• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Aadhaar Card: ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಬಹುದು ಗೊತ್ತಾ? ಇಲ್ಲಿದೆ ಮಾಹಿತಿ

Aadhaar Card: ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಬಹುದು ಗೊತ್ತಾ? ಇಲ್ಲಿದೆ ಮಾಹಿತಿ

ಆಧಾರ್​

ಆಧಾರ್​

ನವೀಕರಣ ಅಥವಾ ಬದಲಾವಣೆಯನ್ನು ಮನಸೋಯಿಚ್ಚೆ ಮಾಡುವಂತ್ತಿಲ್ಲ. ಭದ್ರತೆಯ ಕಾರಣದಿಂದ ಕೆಲವು ಮಿತಿಗಳಿದ್ದು, ಭಾರತೀಯ ವಿಶಿಷ್ಟ ಗುರುತಿನ ಚೀಟಿಯ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ, ಬಳಕೆದಾರರು ಇದನ್ನು ಎರಡು ಬಾರಿ ಮಾತ್ರ ನವೀಕರಿಸಬಹುದು.

  • Trending Desk
  • 2-MIN READ
  • Last Updated :
  • Share this:

ಆಧಾರ್ ಕಾರ್ಡ್‌ ಭಾರತದ ಪ್ರಜೆಗಳಿಗೆ UIDAI ನೀಡಿದ ಪ್ರಮುಖ ಗುರುತಿನ ಪುರಾವೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನೀಡಲಾದ 12-ಅಂಕಿಯ  ಗುರುತಿನ ಸಂಖ್ಯೆಯ ಕಾರ್ಡ್‌ ಈಗ ಎಲ್ಲಾ ಕಡೆ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ಕೆಲಸಗಳಲ್ಲಿ (Government Work) ಅಗತ್ಯವಾಗಿ ಕೇಳುವ ಈ ಕಾರ್ಡ್‌ ನಮಗೆ ಸೌಲಭ್ಯಗಳನ್ನು ಪಡೆದುಕೊಳ್ಳವಲ್ಲಿ ಅಗತ್ಯವಾಗಿರುವ ಗುರುತಿನ ಚೀಟಿಯಾಗಿದೆ. ಆಧಾರ್‌ ಕಾರ್ಡ್‌ನಲ್ಲಿ (Adhar Card) ಗುರುತಿನ ಸಂಖ್ಯೆಯನ್ನು ಹೊರತುಪಡಿಸಿ ಮಿಕ್ಕೆಲ್ಲಾ ಮಾಹಿತಿಗಳನ್ನು ನಾವು ಬದಲಾಯಿಸಬಹುದು, ನವೀಕರಿಸಬಹುದು. ಹೆಸರು ಆಗಲಿ, ಮೊಬೈಲ್‌ (Mobile) ಸಂಖ್ಯೆಯಾಗಲಿ (Number), ವಿಳಾಸವಾಗಲಿ ತಪಿದ್ದರೆ ಸರಿಪಡಿಸಿಕೊಳ್ಳುವ ಆಯ್ಕೆ ನಾಗರಿಕರಿಗಿದೆ.


ಹಾಗಂತ ನವೀಕರಣ ಅಥವಾ ಬದಲಾವಣೆಯನ್ನು ಮನಸೋಯಿಚ್ಚೆ ಮಾಡುವಂತ್ತಿಲ್ಲ. ಭದ್ರತೆಯ ಕಾರಣದಿಂದ ಕೆಲವು ಮಿತಿಗಳಿದ್ದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ, ಬಳಕೆದಾರರು ಇದನ್ನು ಎರಡು ಬಾರಿ ಮಾತ್ರ ನವೀಕರಿಸಬಹುದು
ಹಾಗಾದರೆ ನಾವಿಲ್ಲಿ ಆಧಾರ್ ಕಾರ್ಡ್‌ ಅಪ್‌ಡೇಟ್‌ ಮಾಡಲು ಎಷ್ಟು ಬಾರಿ ಸಾಧ್ಯ ಎಂಬುದನ್ನು ತಿಳಿಯೋಣ.


ಆಧಾರ್ ವಿವರಗಳನ್ನು ಎಷ್ಟು ಬಾರಿ ನವೀಕರಿಸಬಹುದು?
* ಹೆಸರು: ಆಧಾರ್ ಕಾರ್ಡ್‌ನಲ್ಲಿ ಹೆಸರು ತಪ್ಪಾಗಿದ್ದರೆ ಬಳಕೆದಾರರರಿಗೆ ಹೆಸರನ್ನು ಎರಡು ಬಾರಿ ಬದಲಾಯಿಸುವ ಅವಕಾಶ ಇದೆ


* ಹುಟ್ಟಿದ ದಿನಾಂಕ: ಆಧಾರ್‌ನಲ್ಲಿರುವ ಜನ್ಮ ದಿನಾಂಕವನ್ನು ಬದಲಾಯಿಸಲು ಸಾಧ್ಯವಿಲ್ಲ. ಡೇಟಾ ಎಂಟ್ರಿ ಪ್ರಕ್ರಿಯೆಯಲ್ಲಿ ದೋಷದ ಸಂದರ್ಭದಲ್ಲಿ ಮಾತ್ರ ಇದನ್ನು ನವೀಕರಿಸಲು ಸಾಧ್ಯ. ಅಂದರೆ ನಿಮ್ಮ ಆಧಾರ್‌ನಲ್ಲಿ ನೀವು ಜನ್ಮ ದಿನಾಂಕವನ್ನು (DOB) ಒಮ್ಮೆ ಮಾತ್ರ ನವೀಕರಿಸಬಹುದು.


* ವಿಳಾಸ ಮತ್ತು ಲಿಂಗ ಬದಲಾವಣೆಗಳು: ವಿಳಾಸ ಮತ್ತು ಲಿಂಗ ಕ್ಷೇತ್ರಗಳೆರಡನ್ನೂ ಒಮ್ಮೆ ಮಾತ್ರ ಬದಲಾಯಿಸಬಹುದು.
ಆಧಾರ್‌ನಲ್ಲಿ ಕಣ್ತಪ್ಪಿನ ಕಾರಣದಿಂದಾಗಿ ಒಮೊಮ್ಮೆ ಕೆಲವು ವಿಳಾಸಗಳನ್ನು ತಪ್ಪಾಗಿ ಲಗತ್ತಿಸಿರುತ್ತೇವೆ.


ಇದನ್ನೂ ಓದಿ: Small Business: ಸಣ್ಣ ವ್ಯಾಪಾರೋದ್ಯಮಗಳನ್ನು ಹೇಗೆ ಆರಂಭಿಸಬಹುದು? ಪಾಲಿಸಬೇಕಾದ ಸಲಹೆ ಸೂಚನೆಗಳೇನು?


ಹೀಗೆ ತಪ್ಪಾಗಿ ನೀಡಲಾದ ಹೆಸರು, ಲಿಂಗ ಬದಲಾವಣೆ, ವಿಳಾಸವನ್ನು ಬದಲಾಯಿಸಬಹುದು. ಯುಐಡಿಎಐ ಪ್ರಾದೇಶಿಕ ಕಚೇರಿಗೆ ಭೇಟಿ ನೀಡುವ ಮೂಲಕ ಆಧಾರ್‌ನ ಹೆಸರು, ಲಿಂಗ ಅಥವಾ ನಿರ್ದಿಷ್ಟ ಮಿತಿಯನ್ನು ಮೀರಿ ಹುಟ್ಟಿದ ದಿನಾಂಕದ ಬದಲಾವಣೆಗಳನ್ನು ಮಾಡುವ ಅವಕಾಶ ಇದೆ.


ಆಧಾರ್‌ನಲ್ಲಿ ಬದಲಾವಣೆಗಳನ್ನು ಮಾಡುವುದು ಹೇಗೆ?
- ಬಳಕೆದಾರರು ತಮ್ಮ ಹೆಸರು, ಜನ್ಮ ದಿನಾಂಕ ಅಥವಾ ಲಿಂಗವನ್ನು ನವೀಕರಿಸಲು ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗಬೇಕು.
- ಆಧಾರ್ ವಿವರಗಳನ್ನು ಅಪ್‌ಡೇಟ್ ಮಾಡಲು ನಿಗದಿಪಡಿಸಿದ ಸಮಯವನ್ನು ಮೀರಿದ್ದರೆ ಇಮೇಲ್, ಮೇಲ್ ಅಥವಾ UIDAI ಪ್ರಾದೇಶಿಕ ಕಚೇರಿಯ ಮೂಲಕ ನೋಂದಣಿ ಕೇಂದ್ರಕ್ಕೆ ವಿನಂತಿಯನ್ನು ಕಳುಹಿಸಬೇಕು.


- ಬದಲಾವಣೆಗಾಗಿ ವಿನಂತಿಸುವ ಬಳಕೆದಾರರು ಕಾರಣ ಮತ್ತು URN ಸ್ಲಿಪ್, ಆಧಾರ್ ವಿವರಗಳು ಮತ್ತು ಪೋಷಕ ದಾಖಲೆಗಳ ಪ್ರತಿಯನ್ನು ಒದಗಿಸಬೇಕು.
- help@uidai.gov.in ಗೆ ಇಮೇಲ್ ಕಳುಹಿಸಬೇಕು.
- ಒಬ್ಬ ವ್ಯಕ್ತಿಯು ಇಮೇಲ್‌ ಮೂಲಕವೇ ನಿರ್ದಿಷ್ಟವಾಗಿ ವಿನಂತಿಸಿದ್ದರೆ UIDAI ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ.
- ಆಧಾರ್‌ನಲ್ಲಿ ಬದಲಾವಣೆಗಾಗಿ ವಿನಂತಿಸಿದ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಾದೇಶಿಕ ಕಚೇರಿಯು ತನಿಖೆಯನ್ನು ನಡೆಸುತ್ತದೆ.
- ಪ್ರಾದೇಶಿಕ ಕಚೇರಿಯು ಪರಿಶೀಲನೆಯನ್ನು ಪೂರ್ಣಗೊಳಿಸಿದ ನಂತರ, ಪ್ರಕ್ರಿಯೆ ಮತ್ತು ಮರುಸಂಸ್ಕರಣೆಗಾಗಿ ಮತ್ತೆ ವಿನಂತಿಯನ್ನು ಕಳುಹಿಸುತ್ತದೆ.




ಆಧಾರ್ ವಿವರಗಳನ್ನು ತಿದ್ದಪಡಿ ಮಾಡಲು ಅಗತ್ಯವಿರುವ ದಾಖಲೆಗಳು
- ಪಾಸ್ಪೋರ್ಟ್
- ಬ್ಯಾಂಕ್ ಸ್ಟೇಟ್‌ಮೆಂಟ್
- ಪೋಸ್ಟ್ ಆಫೀಸ್‌ನ ಪಾಸ್‌ಬುಕ್
- ಪಡಿತರ ಚೀಟಿ
- ಚಾಲನಾ ಪರವಾನಿಗೆ
- ಮತದಾರರ ಗುರುತಿನ ಚೀಟಿ
- ಸರ್ಕಾರಿ ಫೋಟೋ ID
- ಪಿಎಸ್‌ಯು ನೀಡಿದ ಸೇವಾ ಫೋಟೋ ಗುರುತಿನ ಚೀಟಿ
- ಮೂರು ತಿಂಗಳ ಹಿಂದಿನ ಕೆಲ ವಿದ್ಯುತ್‌ ಮತ್ತು ನೀರಿನ ಬಿಲ್
- ಮೂರು ತಿಂಗಳ ಹಿಂದಿನ ಕೆಲ ಟೆಲಿಫೋನ್ ಲ್ಯಾಂಡ್‌ಲೈನ್ ಬಿಲ್
- ಆಸ್ತಿ ತೆರಿಗೆ ರಶೀದಿಗಳು 12 ತಿಂಗಳಿಗಿಂತ ಹಳೆಯದಾಗಿರಬಾರದು.

First published: