• Home
  • »
  • News
  • »
  • business
  • »
  • IT vs Non-IT sector: ಐದು ವರ್ಷಗಳಲ್ಲಿ ಫ್ರೆಶರ್ ಉದ್ಯೋಗಿಗಳ ವೇತನಗಳಲ್ಲಿ ಹೇಗೆ ಸುಧಾರಣೆಗಳಾಗಿವೆ? ಇಲ್ಲಿದೆ ವಿವರ

IT vs Non-IT sector: ಐದು ವರ್ಷಗಳಲ್ಲಿ ಫ್ರೆಶರ್ ಉದ್ಯೋಗಿಗಳ ವೇತನಗಳಲ್ಲಿ ಹೇಗೆ ಸುಧಾರಣೆಗಳಾಗಿವೆ? ಇಲ್ಲಿದೆ ವಿವರ

ಆರ್ಥಿಕ ವರ್ಷ 12 ಹಾಗೂ 22 ರ ನಡುವೆ ಭಾರತದ ಅತಿದೊಡ್ಡ ಐಟಿ ಕಂಪೆನಿಗಳಲ್ಲಿ ಸಿಇಒಗಳ ಸರಾಸರಿ ವಾರ್ಷಿಕ ವೇತನ ರೂ 3.37 ಕೋಟಿಯಿಂದ 31.5 ಕೋಟಿಯ ದಷ್ಟು ಬೆಳೆದಿದ್ದು, ಫ್ರೆಶರ್‌ಗಳ ಸರಾಸರಿ ವೇತನ ಪ್ಯಾಕೇಜ್ ಕೇವಲ 45% ದಷ್ಟು ಅಭಿವೃದ್ಧಿ ಹೊಂದಿದೆ. ಭಾರತೀಯ ಐಟಿ ಕ್ಷೇತ್ರವು ದಶಕಗಳಿಂದ ಪ್ರಮುಖ ಉದ್ಯೋಗ ಸೃಷ್ಟಿಕರ್ತ ಎಂದೆನಿಸಿದ್ದು ಎಂಜಿನಿಯರ್‌ ಉದ್ಯೋಗಿಗಳಿಗೆ ಉತ್ತಮ ಪ್ಯಾಕೇಜ್ ನೀಡುವಲ್ಲಿ ಮುಂಚೂಣಿಯಲ್ಲಿದೆ.

ಮುಂದೆ ಓದಿ ...
  • Share this:

ಐಟಿ ಉದ್ಯಮದಲ್ಲಿ ಫ್ರೆಶರ್ ಸಂಬಳವು (Salary) ಒಂದು ದಶಕದಿಂದ ಸ್ಥಗಿತಗೊಂಡಿದೆ. ಆರ್ಥಿಕ ವರ್ಷ 12 ಹಾಗೂ 22 ರ ನಡುವೆ ಭಾರತದ ಅತಿದೊಡ್ಡ ಐಟಿ ಕಂಪೆನಿಗಳಲ್ಲಿ ಸಿಇಒಗಳ ಸರಾಸರಿ ವಾರ್ಷಿಕ ವೇತನ ರೂ 3.37 ಕೋಟಿಯಿಂದ 31.5 ಕೋಟಿಯ ದಷ್ಟು ಬೆಳೆದಿದ್ದು, ಫ್ರೆಶರ್‌ಗಳ (Freshers) ಸರಾಸರಿ ವೇತನ ಪ್ಯಾಕೇಜ್ ಕೇವಲ 45% ದಷ್ಟು ಅಭಿವೃದ್ಧಿ ಹೊಂದಿದೆ. ಭಾರತೀಯ ಐಟಿ ಕ್ಷೇತ್ರವು ದಶಕಗಳಿಂದ ಪ್ರಮುಖ ಉದ್ಯೋಗ (Employment) ಸೃಷ್ಟಿಕರ್ತ ಎಂದೆನಿಸಿದ್ದು ಎಂಜಿನಿಯರ್‌ ಉದ್ಯೋಗಿಗಳಿಗೆ (Engineer employee) ಉತ್ತಮ ಪ್ಯಾಕೇಜ್ ನೀಡುವಲ್ಲಿ ಮುಂಚೂಣಿಯಲ್ಲಿದೆ. ವಾರ್ಷಿಕ 2022 ರಲ್ಲಿ 15.5% ಬೆಳವಣಿಗೆಯನ್ನು ದಾಖಲಿಸಿದ್ದು ಒಂದು ದಶಕಕ್ಕಿಂತಲೂ ಹೆಚ್ಚು ವೇಗವಾಗಿ 227 ಶತಕೋಟಿಯನ್ನು ತಲುಪಿದೆ.

ಐಐಟಿ ಪ್ರತಿಭೆಗಾಗಿ ಹೋರಾಟ
ಸಾಂಪ್ರದಾಯಿಕವಾಗಿ ತಾಂತ್ರಿಕವಲ್ಲದ ಸಂಸ್ಥೆಗಳು ಐಐಟಿ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಲಾಭಾಂಶ ಪಾವತಿಸಬೇಕಾಗಿತ್ತು ಆದರೆ ವೃತ್ತಿಪರ ಸೇವೆಗಳ ಸಂಸ್ಥೆಯಾದ Aon ಹೇಳುವಂತೆ ಟೆಕ್ ಪ್ರತಿಭೆಗಳ ಬೇಡಿಕೆಯ ಕುಸಿತದಿಂದಾಗಿ ಈ ಪ್ರವೃತ್ತಿ ಇದೀಗ ಬದಲಾಗುತ್ತಿದೆ. 2016 ಮತ್ತು 2021 ರ ನಡುವೆ, ಐಟಿ ಸಂಸ್ಥೆಗಳಲ್ಲಿ ಐಐಟಿ ಇಂಜಿನಿಯರ್‌ಗಳಿಗೆ ಆರಂಭ ಮಟ್ಟದ ಉದ್ಯೋಗಗಳಿಗೆ ಸರಾಸರಿ ವೇತನವು 14.5 LPA (ವಾರ್ಷಿಕ ಆದಾಯ) ಆಗಿದೆ. ನಂತರ I ನೇ ದರ್ಜೆಯ ನಗರಗಳಲ್ಲಿ (11.3 LPA), II ನೇ ದರ್ಜೆಯ ನಗರಗಳಲ್ಲಿ (8.6 LPA) ಮತ್ತು III ನೇ ದರ್ಜೆಯ ನಗರಗಳಲ್ಲಿ (5.5) ಆಗಿದೆ. ಅಂಕಿಅಂಶಗಳು CTC (ಕಂಪೆನಿಗೆ ತಗಲುವ ವೆಚ್ಚ) ಗಾಗಿವೆ, ಇದರಲ್ಲಿ ಸ್ಥಿರ ಸಂಬಳ, ವ್ಯತ್ಯಯ ಪಾವತಿ ಪೇ ಮತ್ತು ಸೇರ್ಪಡೆಗೊಳ್ಳುವಾಗ ದೊರೆಯುವ ಬೋನಸ್ ಸೇರಿವೆ.

ಕ್ಯಾಂಪಸ್‌ಗಳಲ್ಲಿ ಟೆಕ್ ಪ್ರತಿಭೆಯನ್ನರಸುತ್ತಿರುವ ಐಟಿಯೇತರ ಸಂಸ್ಥೆಗಳು
ಐಟಿ ಅಲ್ಲದ ಸಂಸ್ಥೆಗಳು ಈಗ ಡಿಜಿಟಲ್ ಸಾಮರ್ಥ್ಯಗಳನ್ನು ಅಳೆಯಲು ಪ್ರಯತ್ನಿಸುತ್ತಿದ್ದು ಮತ್ತು ಟೆಕ್ ಪ್ರತಿಭೆಗಳ ಅನ್ವೇಷಣೆಗಾಗಿ ಮತ್ತೆ ಕ್ಯಾಂಪಸ್‌ಗಳಿಗೆ ಹಿಂತಿರುಗುತ್ತಿವೆ ಎಂದು ಭಾರತದಲ್ಲಿನ ಅಯಾನ್‌ನಲ್ಲಿ ಹ್ಯೂಮನ್ ಕ್ಯಾಪಿಟಲ್ ಸೊಲ್ಯೂಷನ್ಸ್‌ನ ನಿರ್ದೇಶಕ ಜಂಗ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: Business Idea: ಕರ್ನಾಟಕದೆಲ್ಲೆಡೆ ಖರ್ಜೂರದ ಸಿಹಿ ಹಂಚುತ್ತಿರುವ ಆದರ್ಶ ರೈತನ ಯಶಸ್ಸಿನ ಕಥೆಯಿದು!

ಈ ಬೆಳವಣಿಗೆಯು ಐಟಿ ವಲಯದ ಮತ್ತು ಐಟಿಯೇತರ ವಲಯದ, ವಿಶೇಷವಾಗಿ ಐಐಟಿಗಳಲ್ಲಿ ನೀಡುವ ಸಂಬಳದ ನಡುವಿನ ಅಂತರವನ್ನು ಇದು ನಿವಾರಿಸುತ್ತಿದೆ ಎಂಬುದಾಗಿ ಸಿಂಗ್ ತಿಳಿಸಿದ್ದಾರೆ. ಉತ್ಪಾದನೆ, ವಾಹನ, ರಿಟೇಲ್ ಬಿಸ್‌ನೆಸ್, BFSI, ಇತ್ಯಾದಿಗಳಂತಹ IT ಅಲ್ಲದ ವಲಯಗಳು, IIT ಇಂಜಿನಿಯರ್‌ಗಳಿಗೆ ಆರಂಭ ಹಂತದ ಉದ್ಯೋಗಗಳಿಗೆ ಅತ್ಯಧಿಕ ವೇತನವನ್ನು ದಾಖಲಿಸಿವೆ, 13.9 LPA (ವಾರ್ಷಿಕ ವೇತನ) ಜೊತೆಗೆ IT ಸಂಸ್ಥೆಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ. I ನೇ ದರ್ಜೆಯ ನಗರಗಳಲ್ಲಿ (9.7 LPA), II ನೇ ದರ್ಜೆಯ ನಗರಗಳಲ್ಲಿ (7.1 LPA), ಮತ್ತು III ನೇ ದರ್ಜೆಯ ನಗರಗಳಲ್ಲಿರುವ (4.7 LPA) ಕಾಲೇಜುಗಳು ಈ ಪ್ಯಾಕೇಜ್ ಅನ್ನು ಅನುಸರಿಸುತ್ತವೆ.

ಹೆಚ್ಚಿನ ಸಂಬಳದೊಂದಿಗೆ ಉನ್ನತ ಪ್ರತಿಭೆಗಳನ್ನು ಆಕರ್ಷಿಸುತ್ತಿರುವ ಸಂಸ್ಥೆಗಳು
II ನೇ ದರ್ಜೆಯ ಹಾಗೂ III ನೇ ದರ್ಜೆಯ ನಗರಗಳಲ್ಲಿರುವ ಕ್ಯಾಂಪಸ್‌ಗಳು ವಿಭಿನ್ನ ಕಥೆಯನ್ನು ಹೊಂದಿದ್ದು ಹೆಚ್ಚಿನ ಸ್ಪರ್ಧೆ ಕಂಡಿರುವ ಐಟಿ ಸೇವೆಗಳ ಕಂಪೆನಿಗಳಿಗೆ ಸಮರ್ಥ ಕೌಶಲ್ಯಗಳನ್ನು ಆಯ್ಕೆಮಾಡುವ ತಾಣಗಳಾಗಿವೆ ಎಂಬುದು ಬಹದ್ದೂರ್ ಸಿಂಗ್ ಹೇಳಿಕೆಯಾಗಿದೆ.

ಕೆಲವು ಪ್ರಮುಖ ಐಟಿ ಹಾಗೂ ಐಟಿಇಎಸ್ ಸಂಸ್ಥೆಗಳಂತಹ ಪ್ರಬಲ ಬ್ರ್ಯಾಂಡ್ ಅಸ್ತಿತ್ವವನ್ನು ಹೊಂದಿಲ್ಲದ ಸಂಸ್ಥೆಗಳು ಹೆಚ್ಚುವರಿ ಸಂಬಳದೊಂದಿಗೆ ಉನ್ನತ ಪ್ರತಿಭೆಗಳನ್ನು ಆಕರ್ಷಿಸುತ್ತಿವೆ ಎಂಬುದು ಮುಂಬೈ ಮೂಲದ BITSoMit ನಲ್ಲಿ ಸಹಾಯಕ ಡೀನ್ ಆಗಿರುವ ಉದಯ್ ವೀರಮಾನಿಯವರ ಹೇಳಿಕೆಯಾಗಿದೆ.

ಇದನ್ನೂ ಓದಿ:  Heroes Business: ಬರೀ ಸಿನಿಮಾದಿಂದಲ್ಲ, ಇಲ್ಲಿಂದಲೂ ಸಿಕ್ಕಾಪಟ್ಟೆ ದುಡ್ಡು ಮಾಡ್ತಿರೋ ಸ್ಟಾರ್​ ನಟರಿವರು!

ಪದವಿ ಪಡೆದ ನಂತರ ಎಮ್‌ಬಿಎ ಪದವಿ ಮುಂದುವರಿಸಲು ಬಯಸಿರುವ ಟೆಕ್ಕಿಗಳು ಉದ್ಯೋಗದಲ್ಲಿ ಉತ್ತಮ ಸ್ಥಾನ ಪಡೆಯುತ್ತಾರೆ. ಸಿಬ್ಬಂದಿ ಸಂಸ್ಥೆ Zyoin ನ ಮಾಹಿತಿಯ ಪ್ರಕಾರ, ಕ್ಯಾಂಪಸ್ ನೇಮಕಾತಿ ಸಮಯದಲ್ಲಿ ಉನ್ನತ MBA ಸಂಸ್ಥೆಗಳಲ್ಲಿ ನೀಡಲಾಗುವ ಆರಂಭ ಮಟ್ಟದ ಸಂಬಳದಲ್ಲಿ ಸರಾಸರಿ 65% ದಷ್ಟು ಹೆಚ್ಚಳವಾಗಿದೆ ಎಂದು ವರದಿ ಮಾಡಿದೆ.

Published by:Ashwini Prabhu
First published: