Service Charge: ಯಾವುದಾದ್ರೂ ಹೋಟೆಲ್​ ಸರ್ವೀಸ್​ ಚಾರ್ಜ್ ಮಾಡಿದ್ರೆ ಹೀಗ್ ಮಾಡಿ! ಸಹಿಸಿಕೊಳ್ಳೋ ಮಾತೇ ಬೇಡ ಬಾಸ್​​

ಹೋಟೆಲ್‌ (Hotel) ಗಳು ಮತ್ತು ರೆಸ್ಟೋರೆಂಟ್‌ (Restaurant) ಗಳು ವಿಧಿಸುವ ಸೇವಾ ಶುಲ್ಕ (Service Charge) ವು ಬಹಳ ಹಿಂದಿನಿಂದಲೂ ವಿವಾದದಲ್ಲಿ ಸಿಲುಕಿಕೊಂಡಿದೆ. ಸೇವಾ ತೆರಿಗೆಯ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ ಆದರೆ ಈ ಸುದ್ದಿ ನಿಮ್ಮ ಎಲ್ಲಾ ಅನುಮಾನಗಳನ್ನು ದೂರ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೋಟೆಲ್‌ (Hotel) ಗಳು ಮತ್ತು ರೆಸ್ಟೋರೆಂಟ್‌ (Restaurant) ಗಳು ವಿಧಿಸುವ ಸೇವಾ ಶುಲ್ಕ (Service Charge) ವು ಬಹಳ ಹಿಂದಿನಿಂದಲೂ ವಿವಾದದಲ್ಲಿ ಸಿಲುಕಿಕೊಂಡಿದೆ. ಸೇವಾ ತೆರಿಗೆಯ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ ಆದರೆ ಈ ಸುದ್ದಿ ನಿಮ್ಮ ಎಲ್ಲಾ ಅನುಮಾನಗಳನ್ನು ದೂರ ಮಾಡುತ್ತದೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸ್ವಯಂಚಾಲಿತವಾಗಿ ಅಥವಾ ಪೂರ್ವ ನಿಯೋಜಿತವಾಗಿ ಆಹಾರದ ಬಿಲ್‌ (Food Bill) ಗಳಿಗೆ ಸೇವಾ ಶುಲ್ಕ ವಿಧಿಸುವುದನ್ನು ಕೇಂದ್ರದ ಗ್ರಾಹಕ ರಕ್ಷಣಾ ಪ್ರಾಧಿಕಾರವು(CCPA) ನಿಷೇಧಿಸಿದೆ. ನಿಯಮ ಉಲ್ಲಂಘಿಸಿದರೆ ದೂರು ದಾಖಲಿಸಲು ಸಹ ಗ್ರಾಹಕರಿಗೆ ಅನುವುಮಾಡಿಕೊಟ್ಟಿದೆ.ಈ ಕುರಿತಂತೆ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ, ಅನ್ಯಾಯದ ವ್ಯಾಪಾರದ ಅಭ್ಯಾಸಗಳು ಮತ್ತು ಸೇವಾ ಶುಲ್ಕ ಹೇರುವ ಮೂಲಕ ಗ್ರಾಹಕರ ಹಕ್ಕುಗಳ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿಪಿಎ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಸೇವಾ ಶುಲ್ಕ ಮಾರ್ಗಸೂಚಿಯಲ್ಲಿ ಏನಿದೆ?

ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಸ್ವಯಂಚಾಲಿತವಾಗಿ ಅಥವಾ ಪೂರ್ವಯೋಜಿತವಾಗಿ ಆಹಾರದ ಬಿಲ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲಜೊತೆಗೆ. ಯಾವುದೇ ಹೆಸರಿನಲ್ಲೂ ಸೇವಾ ಶುಲ್ಕ ಪಡೆಯುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಸೇವಾ ಶುಲ್ಕ ಪಾವತಿಸುವಂತೆ ಗ್ರಾಹಕರ ಮೇಲೆ ಒತ್ತಡ ಹೇರುವಂತಿಲ್ಲ. ಸೇವಾ ಶುಲ್ಕವು ಸ್ವಇಚ್ಛೆ, ಐಚ್ಛಿಕ ಮತ್ತು ಗ್ರಾಹಕರ ವಿವೇಚನೆಗೆ ಬಿಟ್ಟಿದ್ದು ಎಂದು ಮೊದಲೇ ಹೇಳಿದೆ.

ಸೇವಾ ಶುಲ್ಕ ವಿಧಿಸದ್ರೆ ಹೀಗ್​ ಮಾಡಿ!

ನಿಷೇಧದ ಹೊರತಾಗಿಯೂ ಹೋಟೆಲ್ ಅಥವಾ ರೆಸ್ಟೋರೆಂಟ್ ನಿಮ್ಮಿಂದ ಸೇವಾ ಶುಲ್ಕವನ್ನು ವಿಧಿಸಿದರೆ ಏನು ಮಾಡಬೇಕು? ಈ ಅನುಮಾನ ಮತ್ತು ಗ್ರಾಹಕರ ಸುರಕ್ಷತೆಗಾಗಿ ಪ್ರಾಧಿಕಾರ ಹಲವು ಆಯ್ಕೆಗಳನ್ನು ಸಿದ್ಧಪಡಿಸಿದೆ.-

1) ನೀವು ರೆಸ್ಟೋರೆಂಟ್‌ಗೆ ಹೋದರೆ ಮತ್ತು ಅವರು ಸೇವಾ ಶುಲ್ಕವನ್ನು ಸೇರಿಸಿ ಬಿಲ್ ಮಾಡಿದ್ದರೆ, ನೀವು ಮೊದಲು ಆ ಶುಲ್ಕವನ್ನು ತೆಗೆದುಹಾಕಲು ವ್ಯವಸ್ಥಾಪಕರನ್ನು ಕೇಳಬೇಕು. ನಿಮ್ಮ ಅನುಮತಿಯಿಲ್ಲದೆ ಅಂತಹ ತೆರಿಗೆಗಳನ್ನು ಸಂಗ್ರಹಿಸಲು ಅವರಿಗೆ ಅಧಿಕಾರವಿಲ್ಲ ಎಂದು ಅವರಿಗೆ ನೆನಪಿಸಿ.

ಇದನ್ನೂ ಓದಿ: ಈ ಬ್ಯುಸಿನೆಸ್​ ಸ್ಟಾರ್ಟ್​ ಮಾಡೋಕೆ ಬೇಕು ಸಿಂಪಲ್​ ಕೋರ್ಸ್! ಆಮೇಲೆ ನೀವೇ ಯಜಮಾನ, ನಿಮ್ದೇ ದರ್ಬಾರ್​

2) ರೆಸ್ಟೋರೆಂಟ್ ಅಥವಾ ಹೋಟೆಲ್ ನಿಮ್ಮ ವಿನಂತಿಯನ್ನು ಸ್ವೀಕರಿಸದಿದ್ದರೆ, ನೀವು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (NCH) ದೂರು ನೀಡಬಹುದು. ಆರಂಭಿಕ ಹಂತದಲ್ಲಿ ವಿವಾದವನ್ನು ಪರಿಹರಿಸಲು ಇದು ಸಹಾಯ ಮಾಡುತ್ತದೆ. ಗ್ರಾಹಕರು ಸಹಾಯವಾಣಿ ಸಂಖ್ಯೆ 1915 ಗೆ ಕರೆ ಮಾಡುವ ಮೂಲಕ ಅಥವಾ NCH ನ ಅಪ್ಲಿಕೇಶನ್ ಮೂಲಕ ತಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದು.

3)  ಇದಲ್ಲದೇ ನೀವು ಗ್ರಾಹಕ ಆಯೋಗಕ್ಕೆ ಅಥವಾ ಇ-ಫೈಲಿಂಗ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ದೂರು ನೀಡಬಹುದು. ಇದಕ್ಕಾಗಿ ನೀವು http://www.edaakhil.nic.in ಗೆ ಭೇಟಿ ನೀಡಬೇಕು.

4) ಗ್ರಾಹಕರು ತಮ್ಮ ದೂರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಾಯಿಸುವ ಹಕ್ಕನ್ನು ಹೊಂದಿರುತ್ತಾರೆ, ಅವರು ತನಿಖೆ ನಡೆಸಿ ಸಿಸಿಪಿಎಗೆ ವರದಿಯನ್ನು ಕಳುಹಿಸುತ್ತಾರೆ. ನೀವು ಬಯಸಿದರೆ, ನೀವು ನೇರವಾಗಿ CCPA ಗೆ ನಿಮ್ಮ ದೂರನ್ನು ಸಲ್ಲಿಸಬಹುದು. ಇದಕ್ಕಾಗಿ ನೀವು com-ccpa@nic.in ಗೆ ಇ-ಮೇಲ್ ಮಾಡಬೇಕು.

ಇದನ್ನೂ ಓದಿ: Uber ನಲ್ಲಿ ಮನೆಗೆ ಹೋಗೋ ಬದಲು, ಅದೇ ರೇಟ್​​ಗೆ ಫ್ಲೈಟ್​​ನಲ್ಲಿ ಗೋವಾಗೆ ಹೋಗ್ಬಹುದು! ಏನ್​ ಕಾಸ್ಟ್ಲಿ ಗುರೂ

ಗ್ರಾಹಕರ ಅನುಕೂಲಕ್ಕಾಗಿ ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 18 (2) (I) ಅಡಿಯಲ್ಲಿ CCPA ಮಾರ್ಗಸೂಚಿಗಳನ್ನು ನೀಡಿದೆ. ಮೆನುವಿನಲ್ಲಿ ನೀಡಲಾದ ದರಗಳ ಜೊತೆಗೆ, ಹೋಟೆಲ್ ಅಥವಾ ರೆಸ್ಟೋರೆಂಟ್ ಗ್ರಾಹಕರಿಂದ ಸೂಕ್ತವಾದ ತೆರಿಗೆಯನ್ನು ಹೊರತುಪಡಿಸಿ ಶುಲ್ಕವನ್ನು ವಿಧಿಸಿದರೆ, ಅದು ಸಂಪೂರ್ಣವಾಗಿ ಕಾನೂನುಬಾಹಿರ ಮತ್ತು ಗ್ರಾಹಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
Published by:Vasudeva M
First published: