2022 ರಲ್ಲಿ ಡಿಜಿಟಲ್ ಬ್ಯಾಂಕಿಂಗ್(Digital Banking) ಹಾಗೂ ಸಂಪರ್ಕರಹಿತ ಪಾವತಿಗಳು ಅನೇಕ ಸುಧಾರಣೆಗಳನ್ನು ಪಡೆದುಕೊಂಡಿದ್ದು ಈ ಪರಿಣಾಮವಾಗಿ ವ್ಯಾಲೆಟ್‌ಗಳು, ಸಂಪರ್ಕರಹಿತ ಕಾರ್ಡ್‌ಗಳು, ಡಿಜಿಟಲ್ ಪೇಮೆಂಟ್(Digital Payment) ಆ್ಯಪ್‌ಗಳು ಹಾಗೂ ಇತರ ಆರ್ಥಿಕ ಪ್ರಾಡಕ್ಟ್‌ಗಳನ್ನು(Economic Product) ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಲಾಗಿದೆ. ಹಾಗೂ ಹದಿಹರೆಯದವರು ಹೆಚ್ಚಿನ ಬಳಕೆದಾರರಾಗುತ್ತಿದ್ದಾರೆ.
2023 ರಲ್ಲಿ ಇನ್ನಷ್ಟು ಪ್ರಭಾವ ಬೀರಲಿರುವ ಫಿನ್‌ಟೆಕ್ ವಲಯ
ಇದೆಲ್ಲದರ ನಡುವೆ 350 ಮಿಲಿಯನ್ ಹದಿಹರೆಯದವರು ಮತ್ತು ಯುವಕರು ನಿಯೋಬ್ಯಾಂಕ್‌ಗಳು ಮತ್ತು ಪಾಕೆಟ್ ಮನಿ ಆ್ಯಪ್‌ಗಳನ್ನು ಬಳಸುವ ಮೂಲಕ ಗಮನಸೆಳೆದಿದ್ದಾರೆ. ಈ ವಿಭಾಗಕ್ಕೆ ಆರ್ಥಿಕ ಸಹಾಯ ಮಾಡುವ ಫಿನ್‌ಟೆಕ್ ವಲಯ 2023 ರಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಭಾವ ಬೀರಲು ಸಜ್ಜಾಗಿದೆ.
ಹೊಸ ವರ್ಷದಲ್ಲಿ ಈ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯನ್ನು ಉತ್ತೇಜಿಸುವ ಕೆಲವು ಮೂಲಭೂತ ಅಂಶಗಳಿವೆ. ಅವು ಯಾವುವು ಎಂಬುದನ್ನು ಅರಿತುಕೊಳ್ಳೋಣ
ಮಕ್ಕಳು ಖರ್ಚಿನ ಬಗ್ಗೆ ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ
ಮೊದಲಿಗೆ, ಡಿಜಿಟಲ್ ವ್ಯಾಲೆಟ್‌ಗಳು ಮತ್ತು ಪಾವತಿಗಳ ಯುಗದಲ್ಲಿ ಆರ್ಥಿಕ ಸಾಕ್ಷರತೆಯ ಅರ್ಥ ಬದಲಾಗುತ್ತಿದೆ. ಭಾರತದಲ್ಲಿರುವ ಯುವಕರು ತಮ್ಮ ಖರ್ಚುವೆಚ್ಚಗಳನ್ನು ನಿಭಾಯಿಸುವ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ತಮ್ಮ ಪೋಷಕರು ದುಡಿಯುವುದನ್ನು ಹಾಗೂ ಹಣ ಸಂಪಾದಿಸುವುದನ್ನು ಮಕ್ಕಳು ಗಮನಿಸುತ್ತಿದ್ದು ವೈಯಕ್ತಿಕವಾಗಿ ಹಣ ಸಂಪಾದನೆ ಮಾಡುವುದು ಹೇಗೆ ಎಂಬುದರತ್ತ ಆಸಕ್ತಿ ತೋರಿಸುತ್ತಿದ್ದಾರೆ.
ಇದನ್ನೂ ಓದಿ: Zomato: ನಷ್ಟದ ಸುಳಿಯಲ್ಲಿ ಸಿಲುಕಿದ ಮತ್ತೊಂದು ಕಂಪನಿ, 225 ನಗರಗಳಲ್ಲಿ ಝೊಮ್ಯಾಟೊ ಸೇವೆ ಸ್ಥಗಿತ!
2022 ರ ಆರ್ಥಿಕ ಸಾಕ್ಷರತೆಯ ಸಮೀಕ್ಷೆಯ ಪ್ರಕಾರ 87% ದಷ್ಟು ಹದಿಹರೆಯದವರು ತಮ್ಮ ಪೋಷಕರೊಂದಿಗೆ ಹಣ ಉಳಿತಾಯ ಹಾಗೂ ಹಣ ಸಂಪಾದನೆಯ ಕುರಿತು ಚರ್ಚಿಸುತ್ತಾರೆ ಎಂದು ತಿಳಿಸಿದೆ.
ಸುಮಾರು 93% ದಷ್ಟು ಹದಿಹರೆಯದವರು ಡಿಜಿಟಲ್ ವ್ಯಾಲೆಟ್‌ಗಳ ಬಗ್ಗೆ ಕಲಿಯಲು ಆಸಕ್ತಿ ತೋರಿಸಿದರೆ, 70% ದಷ್ಟು ಜನರು ಬ್ಲಾಕ್‌ಚೈನ್ ಮತ್ತು ಎನ್‌ಎಫ್‌ಟಿಗಳಂತಹ ಕ್ರಿಪ್ಟೋ ಸ್ವತ್ತುಗಳ ಬಗ್ಗೆ ಕಲಿಯಲು ಒಲವು ತೋರಿದ್ದಾರೆ ಎಂದು ಸಮೀಕ್ಷೆ ವರದಿ ಮಾಡಿದೆ.
ಬ್ಯಾಂಕ್‌ಗಳು ಲಭ್ಯವಿಲ್ಲದ ಪ್ರದೇಶಗಳಿಗೆ ಫಿನ್‌ಟೆಕ್ ವ್ಯವಸ್ಥೆ
ಹದಿಹರೆಯದವರಿಗಾಗಿ ಇರುವ ಪಾಕೆಟ್ ಮನಿ ಆ್ಯಪ್‌ಗಳಂತಹ ಫಿನ್‌ಟೆಕ್ ಸಂಸ್ಥೆಗಳು ಡಿಜಿಟಲ್ ವ್ಯವಸ್ಥೆಯನ್ನು ಇನ್ನಷ್ಟು ಸುಲಭಗೊಳಿಸಿದೆ. ಬ್ಯಾಂಕ್‌ಗಳು ಹದಿಹರೆಯವರಿಗೆ 18 ವಯಸ್ಸು ಪೂರ್ಣಗೊಳ್ಳದೆ ಸಾಲ ನೀಡುವುದಿಲ್ಲ ಈ ಸಮಯದಲ್ಲಿ ಪಾಕೆಟ್ ಮನಿ ಆ್ಯಪ್‌ಗಳಂತಹ ಫಿನ್‌ಟೆಕ್ ಸಂಸ್ಥೆಗಳು ಯುವಕರ ನೆರವಿಗೆ ಬರುತ್ತಿವೆ.
ಕಲಿಯುವ ಹಂತಗಳು
ಇಂದಿನ ತಲೆಮಾರಿನವರು ವೈಯಕ್ತಿಕ ಹಣಕಾಸಿನ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಹೆಚ್ಚು ಸ್ವತಂತ್ರರಾಗಿರಲು ಬಯಸುತ್ತಾರೆ. ತಮ್ಮ ಖರ್ಚುವೆಚ್ಚಗಳನ್ನು ತಾವೇ ನಿಭಾಯಿಸಬೇಕೆಂಬ ಇರಾದೆ ಹೊಂದಿದ್ದಾರೆ. ಡಿಜಿಟಲ್ ವಲಯದ ಬುದ್ಧಿವಂತರಾಗಿರುವ ಯುವಕರು ಗ್ರಾಹಕ ತಂತ್ರಜ್ಞಾನಕ್ಕೆ ತ್ವರಿತವಾಗಿ ಹೊಂದಿಕೊಳ್ಳುತ್ತಿದ್ದಾರೆ.
UPI, P2P ಹೇಗೆ ಸಹಾಯ ಮಾಡುತ್ತದೆ
ಯುಪಿಐ ಗೆ ಹದಿಹರೆಯದವರ ಪ್ರವೇಶದಿಂದ ಪಾಕೆಟ್ ಮನಿ ಆ್ಯಪ್‌ಗಳ ಅಳವಡಿಕೆ ದರದಲ್ಲಿ ಹೆಚ್ಚಳ ಕಂಡುಬರುವುದು ಮಾತ್ರವಲ್ಲದೆ ಹೆಚ್ಚಿನ ಭದ್ರತೆಯೊಂದಿಗೆ ಪಾವತಿಗೆ ತಡೆರಹಿತ ತ್ವರಿತ ಆಯ್ಕೆಗಳನ್ನು ಒದಗಿಸುವ ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸಲಿದೆ.
ಹದಿಹರೆಯದವರು ಕಿರಾಣಿ ಮತ್ತು ಚಿಲ್ಲರೆ ವ್ಯಾಪಾರ, ಆಹಾರ ವಿತರಣೆ ಮತ್ತು ಉಡುಪುಗಳಲ್ಲಿ ವ್ಯಾಪಾರಿಗಳೊಂದಿಗೆ ಹೆಚ್ಚಿನ ಆರ್ಥಿಕ ನಿರ್ವಹಣೆಯನ್ನು ಮಾಡುತ್ತಾರೆ ಎಂಬುದು ದೃಢವಾಗಿದೆ.
ಹದಿಹರೆಯದವರನ್ನೇ ಹೆಚ್ಚು ಕೇಂದ್ರೀಕರಿಸುವ ಚಿಲ್ಲರೆ ಬ್ರ್ಯಾಂಡ್‌ಗಳು ಈ ವರ್ಷ ಪಾಕೆಟ್ ಮನಿ ಆ್ಯಪ್‌ಗಳ ಸಹಭಾಗಿತ್ವದಲ್ಲಿ ಇನ್ನಷ್ಟು ಕ್ಯುರೇಟೆಡ್ ರಿಯಾಯಿತಿಗಳು ಮತ್ತು ಬಹುಮಾನಗಳನ್ನು ನೀಡುವ ನಿರೀಕ್ಷೆಯಿದೆ.
ಭಾರತದ ದೊಡ್ಡ ಫಿನ್‌ಟೆಕ್ ಮಾರುಕಟ್ಟೆಯು 2019 ರಲ್ಲಿ $26.3 ಶತಕೋಟಿಯಿಂದ 2025 ರ ವೇಳೆಗೆ $85 ಶತಕೋಟಿಗೆ ಬೆಳೆಯುವ ನಿರೀಕ್ಷೆಯಿದೆ. ಈ ಕ್ಷೇತ್ರ ಬೆಳವಣಿಗೆಯ ಹಂತದಲ್ಲಿದ್ದರೂ ಯುವಜನರು ಹೆಚ್ಚು ಹೆಚ್ಚು ಫಿನ್‌ಟೆಕ್ ಆ್ಯಪ್‌ಗಳನ್ನು ಬಳಸುತ್ತಿದ್ದಂತೆ ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಗಳಿಸುವ ಸನ್ನಾಹದಲ್ಲಿದ್ದಾರೆ.
2023 ರಲ್ಲಿ ಭಾರತದ ಯುವಕರಿಗೆ ವೈಯಕ್ತಿಕ ಹಣಕಾಸು ವಿಷಯವನ್ನು ತಾವಾಗಿ ನಿರ್ವಹಿಸುವ ಕುರಿತು ಜ್ಞಾನವನ್ನು ಒದಗಿಸಲಾಗಿದೆ ಹಾಗೂ ಅವರು ಕೂಡ ಆರ್ಥಿಕ ವಿಚಾರಗಳನ್ನು ವೇಗವಾಗಿ ಕಲಿತುಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ