Aadhaar Card: ಆಧಾರ್ ಕಾರ್ಡ್ ಬಳಸಿ ಬ್ಯಾಂಕ್​ ಬ್ಯಾಲೆನ್ಸ್​ ಹೀಗೆ ಚೆಕ್​ ಮಾಡಿ, ತುಂಬಾ ಸಿಂಪಲ್​ ಗುರೂ!

ಒಬ್ಬ ವ್ಯಕ್ತಿಯ ಗುರುತಿಗೆ ಆಧಾರ್ ಕಾರ್ಡ್ ಮೂಲವಾಗಿದೆ. ನಾವು ಹುಟ್ಟಿದಾಗಿನಿಂದ ಸಾಯುವವರೆಗೂ ಆಧಾರ್ ಕಾರ್ಡ್ ಮುಖ್ಯವಾಗಿದೆ. ನಾವು ಆಧಾರ್ ಕಾರ್ಡ್ ಅನ್ನು ಬೇರೆ ಬೇರೆ ಕಾರ್ಯಗಳಿಗೆ ಬಳಕೆ ಮಾಡಬಹುದಾಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿಯೊಬ್ಬ ಭಾರತೀಯನು ಆಧಾರ್​ ಕಾರ್ಡ್ (Aadhaar Card)​ ಅನ್ನು ಕಡ್ಡಾಯವಾಗಿ ಹೊಂದಿರಬೇಕು. ಅದರೊಂದಿಗೆ ಭಾರತೀಯ ಚುನಾವಣಾ ಆಯೋಗವು (ECI) ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ (Link) ಮಾಡಲು ಸೂಚಿಸಿದೆ. ಚುನಾವಣಾ ಫೋಟೋ ಗುರುತಿನ ಚೀಟಿ (EPIC) ಸಂಖ್ಯೆಯನ್ನು ಲಿಂಕ್ ಮಾಡುವ ಮೂಲಕ ನಾಗರಿಕರ ಆಧಾರ್ ವಿವರಗಳೊಂದಿಗೆ ಹಂತವು ಪ್ರಮಾಣೀಕರಿಸುತ್ತದೆ. ಆದರೆ ಆಧಾರ್​ ಜೊತೆಗೆ ಈ ಕ್ರಮವನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ವೋಟರ್​ ಐಡಿಯನ್ನು (Voter ID) ಲಿಂಕ್​ ಮಾಡಬೇಕಿದೆ. ದಿನ ಕಳೆದಂತೆ ಆಧಾರ್ ಕಾರ್ಡ್ ಎಲ್ಲ ಕಾರ್ಯಗಳಿಗೂ ಪ್ರಮುಖ ದಾಖಲೆಯಾಗಿದೆ.

ಆಧಾರ್​ ಬಳಸಿ ಅಕೌಂಟ್​ ಬ್ಯಾಲೆನ್ಸ್​ ಚೆಕ್​ ಮಾಡಿ!

ಒಬ್ಬ ವ್ಯಕ್ತಿಯ ಗುರುತಿಗೆ ಆಧಾರ್ ಕಾರ್ಡ್ ಮೂಲವಾಗಿದೆ. ನಾವು ಹುಟ್ಟಿದಾಗಿನಿಂದ ಸಾಯುವವರೆಗೂ ಆಧಾರ್ ಕಾರ್ಡ್ ಮುಖ್ಯವಾಗಿದೆ. ನಾವು ಆಧಾರ್ ಕಾರ್ಡ್ ಅನ್ನು ಬೇರೆ ಬೇರೆ ಕಾರ್ಯಗಳಿಗೆ ಬಳಕೆ ಮಾಡಬಹುದಾಗಿದೆ. ಆಧಾರ್ ಕಾರ್ಡ್ ನಿಮ್ಮ ಬಯೋಮೆಟ್ರಿಕ್ ಡೇಟಾದೊಂದಿಗೆ ಲಿಂಕ್ ಆಗುತ್ತದೆ. ಇದರಲ್ಲಿ ನಮ್ಮ ಫಿಂಗರ್ ಪ್ರಿಂಟ್ ಹಾಗೂ ಐರಿಸ್ ಸ್ಕ್ಯಾನ್ ಇರಲಿದೆ. ನಾವು ಆಧಾರ್ ಕಾರ್ಡ್ ಅನ್ನು ಬಳಕೆ ಮಾಡಿಕೊಂಡು ನಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ನೋಡಬಹುದು.

ಖಾತೆಯಲ್ಲಿ ಎಷ್ಟು ಹಣವಿದೆ ಅಂತ ನೋಡಿ!

ನಾವು ನಮ್ಮ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗದೆಯೇ ಆಧಾರ್ ಕಾರ್ಡ್ ಅನ್ನು ಬಳಕೆ ಮಾಡಿಕೊಂಡು ನಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ನೋಡಲು ಸಾಧ್ಯವಾಗಲಿದೆ. ನಮ್ಮ ಆಧಾರ್ ಕಾರ್ಡ್ ನಮ್ಮ ಬಯೋಮೆಟ್ರಿಲ್ ಡೇಟಾವನ್ನು ಹೊಂದಿರುವ ಕಾರಣದಿಂದಾಗಿ ನಮಗೆ ಅಗತ್ಯ ಕಾರ್ಯಗಳನ್ನು ಆಧಾರ್ ಬಳಸಿ ಮಾಡಲು ಸಾಧ್ಯವಾಗುತ್ತದೆ. ಈ ಲಿಂಕ್ ಆದ ಮಾಹಿತಿಗಳು ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಆಧಾರ್ ಸಂಖ್ಯೆಯ ಮೂಲಕ ಸುಲಭವಾಗಿ ಚೆಕ್ ಮಾಡಲು ಸಹಾಯ ಮಾಡಲಿದೆ. ಕೇವಲ ಮೊಬೈಲ್​ನಲ್ಲೇ ನಿಮ್ಮ ಆಧಾರ್ ಕಾರ್ಡ್ ಬಳಸಿ ನಿಮ್ಮ ಖಾತೆ ಬ್ಯಾಲೆನ್ಸ್​ ಎಷ್ಟು ಎಂಬುದನ್ನ ನೀವು ತಿಳಿದುಕೊಳ್ಳಬಹುದು.

ಇದನ್ನೂ ಓದಿ: ವೋಟರ್​ ಐಡಿಗೆ ಆಧಾರ್​ ಕಾರ್ಡ್​ ಲಿಂಕ್​ ಮಾಡಲು ಈ ಸುಲಭ ವಿಧಾನ ಅನುಸರಿಸಿ

ಹಿರಿಯ ನಾಗರಿಕರಿಗೂ ಇದರಿಂದ ಅನುಕೂಲ!

ಈ ಹೊಸ ಫೀಚರ್ ಪ್ರಮುಖವಾಗಿ ಹಿರಿಯ ನಾಗರಿಕರಿಗೆ ಮತ್ತು ಸ್ಮಾರ್ಟ್‌ಫೋನ್ ಹೊಂದಿರದ ಇತರ ಜನರಿಗೆ ಪ್ರಯೋಜನಕಾರಿಯಾಗಿದೆ. ಬ್ಯಾಂಕ್‌ನಲ್ಲಿ ಸರತಿ ಸಾಲಿನಲ್ಲಿ ನಿಂತು ಹಿರಿಯ ನಾಗರಿಕರು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸುವುದು ತಪ್ಪುತ್ತದೆ. ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಸಹ ವ್ಯಕ್ತಿಗಳು ತಮ್ಮ ಫೋನ್‌ಗಳಲ್ಲಿ ತಮ್ಮ ಬ್ಯಾಂಕ್ ಬ್ಯಾಲೆನ್ಸ್‌ಗಳನ್ನು ಪರಿಶೀಲಿಸಲು ತಮ್ಮ ಆಧಾರ್ ಕಾರ್ಡ್‌ಗಳನ್ನು ಬಳಸಬಹುದು. ಇದರಿಂದ ಹಲವರಗೆ ಸಾಕಷ್ಟು ಮಂದಿಗೆ ಉಪಯೋಗವಾಗಲಿದೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಆಧಾರ್​ ಬಯೋಮೆಟ್ರಿಕ್ ವಿವರಗಳನ್ನು ಹೀಗೆ ಲಾಕ್ ಮಾಡಿ, ಇಲ್ಲಾಂದ್ರೆ ಮಿಸ್ ಯೂಸ್​ ಆಗುತ್ತೆ ನೋಡಿ!

ಹಂತ 1: ನಿಮ್ಮ ರಿಜಿಸ್ಟರ್‌ ಆದ ಮೊಬೈಲ್ ಸಂಖ್ಯೆಯನ್ನು ನೀವು ಹೊಂದಿರುವುದು ಮುಖ್ಯವಾಗಿದೆ
ಹಂತ 2: ನಿಮ್ಮ ರಿಜಿಸ್ಟರ್‌ ಆದ ಮೊಬೈಲ್ ಸಂಖ್ಯೆಯಿಂದ *99*99*1# ಗೆ ಡಯಲ್ ಮಾಡಿ
ಹಂತ 3: ನಿಮ್ಮ 12 ಡಿಜಿಟ್‌ಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 4: ದೃಢೀಕರಣಕ್ಕಾಗಿ ನಿಮ್ಮ 12 ಡಿಜಿಟ್‌ಗಳ ಆಧಾರ್ ಸಂಖ್ಯೆಯನ್ನು ಮತ್ತೆ ನಮೂದಿಸಿ
ಹಂತ 5: ನಿಮ್ಮ ಮೊಬೈಲ್‌ನಲ್ಲಿ ಫ್ಲ್ಯಾಶ್ ನೋಟಿಫಿಕೇಶನ್ ಬರಲಿದೆ
ಹಂತ 6: ಈ ನೋಟಿಫಿಕೇಶನ್‌ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಮಾಹಿತಿ ಇರಲಿದೆ
Published by:ವಾಸುದೇವ್ ಎಂ
First published: