• Home
  • »
  • News
  • »
  • business
  • »
  • Budget 2023: ಬಜೆಟ್‌ ಮಂಡನೆಗೂ ಮುನ್ನ ನಡೆಯುವ ಪೂರ್ವ ಸಿದ್ಧತೆಗಳೇನು ಗೊತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್

Budget 2023: ಬಜೆಟ್‌ ಮಂಡನೆಗೂ ಮುನ್ನ ನಡೆಯುವ ಪೂರ್ವ ಸಿದ್ಧತೆಗಳೇನು ಗೊತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಂದು ಸಮಗ್ರ ದೇಶದ ಹಣಕಾಸು ಯೋಜನೆಯನ್ನು ರೂಪಿಸುವುದು ಸುಲಭದ ಮಾತಲ್ಲ, ಅದರ ಹಿಂದೆ ಹತ್ತಾರು ಸಭೆ, ಚಿಂತಕರು, ತಜ್ಞರು, ಅಹವಾಲು, ಬೇಡಿಕೆ ಎಲ್ಲವೂ ಇರುತ್ತವೆ.

  • Trending Desk
  • 2-MIN READ
  • Last Updated :
  • Share this:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರವರಿ 1ರಂದು ಬಜೆಟ್ ಅನ್ನು ಮಂಡಿಸಲಿದ್ದು, 2023ರ ಏಪ್ರಿಲ್‌ನಿಂದ 2024ರ ಮಾರ್ಚ್‌ವರೆಗೆ ದೇಶದ ಆರ್ಥಿಕ ಯೋಜನೆಗಳು ಹೇಗಿರಲಿವೆ ಎಂಬ ಕೂತುಹಲ ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ. ಪ್ರತಿವರ್ಷ ಕೇಂದ್ರ ಬಜೆಟ್‌ ಮಂಡನೆಗೂ ಮುನ್ನ ವಾಡಿಕೆಯಂತೆ ಕೆಲ ಸಮಾರಂಭಗಳು, ಸಭೆಗಳು ಸಮಾಲೋಚನೆಗಳು, ನಿರ್ಧಾರಗಳು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಒಂದು ಸಮಗ್ರ ದೇಶದ ಹಣಕಾಸು ಯೋಜನೆಯನ್ನು ರೂಪಿಸುವುದು ಸುಲಭದ ಮಾತಲ್ಲ, ಅದರ ಹಿಂದೆ ಹತ್ತಾರು ಸಭೆ, ಚಿಂತಕರು, ತಜ್ಞರು, ಅಹವಾಲು, ಬೇಡಿಕೆ ಎಲ್ಲವೂ ಇರುತ್ತವೆ. ಇವುಗಳನ್ನೆಲ್ಲಾ ಸರಿದೂಗಿಸಿ ಸರಿಯಾದ ಬಜೆಟ್ (Budget‌ ರೂಪಿಸುವ ಮುನ್ನ ಕೇಂದ್ರ ಹಲವು ಹಂತಗಳನ್ನು ಕೈಗೊಳ್ಳುತ್ತದೆ.


ಕೇಂದ್ರ ಹಣಕಾಸು ಸಚಿವಾಲಯವು ವಿವಿಧ ಸಚಿವಾಲಯಗಳು ಮತ್ತು ನೀತಿ ಆಯೋಗದೊಂದಿಗೆ ಸಮಾಲೋಚಿಸಿ ಪ್ರತಿ ವರ್ಷ ವಾರ್ಷಿಕ ಬಜೆಟ್ ಅನ್ನು ಸಿದ್ಧಪಡಿಸುತ್ತದೆ. ಸಂಸತ್ತಿನಲ್ಲಿ ಮಂಡಿಸುವ ತಿಂಗಳುಗಳ ಮೊದಲು ಪ್ರಾರಂಭವಾಗುವ ಬಜೆಟ್ ತಯಾರಿಕೆಯು ಸಮಾಲೋಚನೆಗಳು, ಯೋಜನೆ ಮತ್ತು ಅನುಷ್ಠಾನದಂತಹ ವಿವಿಧ ಹಂತಗಳ ಮೂಲಕ ಸಾಗುತ್ತದೆ.


ಪ್ರತಿವರ್ಷ ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಾಗುವುದು. ಈ ವರ್ಷವೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಅನ್ನು ಮಂಡಿಸಲಿದ್ದಾರೆ. ಮಂಡನೆಯಾದ ನಂತರ, ಹೊಸ ಹಣಕಾಸು ವರ್ಷ ಪ್ರಾರಂಭವಾಗುವ ಮೊದಲು ಸಂಸತ್ತಿನ ಉಭಯ ಸದನಗಳಲ್ಲಿ ಬಜೆಟ್ ಅನ್ನು ಅಂಗೀಕರಿಸಲಾಗುತ್ತದೆ.


ಕೇಂದ್ರ ಬಜೆಟ್ ಪೂರ್ವ ಸಿದ್ಧತೆಗಳು
ಕೇಂದ್ರ ಸಚಿವಾಲಯಗಳು, ರಾಜ್ಯಗಳು, ಯುಟಿಗಳು ಇತ್ಯಾದಿಗಳಿಗೆ ಸುತ್ತೋಲೆ
ಮೊದಲಿಗೆ ಹಣಕಾಸು ಸಚಿವಾಲಯವು ಎಲ್ಲಾ ಸಚಿವಾಲಯಗಳು, ರಾಜ್ಯಗಳು, ಯುಟಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಮುಂಬರುವ ವರ್ಷಕ್ಕೆ ಅಂದಾಜುಗಳನ್ನು ಕೋರಿ ಸುತ್ತೋಲೆಯನ್ನು ಹೊರಡಿಸುತ್ತದೆ. ಅಂದಾಜಿನ ಜೊತೆಗೆ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳು ಹಿಂದಿನ ವರ್ಷದಲ್ಲಿ ತಮ್ಮ ಆದಾಯ ಮತ್ತು ವೆಚ್ಚಗಳ ವಿವರಗಳನ್ನು ಸಹ ನೀಡುತ್ತವೆ.


ಆದಾಯ ಮತ್ತು ವೆಚ್ಚದ ಅಂದಾಜುಗಳು
ಒಟ್ಟಾರೆ ಬಜೆಟ್ ಕೊರತೆಯನ್ನು ಕಂಡುಹಿಡಿಯಲು ಹಣಕಾಸು ಸಚಿವಾಲಯವು ಆದಾಯ ಮತ್ತು ವೆಚ್ಚದ ಅಂದಾಜುಗಳನ್ನು ವಿಶ್ಲೇಷಿಸುತ್ತದೆ. ನಂತರ ಕೇಂದ್ರವು ಮುಖ್ಯ ಆರ್ಥಿಕ ಸಲಹೆಗಾರರ ಜೊತೆ ಮಾತನಾಡಿ ಕೊರತೆಯನ್ನು ಪೂರೈಸಲು ಸರ್ಕಾರವು ಅಗತ್ಯವಿರುವ ಸಾಲವನ್ನು ನಿರ್ಧರಿಸುತ್ತದೆ.


ಇದನ್ನೂ ಓದಿ: ಸ್ವಾಮಿ ವಿವೇಕಾನಂದ ಜಯಂತಿಯನ್ನು ರಾಷ್ಟ್ರೀಯ ಯುವ ದಿನ ಎಂದು ಏಕೆ ಆಚರಿಸಲಾಗುತ್ತದೆ? ಏನಿದರ ಇತಿಹಾಸ, ವಿಶೇಷತೆ?


ಆದಾಯ ಹಂಚಿಕೆ
ಎಲ್ಲಾ ಶಿಫಾರಸುಗಳನ್ನು ಪರಿಗಣಿಸಿದ ನಂತರ, ಹಣಕಾಸು ಸಚಿವಾಲಯವು ತಮ್ಮ ಭವಿಷ್ಯದ ವೆಚ್ಚಗಳಿಗಾಗಿ ವಿವಿಧ ಇಲಾಖೆಗಳಿಗೆ ಆದಾಯ ಹಂಚಿಕೆ ಮಾಡುತ್ತದೆ. ಇದು ಕೇಂದ್ರದ ದೊಡ್ಡ ಜವಾಬ್ದಾರಿಯಾಗಿದೆ.


ಬಜೆಟ್ ಪೂರ್ವ ಸಭೆ
ಬಜೆಟ್‌ ಮಂಡನೆಗೂ ಮುನ್ನ ಪ್ರಧಾನಿ ನೇತೃತ್ವದಲ್ಲಿ ಬಜೆಟ್ ಪೂರ್ವ ಸಭೆ ನಡೆಯುತ್ತದೆ. ರಾಜ್ಯ ಪ್ರತಿನಿಧಿಗಳು, ಬ್ಯಾಂಕರ್‌ಗಳು, ಕೃಷಿಕರು, ಅರ್ಥಶಾಸ್ತ್ರಜ್ಞರು ಮತ್ತು ಟ್ರೇಡ್ ಯೂನಿಯನ್‌ಗಳಂತಹ ವಿವಿಧ ಮಧ್ಯಸ್ಥಗಾರರನ್ನು ಒಳಗೊಂಡಿರುವ ಸಭೆಯಲ್ಲಿ ಅವರ ಪ್ರಸ್ತಾವನೆಗಳು ಮತ್ತು ಬೇಡಿಕೆಗಳ ಬಗ್ಗೆ ತಿಳಿದುಕೊಳ್ಳಲಾಗುತ್ತದೆ.


ಬೇಡಿಕೆಗಳ ಮೇಲೆ ಅಂತಿಮ ನಿರ್ಧಾರ
ಬಜೆಟ್ ಪೂರ್ವ ಸಮಾಲೋಚನೆಗಳು ಮುಗಿದ ನಂತರ, ಹಣಕಾಸು ಸಚಿವರು ಅವರೆಲ್ಲರ ಬೇಡಿಕೆಗಳ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮತ್ತು ಬಜೆಟ್ ಅನ್ನು ಅಂತಿಮಗೊಳಿಸುವ ಮೊದಲು ಪ್ರಸ್ತಾವನೆಗಳನ್ನು ಪ್ರಧಾನ ಮಂತ್ರಿಯೊಂದಿಗೆ ಚರ್ಚಿಸುತ್ತಾರೆ.


When Karnataka budget 2023, Which state has highest budget in India 2023, What are the 7 steps in the budget process, What are the 5 steps of budget preparation, What are the 5 basic elements of budgets, What are 4 methods of budgeting, What are the six 6 principles of budgeting,What is the qualification of Nirmala Sitharaman, What is the power of finance minister, who is finance minister, Who is the Defence Minister of India 2022, Who is the Minister of Health, Who appoints the chairman of Finance, Who is the education minister of India, kannada news, karnataka news, ಬಜೆಟ್‌ ಮಂಡನೆಗೂ ಮುನ್ನ ನಡೆಯುವ ಪೂರ್ವ ಸಿದ್ಧತೆಗಳೇನು ಗೊತ್ತಾ, ನಿರ್ಮಲ ಸೀತಾರಾಮಮ್​ ಯಾರು, ಹಣಕಾಸು ಸಚಿವೆ ಯಾರು, ದೇಶದ ಹಣಕಾಸು ಸಚಿವೆ ಯಾರು
ಸಾಂದರ್ಭಿಕ ಚಿತ್ರ


ಹಲ್ವಾ ಸಮಾರಂಭ ಮತ್ತು ಬಜೆಟ್ ಮುದ್ರಣ
ಬಜೆಟ್ ಅಂತಿಮ ಕಾರ್ಯ ಸಿದ್ಧಪಡಿಸಲು ಅಧಿಕಾರಿಗಳು ಈ ಸಂದರ್ಭದಲ್ಲಿ ಹೊರ ಜಗತ್ತಿನ ಯಾವುದೇ ಸಂಪರ್ಕವಿಲ್ಲದೆ ಕೆಲಸ ಮಾಡುತ್ತಾರೆ. ಅವರ ಕೆಲಸಕ್ಕಾಗಿ ಸಿಹಿಯ ಗೌರವ ನೀಡಲು ಈ ಹಿಂದಿನಿಂದಲೂ ಹಲ್ವಾ ಸಮಾರಂಭ ನಡೆಸುತ್ತಾ ಬರಲಾಗುತ್ತಿದೆ. ಕಡಾಯಿ ಒಳಗಿನ ಸಿಹಿಯನ್ನು ತೆಗೆದು ತಮ್ಮ ಸಹೋದ್ಯೋಗಿಗಳಿಗೆ ನೀಡುವ ಮೂಲಕ ಹಣಕಾಸು ಸಚಿವರು ಹಲ್ವಾ ಸಮಾರಂಭಕ್ಕೆ ಚಾಲನೆ ನೀಡುತ್ತಾರೆ.
ಕೇಂದ್ರ ಬಜೆಟ್‌ಗೂ ಮುನ್ನ ವಾಡಿಕೆಯಂತೆ ನಡೆಸುವ 'ಹಲ್ವಾ ಸಮಾರಂಭ'ವನ್ನು ಕೊರೋನಾ, ಓಮಿಕ್ರಾನ್‌ ಹಾವಳಿಯಿಂದಾಗಿ ಕಳೆದೆರೆಡು ವರ್ಷಗಳಿಂದ ಹಲ್ವಾ ಸಮಾರಂಭವನ್ನು ಸ್ಥಗಿತಗೊಳಿಸಲಾಗಿತ್ತು. ಅದರ ಬದಲಿಗೆ ಸಿಹಿ ನೀಡಿ ಕಾರ್ಯಕ್ರಮ ಶುರು ಮಾಡಲು ಕೇಂದ್ರ ತಿಳಿಸಿತ್ತು.


ಇನ್ನೂ ಬಜೆಟ್‌ ಸಿದ್ಧಗೊಂಡ ನಂತರ ಪ್ರತಿಯನ್ನು ಮುದ್ರಣ ಮಾಡಲಾಗುತ್ತದೆ. ಆದರೆ 2021ರಲ್ಲಿ ದೇಶದ ಬಜೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಗದ ರಹಿತ (ಮುದ್ರಣ ಪ್ರತಿಗಳಿಲ್ಲದ) ರೂಪದಲ್ಲಿ ಅಂದರೆ ಡಿಜಿಟಲ್‌ ರೂಪದಲ್ಲಿ ಬಜೆಟ್‌ ಅನ್ನು ಮಂಡಿಸಲಾಗಿತ್ತು.

First published: