• Home
  • »
  • News
  • »
  • business
  • »
  • MissCallPay: ಫೋನ್​ ಪೇ - ಗೂಗಲ್ ​ಪೇ ಅಲ್ಲ, ಮಿಸ್ಡ್​ ಕಾಲ್ ಮೂಲಕ​ ಮತ್ತೊಬ್ಬರಿಗೆ ಹಣ ಕಳಿಸಬಹುದು!

MissCallPay: ಫೋನ್​ ಪೇ - ಗೂಗಲ್ ​ಪೇ ಅಲ್ಲ, ಮಿಸ್ಡ್​ ಕಾಲ್ ಮೂಲಕ​ ಮತ್ತೊಬ್ಬರಿಗೆ ಹಣ ಕಳಿಸಬಹುದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಿಸ್ಡ್ ಕಾಲ್ ಮೂಲಕವೂ ಹಣ ವರ್ಗಾವಣೆ ಮಾಡಬಹುದು. ಈ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ನಿಜಕ್ಕೂ ಮಿಸ್ಡ್​ ಕಾಲ್​ ನೀಡುವ ಮೂಲ ಹಣ ಕಳಿಸಬಹುದಾ? ಮುಂದೆ ನೋಡಿ

  • Share this:

ಮೊದೆಲೆಲ್ಲಾ ಯಾರಿಗಾದರೂ ದುಡ್ಡು (Money) ಕೊಡಬೇಕು ಅಂದ್ರೆ ಅವರು ಇರೋ ಕಡೆಗೆ ಹೋಗಿ ಕೊಟ್ಟಿ ಬರಬೇಕಿತ್ತು. ಇಲ್ಲವಾದರೆ ಬ್ಯಾಂಕ್​ (Bank) ಗೆ ಹೋಗಿ ಚೆಕ್ (Cheque)​ ಹಾಕಿ, ಆ ಚೆಕ್​ ಅಪ್ರೋವಲ್​ ಆಗಿ ದುಡ್ಡು ಸೇರೋದಕ್ಕೆ ಕನಿಷ್ಠ 2 ದಿನ ಬೇಕಿತ್ತು. ಆದ್ರೆ, ಕಾಲ ಬದಲಾಗಿದೆ. ಈಗೆಲ್ಲಾ ಏನಿದರೂ ಯುಪಿಐ (UPI) ಕಾಲ. ಕೆಲವೇ ಕೆಲವು ಸೆಕೆಂಡುಗಳಲ್ಲಿ ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಗೂಗಲ್ ಪೇ (Google Pay) , ಫೋನ್ ಪೇ (Phone Pay) ಮೂಲಕ ಹಣ ಹೇಗೆ ಕಳುಹಿಸಬೇಕೆಂದು ಎಲ್ಲರಿಗೂ ತಿಳಿದಿದೆ. ಪೇಟಿಎಂ ಮೂಲಕವೂ ಹಣ ವರ್ಗಾವಣೆ ಮಾಡಬಹುದು. ಇಲ್ಲದಿದ್ದರೆ ಬ್ಯಾಂಕುಗಳು ನೀವು ಮೊಬೈಲ್ ಅಪ್ಲಿಕೇಶನ್‌ (Mobile Application) ಗಳು ಮತ್ತು ನೆಟ್ ಬ್ಯಾಂಕಿಂಗ್ (Net Banking) ಮೂಲಕ ಇತರ ಜನರಿಗೆ ಹಣವನ್ನು ಕಳುಹಿಸಬಹುದು.


ಆದರೆ ಮಿಸ್ಡ್ ಕಾಲ್ ಮೂಲಕವೂ ಹಣ ವರ್ಗಾವಣೆ ಮಾಡಬಹುದು. ಈ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ. ನಿಜಕ್ಕೂ ಮಿಸ್ಡ್​ ಕಾಲ್​ ನೀಡುವ ಮೂಲ ಹಣ ಕಳಿಸಬಹುದಾ? ನಿಜವಾಗಲೂ ಮಿಸ್ಡ್​ ಕಾಲ್​ ಮೂಲಕ ಹಣ ವರ್ಗಾಯಿಸಬಹುದು. ಅದು ಹೇಗೆ ಅಂತೀರಾ? ಮುಂದೆ ನೋಡಿ.


ಮಿಸ್ಡ್​ ಕಾಲ್​ ಮೂಲಕ ಹೀಗೆ ಹಣ ಕಳುಹಿಸಿ!


ಮಿಸ್ಡ್ ಕಾಲ್ ಮೂಲಕ ಹಣ ವರ್ಗಾವಣೆ ಮಾಡುವ ಸೇವೆಗಳಿವೆ. ಈ ಸೇವೆಗಳನ್ನು UPI ಮೂಲಕ ಪಡೆಯಬಹುದು. Miscalpay ಎಂಬ ಕಂಪನಿಯು ಇದೇ ರೀತಿಯ ಸೇವೆಗಳನ್ನು ನೀಡುತ್ತದೆ. ಕಂಪನಿಯು ಇತ್ತೀಚೆಗೆ ಬ್ಯಾಂಕ್ ಆಫ್ ಇಂಡಿಯಾ ಮತ್ತು IDFC ಫಸ್ ಬ್ಯಾಂಕ್ ಜೊತೆ ಪಾಲುದಾರಿಕೆ ಹೊಂದಿದೆ. ಅಂದರೆ ಈ ಬ್ಯಾಂಕಿನ ಗ್ರಾಹಕರು ಮಿಸ್ಡ್ ಕಾಲ್ ಸೇವೆಗಳನ್ನು ಪಡೆಯಬಹುದು.


ಸ್ಮಾರ್ಟ್‌ಫೋನ್‌ಗಳ ಮೂಲಕ ಸೆಕೆಂಡುಗಳಲ್ಲಿ ಯುಪಿಐ ಮೂಲಕ ವಹಿವಾಟು ಮಾಡಬಹುದು. ಆದರೆ ಫೀಚರ್ ಫೋನ್ ಮೂಲಕವೂ ಯುಪಿಐ ವ್ಯವಸ್ಥೆಯಡಿ ಮಿಸ್ಡ್ ಕಾಲ್ ಮೂಲಕ ಹಣ ಪಡೆಯಬಹುದು. ವಹಿವಾಟುಗಳನ್ನು ಪೂರ್ಣಗೊಳಿಸಬಹುದು. ಈ ಮಿಸ್ಡ್ ಕಾಲ್ ಪಾವತಿ ಸೇವೆಗಳು UPI123 ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುತ್ತವೆ.


MiscallPay ಮೂಲಕ ಹಣ ಕಳುಹಿಸಬಹುದು!


ಫೋನ್ ಬಳಕೆದಾರರು MiscallPay ಮೂಲಕ ತಮ್ಮ ಬ್ಯಾಂಕ್ ಖಾತೆಯನ್ನು ಪ್ರವೇಶಿಸಬಹುದು. ಹಣ ವರ್ಗಾವಣೆ ಸೌಲಭ್ಯವನ್ನು ಪಡೆಯಬಹುದು. ಬಿಲ್ ಪಾವತಿಯನ್ನೂ ಮಾಡಬಹುದು. ಒಂದು ನಂಬರ್ ಗೆ ಮಿಸ್ಡ್ ಕಾಲ್ ಕೊಟ್ಟರೆ ಸಾಕು. Miscalpay ಈ ಸೇವೆಗಳಿಗಾಗಿ NPCI ಜೊತೆಗೆ ಕಾರ್ಯನಿರ್ವಹಿಸುತ್ತಿದೆ. ಈಗ ಮಿಸ್ಡ್ ಕಾಲ್ ಮೂಲಕ ವಹಿವಾಟುಗಳನ್ನು ಹೇಗೆ ನಿರ್ವಹಿಸುವುದು ಎಂದು ತಿಳಿಯೋಣ.


ಮೊದಲು 08066740740 ಗೆ ಕರೆ ಮಾಡಬೇಕು. ಕರೆ ಸ್ವಯಂಚಾಲಿತವಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ಕರೆ ಸಂಪರ್ಕ ಕಡಿತಗೊಂಡ ನಂತರ ನಿಮ್ಮ ಸಂಖ್ಯೆಗೆ ಮತ್ತೆ ಕರೆ ಮಾಡಲಾಗುತ್ತದೆ. 10 ಸೆಕೆಂಡುಗಳ ಒಳಗೆ ಮರಳಿ ಕರೆ ಬರುತ್ತೆ. ಆ ಕರೆಯನ್ನು ರಿಸೀವ್​ ಮಾಡಿ ಈಗ ನೀವು ಪಿನ್ ಸಂಖ್ಯೆಯನ್ನು ನಮೂದಿಸಬೇಕು.


ನಂತರ ನಿಮ್ಮ ವಹಿವಾಟು ಪೂರ್ಣಗೊಳ್ಳುತ್ತದೆ. ವಹಿವಾಟುಗಳನ್ನು ಈ ರೀತಿ ಸುಲಭವಾಗಿ ಪೂರ್ಣಗೊಳಿಸಬಹುದು. ಈ ಮಿಸ್ಡ್​ ಕಾಲ್​ ಪಾವತಿ ಸೇವೆಗಳು ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ಲಭ್ಯವಿದೆ. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ. ವಹಿವಾಟು ಮತ್ತು ಬಿಲ್ ಪಾವತಿಗಳನ್ನು ಸುಲಭವಾಗಿ ನಿರ್ವಹಿಸಿ. ದೇಶದಲ್ಲಿ ಇನ್ನೂ ಹಲವರು ಫೀಚರ್ ಫೋನ್ ಬಳಸುತ್ತಿರುವುದು ಗೊತ್ತೇ ಇದೆ. ಈ ಸೇವೆಗಳು ಅವರಿಗೆ ಪರಿಹಾರ ನೀಡುತ್ತವೆ ಎಂದು ಹೇಳಬಹುದು.

Published by:ವಾಸುದೇವ್ ಎಂ
First published: