• Home
  • »
  • News
  • »
  • business
  • »
  • Business Loan: ಸಣ್ಣ ವ್ಯಾಪಾರೋದ್ಯಮಿಗಳು ತಮ್ಮ ವ್ಯಾಪಾರಕ್ಕಾಗಿ ಲೋನ್‌ಗಳನ್ನು ಹೇಗೆ ಪಡೆದುಕೊಳ್ಳಬಹುದು? ಅರ್ಹತೆಗಳೇನು?

Business Loan: ಸಣ್ಣ ವ್ಯಾಪಾರೋದ್ಯಮಿಗಳು ತಮ್ಮ ವ್ಯಾಪಾರಕ್ಕಾಗಿ ಲೋನ್‌ಗಳನ್ನು ಹೇಗೆ ಪಡೆದುಕೊಳ್ಳಬಹುದು? ಅರ್ಹತೆಗಳೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಣ್ಣ ವ್ಯಾಪಾರದ ಉದ್ಯಮಗಳಿಗೆ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸುವುದು ಹಾಗೂ ಲೋನ್‌ಗಳನ್ನು ಪಡೆದುಕೊಳ್ಳುವುದು ಸುಲಭವಾಗಿದೆ. ವ್ಯಾಪಾರ ಮಾಲೀಕರು ಮತ್ತು ವಾಣಿಜ್ಯೋದ್ಯಮಿಗಳು ಯಾವುದೇ ತೊಂದರೆಯಿಲ್ಲದೆ ಆನ್‌ಲೈನ್‌ನಲ್ಲಿ MSME (ಸಣ್ಣ ಉದ್ಯಮಗಳು) ಗಳಿಗೆ ಬ್ಯುಸಿನೆಸ್​ ಲೋನ್‌ಗೆ ಅರ್ಜಿ ಸಲ್ಲಿಸಬಹುದು.

ಮುಂದೆ ಓದಿ ...
  • Share this:

    ಸಣ್ಣ, ಮಧ್ಯಮ ಹಾಗೂ ಸೂಕ್ಷ್ಮ ಉದ್ಯಮಗಳು (Small Business) ದೇಶದ ಆರ್ಥಿಕತೆಗೆ 40% ದಷ್ಟು ಕೊಡುಗೆ ನೀಡುತ್ತವೆ. ದೊಡ್ಡ ದೊಡ್ಡ ರಿಟೇಲರ್‌ಗಳು (Retailers) ಈ ಉದ್ಯಮಗಳನ್ನೇ ಆಧರಿಸಿಕೊಂಡಿದ್ದು ವಿವಿಧ ಕಾರ್ಯಾಚರಣೆಗಳು ಹಾಗೂ ಕಚ್ಚಾವಸ್ತುಗಳಿಗೆ ಈ ಉದ್ಯಮಗಳನ್ನೇ ಅವಲಂಬಿಸಿವೆ. ಸಣ್ಣ ವ್ಯಾಪಾರ ಮಾಲೀಕರಿಗೆ ಕೂಡ ಈ ಉದ್ಯಮಗಳು ಅವರ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಅನುಕೂಲಕರವಾಗಿದೆ. ಸಣ್ಣ ವ್ಯಾಪಾರೋದ್ಯಮಿಗಳಿಗೆ ಲೋನ್‌ಗಳು (Business Loan) ಸಲುಭವಾಗಿ ದೊರೆಯುತ್ತವೆ, ಆದರೆ ಲೋನ್ ಪಡೆಯುವ ಸಂದರ್ಭದಲ್ಲಿ ಕೆಲವೊಂದು ಅಂಶಗಳತ್ತ ಗಮನ ಹರಿಸಬೇಕಾಗುತ್ತದೆ.


    ಲೋನ್‌ಗಳು ಸುಲಭವಾಗಿ ದೊರೆಯುತ್ತದೆ


    ಸಣ್ಣ ವ್ಯಾಪಾರದ ಉದ್ಯಮಗಳಿಗೆ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸುವುದು ಹಾಗೂ ಲೋನ್‌ಗಳನ್ನು ಪಡೆದುಕೊಳ್ಳುವುದು ಸುಲಭವಾಗಿದೆ. ವ್ಯಾಪಾರ ಮಾಲೀಕರು ಮತ್ತು ವಾಣಿಜ್ಯೋದ್ಯಮಿಗಳು ಯಾವುದೇ ತೊಂದರೆಯಿಲ್ಲದೆ ಆನ್‌ಲೈನ್‌ನಲ್ಲಿ MSME (ಸಣ್ಣ ಉದ್ಯಮಗಳು) ಗಳಿಗೆ ಬ್ಯುಸಿನೆಸ್​ ಲೋನ್‌ಗೆ ಅರ್ಜಿ ಸಲ್ಲಿಸಬಹುದು.


    ಲೋನ್ ಪಡೆದುಕೊಳ್ಳುವುದು ಹೇಗೆ?


    ಆದರೆ ಸಣ್ಣ ಉದ್ಯಮಗಳನ್ನು ನಡೆಸುವ ಮಾಲೀಕರಿಗೆ ಹಣಕಾಸಿನ ನೆರವು ಪಡೆದುಕೊಳ್ಳುವುದು ಕೆಲವೊಮ್ಮೆ ಕಷ್ಟವಾಗಿರುತ್ತದೆ. ಇದಕ್ಕೆ ಕಾರಣ ಕಡಿಮೆ ಸಾಲದ ಅರ್ಹತೆ, ಸಾಲದಾತರಿಗೆ ಲಭ್ಯತೆ ಇಲ್ಲದಿರುವುದು, ಕ್ರೆಡಿಟ್ ಆಯ್ಕೆಗಳ ಬಗ್ಗೆ ಸಮರ್ಪಕ ಜ್ಞಾನ ಇಲ್ಲದಿರುವುದು ಇತ್ಯಾದಿ.




    ಇಂದಿನ ಲೇಖನದಲ್ಲಿ ಇಂತಹ ಸಮಸ್ಯೆಗಳನ್ನು ನಿವಾರಿಸಿಕೊಂಡು ಲೋನ್ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ


    ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು


    ಸಾಲ ನೀಡುವ ಸಮಯದಲ್ಲಿ ಕ್ರೆಡಿಟ್ ಸ್ಕೋರ್ ಅತ್ಯಗತ್ಯವಾಗಿದೆ. ವ್ಯಾಪಾರ ಅಥವಾ ವ್ಯಕ್ತಿಯ ಕ್ರೆಡಿಟ್ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಸಾಲದಾತರು ಪರಿಗಣಿಸುವ ಮೊದಲ ಅಂಶವಾಗಿದೆ. ಬ್ಯುಸಿನೆಸ್ ಲೋನ್‌ಗೆ ಅನುಮೋದನೆ ಪಡೆಯಲು ಉತ್ತಮ ವ್ಯಾಪಾರ ಕ್ರೆಡಿಟ್ ಸ್ಕೋರ್ ಹೊಂದುವುದು ಮಾತ್ರ ಸಾಕಾಗುವುದಿಲ್ಲ, ವೈಯಕ್ತಿಕ ಕ್ರೆಡಿಟ್ ಸ್ಕೋರ್ ಸಹ ಮಹತ್ವದ್ದು.


    ನಿಮ್ಮ ವ್ಯಾಪಾರ ಹೊಸದಾಗಿದ್ದು ಸರಿಯಾದ ಕ್ರೆಡಿಟ್ ಇತಿಹಾಸವನ್ನು ನೀವು ಹೊಂದದೇ ಇದ್ದರೆ ನಿಮ್ಮ ವೈಯಕ್ತಿಕ ಕ್ರೆಡಿಟ್ ಸ್ಕೋರ್ ಅನ್ನು ಪರಿಗಣಿಸಲಾಗುತ್ತದೆ.


    ನಿಮ್ಮ ವ್ಯಾಪಾರ ಕ್ರೆಡಿಟ್ ಸ್ಕೋರ್ ಅನ್ನು ಕ್ರೆಡಿಟ್ ಇತಿಹಾಸ, ಬಾಕಿ ಇರುವ ಸಾಲ, ಕ್ರೆಡಿಟ್ ಬಳಕೆಯ ಅನುಪಾತ ಮೊದಲಾದ ಅಂಶಗಳನ್ನು ಒಳಗೊಂಡಂತೆ ಕೆಲವೊಂದು ಅಂಶಗಳು ಮೇಲೆ ಲೆಕ್ಕಹಾಕಲಾಗುತ್ತದೆ.


    ವಿವರವಾದ ವ್ಯಾಪಾರ ಯೋಜನೆಯನ್ನು ಪ್ರಸ್ತುತಪಡಿಸಿ:


    ನಿಮ್ಮ ಸಾಲದ ವಿನಂತಿಯನ್ನು ಅನುಮೋದಿಸುವ ಮೊದಲು ಸಾಲದಾತರು ನಿಮ್ಮ ವ್ಯಾಪಾರದ ಸ್ವರೂಪ ಮತ್ತು ಅದರ ಒಟ್ಟಾರೆ ಕಾರ್ಯಕ್ಷಮತೆಯನ್ನು ಸಹ ಪರಿಶೀಲಿಸುತ್ತಾರೆ.


    ಸಾಂದರ್ಭಿಕ ಚಿತ್ರ


    ಸ್ಥಿರ ಆದಾಯವಿರುವ ವ್ಯವಹಾರಗಳಿಗೆ ಸಾಲದಾತರು ಆದ್ಯತೆ ನೀಡುತ್ತಾರೆ. ಈ ಸಮಯದಲ್ಲಿ ಅಪಾಯವಿರುವುದಿಲ್ಲ ಹಾಗೂ ಹೆಚ್ಚಿನ ವಿಚಾರಣೆ, ವಿಳಂಬ ಮತ್ತು ಸಮಸ್ಯೆಗಳಿಲ್ಲದೆ ಸಾಲದ ಅನುಮೋದನೆ ಪಡೆಯಲು ಸಹಾಯಕವಾಗುತ್ತದೆ.


    ನಗದಿನ ಕಾರ್ಯಾಚರಣೆಗಳನ್ನು ನಿರ್ವಹಿಸಿ


    ಸಣ್ಣ ವ್ಯಾಪಾರ ಮಾಲೀಕರು ಹಣಕಾಸಿನ ಸ್ಥಿರತೆಯನ್ನು ಪರಿಗಣಿಸಿಬೇಕಾಗುತ್ತದೆ. ಒಂದು ವೇಳೆ ನಿಮಗೆ MSME ಗಾಗಿ ಬಿಸಿನೆಸ್ ಲೋನ್ ಅಗತ್ಯವಿದ್ದರೆ, ಸ್ಥಿರವಾದ ಆದಾಯವನ್ನು ಹೊಂದುವುದು ನಿಮಗೆ ತ್ವರಿತವಾಗಿ ಮತ್ತು ಯಾವುದೇ ತೊಂದರೆಯಿಲ್ಲದೆ ಸಾಲದ ಅನುಮೋದನೆಯನ್ನು ಪಡೆಯಲು ಸಹಾಯ ಮಾಡುತ್ತದೆ.


    ಮರುಪಾವತಿ ವಿಧಾನ ರಚಿಸಿ


    ಸಾಲದಾತರು ಸಾಲವನ್ನು ನೀಡುವ ಮೊದಲು ಸಾಲ ಮರುಪಾವತಿಸಲು ಅರ್ಹರಾಗಿರುವಿರಾ ಎಂಬುದನ್ನು ಪರಿಶೀಲಿಸುತ್ತಾರೆ. ಸಣ್ಣ ವ್ಯಾಪಾರೋದ್ಯಮಗಳು ಅಸುರಕ್ಷಿತವಾಗಿರುವುದರಿಂದ ನಷ್ಟದಿಂದ ಬಳಲುವುದನ್ನು ತಪ್ಪಿಸಲು ಸಾಲಗಾರರು ಮರುಪಾವತಿ ಮಾಡಲು ಸಮರ್ಥರಾಗಿದ್ದಾರೆ ಎಂದು ಸಾಲದಾತರು ಖಚಿತಪಡಿಸಿಕೊಳ್ಳುತ್ತಾರೆ.


    ಬ್ಯುಸಿನೆಸ್ ಲೋನ್‌ಗೆ ಅರ್ಜಿ ಸಲ್ಲಿಸುವ ಮೊದಲು, ನಿಮ್ಮ ಆರ್ಥಿಕತೆಯನ್ನು ನೀವು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕು. ಇದಲ್ಲದೆ, ನಿಮ್ಮ ಮಾಸಿಕ EMI ಗಳನ್ನು ನಿರ್ಧರಿಸಲು ನೀವು ಬಿಸಿನೆಸ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ಸಹ ಬಳಸಬಹುದು.


    ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ 2023 ಇತಿಹಾಸದಲ್ಲೇ ಅತ್ಯಂತ ಕೆಟ್ಟ ವರ್ಷವಾಗಲಿದೆಯಂತೆ, ಏಕೆ?


    ಇಎಮ್‌ಐ ಕ್ಯಾಲ್ಕುಲೇಟರ್‌ಗಳು ಖರ್ಚುವೆಚ್ಚಗಳನ್ನು ಲೆಕ್ಕಾಚಾರ ಮಾಡಿ ಲೋನ್‌ಗೆ ಮಾಸಿಕವಾಗಿ ಎಷ್ಟು ಪಾವತಿಸಬೇಕು ಎಂಬುದನ್ನು ಲೆಕ್ಕಾಚಾರ ಮಾಡಲು ಸಹಕಾರಿಯಾಗಿದೆ. ಇದು ಸಾಲದ ಅವಧಿಯಲ್ಲಿ ನಿಮ್ಮ ಹಣಕಾಸುಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ನಿಮಗೆ ಅನುವು ಮಾಡಿಕೊಡುತ್ತದೆ.


    ಲೋನ್‌ಗಳನ್ನು ಸಣ್ಣ ವ್ಯಾಪಾರಿಗಳು ಹೇಗೆ ಬಳಸಬಹುದು?


    ಸಣ್ಣ ಉದ್ಯೋಗ ಮಾಡುವ ವ್ಯಾಪಾರಿಗಳು ತಮ್ಮ ಲೋನ್‌ಗಳನ್ನು ತರಬೇತಿ ಪಡೆದ ಸಿಬ್ಬಂದಿ ನೇಮಿಸಲು, ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ನವೀಕರಿಸಲು, ಉತ್ತಮ ಗುಣಮಟ್ಟದ ಕಭಚ್ಚಾ ಸಾಮಾಗ್ರಿಗಳಲ್ಲಿ ಹೂಡಿಕೆ ಮಾಡಲು ಬಳಸಬಹುದಾಗಿದೆ.

    Published by:Prajwal B
    First published: