ಭಾರತವು (India) ವಿಶ್ವದ ಅತಿದೊಡ್ಡ ಹಾಲು (Milk) ಉತ್ಪಾದಕವಾಗಿದ್ದು, ಜಾಗತಿಕ ಉತ್ಪಾದನೆಯಲ್ಲಿ 21% ರಷ್ಟು ಪಾಲನ್ನು ಹೊಂದಿದೆ. ಯುಎಸ್ (US) , ಚೀನಾ (China) , ಪಾಕಿಸ್ತಾನ (Pakistan) ಮತ್ತು ಬ್ರೆಜಿಲ್ (Brazil) ನಂತರದ ಸ್ಥಾನದಲ್ಲಿವೆ. ಭಾತದಲ್ಲಿ ಡೈರಿ ವಲಯವು ಗೋಧಿ ಮತ್ತು ಅಕ್ಕಿಯ ವಹಿವಾಟುಗಿಂತ ಹೆಚ್ಚಿನ ಪಾಲನ್ನು ಹೊಂದಿದೆ ಮತ್ತು ಸಣ್ಣ ರೈತರು ಡೈರಿ (Farmers Dairy) ಕ್ಷೇತ್ರದ ದೊಡ್ಡ ಫಲಾನುಭವಿಗಳಾಗಿದ್ದಾರೆ. ಕಳೆದ ದಶಕದಲ್ಲಿ ಭಾರತದ ಹಾಲಿನ ಉತ್ಪಾದನೆಯು 2011-2012 ರಲ್ಲಿ 127.9 ಮಿಲಿಯನ್ ಮೆಟ್ರಿಕ್ ಟನ್‌ಗಳಿಂದ (MMT) 2021-2022 ರಲ್ಲಿ 254.5 MMT ಗೆ ವೇಗವಾಗಿ ಬೆಳೆದಿದೆ.
ವೇಗವಾಗಿ ಬೆಳೆಯುತ್ತಿದೆ ಹಾಲು ಉದ್ಯಮ
ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯು 2023-2024 ರ ವೇಳೆಗೆ ಉತ್ಪಾದನೆಯನ್ನು 300 MMT ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಉತ್ತರ ಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ಹಾಲನ್ನು ಉತ್ಪಾದಿಸುವ ರಾಜ್ಯವಾಗಿದ್ದು, ಒಟ್ಟು ಉತ್ಪಾದನೆಯ 18% ರಷ್ಟನ್ನು ನೀಡುತ್ತದೆ. ನಂತರದ ಸ್ಥಾನದಲ್ಲಿ ರಾಜಸ್ಥಾನ (11%), ಮತ್ತು ಆಂಧ್ರಪ್ರದೇಶ (9%) ಪಟ್ಟಿಯಲ್ಲಿವೆ.
ಹಾಲು ಉದ್ಯಮ ಹಲವಾರು ಕಾರಣಗಳಿಂದ ದೇಶದಲ್ಲಿ ಮುನ್ನೆಲೆಯಲ್ಲಿದೆ. ಕ್ಯಾಲ್ಸಿಯಂನ ಮೂಲ, ಹಾಲಿನಿಂದ ತಯಾರಾಗುವ ಇನ್ನಿತರ ಉತ್ಪನ್ನಗಳ ಹೆಚ್ಚಿನ ಬಳಕೆ, ಟೀ-ಕಾಫಿ ಸೇವನೆ ಹೀಗೆ ಹಾಲು ಭಾರತೀಯ ಮನೆಗಳಲ್ಲಿ ಪ್ರತಿನಿತ್ಯ ಅಗತ್ಯವಾಗಿರುವ ಆಹಾರ ಪದಾರ್ಥವಾಗಿದೆ.
ದೇಶದಲ್ಲಿ ಇತ್ತೀಚೆಗೆ ಹಾಲಿನ ಬೆಲೆ ತೀವ್ರವಾಗಿ ಏರಿಕೆ ಕಾಣುತ್ತಿದ್ದು, ಉದ್ಯಮ ಕೂಡ ಚೇತರಿಸಿಕೊಳ್ಳುತ್ತಿದೆ. ಮೇವು ದರ ಹೆಚ್ಚಳ, ಹವಮಾನ, ಹಲವು ಜಾನುವಾರುಗಳಲ್ಲಿ ಕಂಡುಬಂದು ಚರ್ಮದ ರೋಗದ ನಿಮಿತ್ತ ಹಾಲಿನ ಬೆಲೆ ಏರಿಕೆ ನಿಯಮಿತವಾಗಿ ಏರುತ್ತಲೇ ಇದೆ ಎನ್ನಲಾಗುತ್ತಿದೆ.
ಡೈರಿ ಉದ್ಯಮಕ್ಕೆ ಹಸು-ಎಮ್ಮೆಗಳೇ ಸರ್ವಸ್ವ!
ಡೈರಿ ಉದ್ಯಮ ಅಗತ್ಯವಾಗಿ ನಡೆಯುವುದೇ ಹಸು-ಎಮ್ಮೆಗಳಿಂದ. ಆದರೆ ಇತ್ತೀಚೆಗೆ ಡೈರಿ ಉದ್ಯಮ ಅದ್ಯಾಕೋ ಹೆಚ್ಚಿನ ಹಾಲು ಉತ್ಪಾದನೆಗೆ ಪ್ರಾಣಿಗಳನ್ನು ಹಿಂಸಿಸುತ್ತಿದಿಯಾ? ನಿಸರ್ಗದ ವಿರುದ್ಧ ಅವುಗಳನ್ನು ನಡೆಸಿಕೊಳ್ಳಲಾಗುತ್ತಿದಿಯಾ ಎಂಬ ಪ್ರಶ್ನೆ ಮೂಡಿದೆ. ಅಂದರೆ ಡೈಲಿ ಉದ್ಯಮ ನ್ಯಾಯೋಚಿತವಾಗಿ ಇಲ್ಲ ಎಂಬ ವಾದ ಹಲವರದ್ದು.
ಡೈರಿ ಉದ್ಯಮ ನ್ಯಾಯದ ಹಾದಿಯಲ್ಲಿದೆಯೇ?
ಹಲವು ಸಸ್ತನಿಗಳಂತೆ ಹಸು ಹಾಗೂ ಎಮ್ಮೆಗಳು ತಮ್ಮ ಮರಿಗಳಿಗೆ ಹಾಲುಣಿಸುವ ಪ್ರಾಣಿಗಳಾಗಿವೆ. ಭಾರತದಲ್ಲಿ, ಎಮ್ಮೆಗಳು, ಹಸುಗಳನ್ನು ಹಾಲಿಗಾಗಿ ಬೆಳೆಸಲಾಗುತ್ತದೆ.
ಭಾರತವು ವಿಶ್ವದ ಎಮ್ಮೆಗಳ ಸುಮಾರು 57% ಮತ್ತು ವಿಶ್ವದ ಜಾನುವಾರು ಜನಸಂಖ್ಯೆಯ 16% ರಷ್ಟನ್ನು ಒಳಗೊಂಡಿದೆ. ಹಲವರಲ್ಲಿ ಹಸು-ಎಮ್ಮೆ ಉತ್ಪಾದಿಸುವ ಹೆಚ್ಚುವರಿ ಹಾಲನ್ನು ನಾವು ಅಗತ್ಯವಾಗಿ ಬಳಸಬಹುದು, ಈ ಹೆಚ್ಚುವರಿ ಹಾಲು ನಮಗಾಗಿಯೇ ಇದೆ ಎಂಬ ತಪ್ಪು ಕಲ್ಪನೆ ಇದೆ.
ಎಮ್ಮೆ-ಹಸು ತಮ್ಮ ಸಂತತಿ ಪೋಷಿಸಲು ಬೇಕಾದಷ್ಟು ಹಾಲನ್ನು ಉತ್ಪಾದಿಸಲು ಶಕ್ತ
ಹೌದು, ಜಾನುವಾರಗಳು ಹೆಚ್ಚುವರಿ ಹಾಲನ್ನು ಉತ್ಪಾದಿಸುವುದಿಲ್ಲ. ತಮ್ಮ ಮಕ್ಕಳಿಗೆ ಎಷ್ಟೋ ಬೇಕೋ ಅಷ್ಟನ್ನು ಮಾತ್ರ ಉತ್ಪಾದಿಸುತ್ತವೆ. ವಕೀಲರು ಮತ್ತು ಪ್ರಾಣಿ ಹಕ್ಕುಗಳ ವಕೀಲರಾದ ಸಿರ್ಜಾನಾ ನಿಜ್ಜಾರ್ ಪ್ರಕಾರ, “ಯಾವುದೇ ಸಸ್ತನಿಯು ತನ್ನ ಸಂತತಿಯನ್ನು ಪೋಷಿಸಲು ಬೇಕಾದಷ್ಟು ಹಾಲನ್ನು ಉತ್ಪಾದಿಸುತ್ತದೆ ಹೊರತು ನಮ್ಮ ಬಳಕೆಗೆ ಅಲ್ಲ" ಎನ್ನುತ್ತಾರೆ.
ಇದನ್ನೂ ಓದಿ: ದೊಡ್ಡ ದೊಡ್ಡ ಸಿಇಒಗಳ ಮನಸ್ಸು ಗೆದ್ದ 18ರ ಯುವಕ, ಈತನ ಪ್ಲ್ಯಾನ್ಗೆ ಎಲ್ರೂ ಕ್ಲೀನ್ ಬೋಲ್ಡ್!
ಅಂದರೆ ಹಸು ಅಥವಾ ಎಮ್ಮೆ ತಮ್ಮ ಸಂತತಿಗೆ ಬೇಕಾದ ಹಾಲನ್ನು ಮಾತ್ರ ಉತ್ಪಾದಿಸುವಲ್ಲಿ ಶಕ್ತವಾಗಿದೆ. ಆದರೆ ನಾವು ಕರುಗಳಿಗೆ ಸ್ವಲ್ಪ ಹಾಲನ್ನು ಕುಡಿಯಲು ಬಿಟ್ಟು ತೊಂಬತ್ತು ಭಾಗ ಹಾಲನ್ನು ಅವುಗಳಿಂದ ಪಡೆದುಕೊಳ್ಳುತ್ತೇವೆ. ಇದು ಕರುಗಳ ಆರೋಗ್ಯ, ಅವುಗಳ ಬಲದ ಮೇಲೆ ಪರಿಣಾಮ ಬೀರುವ ಅಂಶವಾಗಿದೆ.
ಕರುಗಳನ್ನು ತಾಯಿಯಿಂದ ಬೇರ್ಪಡಿಸುವ ನೀಚ ಕೃತ್ಯ
ಮತ್ತೊಂದು ದೊಡ್ಡ ತಪ್ಪು ಕಲ್ಪನೆ ಇದೆ, ಅದೇನೆಂದರೆ ಕರುಗಳನ್ನು ತಾಯಿ ಜೊತೆ ಬಿಡಬಾರದು. ಬಿಟ್ಟರೆ ಅವುಗಳು ತಾಯಿಯ ಎಲ್ಲಾ ಹಾಲು ಕುಡಿದು ಅನಾರೋಗ್ಯಕ್ಕೆ ಗುರಿಯಾಗುತ್ತವೆ ಎಂದು. ಇಲ್ಲಿ ಕೂಡ ಮಾನವನ ಸ್ವಾರ್ಥ ಎದ್ದು ಕಾಣುತ್ತದೆ. ಡಾ. ದಿನೇಶ್ ಮೋಹಿತೆ ಈ ಬಗ್ಗೆ ವಿವಿರಿಸಿದ್ದು, ನವಜಾತ ಕರುಗಳಿಗೆ ದಿನಕ್ಕೆ ಎರಡು ಬಾರಿ ತಮ್ಮ ದೇಹದ ತೂಕದ 13% ರಿಂದ 20% ನಷ್ಟು ಹಾಲು ಬೇಕಾಗುತ್ತದೆ.
ಆದರೆ ಆರ್ಥಿಕ ನಷ್ಟವನ್ನು ತಪ್ಪಿಸಲು, ರೈತರು ಹೆಚ್ಚಿನ ಪ್ರಮಾಣದ ಹಾಲನ್ನು ಸೇವಿಸಲು ಕರುಗಳಿಗೆ ಅವಕಾಶ ನೀಡುವುದಿಲ್ಲ. ಹಾಲು ಕುಡಿದು ಕರುಗಳು ಅನಾರೋಗ್ಯಕ್ಕೆ ತುತ್ತಾಗುವುದಿಲ್ಲ. ಇದು ತಾಯಿಯನ್ನು ಮುತ್ತಿಕೊಳ್ಳುವ ಪರಾವಲಂಬಿ ಮತ್ತು ಕೆಲವು ಸಂದರ್ಭಗಳಲ್ಲಿ ಸೋಂಕುಗಳಿಂದ ಕರುಗಳು ಕಾಯಿಲೆ ಅನುಭವಿಸಬಹುದು. ಹೆಚ್ಚಿನ ಹಾಲು ಕುಡಿದರೆ ಯಾವ ಸಂತತಿಗೂ ಅಪಾಯವಿಲ್ಲ ಎಂದಿದ್ದಾರೆ.
ಕೃತಕ ಗರ್ಭಧಾರಣೆ ಎಂಬ ನಿಸರ್ಗದ ವಿರುದ್ಧ ನಡೆಯುವ ಕಾರ್ಯವಿಧಾನ
ಕರುಗಳನ್ನು ಜಾನುವಾರಗಳಿಂದ ದೂರ ಇಡುವಿಕೆಯ ಜೊತೆಗೆ ಡೈರಿ ಉದ್ಯಮ ಕಾನೂನುಬದ್ಧವಾಗಿ ಅನುಮತಿಸಲಾದ ಕೃತಕ ಗರ್ಭಧಾರಣೆ ಮತ್ತು ವಿಸರ್ಜನೆಯ ಅಭ್ಯಾಸಗಳನ್ನು ಸಹ ಒಳಗೊಂಡಿದೆ. ಈ ವಿಧಾನಗಳು ಕೂಡ ಡೈರಿ ಉದ್ಯಮ ನ್ಯಾಯದ ಹಾದಿಯಲ್ಲಿವೆಯೇ ಎಂಬ ದೊಡ್ಡ ಪ್ರಶ್ನೆಯನ್ನು ಹುಟ್ಟು ಹಾಕುತ್ತವೆ.
ದೀರ್ಘಕಾಲ ಹಾಲು ಕರೆಯಲು ಡೈರಿಗಳು ಕೃತಕ ಗರ್ಭಧಾರಣೆಯನ್ನು ಬಳಸಿಕೊಂಡು ಹಸು-ಎಮ್ಮೆಗಳು ಗರ್ಭ ಧರಿಸುವಂತೆ ಮಾಡುತ್ತವೆ. ಈ ಕ್ರಿಯೆ ನಿಸರ್ಗದತ್ತವಾಗಿ ನಡೆದಲ್ಲಿ ಹಸು-ಎಮ್ಮೆ ಹಾಲು ಕೊಡುವುದನ್ನು ನಿಲ್ಲಿಸುತ್ತವೆ.
ಕೃತಕ ಗರ್ಭಧಾರಣೆ ವಿಧಾನ ಬಳಸಲಾಗ್ತಿದೆ!
ಹೀಗಾಗಿ ಇಲ್ಲಿ ಕೃತಕ ಗರ್ಭಧಾರಣೆ ವಿಧಾನ ಬಳಸಲಾಗುತ್ತದೆ. ಶೇಖರಿಸಿದ ವೀರ್ಯವನ್ನು ನೇರವಾಗಿ ಪ್ರಾಣಿಗಳ ಗರ್ಭಾಶಯಕ್ಕೆ ಹಾಕಲಾಗುತ್ತದೆ. ಯೋನಿ ಅಳವಡಿಕೆಗಾಗಿ ಟ್ಯೂಬ್ನಂತಹ ಕೈಗಳು ಮತ್ತು ಸಾಧನಗಳನ್ನು ಬಳಸಿ ಇದನ್ನು ನಡೆಸಲಾಗುತ್ತದೆ. ಇದು ನಿಜಕ್ಕೂ ಒಂದು ಅಮಾನವೀಯ ಕೃತ್ಯ ಎನ್ನಬಹುದು.
2020–2021ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 1,99,46,681 ಡೈರಿ ಪ್ರಾಣಿಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗಿದೆ.
ಕೊಂಬನ್ನು ಸುಡುವ ಮೂಲಕ ಜಾನುವಾರುಗಳಿಗೆ ಹಿಂಸೆ
ಡಿಸ್ಬಡ್ಡಿಂಗ್ ಎಂಬ ಮತ್ತೊಂದು ವಿಧಾನದ ಮೂಲಕ ಸಹ ಡೈರಿ ಉದ್ಯಮವು ಈ ಪ್ರಾಣಿಗಳನ್ನು ಹಿಂಸಿಸುತ್ತಿದೆ. ನವಜಾತ ಕರುಗಳ ಕೊಂಬಿನ ಅಂಗಾಂಶಗಳನ್ನು ಬಿಸಿ ಕಬ್ಬಿಣದ ಸರಳುಗಳು ಅಥವಾ ಇತರ ಉಪಕರಣಗಳಿಂದ ಸುಡುವ ಮೂಲಕ ಡಿಸ್ಬಡ್ಡಿಂಗ್ ಅನ್ನು ನಡೆಸಲಾಗುತ್ತದೆ. ಕೊಂಬಿಲ್ಲದ ಜಾನುವಾರುಗಳು ಹೆಚ್ಚು ಮಾರುಕಟ್ಟೆ ಮೌಲ್ಯ ಮತ್ತು ಕೊಂಬಿಲ್ಲದ ಜಾನುವಾರುಗಳು ಹೆಚ್ಚಿನ ಹಾಲಿನ ಇಳುವರಿಯನ್ನು ಹೊಂದಿವೆ ಎಂಬ ನಂಬಿಕೆ ಮೇಲೆ ಈ ಕಾರ್ಯ ವಿಧಾನ ನಡೆಸಲಾಗುತ್ತದೆ.
ಈ ವಿಧಾನವನ್ನು ನಡೆಸುವಾಗ ಸರಿಯಾದ ಅರಿವಳಿಕೆ ಮತ್ತು ನೋವು ನಿವಾರಕಗಳ ಅಡಿಯಲ್ಲಿ ಕಾರ್ಯವಿಧಾನವನ್ನು ಕೈಗೊಳ್ಳಬೇಕು. ಆದರೆ ಇಲ್ಲೂ ಕೂಡ ಪ್ರಾಣಿಗಳ ಮೇಲೆ ದಯೆ ತೋರದೆ ಯಾವುದೇ ನೋವು ನಿರ್ವಹಣೆಯಿಲ್ಲದೆ ನಡೆಸಲಾಗುತ್ತಿದೆ ಮತ್ತು ಅಮಾನವೀಯ ನಿರ್ವಹಣೆಯೊಂದಿಗೆ ದೈಹಿಕವಾಗಿ ಮಾತ್ರವಲ್ಲದೆ ಕರುವಿಗೆ ಮಾನಸಿಕವಾಗಿಯೂ ಹಿಂಸಿಸಲಾಗುತ್ತದೆ.
ಹಸು-ಎಮ್ಮೆಯನ್ನು ಈ ಎಲ್ಲಾ ಹಿಂಸಾತ್ಮಕ ಕಾರ್ಯವಿಧಾನವನ್ನು ನಡೆಸುವ ಮೂಲಕ ಅವುಗಳನ್ನು ಹಾಲು ಉತ್ಪಾದಿಸುವ ಯಂತ್ರಗಳಾಗಿ ಡೈರಿ ಉದ್ಯಮ ನಡೆಸಿಕೊಳ್ಳುತ್ತಿದೆ. ಕೇವಲ ಹಾಲಿನ ಹೆಚ್ಚಿನ ಉತ್ಪಾದನೆಗೆ ನಿಸರ್ಗದ ವಿರುದ್ಧವಾದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ