ಈಗಂತೂ ಕೆಲವು ವರ್ಷಗಳಿಂದ ಜನರು ತಮ್ಮ ದೈನಂದಿನ ಹಣದ ಬಹುತೇಕ ವಹಿವಾಟನ್ನು ಈ ನಗದು ಹಣ ಮೂಲಕ ನೀಡುವುದನ್ನು ಬಿಟ್ಟು ಯುಪಿಐ (UPI) ಮತ್ತು ಡಿಜಿಟಲ್ ವ್ಯವಸ್ಥೆಯಲ್ಲಿಯೇ (Digital System) ನಡೆಸುತ್ತಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಿನ ಹಣಕಾಸು ವರ್ಷದಿಂದ ಡಿಜಿಟಲ್ ರೂಪಾಯಿ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಉದ್ದೇಶಿಸಿದ್ದು, ಡಿಜಿಟಲ್ ರೂಪಾಯಿ (Digital Rupees) ಡಿಜಿಟಲ್ ಆರ್ಥಿಕತೆಗೆ ಒಂದು ಮಹತ್ತರವಾದ ಉತ್ತೇಜನ ನೀಡಲಿದೆ ಎಂದು ಹೇಳಬಹುದು. ಈ ಡಿಜಿಟಲ್ ರೂಪಾಯಿಯ ಬಗ್ಗೆ ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ ಹಾಗೆ ಹಣಕಾಸು ಸಚಿವರು, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಅವರು ಈ ಡಿಜಿಟಲ್ ರೂಪಾಯಿಯನ್ನು ಪರಿಚಯಿಸುವುದರಿಂದ ಹಣಕಾಸಿನ ವಹಿವಾಟು ಹೆಚ್ಚು ದಕ್ಷ ಮತ್ತು ಅಗ್ಗದ ಕರೆನ್ಸಿ ನಿರ್ವಹಣಾ ವ್ಯವಸ್ಥೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ಆದರೆ ಪ್ರಶ್ನೆ ಈಗಾಗಲೇ ಡಿಜಿಟಲ್ ಪಾವತಿಗಳು (Digital Payment) ಜಾರಿಯಲ್ಲಿವೆ, ಡಿಜಿಟಲ್ ರೂಪಾಯಿ ಹೇಗೆ ಈ ವ್ಯವಸ್ಥೆಗಳಿಂದ ಭಿನ್ನವಾಗಿದೆ ಎಂಬುದಾಗಿದೆ. ಡಿಜಿಟಲ್ ಕರೆನ್ಸಿಯು ಹಣಕಾಸು ವಹಿವಾಟನ್ನು ಇನ್ನೂ ಎತ್ತರದ ಮಟ್ಟಕ್ಕೆ ಮತ್ತು ಒಂದು ಸುರಕ್ಷತೆಯ (Digital Saftey) ಮಟ್ಟಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಜ್ಞರು ಹೇಳುತ್ತಾರೆ.
ಪ್ರೊಅಸೆಟ್ಜ್ ಎಕ್ಸ್ಚೇಂಜ್ನ ಸ್ಥಾಪಕ ಮತ್ತು ನಿರ್ದೇಶಕ ಮನೋಜ್ ದಾಲ್ಮಿಯಾ ಅವರು ಡಿಜಿಟಲ್ ರೂಪಾಯಿಯು ಅನೇಕ ವಿಷಯಗಳಲ್ಲಿ ಗಮನಾರ್ಹವಾದ ವ್ಯತ್ಯಾಸವನ್ನು ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ನಾನ್ ಸ್ಬ್ಲೋಕ್ಸ್ ಬ್ಲಾಕ್ ಚೈನ್ ಸ್ಟುಡಿಯೋದ ಸ್ಥಾಪಕ ಮತ್ತು ನಿರ್ದೇಶಕ ವಿನ್ಶು ಗುಪ್ತಾ ಡಿಜಿಟಲ್ ರೂಪಾಯಿ ವಹಿವಾಟಿನ ಯಶಸ್ಸಿನ ದರಗಳನ್ನು ಕಡಿಮೆ ಸಮಯದಲ್ಲಿ ಮತ್ತು ಹೆಚ್ಚು ಪರಿಣಾಮಕಾರಿ (Effective) ರೀತಿಯಲ್ಲಿ ಹೆಚ್ಚಿಸುತ್ತದೆ ಎಂದು ಹೇಳಿದರು. ಯುಪಿಐ ಈಗಾಗಲೇ ವಹಿವಾಟು ಸಂಖ್ಯೆಗಳಲ್ಲಿ ಕುಸಿತವನ್ನು ಕಂಡಿದೆ.
ಯುಪಿಐ ಮೂಲಕ ಡಿಜಿಟಲ್ ರೂಪಾಯಿ ವಹಿವಾಟುಗಳು ಇತ್ಯರ್ಥ ಅಪಾಯಗಳನ್ನು ಕಡಿಮೆ ಮಾಡುವ ಮೂಲಕ ದಕ್ಷತೆಯನ್ನು ಸುಧಾರಿಸಬಹುದು. "ಯುಪಿಐ ಅಪ್ಲಿಕೇಷನ್ ಮೂಲಕ ಹಣದ ಪಾವತಿಗಳು ಸುಮಾರು 98.6 ರಷ್ಟು ಯಶಸ್ಸಿನ ದರವನ್ನು ಹೊಂದಿವೆ. ತಿಂಗಳಿಗೆ ಶತಕೋಟಿ ವಹಿವಾಟುಗಳ ಪ್ರಮಾಣದಲ್ಲಿ, ಇನ್ನೂ ಭರ್ತಿ ಮಾಡಬೇಕಾದ ಗಮನಾರ್ಹ ಅಂತರವಿದೆ.
ಯುಪಿಐ ಮೂಲಕ ಡಿಜಿಟಲ್ ರೂಪಾಯಿ ವಹಿವಾಟುಗಳು ಇತ್ಯರ್ಥ ಅಪಾಯಗಳು ಮತ್ತು ಅಂತಹ ವಹಿವಾಟು ವೈಫಲ್ಯಗಳ (Failure) ಘಟನೆಗಳನ್ನು ಕಡಿಮೆ ಮಾಡುವ ಮೂಲಕ ದಕ್ಷತೆಯನ್ನು ಸುಧಾರಿಸಬಹುದು. ದೇಶಾದ್ಯಂತ ಹಲವಾರು ಕೇಂದ್ರೀಯ ಬ್ಯಾಂಕುಗಳು ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಗಳ (ಸಿಬಿಡಿಸಿಗಳು) ಬಗ್ಗೆ ಯೋಚಿಸುತ್ತಿವೆ ಅಥವಾ ಪ್ರಯೋಗಿಸುತ್ತಿವೆ" ಎಂದು ನಿಯೋಬ್ಯಾಂಕ್ ಫೈನ ಸಹ ಸಂಸ್ಥಾಪಕ ಸುಮಿತ್ ಗ್ವಾಲಾನಿ ಹೇಳಿದರು.
ಸಿಬಿಡಿಸಿಗಳ ಅಂತಹ ಜಾಗತಿಕ ವ್ಯವಸ್ಥೆಯಲ್ಲಿ (Global System) ಡಿಜಿಟಲ್ ರೂಪಾಯಿಯನ್ನು ಸಂಯೋಜಿಸುವುದರೊಂದಿಗೆ ಗಡಿಯಾಚೆಗಿನ ವಹಿವಾಟಿನ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಅವರು ಹೇಳಿದರು. ಡಿಜಿಟಲ್ ರೂಪಾಯಿ ಡಿಜಿಟಲ್ ಪಾವತಿ ವಿಧಾನಗಳಿಗೆ ಪೂರಕವಾಗಿರುತ್ತದೆ ಮತ್ತು ಗಮನಾರ್ಹ ಪರಿಣಾಮ ಬೀರಬಹುದು.
"ಲಭ್ಯವಿರುವ ಡಿಜಿಟಲ್ ಪಾವತಿ ವಿಧಾನಗಳು ದೇಶದ ವಿವಿಧ ಪಾವತಿಗಳನ್ನು ಪೂರೈಸಲು ಸಾಧ್ಯವಾಗಿದೆ. ಆಫ್ಲೈನ್ ಪಾವತಿಗಳು, ಪ್ರೋಗ್ರಾಂ ಮಾಡಿದ ಮತ್ತು ಉದ್ದೇಶಿತ ಪಾವತಿಗಳು (ಸಬ್ಸಿಡಿಗಳು), ಗಡಿಯಾಚೆಗಿನ ಪಾವತಿಗಳು ಮತ್ತು ಹಣ ರವಾನೆಗಳಂತಹ ಕೆಲವು ಗಮನಾರ್ಹ ಕ್ಷೇತ್ರಗಳಲ್ಲಿ ಡಿಜಿಟಲ್ ರೂಪಾಯಿ ಗಮನಾರ್ಹ ಪರಿಣಾಮ ಬೀರಬಹುದು" ಎಂದು ಪಿಡಬ್ಲ್ಯೂಸಿ ಇಂಡಿಯಾದ ಮಿಹಿರ್ ಗಾಂಧಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ