• Home
 • »
 • News
 • »
 • business
 • »
 • Explained: Databricks ಸ್ಟಾರ್ಟಪ್ ಗೂಗಲ್, ಅಮೆಜಾನ್ ಹಾಗೂ ಮೈಕ್ರೋಸಾಫ್ಟ್‌ಗೆ ಪೈಪೋಟಿ ನೀಡುವಂತೆ ಬೆಳೆದದ್ದು ಹೇಗೆ?

Explained: Databricks ಸ್ಟಾರ್ಟಪ್ ಗೂಗಲ್, ಅಮೆಜಾನ್ ಹಾಗೂ ಮೈಕ್ರೋಸಾಫ್ಟ್‌ಗೆ ಪೈಪೋಟಿ ನೀಡುವಂತೆ ಬೆಳೆದದ್ದು ಹೇಗೆ?

CEO Ali Ghodsi

CEO Ali Ghodsi

How Databricks Startup company made money: ಏಳು ಶಿಕ್ಷಣ ತಜ್ಞರ ಗುಂಪು ಸ್ಟಾರ್ಟಪ್ ನಿರ್ಮಾಣಕ್ಕೆ ಕೈಜೋಡಿಸಿ ಫೆಬ್ರವರಿಯಲ್ಲಿ $1 ಬಿಲಿಯನ್ ಸಂಗ್ರಹಿಸಿ ಈ ವರ್ಷದ ಅತ್ಯಂತ ಮೌಲ್ಯಯುತ ಕಂಪನಿಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ

 • Trending Desk
 • 5-MIN READ
 • Last Updated :
 • Share this:

  ಸ್ಯಾನ್‌ ಫ್ರಾನ್ಸಿಸ್ಕೋ ಮೂಲದ ಸಾಫ್ಟ್‌ವೇರ್ ಸ್ಟಾರ್ಟಪ್ ಡೇಟಾಬ್ರಿಕ್ಸ್ (Startup Databricks) ಹೂಡಿಕೆದಾರರು $28 ಬಿಲಿಯನ್ (20,99,54,08,00,000.00 ರೂ) ಮೌಲ್ಯವನ್ನು ದಾಖಲಿಸಿದಾಗಿನಿಂದ ಸುದ್ದಿಯಲ್ಲಿದೆ. 2013 ರಲ್ಲಿ ಆರಂಭಗೊಂಡ ಕಂಪನಿಯು, ಐಯಾನ್ ಸ್ಟಾಕ್ ಸಿಇಒ ಸ್ಥಾನದಿಂದ ಕೆಳಗಿಳಿದ ನಂತರ, ಸಂಸ್ಥೆಯ ಸಹ-ಸಂಸ್ಥಾಪಕರಾದ ಅಲಿ ಘೋಡ್ಸಿ (Ali Ghodsi) ಅವರನ್ನು ಸಿಇಒ ಆಗಿ ಆಯ್ಕೆಮಾಡಿಕೊಂಡಿದ್ದು ಇತ್ತೀಚಿನ ದಿನಗಳಲ್ಲಿ ಉತ್ತಮ ಲಾಭ ಗಳಿಸುತ್ತಿದೆ.


  42 ರ ಹರೆಯದ ಘೋಡ್ಸಿ ಆ ಸಮಯದಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ (Engineering Wing) ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಕೋಡ್ ಅನ್ನು ಮಾರಾಟ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ ಹಾಗೂ ಉಚಿತವಾಗಿ ನೀಡಲು ಬಯಸಿದ್ದರು.


  ಜಗತ್ತನ್ನೇ ಬದಲಿಸುವ ಇರಾದೆ:


  ನಾವು ಬರ್ಕ್ಲಿ ಹಿಪ್ಪಿಗಳ (berkeley hippies) ಗುಂಪಾಗಿದ್ದು ಜಗತ್ತನ್ನು ಬದಲಾಯಿಸುವ ಇರಾದೆಯನ್ನು ಹೊಂದಿದ್ದೇವೆ ಎಂದು ಘೋಡ್ಸಿ ಫೋರ್ಬ್ಸ್‌ನಲ್ಲಿ (Forbes Interview) ಉಲ್ಲೇಖಿಸಿದ್ದಾರೆ. ಸಾಫ್ಟ್‌ವೇರ್ ಅನ್ನು ಉಚಿತವಾಗಿ ತೆಗೆದುಕೊಳ್ಳಿ ಎಂದು ನಾವು ಹೇಳಿದಾಗ ಅದಕ್ಕೆ ಅವರು ನಿಮಗೆ $1 ಮಿಲಿಯನ್ ನೀಡುತ್ತೇವೆ ಎಂದು ಹೇಳುತ್ತಾರೆ ಎಂಬುದಾಗಿ ಘೋಡ್ಸಿ ತಿಳಿಸಿದ್ದಾರೆ. ಏಳು ಶಿಕ್ಷಣ ತಜ್ಞರ ಗುಂಪು ಸ್ಟಾರ್ಟಪ್ ನಿರ್ಮಾಣಕ್ಕೆ ಕೈಜೋಡಿಸಿ ಫೆಬ್ರವರಿಯಲ್ಲಿ $1 ಬಿಲಿಯನ್ ಸಂಗ್ರಹಿಸಿ ಈ ವರ್ಷದ ಅತ್ಯಂತ ಮೌಲ್ಯಯುತ ಕಂಪನಿಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡೇಟಾಬ್ರಿಕ್ಸ್ ಸ್ಟಾರ್ಟಪ್, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ದುಬಾರಿ ಡೇಟಾಹೌಸ್‌ಗಳನ್ನು (Data House) ಸಮ್ಮಿಲನಗೊಳಿಸಲು ಡೇಟಾ ಸಂಗ್ರಹಗಳ ಸರೋವರವನ್ನೇ ಸೃಷ್ಟಿಸಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ.


  Databricks ಕಾರ್ಯನಿರ್ವಹಿಸುವುದರ ಹಿಂದಿರುವ ರಹಸ್ಯವೇನು?:


  ಡೇಟಾಬ್ರಿಕ್ಸ್ ಕಾರ್ಯನಿರ್ವಹಿಸುವುದರ ಹಿಂದೆ ಒಂದು ರಹಸ್ಯವಿದೆ ಎಂದು ತಿಳಿಸಿರುವ ಘೋಡ್ಸಿ, ಡೇಟಾದೊಂದಿಗೆ ಹೇಗೆ ವಿಶ್ಲೇಷಣೆ ನಡೆಸುವುದು ಮತ್ತು ಊಹೆಗಳನ್ನು ಹೇಗೆ ನಡೆಸುವುದು ಎಂಬುದರ ಕುರಿತು AI (Alternative Intelligence) ಮಾದರಿಗಳಿಗೆ ತರಬೇತಿ ನೀಡಲು ಅಲ್ಗಾರಿದಮ್‌ಗಳಿಗೆ (Algorithm) ಬೃಹತ್ ಪ್ರಮಾಣದ ಡೇಟಾವನ್ನು ಒದಗಿಸಿ. ಇದು ಅಷ್ಟೊಂದು ರಹಸ್ಯಮಯವಾಗಿರುವ ವಿಷಯವೇನಲ್ಲ ಎಂದು ಅವರು ಹೇಳುತ್ತಾರೆ.


  ಘೋಡ್ಸಿ ಸ್ವತಃ ಹೇಳುವಂತೆ ಡೇಟಾಬ್ರಿಕ್ಸ್ ಕುರಿತು ಅಷ್ಟೊಂದು ಮಹತ್ವಾಕಾಂಕ್ಷೆಯನ್ನು ಅವರು ಹೊಂದಿರಲಿಲ್ಲ ಅದೇ ರೀತಿ ಕಂಪನಿಯು ಅದ್ಭುತವಾಗಿ ಪ್ರದರ್ಶನ ನೀಡಬಹುದೆಂದ ಕಲ್ಪನೆಯನ್ನು ಆತ ಹೊಂದಿರಲಿಲ್ಲ. ಸ್ವೀಡನ್‌ನಲ್ಲಿ ಉಳಿಯುವ ಇರಾಕ್-ಇರಾನ್ (Iraq - Iran) ನಿರಾಶ್ರಿತರು ಯುಸಿ ಬರ್ಕ್ಲಿಯಲ್ಲಿ ಸಂದರ್ಶಕ ವಿದ್ವಾಂಸರಾಗಿ ಯುಎಸ್‌ಗೆ ಬಂದರು


  ತಮ್ಮ ಹೂಡಿಕೆಯ ಕುರಿತು ಖಡಾಖಂಡಿತವಾಗಿದ್ದ ನೇರ ವ್ಯಕ್ತಿತ್ವದ ಆರಂಭಿಕ ಹೂಡಿಕೆದಾರರಾದ ಬೆನ್ ಹೊರೊವಿಟ್ಜ್ ಅವರೊಂದಿಗೆ ಕಂಪನಿ ಆರಂಭಿಕ ಸಭೆಯನ್ನು ಏರ್ಪಡಿಸಿತ್ತು. ಮೊದಲಿಗೆ ಮಾತುಕತೆ ನಡೆಸಲು ಅವರು ಸಿದ್ಧರಿರಲಿಲ್ಲ ಇದನ್ನು ನೇರವಾಗಿಯೇ ನುಡಿದಿದ್ದರು ಅಂತೆಯೇ ನಾನು ನೀಡುವ ಆಫರ್ ಅನ್ನು ಸ್ವೀಕರಿಸಿ ಇಲ್ಲದಿದ್ದರೆ ತ್ಯಜಿಸಿ ಎಂದು ಖಡಾಖಂಡಿತವಾಗಿ ನುಡಿದಿದ್ದರು. ಇದಾದ ನಂತರ ಡೇಟಾಬ್ರಿಕ್ಸ್‌ನ ಬ್ಯಾಂಕ್ ಬ್ಯಾಲೆನ್ಸ್ (Databricks Bank Balance) ಪರಿಶೀಲಿಸಿದಾಗ ತಾವು ಕಂಡದ್ದನ್ನು ಅರಗಿಸಿಕೊಳ್ಳಲು ಸಂಶೋಧಕರಿಗೆ ಸಾಧ್ಯವಾಗಲಿಲ್ಲ. ನಾವು ಸಂಪೂರ್ಣವಾಗಿ ನಿಶ್ಚಲವಾಗಿದ್ದೆವು. ನಾನು $58,000 ಅಥವಾ $57,000 ಸಂಪಾದಿಸುತ್ತಿದ್ದೆ ಆದರೆ ಇದು ಬಹಳ ಅಧಿಕ ಪ್ರಮಾಣದ ಮೊತ್ತವಾಗಿತ್ತು ಎಂದು ಘೋಡ್ಸಿ ಹೇಳುತ್ತಾರೆ.


  ಇದನ್ನೂ ಓದಿ: ಸ್ವಂತ ಬ್ಯುಸಿನೆಸ್ ಮಾಡುವ ಐಡಿಯಾ ಇದೆಯಾ? ಹ್ಯಾಂಡ್‌ ಟೂಲ್ ವ್ಯವಹಾರ ಆರಂಭಿಸಿ ಲಾಭ ಪಡೆಯಿರಿ


  ಕಂಪನಿ ಹೇಗೆ ಸುಧಾರಣೆಗೊಂಡಿತು?:


  ಎರಡು ವರ್ಷಗಳಲ್ಲಿ ಕಂಪನಿಯು ಹೆಚ್ಚು ಲಾಭವನ್ನು ಗಳಿಸಲಿಲ್ಲ, ಮತ್ತು ಘೋಡ್ಸಿ ಸಿಇಒ ಅಧಿಕಾರ ವಹಿಸಿಕೊಂಡರು. ಡೇಟಾಬ್ರಿಕ್ಸ್ ಪ್ರಕ್ಯುಬ್ಧ ಪರಿಸ್ಥಿತಿಯಲ್ಲಿದ್ದಾಗ ಘೋಡ್ಸಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. 2016 ರಲ್ಲಿ ಕಂಪನಿಯು ಅವರ ಪ್ರಾಬಲ್ಯಕ್ಕೆ ಬಂದೊಡನೆಯೇ ಮೂರು ಕ್ರಮಗಳನ್ನು ಜಾರಿಗೆ ತಂದರು. ತಮ್ಮ ವಿಚಾರಗಳನ್ನು ಅರಿತುಕೊಳ್ಳುವ ಬೆಂಬಲಿಸುವ ಜನರೊಂದಿಗೆ ಮಾರಾಟ ಅಂಶಗಳನ್ನು ವಿಸ್ತರಿಸುವ ಯೋಜನೆಯನ್ನು ಅವರು ಹೊಂದಿದ್ದರು. ಈ ಹಿಂದೆ C-suite ನಿರ್ಮಿಸಿದ ಜನರೊಂದಿಗೆ C-suite ಅನ್ನು ನಿರ್ಮಿಸುವುದು, ತದನಂತರ ಘೋಡ್ಸಿ ಮಾರಾಟಗಾರರಿಗೆ ಮಾರಾಟಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಇಚ್ಛೆಯಿಂದ ಸಾಫ್ಟ್‌ವೇರ್‌ನ ಸ್ವಾಮ್ಯದ ಭಾಗಗಳನ್ನು ರಚಿಸಲು ಬಯಸಿದರು.


  ಇದನ್ನೂ ಓದಿ: ಅಯೋಧ್ಯೆಯಲ್ಲಿಯ ಉದ್ಯಾನವನಕ್ಕೆ ಕೊರಿಯಾ ರಾಣಿ ಹೆಸರು ಇಡುತ್ತಿರೋದು ಯಾಕೆ ಗೊತ್ತಾ?


  ಕಾರ್ಯನಿರ್ವಾಹಕ ತಂಡವು ಒಂದು ವರ್ಷದೊಳಗೆ ಸಂಪೂರ್ಣವಾಗಿ ಹೊಸದಾಗಿತ್ತು, ಮತ್ತು ಘೋಡ್ಸಿ ಪದಚ್ಯುತಿಗೆ ಬದಲಾಗಿ ಹಳೆಯ ಕಾರ್ಯನಿರ್ವಾಹಕರನ್ನು ಉಳಿಯಲು ತಿಳಿಸಿದರು. "ಜನರು ಸಾಕಷ್ಟು ಬುದ್ಧಿವಂತರಾಗಿದ್ದರೆ, ತಮ್ಮ ಅಹಂ ಅನ್ನು ಬದಿಗಿಡುತ್ತಾರೆ" ಎಂದು ಅವರು ಉಲ್ಲೇಖಿಸಿದ್ದಾರೆ. ಉಲ್ಲೇಖಿಸಿದ್ದಾರೆ. ಇದರ ನಂತರ ಏಳು ಜನರಲ್ಲಿ ಇಬ್ಬರು ಮಾತ್ರ ತ್ಯಜಿಸಿದರು. ಅಲ್ಲಿಂದ ನಂತರ ಡೇಟಾಬ್ರಿಕ್ಸ್‌ ಹಿಂತಿರುಗಿ ನೋಡಲಿಲ್ಲ. ಘೋಡ್ಸಿಯ ಪ್ರಕಾರ ಇದು ಈಗ ಕೇವಲ ನಾಲ್ಕು ಪ್ರತಿಸ್ಪರ್ಧಿಗಳನ್ನು ಹೊಂದಿದ್ದು ಅವುಗಳಲ್ಲಿ ಒಂದು ಸ್ನೋಫ್ಲೇಕ್ ಸಂಸ್ಥೆಯಾಗಿದ್ದು, ಇನ್ನುಳಿದಂತೆ ಮೂರು ಸಂಸ್ಥೆಗಳು ಗೂಗಲ್, ಅಮೆಜಾನ್ ಹಾಗೂ ಮೈಕ್ರೋಸಾಫ್ಟ್. ಇವರೆಲ್ಲರೂ ಡೇಟಾಬ್ರಿಕ್ಸ್‌ನಲ್ಲಿ ಹೂಡಿಕೆದಾರರಾಗಿದ್ದಾರೆ. ಸಂಸ್ಥೆಯು ಜರ್ಮನ್ ನೋ-ಕೋಡ್ ಸ್ಟಾರ್ಟ್-ಅಪ್ 8080 ಲ್ಯಾಬ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಸಂಸ್ಥೆಯು ಶೀಘ್ರದಲ್ಲಿಯೇ ಸಾರ್ವಜನಿಕವಾಗಲಿದೆ ಎಂದು ಘೋಡ್ಸಿ ತಿಳಿಸಿದ್ದಾರೆ.

  Published by:Sharath Sharma Kalagaru
  First published: