Business on Facebook: ತೃತೀಯ ಲಿಂಗಿಯೊಬ್ಬರು ಯಶಸ್ವಿ ಉದ್ಯಮಿಯಾಗೋಕೆ ಫೇಸ್ಬುಕ್ ಕಾರಣವಾಗಿದೆ, ಯಾರು ಬೇಕಿದ್ರೂ ಈ ಟ್ರಿಕ್ ಟ್ರೈ ಮಾಡ್ಬಹುದು

ಶೈನಾ ಬಾನು ಅವರ ಪೋಸ್ಟ್‌ ವೈರಲ್ ಆಗುತ್ತಿದ್ದಂತೆ ಪ್ರಭಾವಿಗಳು ಸೇರಿದಂತೆ ಅನೇಕ ಕಾರ್ಯಕರ್ತರು ಮತ್ತು ಯೂಟ್ಯೂಬರ್‌ಗಳು ಟ್ರಾನ್ಸ್‌ಜೆಂಡರ್ ಟೇಸ್ಟಿ ಹಟ್ ಅನ್ನು ಜನಪ್ರಿಯಗೊಳಿಸಿದರು

 ಟ್ರಾನ್ಸ್‌ಜೆಂಡರ್ ಟೇಸ್ಟಿ ಹಟ್

ಟ್ರಾನ್ಸ್‌ಜೆಂಡರ್ ಟೇಸ್ಟಿ ಹಟ್

  • Share this:
ಭಾರತದಲ್ಲಿ ಟ್ರಾನ್ಸ್‌ಜೆಂಡರ್ (Transgender Community) ಸಮುದಾಯದ ಸದಸ್ಯರು ಈಗಲೂ ಸಹ ಸಾಮಾಜಿಕ ಕಳಂಕವನ್ನು ಎದುರಿಸುತ್ತಿದ್ದಾರೆ. ಬಹುತೇಕರು ಭಿಕ್ಷೆ ಬೇಡುತ್ತಾ, ಲೈಂಗಿಕ ಕಾರ್ಯಕರ್ತೆಯರಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬರು ತೃತೀಯ ಲಿಂಗಿ (Businesswoman)ಉದ್ಯಮಿಯಾಗಿದ್ದಾರೆ. ಅಲ್ಲದೆ, ಆಕೆ ಉದ್ಯಮಿಯಾಗಿ ಬೆಳೆಯಲು ಒಂದು ಫೇಸ್‌ಬುಕ್‌ ಪೋಸ್ಟ್‌ ಸಹಾಯ ಮಾಡಿದೆ. ಈ ಬಗ್ಗೆ ಆಸಕ್ತಿದಾಯಕ ವಿವರಗಳು ಇಲ್ಲಿದೆ ನೋಡಿ. ತಮಿಳುನಾಡಿನ ರಾಜಧಾನಿ ಚೆನ್ನೈನ ಎಗ್ಮೋರ್ ಬಳಿ 'ಟ್ರಾನ್ಸ್ಜೆಂಡರ್ ಟೇಸ್ಟಿ (Transgender Tasty Hut) ಹಟ್' ಎಂಬ ಉಪಾಹಾರ ಗೃಹವನ್ನು ಈ ತೃತೀಯ ಲಿಂಗಿ ಶೈನಾ ಬಾನು(Shaina Banu) ನಡೆಸುತ್ತಿದ್ದಾರೆ. ಆದರೆ, ಆಕೆಯ ಹೋಟೆಲ್‌ಗೆ ಜನರೇ ಹೋಗುತ್ತಿರಲಿಲ್ಲವಂತೆ. ಇದಕ್ಕೆ ಕಾರಣ ಅವರು ಟ್ರಾನ್ಸ್‌ಜೆಂಡರ್‌. ತೃತೀಯ ಲಿಂಗಿಗಳ ಬಗ್ಗೆ ನಮ್ಮ ಸಮಾಜ, ಅದರಲ್ಲೂ ನಮ್ಮ ದೇಶದಲ್ಲಂತೂ ಈಗಲೂ ಸಹ ತಿರಸ್ಕೃತ ಭಾವನೆ ಹೊಂದಿದೆ.

ಟ್ರಾನ್ಸ್ಜೆಂಡರ್ ಟೇಸ್ಟಿ ಹಟ್
ಮತ್ತು ಕಳೆದ ವರ್ಷ ಮಾಡಿದ ಚೆನ್ನೈನ ಟ್ರಾನ್ಸ್‌ವುಮನ್ ಶೈನಾ ಬಾನು ಎಂಬುವರು ಮಾಡಿದ ಫೇಸ್‌ಬುಕ್ ಪೋಸ್ಟ್‌ನಿಂದ ಇದು ಸ್ಪಷ್ಟವಾಗಿದೆ. ಅವರು ಚೆನ್ನೈ ಎಗ್ಮೋರ್ ಬಳಿ 'ಟ್ರಾನ್ಸ್ಜೆಂಡರ್ ಟೇಸ್ಟಿ ಹಟ್' ಎಂಬ ಉಪಾಹಾರ ಗೃಹವನ್ನು ನಡೆಸುತ್ತಿದ್ದಾರೆ ಮತ್ತು ಅವರು ತಮ್ಮ ಉಪಾಹಾರ ಗೃಹಕ್ಕೆ ಗ್ರಾಹಕರನ್ನು ಪಡೆಯಲು ತೀರಾ ಕಷ್ಟ ಪಟ್ಟಿದ್ದಕ್ಕೆ ನಿರಾಶೆಗೊಂಡಿದ್ದರು.

ತಮ್ಮ ನಿರಾಶೆ ಕುರಿತು ಅವರು ಫೇಸ್‌ಬುಕ್‌ ಪೋಸ್ಟ್‌ನ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದರು. ಬಳಿಕ ಅವರ ಆ ಫೋಸ್ಟ್‌ ವೈರಲ್ ಆದ ನಂತರ, ಜನರು ಅವರ ಈಟರಿ ಅಥವಾ ಉಪಾಹಾರ ಗೃಹಕ್ಕೆ ಹೆಚ್ಚು ಜನ ಮುಗಿಬಿದ್ದರು. ಈ ಹಿನ್ನೆಲೆ ಜನರು ನೀಡುತ್ತಿರುವ ಬೆಂಬಲಕ್ಕಾಗಿ ಶೈನಾ ಬಾನು ಮತ್ತೆ ಫೇಸ್‌ಬುಕ್‌ ಪೋಸ್ಟ್‌ ಮೂಲಕ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: Parent Tag‌ನಲ್ಲಿ ಪೋಷಕ ಪದ ಸೇರಿಸುವಂತೆ ಹೈಕೋರ್ಟ್‌ ಮೊರೆ ಹೋದ ವ್ಯಕ್ತಿ

ಶೈನಾ ಬಾನು ಅವರ ವೈರಲ್‌ ಆದ ಫೇಸ್‌ಬುಕ್‌ ಪೋಸ್ಟ್‌ ಹೀಗಿದೆ ನೋಡಿ:
ಒಂದು ವೇಳೆ ಪುರುಷರು ಅಥವಾ ಮಹಿಳೆಯರು ಹೋಟೆಲ್ ನಡೆಸುತ್ತಿದ್ದರೆ, ಈ ಸಮಾಜವು ಭೇಟಿ ನೀಡುತ್ತದೆ. ಆದರೆ ನೀವು ಟ್ರಾನ್ಸ್ ವುಮನ್ ನಡೆಸುತ್ತಿರುವ ಉಪಾಹಾರ ಗೃಹಕ್ಕೆ ಬರುತ್ತೀರಾ..? ನಾವು ಕಷ್ಟಪಟ್ಟು ಸಂಪಾದಿಸುವ ಸಂದರ್ಭದಲ್ಲಿ ಈ ಸಮಾಜವು ನಮ್ಮನ್ನು ಏಕೆ ದೂಷಿಸುತ್ತದೆ?" ಶೈನಾ ಬಾನು ಅವರ ಈ ಮೇಲಿನ ಪೋಸ್ಟ್‌ ವೈರಲ್ ಆಗುತ್ತಿದ್ದಂತೆ, ಪ್ರಭಾವಿಗಳು ಸೇರಿದಂತೆ ಅನೇಕ ಕಾರ್ಯಕರ್ತರು ಮತ್ತು ಯೂಟ್ಯೂಬರ್‌ಗಳು ಟ್ರಾನ್ಸ್‌ಜೆಂಡರ್ ಟೇಸ್ಟಿ ಹಟ್ ಅನ್ನು ಜನಪ್ರಿಯಗೊಳಿಸಿದರು.

ಹೋಟೆಲ್‌ನಲ್ಲಿ ಜನಸಂದಣಿ
ಈಗ ತಮಿಳುನಾಡಿನ ಮೂಲೆ ಮೂಲೆಗಳಿಂದ ಗ್ರಾಹಕರನ್ನು ಸೆಳೆದಿದ್ದು, ಆ ಹೋಟೆಲ್‌ ಜನಸಂದಣಿಯಿಂದ ತುಂಬಿದೆ. ಶೈನಾಗಾಗಿ ಸಾಮಾಜಿಕ ಮಾಧ್ಯಮಗಳು ಬೆಂಬಲ ನೀಡುತ್ತಿರುವುದರಿಂದ, ಅವರ ವ್ಯಾಪಾರವು ಕ್ರಮೇಣ ಹೆಚ್ಚುತ್ತಿದೆ ಎಂದು ತೋರುತ್ತಿದೆ. ಈ ಹಿನ್ನೆಲೆ, ಈ ಬಗ್ಗೆ ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ತೆಗೆದುಕೊಂಡು, ಶೈನಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ತನ್ನ ಹಳೆಯ ಪೋಸ್ಟ್‌ ಅನ್ನು ಶೇರ್ ಮಾಡಿದ ಎಲ್ಲರಿಗೂ ಧನ್ಯವಾದ ಮತ್ತು ಕೃತಜ್ಞತೆ ವ್ಯಕ್ತಪಡಿಸಿದರು. ಅಲ್ಲದೆ, ಇದು ಸುಲಭವಲ್ಲ; ಈಗ ನಾನು ಈ ಸಮುದಾಯಕ್ಕೆ ಸೇರುವುದನ್ನು ಹೆಚ್ಚು ಇಷ್ಟಪಡುತ್ತೇನೆ" ಎಂದು ಶೈನಾ ಹೇಳಿದರು.

ಇದನ್ನೂ ಓದಿ: Transgender: ತೃತೀಯ ಲಿಂಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾದ ಕರ್ನಾಟಕ ಪೊಲೀಸ್ ಇಲಾಖೆ

ಮಾದರಿಯಾದ ತೃತೀಯ ಲಿಂಗಿ
ಸೆಂಬರುತಿ ತಿರುನಂಗೈಗಲ್ ಸ್ವಸಹಾಯ ಗುಂಪು ಮತ್ತು ಖಾಸಗಿ ಕಾಲೇಜಿನ ಸಹಾಯದಿಂದ ಶೈನಾ ತನ್ನ ಉದ್ಯಮಶೀಲತೆಯ ಉದ್ಯಮದೊಂದಿಗೆ ತನ್ನ ಜೀವನದ ಗುರಿಯನ್ನು ಕಂಡುಕೊಂಡಿದ್ದಾರೆ. ಇದು ವರ್ಷಗಳ ಕಾಲ ಭಾವನಾತ್ಮಕ ಪ್ರಕ್ಷುಬ್ಧತೆ ಮತ್ತು ಆರ್ಥಿಕ ಸಂಕಷ್ಟಗಳನ್ನು ಅನುಭವಿಸಿದ ಪರಿಣಾಮವಾಗಿದೆ. ಅಲ್ಲದೆ, ಗೌರವಯುತವಾಗಿ ಬದುಕಲು ಹೆಣಗಾಡುತ್ತಿರುವ ಯಾರಿಗಾದರೂ ಈ ತೃತೀಯ ಲಿಂಗಿ ಶೈನಾ ಬಾನು ಮಾದರಿಯಾಗಿದ್ದಾರೆ.

ಕಳೆದ ವರ್ಷ, ತಮಿಳುನಾಡು ಸರ್ಕಾರವು ನರ್ತಕಿ ನಟರಾಜ್ ಎಂಬ ಟ್ರಾನ್ಸ್ ವುಮನ್ ಅವರನ್ನು ರಾಜ್ಯ ಅಭಿವೃದ್ಧಿ ನೀತಿ ಸಮಿತಿಯ ಸದಸ್ಯರನ್ನಾಗಿ ನೇಮಿಸಿತು. ನರ್ತಕಿ ನಟರಾಜ್ ಅವರು ಭರತನಾಟ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ 2019ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಮೊದಲ ಟ್ರಾನ್ಸ್ ವುಮನ್ ಆಗಿದ್ದಾರೆ.
Published by:vanithasanjevani vanithasanjevani
First published: