Moringa Honey: ಸಿಹಿ ಉದ್ಯಮದಲ್ಲಿ ರೈತರಿಗೆ ಉತ್ತಮ ಆದಾಯ ನೀಡುತ್ತಿರುವ ಇಟಾಲಿಯನ್‌ ಜೇನುನೋಣಗಳು

ಜೇನುತುಪ್ಪವು ರುಚಿಕರವಾದ ಆಹಾರ ಪದಾರ್ಥವಾಗಿದೆ. ಇದನ್ನು ನಾವು ನಮ್ಮ ಆಹಾರದಲ್ಲಿ ಹಲವು ವಿಧಗಳಲ್ಲಿ ಸೇರಿಸಿಕೊಳ್ಳಬಹುದು. ಇಲ್ಲವೇ ಹಾಗೆಯೇ ಸೇವಿಸಬಹುದು. ಅನೇಕ ಜನರು ಇದನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುತ್ತಾರೆ. ಇನ್ನೂ ಕೆಲವರು ಇದನ್ನು ಸಿಹಿ ಖಾದ್ಯಗಳನ್ನು ತಯಾರಿಸಲು ಬಳಸುತ್ತಾರೆ. ನೈಸರ್ಗಿಕ ಜೇನುಗೂಡಿನಿಂದ ತೆಗೆದ ತಾಜಾ, ಜೇನುತುಪ್ಪದ ರುಚಿಯನ್ನು ವಿವರಿಸುವುದು ಸುಲಭವಲ್ಲ. ಈ ಜೇನುತುಪ್ಪ ತಯಾರಿಸುವ ಜೇನುಗಳ ಬಗ್ಗೆ ನಿಮಗೆಷ್ಟು ತಿಳಿದಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

ಎನ್‌. ದಂಡಾಯುತಪಾಣಿ

ಎನ್‌. ದಂಡಾಯುತಪಾಣಿ

  • Share this:
ಮಾನ್ಸೂನ್ ನಲ್ಲಿ (Monsoon) ಜೇನುತುಪ್ಪದ (Honey) ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಜೇನುತುಪ್ಪವು ಪ್ರತಿಯೊಬ್ಬರಿಗೂ ಸುಲಭವಾಗಿ ಲಭ್ಯವಿರುತ್ತದೆ. ಜೇನುತುಪ್ಪವನ್ನು ಕೇವಲ ಸೂಪರ್‌ಫುಡ್ (Super Food) ಎಂದು ಕರೆಯುವುದು ಮಾತ್ರವಲ್ಲದೆ ಆಯುರ್ವೇದ ಔಷಧ ಎಂದೂ ಕರೆಯುತ್ತಾರೆ. ಜೇನುತುಪ್ಪವು ರುಚಿಕರವಾದ ಆಹಾರ ಪದಾರ್ಥವಾಗಿದೆ. ಇದನ್ನು ನಾವು ನಮ್ಮ ಆಹಾರದಲ್ಲಿ ಹಲವು ವಿಧಗಳಲ್ಲಿ ಸೇರಿಸಿಕೊಳ್ಳಬಹುದು. ಇಲ್ಲವೇ ಹಾಗೆಯೇ ಸೇವಿಸಬಹುದು. ಅನೇಕ ಜನರು ಇದನ್ನು ಹಾಲಿನೊಂದಿಗೆ (Milk) ಬೆರೆಸಿ ಕುಡಿಯುತ್ತಾರೆ. ಇನ್ನೂ ಕೆಲವರು ಇದನ್ನು ಸಿಹಿ ಖಾದ್ಯಗಳನ್ನು ತಯಾರಿಸಲು ಬಳಸುತ್ತಾರೆ. ನೈಸರ್ಗಿಕ ಜೇನುಗೂಡಿನಿಂದ ತೆಗೆದ ತಾಜಾ, ಜೇನುತುಪ್ಪದ ರುಚಿಯನ್ನು (Taste) ವಿವರಿಸುವುದು ಸುಲಭವಲ್ಲ. ಈ ಜೇನುತುಪ್ಪ ತಯಾರಿಸುವ ಜೇನುಗಳ ಬಗ್ಗೆ ನಿಮಗೆಷ್ಟು ತಿಳಿದಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

ಉತ್ತಮ ಆದಾಯ ನೀಡುತ್ತಿರುವ ಜೇನುಸಾಕಣೆ 
ಇತ್ತೀಚೆಗೆ ತಯಾರಾಗುತ್ತಿರುವ ನುಗ್ಗೆ ಹೂವಿನ ಮಕರಂದದಲ್ಲಿ ತಯಾರಾದ ಜೇನುತುಪ್ಪ ಆಹಾರ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿದೆ. ರೈತರಿಗೆ ಈ ಬಗೆಯ ಜೇನುತುಪ್ಪ ಸಾಕಷ್ಟು ಆದಾಯವನ್ನು ಸಹ ತಂದುಕೊಡುತ್ತಿದೆ. ಇದೇ ರೀತಿಯ ಕೃಷಿಯನ್ನೊಬ್ಬರು ಮಾಡುತ್ತಿದ್ದು, ಉದ್ಯಮ ಸಿಹಿಯಾಗಿದೆ. ರೈತ ಮತ್ತು ಜೇನುಸಾಕಣೆದಾರ ಎನ್ ದಂಡಾಯುತಪಾಣಿ ಅವರು ಕಾವೇರಿ ನದಿ ಮುಖಜ ಭೂಮಿಯಲ್ಲಿ ಕೃಷಿಯೊಂದಿಗೆ ಜೇನುಸಾಕಣೆ ಮಾಡುತ್ತಿದ್ದು, ಲಾಭವನ್ನು ಪಡೆಯುತ್ತಿದ್ದಾರೆ.

ಮೊರಿಂಗಾ ಜೇನುತುಪ್ಪವನ್ನು ತಯಾರಿಸುವ ಜೇನು ಸಾಕಾಣಿಕೆ
ಕರೂರ್ ಜಿಲ್ಲೆಯ ಕುರುಂಬಪಟ್ಟಿ ಗ್ರಾಮದಲ್ಲಿ ಈ ಮೊರಿಂಗಾ ಜೇನುತುಪ್ಪವನ್ನು ತಯಾರಿಸುವ ಜೇನು ಸಾಕಾಣಿಕೆ ನಡೆಸಲಾಗುತ್ತಿದೆ. ತಮಿಳುನಾಡಿನ ಕ್ಷಿಪ್ರವಾಗಿ ಬೆಳೆಯುತ್ತಿರುವ ಕುಶಲಕರ್ಮಿಗಳ ಆಹಾರದ ಮಾರುಕಟ್ಟೆಯಲ್ಲಿ, ಮೊರಿಂಗಾ ಜೇನುತುಪ್ಪವು ಅದರ ಸುವಾಸನೆಯಿಂದಲೇ ಜನಪ್ರಿಯವಾಗಿದೆ.

ಇದನ್ನೂ ಓದಿ: Business Ideas: ಖುಷಿ ತಂದ ಮೆಣಸಿನ ಕೃಷಿ, 1 ಲಕ್ಷದ 80 ಸಾವಿರ ಲಾಭ ಗಳಿಸಿದ ಮಹಿಳೆಯರು!

"ನಾನು 20 ವರ್ಷಗಳ ಹಿಂದೆ ಶುದ್ಧ ಜೇನುತುಪ್ಪಕ್ಕಾಗಿ ನನ್ನ ಅನ್ವೇಷಣೆಯನ್ನು ಪ್ರಾರಂಭಿಸಿದೆ, ಏಕೆಂದರೆ ವಾಣಿಜ್ಯಿಕವಾಗಿ ಮಾರಾಟವಾಗುವ ಎಲ್ಲಾ ಪ್ರಭೇದಗಳು ರುಚಿ ವರ್ಧಕಗಳು ಅಥವಾ ಸಿಹಿಕಾರಕಗಳನ್ನು ಬಳಸುತ್ತಿರುವಂತೆ ಕಾಣಿಸುತ್ತದೆ. ಕಾಡಿನಲ್ಲಿ ಸಿಗುವ ಜೇನು ಗೂಡುಗಳಿಂದ ಮಾತ್ರ ಇದನ್ನು ಪಡೆಯಬಹುದಿತ್ತು,’’ ಎಂದು ಜೇನು ಕೃಷಿ ರೈತ ಎನ್. ದಂಡಾಯುತಪಾಣಿ ಹೇಳಿದರು.

ಜೇನುಸಾಕಣೆ ಉದ್ಯಮದಿಂದ ತಯಾರಾಗುವ ಜೇನುತಪ್ಪವೆಷ್ಟು ನೋಡಿ
53 ವರ್ಷ ವಯಸ್ಸಿನವರಾದ ಎನ್‌. ದಂಡಾಯುತಪಾಣಿ ಕಾವೇರಿ ನದಿ ಮುಖಜ ಭೂಮಿಯಲ್ಲಿನ 300 ರೈತರಲ್ಲಿ ಒಬ್ಬರಾಗಿದ್ದಾರೆ. ಅವರು ಕೃಷಿಯೊಂದಿಗೆ ಜೇನುನೊಣವನ್ನು ಸಾಕಾಣಿಕೆ ಮಾಡಿ ಯಶಸ್ಸನ್ನು ಪಡೆಯುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ, ಕುರುಂಬಪಟ್ಟಿಯಲ್ಲಿ ಮೊರಿಂಗವನ್ನು ಬೆಳೆಯುವುದರ ಜೊತೆಗೆ, ದಂಡಾಯುತಪಾಣಿ ಅವರು ತಮಿಳುನಾಡು ಮತ್ತು ಕರ್ನಾಟಕದ ಬೆಳೆಗಳ ರೈತರೊಂದಿಗೆ ತಮ್ಮ ಮರದ ಜೇನುಗೂಡಿನ ಪೆಟ್ಟಿಗೆಗಳನ್ನು ಅವರ ಹೊಲಗಳಲ್ಲಿ ಇರಿಸುವಲ್ಲಿ ಸಹಾಯ ಮಾಡುತ್ತಿದ್ದಾರೆ. ಅವರ ಜೇನುಸಾಕಣೆ ಉದ್ಯಮವು ವರ್ಷಕ್ಕೆ ತಮಿಳುನಾಡಿನಲ್ಲಿ ಐದು ಟನ್ ಮತ್ತು ಕರ್ನಾಟಕದಲ್ಲಿ 12 ಟನ್ ಮೊರಿಂಗಾ ಜೇನುತುಪ್ಪವನ್ನು ಉತ್ಪಾದಿಸುತ್ತದೆ.1998 ರಲ್ಲಿ ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಸಸ್ಯ ಸಂರಕ್ಷಣಾ ಅಧ್ಯಯನ ಕೇಂದ್ರದ ಕೃಷಿ ಕೀಟಶಾಸ್ತ್ರ ವಿಭಾಗವು ನಡೆಸಿದ ಕೋರ್ಸ್ ಮೂಲಕ ದಂಡಾಯುತಪಾಣಿ ಜೇನುಸಾಕಣೆಯಲ್ಲಿ ತರಬೇತಿ ಪಡೆದರು ಮತ್ತು 10 ಪೆಟ್ಟಿಗೆ ಭಾರತೀಯ ಜೇನುನೊಣಗಳೊಂದಿಗೆ ಅವರು ತಮ್ಮ ಮೊದಲ ಜೇನುನೋಣ ಸಾಕಾಣಿಕೆ ಪ್ರಾರಂಭಿಸಿದರು. ಆದರೆ ಜೇನುನೊಣಗಳು ಜೇನುಗೂಡನ್ನು ಬಿಟ್ಟು ದೂರ ಹೋಗುತ್ತಿದ್ದವು. ಆದ್ದರಿಂದ ಅವರು ಇಟಾಲಿಯನ್ ಜೇನುನೊಣಗಳನ್ನು ಸಾಕಲು ಪ್ರಾರಂಭಿಸಿದರು, ಇದಕ್ಕಾಗಿ ಅವರು 2001 ರಲ್ಲಿ ಟಿಎನ್‌ಎಯು-ವಿನ್‌ರಾಕ್‌ ಇಂಟರ್‌ನ್ಯಾಷನಲ್‌ (ಯುಸ್‌) ಸಹಯೋಗದ ಕಾರ್ಯಾಗಾರದ ಮೂಲಕ ತರಬೇತಿ ಪಡೆದರು.

ಇಟಾಲಿಯನ್ ಜೇನುನೊಣಗಳ ವಿಶೇಷತೆ ಏನು
ಇಟಾಲಿಯನ್ ಜೇನುನೊಣಗಳು ಬಲವಾದ ಹೂವಿನ ಸ್ಥಿರತೆಯನ್ನು ಹೊಂದಿವೆ. "ಅದು ಒಂದು ಹೂವಿನ ಬಳಿಗೆ ಹೋದರೆ, ಅದು ಋತುವಿನ ಅಂತ್ಯದವರೆಗೆ ಆ ಹೂವುಗಳನ್ನು ಪರಾಗಸ್ಪರ್ಶ ಮಾಡಲು ಮತ್ತೆ ಮತ್ತೆ ಹಿಂತಿರುಗುತ್ತದೆ. ಆದ್ದರಿಂದ ಒಂದೇ-ಹೂವಿನ ಜೇನುತುಪ್ಪವನ್ನು ಉತ್ಪಾದಿಸಲು ಬಯಸುವವರಿಗೆ ಈ ಜಾತಿಯು ಸೂಕ್ತವಾಗಿದೆ. ಮತ್ತೊಂದೆಡೆ, ಹಳ್ಳಿಗಾಡಿನ ಜೇನುನೊಣಗಳು ಮತ್ತು ಪರ್ವತ ಜೇನುನೊಣಗಳು ವಿವಿಧ ಹೂವುಗಳಿಂದ ಮಕರಂದವನ್ನು ಬೆರೆಸಿ ತರುತ್ತವೆ. ನಮ್ಮ ಮೊರಿಂಗಾ ಜೇನುತುಪ್ಪದ ಜೊತೆಗೆ, ತುಂಬೈ ಪೂ (ಲ್ಯೂಕಾಸ್ ಆಸ್ಪೆರಾ), ಮಾವು ಮತ್ತು ಮೆಣಸಿನ ಹೂವುಗಳ ಮಕರಂದ ಹೀರುವ ಜೇನುನೊಣಗಳ ಜಾತಿಗಳನ್ನು ಕೂಡ ನಾವು ಹೊಂದಿದ್ದೇವೆ ” ಎಂದು ದಂಡಯುತಪಾಣಿ ಹೇಳುತ್ತಾರೆ.

ಇದನ್ನೂ ಓದಿ:  Tollywood: ಈ ರೆಸ್ಟೋರೆಂಟ್‌, ಪಬ್​ಗಳು ಟಾಲಿವುಡ್​ ಸೂಪರ್​​ ಸ್ಟಾರ್​ಗಳಿಗೆ ಸೇರಿದ್ದು! ಅಬ್ಬೋ, ಏನ್​ ದುಡ್ಡು ಗುರೂ

ಮೊರಿಂಗಾ ಮತ್ತು ಬೇವಿನ ಜೇನು ಹೆಚ್ಚು ಜನಪ್ರಿಯವಾಗಿದ್ದು,ಪ್ರಸ್ತುತ ನಾವು ತಿಂಗಳಿಗೆ ಸುಮಾರು 40-50 ಆರ್ಡರ್‌ಗಳನ್ನು ಪಡೆಯುತ್ತಿದ್ದೇವೆ ಎಂದಿದ್ದಾರೆ. ಅಲ್ಲದೇ ಈ ನುಗ್ಗೆ ಹೂವಿನ ಜೇನಿನ ಬೆಲೆ ಕಿಲೋಗೆ ₹800 ರಿಂದ ₹1,200 ಇದೆ. ತಿರುಚ್ಚಿ ಮೂಲದ ಸಂಸ್ಥೆಯು ತನ್ನ ಉತ್ಪನ್ನಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಎಲೈಟ್ ಒರ್ಗೊ ಹನಿ ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ
Published by:Ashwini Prabhu
First published: