Presumptive Taxation: ಸಣ್ಣ ಉದ್ಯಮಗಳಿಗೆ ಸರ್ಕಾರ ಭರ್ಜರಿ ಗಿಫ್ಟ್, ಸಿಗಲಿದೆ ಬರೋಬ್ಬರಿ 3 ಕೋಟಿ ಹಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Presumptive Taxation: ಸರ್ಕಾರವು 2023 ರ ಬಜೆಟ್‌ನಲ್ಲಿ ಸಣ್ಣ ಉದ್ಯಮಗಳಿಗೆ ಪರ್ಸಂಪ್ಟೀವ್ ಟ್ಯಾಕ್ಸೇಶನ್ (ಊಹೆಯ ತೆರಿಗೆಯ) ಮಿತಿಯನ್ನು 2 ಕೋಟಿಯಿಂದ 3 ಕೋಟಿಗೆ ಮತ್ತು ವೈಯಕ್ತಿಕ ವೃತ್ತಿಪರರಿಗೆ 50 ಲಕ್ಷದಿಂದ 75 ಲಕ್ಷಕ್ಕೆ ವಿಸ್ತರಿಸಿದೆ.

  • Trending Desk
  • 5-MIN READ
  • Last Updated :
  • Share this:

ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡುವ ಸಲುವಾಗಿ ಸರಕಾರವು (Govt) 2017-18 ರಲ್ಲಿ ಸಣ್ಣ ವ್ಯವಹಾರಗಳು ಮತ್ತು ವೈಯಕ್ತಿಕ ವೃತ್ತಿಪರರಿಗೆ ಲೆಕ್ಕಾಚಾರಗಳನ್ನು ನಿರ್ವಹಿಸುವುದರಿಂದ ವಿನಾಯಿತಿ ನೀಡಿದೆ. ಖಾತೆ ಪುಸ್ತಕಗಳ ನಿರ್ವಹಣೆ ಹಾಗೂ ಲೆಕ್ಕಪರಿಶೋಧನೆ ಮಾಡುವ ಕಿರಿಕಿರಿಯ ಕೆಲಸದಿಂದ ಪರಿಹಾರ ನೀಡಲು ಪ್ರಿಸಂಪ್ಟೀವ್ ಟ್ಯಾಕ್ಸೇಶನ್ (Presumptive Taxation) ಅನ್ನು ಪರಿಚಯಿಸಿತು.


ಸಣ್ಣ ಉದ್ಯಮಗಳಿಗೆ ನೆರವು ನೀಡುವ ಉದ್ದೇಶ:


ಸರ್ಕಾರವು 2023 ರ ಬಜೆಟ್‌ನಲ್ಲಿ ಸಣ್ಣ ಉದ್ಯಮಗಳಿಗೆ ಪರ್ಸಂಪ್ಟೀವ್ ಟ್ಯಾಕ್ಸೇಶನ್ (ಊಹೆಯ ತೆರಿಗೆಯ) ಮಿತಿಯನ್ನು 2 ಕೋಟಿಯಿಂದ 3 ಕೋಟಿಗೆ ಮತ್ತು ವೈಯಕ್ತಿಕ ವೃತ್ತಿಪರರಿಗೆ 50 ಲಕ್ಷದಿಂದ 75 ಲಕ್ಷಕ್ಕೆ ವಿಸ್ತರಿಸಿದೆ. ಈ ಹೊಸ ಮಿತಿಯು ಹೊಸ ಹಣಕಾಸು ವರ್ಷದಿಂದ ಅನ್ವಯವಾಗಲಿದೆ ಎಂದು ವರದಿಯಾಗಿದೆ.


ಪ್ರಿಸಂಪ್ಟೀವ್ ಟ್ಯಾಕ್ಸೇಶನ್ ಎಂದರೇನು?:


ಸರಳವಾಗಿ ಹೇಳುವುದಾದರೆ ಈ ರೀತಿಯ ತೆರಿಗೆಯನ್ನು ಆಯ್ಕೆಮಾಡುವವರು ತಮ್ಮ ಖರ್ಚುವೆಚ್ಚಗಳನ್ನು ತಮ್ಮ ಆದಾಯದಿಂದ ಅಂದಾಜು ಮಾಡುವ ಅಗತ್ಯವಿಲ್ಲ. ತೆರಿಗೆದಾರರು ತಮ್ಮ ಒಟ್ಟು ಆದಾಯದ ಶೇಕಡಾವಾರು ಪ್ರಮಾಣವನ್ನು ಮಾತ್ರ ಲೆಕ್ಕ ಹಾಕಬೇಕು ಮತ್ತು ಅದರ ಮೇಲೆ ತೆರಿಗೆ ಪಾವತಿಸಬೇಕು.


ಇದನ್ನೂ ಓದಿ: Aadhaar Update: ಆಧಾರ್ ಕಾರ್ಡ್​​ ಕುರಿತು ಮಹತ್ವದ ಮಾಹಿತಿ, ಆದಷ್ಟು ಬೇಗ ಈ ಕೆಲಸ ಮಾಡಿ


ಊಹೆಯ ತೆರಿಗೆಗೆ ಯಾರು ಅರ್ಜಿ ಸಲ್ಲಿಸಬಹುದು?:


ಕ್ಲಿಯರ್ ಟ್ಯಾಕ್ಸ್ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ಪ್ರಕಾರ, ಭಾರತದಲ್ಲಿ ತೆರಿಗೆ ಪಾವತಿಸುವ ಯಾವುದೇ ವ್ಯಕ್ತಿ, ಹಿಂದೂ ಅವಿಭಜಿತ ಕುಟುಂಬ (HUL) ಅಥವಾ ಪಾಲುದಾರಿಕೆ ಸಂಸ್ಥೆ (LLP ಹೊರತುಪಡಿಸಿ) ವ್ಯಾಪಾರ ಮತ್ತು ಯಾವುದೇ ವೈಯಕ್ತಿಕ ಅಥವಾ ಪಾಲುದಾರಿಕೆ ಸಂಸ್ಥೆಗೆ ನಿರ್ದಿಷ್ಟಪಡಿಸಿದ ಊಹೆ ತೆರಿಗೆಯನ್ನು ಆಯ್ಕೆ ಮಾಡಬಹುದು ಎಂದು ತಿಳಿಸಿದ್ದಾರೆ. ಐಟಿಆರ್ ಸಲ್ಲಿಸುವ ಸಮಯದಲ್ಲಿ ಇದನ್ನು ಆಯ್ಕೆ ಮಾಡಬಹುದು. ಊಹಾತ್ಮಕ ತೆರಿಗೆಗೆ ಅನ್ವಯವಾಗುವ ಐಟಿಆರ್ ಫಾರ್ಮ್‌ಗಳು ಐಟಿಆರ್ 3 ಅಥವಾ ಐಟಿಆರ್ 4 ಎಂದು ಅರ್ಚಿತ್ ತಿಳಿಸಿದ್ದಾರೆ.


ತೆರಿಗೆ ಸಲ್ಲಿಸುವ ಮೊದಲು ಪರಿಗಣಿಸಬೇಕಾದ ಅಂಶಗಳು:


ತಜ್ಞರ ಪ್ರಕಾರ ಊಹೆಯ ತೆರಿಗೆಯನ್ನು ಆಯ್ಕೆಮಾಡುವ ಮೊದಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು. ವ್ಯಾಪಾರ ನಡೆಸುತ್ತಿರುವವರು ಈ ರೀತಿಯ ತೆರಿಗೆಯನ್ನು ಆಯ್ಕೆಮಾಡಿದರೆ ನಿರಂತರವಾಗಿ 5 ವರ್ಷಗಳವರೆಗೆ ಆರಿಸಬೇಕಾಗುತ್ತದೆ. ಇನ್ನಾವ ತೆರಿಗೆ ವಿಧಾನವನ್ನು ಆಯ್ಕೆಮಾಡಬಾರದು.




ತೆರಿಗೆದಾರರು ಪೂರ್ವನಿರ್ಧರಿತ ಶೇಕಡಾವಾರು ಲಾಭವನ್ನು ಘೋಷಿಸಬೇಕು, ಅಂದರೆ ಕನಿಷ್ಠ 8% ಅಥವಾ 6% ವ್ಯಾಪಾರಕ್ಕೆ ರಶೀದಿಯ ವಿಧಾನ ಮತ್ತು ರಶೀದಿಯ ಕಾಲಾವಧಿಯನ್ನು ಅವಲಂಬಿಸಿ ಮತ್ತು ವೃತ್ತಿಗೆ ಕನಿಷ್ಠ 50% ಹೀಗೆ ಲಾಭವನ್ನು ಘೋಷಿಸಬೇಕು. ತೆರಿಗೆದಾರ ಲಾಭ ನಷ್ಟಗಳ ಸರಿಯಾದ ವಿವರವನ್ನು ತೆರಿಗೆ ಆಯ್ಕೆಯ ಸಮಯದಲ್ಲಿ ನೀಡಬೇಕಾಗುತ್ತದೆ. ತೆರಿಗೆದಾರರು 5 ವರ್ಷಗಳ ಮೊದಲು ಅದರಿಂದ ಹೊರಗುಳಿಯುತ್ತಿದ್ದರೆ ಅಥವಾ ಕಡಿಮೆ ಶೇಕಡಾವಾರು ಲಾಭವನ್ನು ಘೋಷಿಸಿದರೆ ಅವರು ತೆರಿಗೆ ಆಡಿಟ್‌ಗೆ ಒಳಪಡುತ್ತಾರೆ.


ಊಹೆಯ ತೆರಿಗೆಯನ್ನು ಹೇಗೆ ಲೆಕ್ಕ ಹಾಕುವುದು?:


ಅನುಪ್ ಪ್ರಕಾರ, ಒಟ್ಟು ವಹಿವಾಟಿನ ಶೇಕಡಾ 8 ರಷ್ಟನ್ನು ನಗದು ರಸೀದಿಗಳ ಸಂದರ್ಭದಲ್ಲಿ ತೆರಿಗೆದಾರರ ಆದಾಯವೆಂದು ಭಾವಿಸಲಾಗುತ್ತದೆ. ಆದಾಗ್ಯೂ, ಡಿಜಿಟಲ್ ರಸೀದಿಗಳಿಗೆ (95 ಪ್ರತಿಶತಕ್ಕಿಂತ ಹೆಚ್ಚು ರಶೀದಿಗಳು ಡಿಜಿಟಲ್ ಆಗಿದ್ದರೆ), ಒಟ್ಟು ವಹಿವಾಟಿನ 6% ವನ್ನು ತೆರಿಗೆಯಾಗಿ ಪರಿಗಣಿಸುವುದರೊಂದಿಗೆ 2% ದಷ್ಟು ಲಾಭವನ್ನು ನೀಡಲಾಗುತ್ತದೆ.


ಊಹೆಯ ತೆರಿಗೆ ಅಡಿಯಲ್ಲಿ ಆದಾಯ ತೆರಿಗೆ ವಿಭಾಗಗಳು


ಆದಾಯ ತೆರಿಗೆ ಕಾಯಿದೆಯು 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 44AD, 44ADA ಮತ್ತು 44AE ಅಡಿಯಲ್ಲಿ ಊಹೆಯ ತೆರಿಗೆ ಯೋಜನೆಯನ್ನು ರೂಪಿಸಿದೆ.


ಕಮಿಷನ್ ಅಥವಾ ಬ್ರೋಕರೇಜ್ ಸ್ವರೂಪದಲ್ಲಿ ಆದಾಯವನ್ನು ಗಳಿಸುವ ವ್ಯಕ್ತಿಯು ಊಹಿಸುವ ತೆರಿಗೆ ಯೋಜನೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ವರ್ಷಕ್ಕೆ ಒಟ್ಟು ವಹಿವಾಟು ಅಥವಾ ಒಟ್ಟು ರಸೀದಿಗಳು 3 ಕೋಟಿ ರೂಪಾಯಿಗಳನ್ನು ಮೀರಿದ ವ್ಯಕ್ತಿಯು ಊಹೆಯ ತೆರಿಗೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲಾಗುವುದಿಲ್ಲ.

Published by:shrikrishna bhat
First published: