• Home
  • »
  • News
  • »
  • business
  • »
  • Elephant: ಆನೆ ಸಾಕೋದು ಅಷ್ಟು ಸುಲಭವಲ್ಲ, ಗಜರಾಜನ ಗಾತ್ರದಷ್ಟೇ ದುಡ್ಡು ನಿಮ್ಮ ಹತ್ರಾನೂ ಇರಬೇಕು!

Elephant: ಆನೆ ಸಾಕೋದು ಅಷ್ಟು ಸುಲಭವಲ್ಲ, ಗಜರಾಜನ ಗಾತ್ರದಷ್ಟೇ ದುಡ್ಡು ನಿಮ್ಮ ಹತ್ರಾನೂ ಇರಬೇಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾವು ಇಂದು ಆನೆ (Elephant) ಸಾಕುವುದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತೇವೆ. ಅರೇ ಇದೇನಪ್ಪಾ ಆನೆ ಎಲ್ಲಾದರೂ ಸಾಕುವುದಕ್ಕೆ ಸಾಧ್ಯನಾ? ಅಂತ ನೀವು ಕೇಳಬಹುದು. ಆನೆ ಸಾಕುವುದು ಅಷ್ಟು ಸುಲಭವಲ್ಲ. ಅದಕ್ಕಿರುವ ನಿಯಮಗಳೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

  • Share this:

ಪ್ರಾಣಿಗಳೇ (Animals) ಗುಣದಲ್ಲಿ ಮೇಲು, ಮಾನವ ಅದಕ್ಕಿಂತ ಕೀಳು ಅಂತ ಡಾ. ರಾಜ್​ಕುಮಾರ್ (Dr Rajkumar)​ ಸಂಪತ್ತಿಗೆ ಸವಾಲ್​ನಲ್ಲಿ ಹಾಡಿದ್ದಾರೆ. ಇದು ನಿಜಕ್ಕೂ ಸತ್ಯ ರೀ. ಮನುಷ್ಯನ (Humans) ಕಂಡರೇ ಮತ್ತೊಬ್ಬ ಮನುಷ್ಯನಿಗೆ ದ್ವೇಷ ಇರುವ ಈ ಕಾಲದಲ್ಲಿ ಪ್ರಾಣಿಗಳು ನಿಜಕ್ಕೂ ಮೇಲು ಅಂದರೆ ತಪ್ಪಾಗಲ್ಲ. ಈಗೆಲ್ಲಾ ಎಲ್ಲರೂ ಮನೆಯಲ್ಲಿ ನಾಯಿ (Dog) , ಬೆಕ್ಕು (Cat) ಸಾಕಲು ಇಷ್ಟ ಪಡುತ್ತಾರೆ. ಇನ್ನೂ ಕೆಲವರು ಇದನ್ನು ಬ್ಯುಸಿನೆಸ್ (Business)​ ರೂಪದಲ್ಲಿ ನೋಡುತ್ತಾರೆ. ಹೌದು, ಪ್ರಾಣಿ, ಪಕ್ಷಿಗಳನ್ನು ಮಾರಾಟ ಮಾಡುವ ಬ್ಯುಸಿನೆಸ್​​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಆದರೆ ನಾವು ಇಂದು ಆನೆ (Elephant) ಸಾಕುವುದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತೇವೆ. ಅರೇ ಇದೇನಪ್ಪಾ ಆನೆ ಎಲ್ಲಾದರೂ ಸಾಕುವುದಕ್ಕೆ ಸಾಧ್ಯನಾ? ಅಂತ ನೀವು ಕೇಳಬಹುದು. ಆನೆ ಸಾಕುವುದು ಅಷ್ಟು ಸುಲಭವಲ್ಲ. ಅದಕ್ಕಿರುವ ನಿಯಮಗಳೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.


 ಮೊದಲಿಗೆ 2.5 ಎಕರೆ ಜಾಗ ಇರಬೇಕು!


ಹೌದು, ನೀವೇನಾದರೂ ಆನೆಯನ್ನು ಸಾಕಬೇಕು ಅಂತ ಆಸೆ ಇದ್ದರೆ ಮೊದಲು ನಿಮ್ಮ ಬಳಿ ವಿಶಾಲವಾದ ಜಾಗವಿರಬೇಕು. ಜೊತೆಗೆ ಎಂದಿಗೂ ಆನೆ ನಿಮ್ಮ ಸ್ವಂತದ್ದುಎನಿಸಿಕೊಳ್ಳುವುದಿಲ್ಲ. ಸರ್ಕಾರ ನಿಮಗೆ ಟೆಂಡರ್​ ರೂಪದಲ್ಲಿ ನೀಡುತ್ತೆ. ಆನೆ ಸಾಕುವುದರಿಂದ ನಿಮಗೆ ಯಾವುದೇ ಲಾಭ ಇರುವುದಿಲ್ಲ. ಜೊತೆಗೆ ನೂರೆಂಟು ಪಮಿರ್ಷನ್​ ಬೇಕೆ ಬೇಕು. ಮೊದಲಿಗೆ ಹೇಳಿದ್ದಂರೆ ಎರಡೂವರೆ ಎಕರೆ ಜಾಗ ಇದ್ದರೆ  ಆನೆ ಸಾಕುವುದರ ಬಗ್ಗೆ ನೀವು ಯೋಚನೆ ಮಾಡಬಹುದು.


ಇಷ್ಟೆಲ್ಲಾ ಪರ್ಮಿಷನ್​ ಇರಬೇಕು!


ಇನ್ನೂ ಪರ್ಮಿಷನ್​ ವಿಚಾರಕ್ಕೆ ಬಂದರೆ ನೀವು ಗ್ರಾಮ ಪಂಚಾಯತ್​ ಕಡೆಯಿಂದ ಅನುಮತಿ ಪತ್ರ ಪಡೆಯಬೇಕು. ಜೊತೆಗೆ ಪಲ್ಯೂಷನ್​ ಬೋರ್ಡ್​ ಕಂಟ್ರೋಲ್​ ಅವರ ಅನುಮತಿ ಬೇಕು. ಯಾಕೆಂದರೆ ಆನೆ ಹಾಕುವ ಲದ್ದಿಯಿಂದ ಸಾಕಷ್ಟು ಸಮಸ್ಯೆಯಾಗಬಹುದು. ಅದನ್ನೂ ಕೂಡ ಬೇರೆ ಕಡೆ ಸಾಗಿಸಲು ಈ ಅನುಮತಿ ಇರಲೇ ಬೇಕು. ಲದ್ದಿಯನ್ನು ನೀವು ಹೇಗೆ? ಯಾವಾಗ? ಎಲ್ಲಿಗೆ? ಸಾಗಿಸುತ್ತೀರಾ ಅಂತ ಮಾಹಿತಿ ನೀಡಬೇಕು. ಲೀಸ್​ ರೂಪದಲ್ಲಿ ನೀವು ಆನೆಯನ್ನು ಸಾಕಬಹುದು. ಮರಿ ಆನೆಗಳನ್ನು ಸಾಕುವಂತಿಲ್ಲ.


ಇದನ್ನೂ ಓದಿ: ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ


ಒಂದು ಆನೆ ಮೂರು ಮಾವುತ ಇರಲೇಬೇಕು!


ಇಷ್ಟೆಲ್ಲಾ ಪರ್ಮಿಷನ್​ ಪಡೆದ ಬಳಿಕ ನೀವು ಆನೆಯನ್ನು ಸಾಕುವಂತಿಲ್ಲ. ಆನೆಯನ್ನು ನೀವು ನೋಡಿಕೊಳ್ಳುವಂತಿಲ್ಲ. ಆನೆಯನ್ನು ನೋಡಿಕೊಳ್ಳಲು 3 ಮಾವುತರನ್ನು ಕೆಲಸಕ್ಕೆ ನೇಮಿಸಬೇಕು. ಆ ಮಾವುತರು ಸರಿಯಾಗಿ ಟ್ರೈನ್​ ಆಗಿರಬೇಕು. ಇನ್ನೂ ಆ ಮಾವುತರಲ್ಲಿ ಒಬ್ಬ ಮಾವುತ ಸದಾ ಆನೆಯ ಜೊತೆ ಇರಲೇಬೇಕು. ಇನ್ನೂ ಯಾವುದೇ ಸಮಯದಲ್ಲಿ ಆನೆಗೆ ಬೋರ್​ ಆಗದಂತೆ ನೋಡಿಕೊಳ್ಳಬೇಕು. ಕೋಪಬಾರದಂತೆ ನೋಡಿಕೊಳ್ಳಬೇಕು.


ಆನೆನಾ 4 ಕಿಮೀಗಿಂತ ಹೆಚ್ಚು ನಡೆಸುವಂತಿಲ್ಲ!


ಇನ್ನೂ ಆನೆಯನ್ನು ನೀವು ಸದಾ ನೆರಳಲ್ಲೇ ನೋಡಿಕೊಳ್ಳಬೇಕು. ಒಂದು ದಿನಕ್ಕೆ ನಾಲ್ಕು ಕಿಮೀ ಗಿಂತ ಹೆಚ್ಚು ನಡೆಸುವಂತಿಲ್ಲ. ಆನೆ ನಡೆಸುವುದಕ್ಕೂ ಸಾಕಷ್ಟು ರೂಲ್ಸ್​ಗಳಿವೆ. ಬೆಳಗ್ಗೆ 11 ಗಂಟೆಯಷ್ಟರೊಳಗೆ ಆನೆಯನ್ನು ನಡೆಸಬೇಕು. ಯಾಕೆಂದರೆ ಮಧ್ಯಾಹ್ನ ಆಗುವಾಗ ಜನ ದಟ್ಟಣೆ ಹೆಚ್ಚಾಗುತ್ತೆ. ಜೊತೆಗೆ ಬಿಸಿಲಿನಿಂದ ಆನೆಗ ತೊಂದರೆಯಾಗುತ್ತೆ. ಇನ್ನೂ ರಾತ್ರಿ ವೇಳೆಯಂತೂ ಆನೆಯನ್ನು ಎಲ್ಲಿಯೂ ನಡೆಸುವಂತಿಲ್ಲ. ಬೆಳಗ್ಗೆ ಸಮಯದಲ್ಲಿ ಆನೆಯನ್ನು ನಡೆಸಲು ರಸ್ತೆ ಸಾರಿಗೆ ಕಡೆಯಿಂದ ಪರ್ಮಿಷನ್​ ಪಡೆಯಬೇಕು. ಯಾವ ರಸ್ತೆಯಲ್ಲಿ ನಡೆಸಿಕೊಂಡು ಹೋಗುತ್ತೇವೆ ಅಂತ ಮೊದಲೇ ನಿರ್ಧರಿಸಿರಬೇಕು. ಈ ರೂಟ್​ ಮ್ಯಾಪ್​ ಬಿಟ್ಟು ಬೇರೆ ಕಡೆ ಹೋಗುವಂತಿಲ್ಲ.


ಆನೆ ತೂಕ ಕಡಿಮೆ ಆಗುವಂತಿಲ್ಲ!


ಇನ್ನೂ ಆನೆಯನ್ನು ಲೀಸ್​ಗೆ ನೀವು ಪಡೆಯುವ ಮುನ್ನ ಆನೆ ತೂಕ ಎಷ್ಟಿದೆ ಅಂತ ಅಳೆಯಲಾಗಿರುತ್ತೆ. ಬಳಿಕ ಲೀಸ್​ ಮುಗಿದ ಬಳಿಕ ನೀವು ವಾಪಸ್​ ಆನೆಯನ್ನು ಒಪ್ಪಿಸುವಾಗ ಅಷ್ಟೇ ತೂಕವಿರಬೇಕು. ಆನೆಗೆ ಪೌಷ್ಠಿಕ ಆಹಾರಗಳನ್ನೇ ನೀಡಬೇಕು. ಸೊಪ್ಪುಗಳನ್ನು ಹೆಚ್ಚು ನೀಡಬೇಕು. ಒಂದು ವೇಳೆ ನೀವು ಹೆಣ್ಣಾನೆಯನ್ನು ಸಾಕಿದರೆ, ಅದರ ಮೇಟಿಂಗ್​ ಸಮಯದಲ್ಲಿ ಆಗುವ ಖರ್ಚುಗಳನ್ನು ನೀವೇ ನೋಡಿಕೊಳ್ಳಬೇಕು.


ದೇವಸ್ಥಾನಕ್ಕೆ ನಿಮ್ಮ ಆನೆ ಬಿಟ್ಟು ಸಂಪಾದಿಸಬಹುದು!


ಹೌದು, ಆನೆ ಸಾಕುವುದು ಲಾಭದಾಯಕ ಅಲ್ಲದಿದ್ದರೂ, ಚೂರು ಸಂಪಾದನೆ ಮಾಡಬಹುದು. ಅದು ಹೇಗೆ ಅಂದೆರೆ ನಿಮ್ಮ ಸುತ್ತಮುತ್ತಲಿನ ದೇಗುಲಗಳಲ್ಲಿ ಯಾವುದಾದರೂ ವಿಶೇಷ ಪೂಜೆ, ಜಾತ್ರೆ ಸಮಯದಲ್ಲಿ ಈ ಆನೆಯನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಸಂಪಾದನೆ ಮಾಡಬೇಕು. ಸಣ್ಣ, ಪುಟ್ಟ ದೇವಸ್ಥಾನಗಳಾದರೆ ದಿನವೊಂದಕ್ಕೆ 15 ಸಾವಿರ ಸಿಗಬಹುದು. ಇನ್ನು ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ 25 ಸಾವಿರದಿಂದ ಎರಡೂವರೆ ಲಕ್ಷದವರೆಗೂ ಆದಾಯ ಗಳಿಸಬಹುದು.


ಇದನ್ನೂ ಓದಿ: ಓದಿದ್ದು Mtech-ಕೈ ಹಿಡಿದಿದ್ದು ಮಾತ್ರ ಕೃಷಿ, ಇನ್​ಸ್ಟಾಗ್ರಾಮ್​ನಲ್ಲಿ ಪಾಠ ಮಾಡೋ ಯುವಕ!


ಇದರ ಜೊತೆಗೆ ತಿಂಗಳಿಗೊಮ್ಮೆ ನುರಿತ ಪಶು ವೈದ್ಯರಿಂದ ಚೆಕ್​ಅಪ್​ ಮಾಡಿಸಬೇಕು. ಆನೆ ಏನಾದರೂ ಬೇಜಾರಾಗಿದ್ದರೆ, ಬೇರೆ ಕಡೆಯಿಂದ ಒಂದೆರೆಡು ಆನೆಗಳನ್ನು ಕರೆಸಿ ಇದರ ಜೊತೆ ಬಿಡಬೇಕು. ಈ ಖರ್ಚು ಕೂಡ ನಿಮ್ಮದೆ. ಹೀಗಾಗಿ ಯಾರೂ ಹೆಚ್ಚಾಗಿ ಆನೆಯನ್ನು ಸಾಕುವುದಕ್ಕೆ ಮುಂದಾಗುವುದಿಲ್ಲ. ಆನೆ ಕಂಡರೆ ಬಹಳ ಇಷ್ಟ. ದುಡ್ಡು ಎಷ್ಟಾದರೂ ಖರ್ಚು ಆಗಲಿ ಅಂದುಕೊಳ್ಳುವವರಿಗೆ ಇಷ್ಟೆಲ್ಲಾ ತಿಳಿದುಕೊಳ್ಳುವುದು ಮುಖ್ಯ.

Published by:ವಾಸುದೇವ್ ಎಂ
First published: