• Home
  • »
  • News
  • »
  • business
  • »
  • Afghanistan ದಲ್ಲಿ ನಿಂತು ತಾಲಿಬಾನ್ ಅಲ್ಲ ಅಲ್ಲ ಎಂದ Dr Bro! ಎಲ್ರೂ ಇಲ್ಲಿಗೆ ಹೋಗ್ತಿರೋದಕ್ಕೆ ಇದೇ ಕಾರಣವಂತೆ!

Afghanistan ದಲ್ಲಿ ನಿಂತು ತಾಲಿಬಾನ್ ಅಲ್ಲ ಅಲ್ಲ ಎಂದ Dr Bro! ಎಲ್ರೂ ಇಲ್ಲಿಗೆ ಹೋಗ್ತಿರೋದಕ್ಕೆ ಇದೇ ಕಾರಣವಂತೆ!

ಅಫ್ಘಾನ್​ನಲ್ಲಿ ಡಾ ಬ್ರೋ

ಅಫ್ಘಾನ್​ನಲ್ಲಿ ಡಾ ಬ್ರೋ

ಅಫ್ಘಾನ್ ದೇಶಕ್ಕೆ ಎಲ್ಲರೂ ಹೋಗುವುದಕ್ಕೆ ಹೆದರುತ್ತಾರೆ. ಆದರೆ, ಅಫ್ಘಾನ್​ನಲ್ಲಿ ಏನಾಗ್ತಿದೆ ಅಂತ ತಿಳಿದುಕೊಳ್ಳಲು ಸಾಕಷ್ಟು ಉತ್ಸುಕರಾಗಿದ್ದಾರೆ.

  • Share this:

ಅಫ್ಘಾನಿಸ್ಥಾನ (Afghanistan) ದಲ್ಲಿ ಕಳೆದ ವರ್ಷ ಏನಾಯ್ತು ಅಂತ ಎಲ್ಲರಿಗೂ ಗೊತ್ತಿದೆ. ಈಗ ತಾಲಿಬಾನಿ (Taliban's) ಗಳ ಕಪಿ ಮುಷ್ಠಿಯಲ್ಲಿ ನಲುಗಿದೆ ಅಫ್ಘಾನಿಸ್ಥಾನ. ಈ ದೇಶಕ್ಕೆ ಹೋಗಲು ಎಲ್ಲರೂ ಹೆದರುತ್ತಿದ್ದಾರೆ. ಅಲ್ಲಿಗೆ ಹೋದರೆ ಜೀವಂತವಾಗಿ ವಾಪಸ್​ ಬರುವುದು ಡೌಟ್ (Doubt) ಅಂತ ಎಲ್ಲರಿಗೂ ಗೊತ್ತಿದೆ. ಆದರೆ, ಎಲ್ಲ ಯುಟ್ಯೂಬರ್ (Youtuber) ​ಗಳು ಮಾತ್ರ ಅಫ್ಘಾನಿಸ್ಥಾನಕ್ಕೆ ಹೋಗಿ ವಿಡಿಯೋ (Video) ಮಾಡ್ತಿದ್ದಾರೆ. ಅದರಲ್ಲೂ ನಮ್ಮ ಕನ್ನಡ ಯುಟ್ಯೂಬರ್​ಗಳು ಕೂಡ ಅಲ್ಲಿ ತೆರಳಿ ವ್ಲಾಗ್​ ಮಾಡುತ್ತಿದ್ದಾರೆ. ಡಾ ಬ್ರೋ (Dr Bro) ಅಫ್ಘಾನಿಸ್ಥಾನದಲ್ಲಿ ನಿಂತು ತಾಲಿಬಾನ್ ಅಲ್ಲ ಅಲ್ಲ ಅಂತ ಹಾಡು ಹೇಳಿದ್ದಾರೆ. ಇನ್ನೂ ಕೆಲ ಕನ್ನಡ ಯುಟ್ಯೂಬರ್​ ಕೂಡ ಅಲ್ಲಿಗೆ ತೆರಳಿ ಬ್ಲಾಗ್ ಮಾಡುತ್ತಿದ್ದಾರೆ.


ಸೇಫ್​ ಅಲ್ಲದಿದ್ರೂ ಎಲ್ರೂ ಅಫ್ಘಾನ್​ಗೆ ಹೋಗ್ತಿರೋದೇಕೆ!


ಅಫ್ಘಾನ್​ನಲ್ಲಿ ಇನ್ನೂ ತಾಲಿಬಾನಿಗಳು ತಮಗೆ ಇಷ್ಟ ಬಂದ ಹಾಗೇ ರೂಲ್ಸ್ ಮಾಡಿಕೊಂಡು ಮೆರೆಯುತ್ತಿದ್ದಾರೆ. ಬೇರೆ ದೇಶದ ಜನರನ್ನು ಕಂಡರೆ ಎಗರಿ ಬೀಳುತ್ತಿದ್ದಾರೆ. ಅಫ್ಘಾನ್​ ಜೊತೆ ಇದ್ದ ಸಂಬಂಧವನ್ನು ಎಲ್ಲ ರಾಷ್ಟ್ರಗಳು ಕೂಡ ಕಟ್ ಮಾಡಿಕೊಂಡಿದೆ. ಹೀಗಿದ್ದಾಗ ಇವರೆಲ್ಲ ಅಲ್ಲಿಗೆ ಹೇಗೆ ಇಷ್ಟು ಸುಲಭವಾಗಿ ಹೋಗುತ್ತಿದ್ದಾರೆ ಅಂತ ನೀವು ಕೇಳಬಹುದು. ಅದಕ್ಕೂ ಒಂದು ಕಾರಣವಿದೆ. ಅಫ್ಘಾನ್ ದೇಶಕ್ಕೆ ಎಲ್ಲರೂ ಹೋಗುವುದಕ್ಕೆ ಹೆದರುತ್ತಾರೆ. ಆದರೆ, ಅಫ್ಘನ್​ನಲ್ಲಿ ಏನಾಗ್ತಿದೆ ಅಂತ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.


ತಾಲಿಬಾನಿಗಳು ಸುಮ್ಮನಿದ್ದಾರಾ? 


ಹೀಗಾಗಿ ಯಾರದರೂ ಅಲ್ಲಿ ಹೋಗಿ ವಿಡಿಯೋ ಮಾಡಿದರೆ, ಆ ವಿಡಿಯೋ ನೋಡುವುದಕ್ಕೆ ಕಾತುರದಿಂದ ಕಾಯುತ್ತಿರುತ್ತಾರೆ. ಕೆಲವು ಧೈರ್ಯ ಯುಟ್ಯೂಬರ್​ಗಳು ಅಫ್ಘನ್​ಗೆ ತೆರಳಿ ವಿಡಿಯೋ ಮಾಡುತ್ತಿದ್ದಾರೆ. ಭಾರತದಿಂದ ನೀವು ನೇರವಾಗಿ ಅಫ್ಘನ್​ ದೇಶಕ್ಕೆ ಹೋಗುವುದಕ್ಕೆ ಸಾಧ್ಯವಿಲ್ಲ. ನೀವು ಗಲ್ಫ್​ ರಾಷ್ಟ್ರಕ್ಕೆ ತೆರಳಿ ಅಲ್ಲಿಂದ ಅಫ್ಘನ್​ಗೆ ಹೋಗುತ್ತಿದ್ದಾರೆ.


ನಿಮನ್ನು ಅಫ್ಘನ್​ಗೆ ಕರೆದುಕೊಂಡಲು ಹೋಗಲು ಅಲ್ಲಿನ ಏಜೆನ್ಸಿಗಳು ರೆಡಿ ಇದ್ದಾರೆ. ಸದ್ಯಕ್ಕೆ ಕವೇಲ ಗಂಡುಮಕ್ಕಳಿಗಷ್ಟೇ ಅಫ್ಘನ್​ಗೆ ಹೋಗಲು ಅನುಮತಿ ಇದೆ. ನಿಮ್ಮ  ಜೊತೆ ಅವರೇ ಬಂದು ಗೈಡ್​ ಮಾಡುತ್ತಾರೆ. ಆಫ್ಘನ್​ನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ನಿಮಗೆ ತಾಲಿಬಾನ್​ ಅನುಮತಿ ಪತ್ರ ಕೂಡ ಸಿಗುತ್ತೆ.


ಇದನ್ನೂ ಓದಿ: ಅಗ್ಗದ ಎಲೆಕ್ಟ್ರಿಕ್​ ಕಾರು ಬಿಡುಗಡೆ, 1 ಕಿಲೋ ಮೀಟರ್​​ ಸಂಚರಿಸೋಕೆ ಖರ್ಚಾಗೋದು ಜಸ್ಟ್ 75 ಪೈಸೆ!


ಅಫ್ಘನ್​ಗೆ ಹೋಗಿ ಬರೋದಕ್ಕೆ ಎಷ್ಟು ಖರ್ಚಾಗುತ್ತೆ?


ತಾಲಿಬಾನಿಗಳ ಅನುಮತಿ ಪತ್ರ ನಿಮ್ಮ ಬಳಿ ಇದ್ದರೆ ಸಾಕು. ನೀವು ಆಡಿದ್ದೇ ಆಟ. ನಿಮ್ಮನ್ನು ಯಾರೂ ಏನೂ ಕೇಳುವುದಿಲ್ಲ. ನಿಮ್ಮ ಗೈಡ್ ನಿಮ್ಮನ್ನು ಬೇಕಿದ್ದರೆ ತಾಲಿಬಾನ್​ಗಳ ಬಳಿಯೂ ಕರೆದುಕೊಂಡು ಹೋಗುತ್ತಾರೆ. ಗೈಡ್​ ನಿಮಗೆ ಒಂದು ದಿನಕ್ಕೆ 100 ಡಾಲರ್​  ಚಾರ್ಜ್ ಮಾಡುತ್ತಾರೆ. ಊಟ ವಸತಿ ಕಾರು ಅದೂ ಇದೂ ಅಂತ ಮತ್ತೆ ನೂರು ನೂರೈವತ್ತು ಡಾಲರ್ ಖರ್ಚಾಗುತ್ತೆ.


ಅಫ್ಘಾನ್​ನಲ್ಲಿ ನೋಡುವಂಥದ್ದು ಏನಿದೆ?


ಅಫ್ಘಾನ್​ ದೇಶದಲ್ಲಿ ಟ್ರಿಪ್​ ಮಾಡಿ ನೋಡುವಂಥದ್ದು ಏನೂ ಇಲ್ಲ. ಶೀತಲಗೊಂಡಿರುವ ಕಟ್ಟಡಗಳು, ಮುರುಕಲು ರಸ್ತೆ, ತಾಲಿಬಾನಿಗಳು, ಗನ್​, ದೊಡ್ಡ ದೊಡ್ಡ ಬಂಡೆಗಳು ಬಿಟ್ಟರೆ ಅಲ್ಲೇನು ಇಲ್ಲ. ಹೆಣ್ಮಕ್ಕಳ ಸ್ವಾತಂತ್ರ್ಯವನ್ನು ಪೂರ್ತಿ ಕಿತ್ತುಕೊಂಡಿರೋದು ಬಿಟ್ಟರೆ ಉಳಿದಂತೆ ಅಫ್ಘಾನ್ ಎಲ್ಲಾ ಬಡ ಮುಸ್ಲಿಂ ದೇಶಗಳಂತೆ ಇದೆ.


ಇದನ್ನೂ ಓದಿ: ಒಂದೇ ಬಾರಿಗೆ 9 ಬ್ಯಾಂಕ್​ಗಳಿಗೆ ಬಿಗ್​ ಶಾಕ್ ಕೊಟ್ಟ ಆರ್​​ಬಿಐ!


ನೀವೂ ಕೂಡ ಅಫ್ಘಾನ್​ಗೆ ಹೋಗಿ ಬನ್ನಿ!


ನಿಮಗೂ ಕೂಡ ಅಫ್ಘಾನ್​ ನೋಡಬೇಕು ಅಂತ ಅನಿಸಿದರೆ ಅಲ್ಲಿಗೆ ಭೇಟಿ ನೀಡಬಹುದು. ನಿಮ್ಮ ಬಳಿ 1 ರಿಂದ 2 ಲಕ್ಷ ಇದ್ದರೆ ಸಾಕು ಸಂಪೂರ್ಣವಾಗಿ ಅಫ್ಘಾನಿಸ್ಥಾನ ಅಡ್ಡಾಡಿ ಬರಬಹುದು. ಆದರೆ, ಅಲ್ಲಿ ಹೋದಮೇಲೆ ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿಯಾಗುತ್ತೀರಾ.

Published by:ವಾಸುದೇವ್ ಎಂ
First published: