಲ್ಯಾನ್‌ ಮಾಡುತ್ತಿದ್ದೀರಾ, ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 51,110 ರೂ. ಇತ್ತು. ಇಂದು 540 ರೂ. ಇಳಿಕೆಯಾಗಿ, 50,570 ರೂ. ಆಗಿದೆ.

ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 46,850 ರೂ. ಇತ್ತು. ಇಂದು 500 ರೂ. ಇಳಿಕೆಯಾಗಿ 46,350 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

 ಚಿನ್ನದ ಮೇಲೆ ಹೆಚ್ಚಾಗುತ್ತಲೇ ಇರುತ್ತದೆ ಜನರ ಒಲವು

ದೇಶದಲ್ಲಿ ಆಭರಣ ಪ್ರಿಯರ ಜನಸಂಖ್ಯೆಗೇನೂ ಕೊರತೆ ಇಲ್ಲ. ಚಿನ್ನ ಖರೀದಿ, ವಹಿವಾಟು ಹೆಚ್ಚು ನಡೆಯುತ್ತಲೇ ಇರುತ್ತದೆ. ಇನ್ನು ಹಲವರು ಆಪತ್ಕಾಲದಲ್ಲಿ ಚಿನ್ನ ಅಡ ಇಡಲು ಅಥವಾ ಮಾರಲು ಬೇಕಾಗುತ್ತದೆಂದು ಸಹ ಅದರ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನವನ್ನು ಬಾಂಡ್‌ ರೂಪದಲ್ಲೂ ಖರೀದಿಸಲಾಗುತ್ತದೆ.

ಇದನ್ನೂ ಓದಿ: Petrol Price: ಇಂದು ರಾಜ್ಯದ ವಿವಿಧ ಕಡೆ ಹೀಗಿದೆ ಪೆಟ್ರೋಲ್, ಡಿಸೇಲ್ ಬೆಲೆ

ಬೆಳ್ಳಿ ದರ:

ದೇಶದಲ್ಲಿಂದು ಚಿನ್ನದ ಬೆಲೆ ಇಳಿಕೆಯಾಗಿರುವಂತೆ ಬೆಳ್ಳಿ ದರ (Silver Rate) ಸಹ ಇಳಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 70,000 ರೂಪಾಯಿ ಇದ್ದ ಬೆಲೆ ಇಂದು 69,000ಕ್ಕೆ ಇಳಿಕೆಯಾಗಿದೆ. ಅಂದರೆ 1 ಸಾವಿರ ರೂಪಾಯಿ ಕಡಿಮೆಯಾದಂತೆ ಆಗಿದೆ.

ಮೈಸೂರಿನಲ್ಲಿ ನಿನ್ನೆ 70,000 ರೂಪಾಯಿ ಇದ್ದ ಬೆಳ್ಳಿ ಬೆಲೆ ಇಂದು 64,000 ರೂಪಾಯಿ ಆಗಿದೆ. ಅಂದರೆ 6 ಸಾವಿರ ರೂಪಾಯಿ ಕಡಿಮೆ ಆಗಿದೆ.

ಇದನ್ನೂ ಓದಿ: Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು, ನಾಳೆ ಕರೆಂಟ್​ ಕೈಕೊಡಲಿದೆ!   

ಇನ್ನು, ಮೆಟ್ರೋಪಾಲಿಟನ್‌ ನಗರಗಳಾದ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 64,000 ರೂ. ಆಗಿದೆ. ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ.
Published by:Annappa Achari
First published: