• Home
  • »
  • News
  • »
  • business
  • »
  • Damaged Notes Exchange: ಹರಿದ, ಸುಟ್ಟ ನೋಟುಗಳನ್ನು ಬದಲಿಸಿಕೊಳ್ಳೋದು ಹೇಗೆ? ಎಲ್ಲಿ? ಅದಕ್ಕೆ ಇರುವ ನಿಯಮಗಳೇನು?

Damaged Notes Exchange: ಹರಿದ, ಸುಟ್ಟ ನೋಟುಗಳನ್ನು ಬದಲಿಸಿಕೊಳ್ಳೋದು ಹೇಗೆ? ಎಲ್ಲಿ? ಅದಕ್ಕೆ ಇರುವ ನಿಯಮಗಳೇನು?

ಹಾಳಾಗಿರುವ ನೋಟುಗಳು

ಹಾಳಾಗಿರುವ ನೋಟುಗಳು

Exchange old Currency Notes: ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ನೋಟುಗಳು ವಿನಿಮಯ ಆಗುವಾಗ ನೋಟಿನ ಮೇಲೆ ಲೆಕ್ಕ-ಪತ್ರ , ಸುಟ್ಟ, ಎಣ್ಣೆ ಬಿದ್ದ ನೋಟುಗಳೇನಾದರೂ ನಿಮ್ಮ ಕೈಗೆ ಬಂದರೆ.ಮುಖ ಕಿವುಚುವಂತಾಗುತ್ತದೆ. ಅಂಗಡಿಯವರಾಗಲಿ, ಜನಸಾಮಾನ್ಯರಾಗಲಿ ಅಂತಹ ನೋಟುಗಳನ್ನು ಸ್ವೀಕರಿಸುವುದಿಲ್ಲ. ಹೀಗಾಗಿ ಇಂತ ನೋಟುಗಳು ಸಿಕ್ಕರೆ ಏನು ಮಾಡಬೇಕು ಅದನ್ನು ಹೇಗೆ ಬದಲಿಸಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

    RBI Rules on Damaged Notes: ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಡಿಜಿಟಲೈಸೇಷನ್ (Digitalization) ಭಾರೀ ದೊಡ್ಡ ಮಟ್ಟದಲ್ಲಿ ಆಗಿದೆ. ಆದರೂ ನಮಗೆ ಈಗಲೂ ಕೆಲವೊಮ್ಮೆ ಕೈಯಲ್ಲಿ ನಗದು(Cash) ಇರಲೇಬೇಕು. ಈಗ, ಬಳಕೆದಾರ ಸ್ನೇಹಿಯಾಗಿ ನಗದು ಪಡೆಯಲು ಒಂದೇ ಒಂದು ಮಾರ್ಗ ಅಂದರೆ ಅದು ಎಟಿಎಂ(ATM)ನಿಂದ ಹಣ ಹಿಂತೆಗೆದುಕೊಳ್ಳುವುದು. ಹೀಗೆ ಎಟಿಎಂನಿಂದ ಹಣ ಹಿಂಪಡೆದುಕೊಳ್ಳುವಾಗ ಕೊಳಕಾದ, ಹರಿದ ನೋಟುಗಳು ಬರುತ್ತವೆ.. ಇದಿಷ್ಟೇ ಅಲ್ಲದೆ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ನೋಟುಗಳು ವಿನಿಮಯ(Exchange) ಆಗುವಾಗ ನೋಟಿನ ಮೇಲೆ ಲೆಕ್ಕ-ಪತ್ರ , ಸುಟ್ಟ, ಎಣ್ಣೆ ಬಿದ್ದ ನೋಟುಗಳೇನಾದರೂ ನಿಮ್ಮ ಕೈಗೆ ಬಂದರೆ.ಮುಖ ಕಿವುಚುವಂತಾಗುತ್ತದೆ. ಅಂಗಡಿಯವರಾಗಲಿ, ಜನಸಾಮಾನ್ಯರಾಗಲಿ ಅಂತಹ ನೋಟುಗಳನ್ನು ಸ್ವೀಕರಿಸುವುದಿಲ್ಲ. ಹೀಗಾಗಿ ಇಂತ ನೋಟುಗಳು ಸಿಕ್ಕರೆ ಏನು ಮಾಡಬೇಕು ಅದನ್ನು ಹೇಗೆ ಬದಲಿಸಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.


    ಆರ್‌ಬಿಐನ ಇಶ್ಯೂ ಆಫೀಸಿನಲ್ಲಿ ಮಾತ್ರ ಜಮಾ


    ನೋಟು ಹಾಗೂ ನಾಣ್ಯಗಳ ವಿನಿಮಯ ಅವಕಾಶಗಳು ಎಂಬ ಮಾಸ್ಟರ್‌ ಸುತ್ತೋಲೆಯಲ್ಲಿ ಯಾವ ಯಾವ ನೋಟುಗಳನ್ನು ನಾಣ್ಯಗಳನ್ನು ಎಲ್ಲೆಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಸ್ಪಷ್ಟವಾಗಿ ಹೇಳಿದೆ. ಆರ್‌ಬಿಐ ನಿಯಮಗಳ ಪ್ರಕಾರ, ಸುಟ್ಟ, ಸುಕ್ಕುಗಟ್ಟಿದ ಸಂದರ್ಭದಲ್ಲಿ ನೋಟುಗಳನ್ನು ವಿನಿಮಯ ಮಾಡಲಾಗುವುದಿಲ್ಲ. ಇಂತಹ ನೋಟುಗಳನ್ನು ಆರ್‌ಬಿಐನ ಇಶ್ಯೂ ಆಫೀಸಿನಲ್ಲಿ ಮಾತ್ರ ಜಮಾ ಮಾಡಬಹುದು. ಅಂತಹ ನೋಟುಗಳೊಂದಿಗೆ, ನೀವು ನಿಮ್ಮ ಬಿಲ್ಲುಗಳನ್ನು ಅಥವಾ ತೆರಿಗೆಗಳನ್ನು ಬ್ಯಾಂಕಿನಲ್ಲಿಯೇ ಪಾವತಿಸಬಹುದು.


    ಬ್ಯಾಂಕ್ ಗಳಲ್ಲೂ ವಿನಿಮಯ ಮಾಡಿಕೊಳ್ಳಬಹುದು


    ಇನ್ನು ಸುಕ್ಕುಗಟ್ಟಿದ ಹರಿದ ಹಾಗೂ ಹಳೆಯ ನೋಟುಗಳನ್ನ ಯಾವುದೇ ಎಲ್ಲಾ ಬ್ಯಾಂಕ್‌ಗಳ, ಎಲ್ಲಾ ಶಾಖೆಗಳು, ಕೋ ಆಪರೇಟಿವ್‌ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕ್ ಗಳಲ್ಲೂ ವಿನಿಮಯ ಮಾಡಿಕೊಳ್ಳಬಹುದು. ಜೊತೆಗೆ ನೋಟುಗಳನ್ನು ಹಲವಾರು ತುಂಡುಗಳಾಗಿ ಹರಿದು ಹಾಕಿದರೂ, ಅವುಗಳನ್ನು ಬಳಸಬಹುದು ಎಂದು ಆರ್‌ಬಿಐ ನಿಯಮ ಹೇಳುತ್ತದೆ. ಹರಿದ ನೋಟಿನ ಯಾವುದೇ ಭಾಗ ಕಾಣೆಯಾಗಿದ್ದರೂ ಅದನ್ನು ಬದಲಾಯಿಸಬಹುದಾಗಿದೆ.


    ಇದನ್ನೂ ಓದಿ: ಈ ವಿಶೇಷ ಸಂಖ್ಯೆಯ 10 ರೂ ನೋಟು ಇದ್ದರೆ ನಿಮ್ಮ ಅದೃಷ್ಟ ಖುಲಾಯಿಸಿದಂತೆ!


    ಸಂಪೂರ್ಣ ಮೌಲ್ಯ ಸಿಗುವುದಿಲ್ಲ


    ಇನ್ನು ಯಾವುದಾದರೊಂದು ನೋಟು ಹರಿದು ಹೋಗಿದ್ದರೆ ಆ ನೋಟನ್ನು ನಾವು ಹಿಂದಿರುಗಿಸಿದಾಗ, ಅದರ ಸಂಪೂರ್ಣ ಮೌಲ್ಯವನ್ನ ಪಡೆಯಲಾಗುವುದಿಲ್ಲ. ವಿರೂಪಗೊಂಡ ನೋಟುಗಳಿದ್ದರೆ, ಸಂಪೂರ್ಣ ಹಣವನ್ನು ಪಡೆಯಲಾಗುತ್ತದೆ. ಆದರೆ ನೋಟು ಹೆಚ್ಚು ಹರಿದು ಹೋದರೆ ನೋಟು ಮೌಲ್ಯದ ಶೇಕಡಾವಾರು ಹಣವನ್ನ ಬ್ಯಾಂಕುಗಳು ನೀಡುತ್ತವೆ.


    ಹರಿದ ನೋಟು ಪಡೆದುಕೊಳ್ಳಲು ನಿರಾಕರಿಸುವಂತಿಲ್ಲ


    ಇನ್ನು ಹರಿದು ಹಾಳಾಗಿರುವ ನೋಟುಗಳ ಬದಲಾವಣೆಗಾಗಿ ಬ್ಯಾಂಕುಗಳಿಗೆ ಹೋದಾಗ ಅಲ್ಲಿನ ಸಿಬ್ಬಂದಿ ಗಳು, ಹಾಳಾಗಿರುವ ಹಳೆಯ ನೋಟುಗಳನ್ನು ಸ್ವೀಕಾರ ಮಾಡಲು ನಿರಾಕರಿಸುವಂತಿಲ್ಲ ಎಂದು ಆರ್ ಬಿಐ ನಿಯಮ ಹೇಳಿದೆ..ಹೀಗಾಗಿ ಹಾಳಾಗಿರುವ ನೋಟುಗಳ ಬದಲಾವಣೆಗೆ ಬ್ಯಾಂಕ್ ಗೆ ಹೋದಾಗ ಯಾರಾದರೂ ಸಿಬ್ಬಂದಿ ನಿರಾಕರಣೆ ಮಾಡಿದರೆ, ಆರ್‌ಬಿಐಗೆ ದೂರು ನೀಡಬಹುದು, ನಂತರ ಆ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳಬಹುದು.


    1 ರಿಂದ 20 ರೂ. ನೋಟುಗಳಿಗೆ ಸಂಪೂರ್ಣ ಹಣ ಸಿಗಲಿದೆ


    ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಗಳ ಪ್ರಕಾರ, 1 ರಿಂದ 20 ರೂ.ವರೆಗಿನ ನೋಟುಗಳಲ್ಲಿ ಅರ್ಧದಷ್ಟು ಮೊತ್ತವನ್ನು ನೀಡಲು ಅವಕಾಶವಿಲ್ಲ, ಈ ನೋಟುಗಳನ್ನು ಪೂರ್ಣವಾಗಿ ಪಾವತಿಸಲಾಗುತ್ತದೆ. ಅದೇ ಸಮಯದಲ್ಲಿ, 50 ರಿಂದ 2000 ರೂಪಾಯಿಗಳ ನೋಟಿನಲ್ಲಿ ಅರ್ಧ ರೂಪಾಯಿ ನೀಡಲು ಅವಕಾಶವಿದೆ ಕೆಲವು ಬ್ಯಾಂಕುಗಳು ಸಣ್ಣ ಸಣ್ಣ ಮೌಲ್ಯದ ನೋಟುಗಳನ್ನು ಬ್ಯಾಂಕಿಗೆ ಜಮೆ ಮಾಡಲು ತಂದಾಗ ಸ್ವೀಕರಿಸಲು ನಿರಾಕರಿಸುತ್ತವೆ. ದೊಡ್ಡ ಮೌಲ್ಯದ ನೋಟುಗಳನ್ನೇ ನೀಡುವಂತೆ ತಿಳಿಸುತ್ತವೆ. ಜೊತೆಗೆ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುತ್ತವೆ. ಗೊತ್ತಿರಲಿ,  ಆರ್‌ಬಿಐ ಬ್ಯಾಂಕಿನ ನಿಯಮಗಳ ಪ್ರಕಾರ, ಬ್ಯಾಂಕುಗಳು ಇಂತಹ ಸಣ್ಣ ಮೊತ್ತದ ನೋಟುಗಳನ್ನು, ನಾಣ್ಯಗಳನ್ನು ನಿರಾಕರಿಸುವಂತಿಲ್ಲ.


    ಇದನ್ನೂ ಓದಿ: Rs 10 Note: ನಿಮ್ಮ ಬಳಿಯಿರುವ 10 ರೂ. ನೋಟಿನ ಮೇಲೆ ಈ 3 ಸಂಖ್ಯೆಗಳಿದ್ದರೆ ₹5 ಲಕ್ಷ ನಿಮ್ಮದಾಗುತ್ತದೆ


    ಇನ್ನು ನೋಟುಗಳ ಮೇಲೆ ರಾಜಕೀಯ ಪಕ್ಷಗಳ ಸ್ಲೋಗನ್ನುಗಳನ್ನು ಬರೆದಲ್ಲಿ, ನೋಟುಗಳ ಗುಣ ಲಕ್ಷಣಗಳು ಹಾಳಾಗುವಂತೆ ಗೀಚಿದ್ದಲ್ಲಿ, ಕತ್ತರಿಯಿಂದ ಕತ್ತರಿಸಿದ್ದು, ಉದ್ದೇಶಪೂರ್ವಕವಾಗಿ ಹರಿದಿದ್ದಲ್ಲಿ ಅಂತಹ ನೋಟುಗಳನ್ನು ಬದಲಾಯಿಸಲು ಹಾಗೂ ಸ್ವೀಕರಿಸಲು ಬರುವುದಿಲ್ಲ. ಯಾರಾದರೂ ಹೀಗೆ ಮಾಡಿದ ಹೆಚ್ಚಿನ ನೋಟುಗಳನ್ನು ಬದಲಾಯಿಸುವಂತೆ ತಂದಲ್ಲಿ ಅವರ ಮೇಲೆ ಪೊಲೀಸರಿಗೆ ದೂರು ನೀಡುವುದಲ್ಲದೇ, ಆರ್‌ಬಿಐಗೆ ವರದಿ ಸಲ್ಲಿಸಬೇಕು ಎನ್ನುವ ಕಾನೂನೂ ಜಾರಿಯಲ್ಲಿದೆ.


    (ವರದಿ - ವಾಸುದೇವ್​​ ಎಂ)

    Published by:Soumya KN
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು