ಡಿಜಿಟಲ್ (Digital) ಯುಗದಲ್ಲಿ ಎಲ್ಲದಕ್ಕೂ ಜಾಹೀರಾತು (Advertisement) , ಪ್ರಚಾರ ಅತ್ಯವಶ್ಯ. ಮನೆಯಿಂದ ಹೊರಗಡೆ ಹೋದರೆ ಸಾಕು ದೊಡ್ಡ ದೊಡ್ಡ ಜಾಹೀರಾತುಗಳ ಬೋರ್ಡ್ (Board) , ಫ್ಲೆಕ್ಸ್ (Flex) ನೋಡುತ್ತಲೇ ಇರುತ್ತೇವೆ. ಒಂದು ಬ್ರ್ಯಾಂಡ್ (Brand) ಅತ್ಯದ್ಭುತವಾಗಿ ಜನರಿಗೆ ತಲುಪ ಬೇಕು ಅಂದರೆ ಅಲ್ಲಿ ಪ್ರಚಾರ ಅತ್ಯಗತ್ಯವಾಗಿ ಬೇಕು. ಒಂದು ಬ್ರ್ಯಾಂಡ್ ಜಾಹೀರಾತು ಅಂದರೆ ಅಲ್ಲಿ ಬೇರೆ ಇತರೆ ಉತ್ಪನ್ನಗಳಿಗೆ ಜಾಗಾನೇ ಇರಲ್ಲ. ಬೇರೆ ಉತ್ಪನ್ನಗಳಿಗೆ ಜಾಗವಿಲ್ಲದಿದ್ದರೂ ಅವರ ಸ್ಟೈಲ್ (Style) ಅನ್ನು ನಕಲು ಮಾಡ್ತಾನೆ ಇರುತ್ತವೆ. ಯಾವುದಾದರೂ ಬ್ರ್ಯಾಂಡ್ ಒಂದು ಸ್ಟೈಲ್ ಮೂಲಕ ಜನಪ್ರಿಯವಾಯಿತು ಅಂದರೆ ಸಾಕು ಇನ್ನುಳಿದ ಹಲವು ಕಂಪನಿಗಳು ಅದೇ ಜಾಹೀರಾತು, ಟ್ಯಾಗ್ಲೈನ್ ಮೂಲಕ ಪ್ರಚಾರಕ್ಕಿಳಿಯುತ್ತವೆ.
ಜೊಮ್ಯಾಟೊ ಮತ್ತು ಬ್ಲಿಂಕಿಟ್ ಬಿಲ್ಬೋರ್ಡ್
ಜೊಮ್ಯಾಟೊ ಮತ್ತು ಬ್ಲಿಂಕಿಟ್ ಬಿಲ್ಬೋರ್ಡ್ (ಜಾಹೀರಾತು ಬೋರ್ಡ್) ಈ ಹಿಂದೆ ಸಾಕಷ್ಟು ವೈರಲ್ ಆಗಿತ್ತು. ಆಹಾರ ವಿತರಣೆ ಮಾಡುವ ಜೊಮ್ಯಾಟೋ ಕಂಪನಿ ಈ ಹಿಂದೆ ‘ಖೀರ್ ಮಾಂಗೋಗೆ, ಖೀರ್ ದೇಂಗೆ ( ಪಾಯಸ ಕೇಳಿದ್ರೆ ಪಾಯಸ ಕೊಡ್ತೀವಿ) ಅನ್ನೋ ಡೈಲಾಗ್ ಅನ್ನು ತನ್ನ ಬಿಲ್ಬೋರ್ಡ್ನಲ್ಲಿ ಬರೆದುಕೊಳ್ಳುವ ಮೂಲಕ ಜಾಹೀರಾತು ನೀಡಿತ್ತು.
ಅದಕ್ಕೆ ಟಾಂಗ್ ನೀಡುವಂತೆ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಲು ಬಳಸುವ ಮೊಬೈಲ್ ಅಪ್ಲಿಕೇಶನ್ ಬ್ಲಿಂಕಿಟ್ ದೂಧ್ ಮಾಂಗೋಗೆ, ದೂಧ್ ದೇಂಗೆ (ಹಾಲು ಕೇಳಿದ್ರೆ ಹಾಲು ಕೊಡ್ತೀವಿ) ಎಂದು ಬರೆದುಕೊಂಡಿತ್ತು. ಬಾಲಿವುಡ್ ಸಿನಿಮಾವೊಂದರ ಸಂಭಾಷಣೆಯನ್ನು ಇಲ್ಲಿ ಟೆಂಪ್ಲೇಟ್ ಆಗಿ ಬಳಸಲಾಗಿತ್ತು.
ಹೀಗೆ ಬಿಲ್ಬೋರ್ಡ್ನಲ್ಲೂ ಕೂಡ ಸ್ಪರ್ಧೆಗಳಿಯುವ ಸಾಕಷ್ಟು ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಈ ಸಾಲಿಗೆ ಜನರಲ್ ಮೋಟಾರ್ಸ್ನ ಫೋರ್ಡ್ ಮತ್ತು ಶೆವ್ರೊಲೆಟ್ ಆಗಿರಬಹುದು ಇಲ್ಲಾ ಕೋಕಾ-ಕೋಲಾ ಮತ್ತು ಪೆಪ್ಸಿ ಮತ್ತು ನೆಟ್ಫ್ಲಿಕ್ಸ್ ಇನ್ನೂ ಕೆಲವು ಈ ಸಾಲಿಗೆ ಬರುತ್ತವೆ.
ಹೋಂಡಾದ ಬಿಲ್ಬೋರ್ಡ್ ವೈರಲ್
ಹೀಗೆ ಇದಕ್ಕೆ ಹೊಸ ಸೇರ್ಪಡೆಯಂತೆ ಹೋಂಡಾ ಮೋಟಾರ್ ಸೈಕಲ್ಗಳು ಮತ್ತು ಸ್ಕೂಟರ್ಗಳು ಇಂಡಿಯಾ (HMSI) ಜೊಮ್ಯಾಟೊ ಮತ್ತು ಬ್ಲಿಂಕಿಟ್ ಎರಡಕ್ಕೂ ಟಾಂಗ್ ನೀಡುವಂತೆ ತನ್ನ ಬಿಲ್ಬೋರ್ಡ್ನಲ್ಲಿ ಇದೇ ಡೈಲಾಗ್ ಅನ್ನು ನಕಲು ಮಾಡಿದೆ ನೋಡಿ. HMSI ತನ್ನ ಆಕ್ಟಿವಾ ಶ್ರೇಣಿಯ ಪ್ರಚಾರಕ್ಕಾಗಿ ಈ ಡೈಲಾಗ್ ಅನ್ನು ಬಳಸಿಕೊಂಡಿದೆ. ಹೋಂಡಾ ಕಂಪನಿಯ ಬಿಲ್ಬೋರ್ಡ್ನಲ್ಲಿ "ಸ್ಕೂಟರ್ ಮಾಂಗೋಗೆ, ಆಕ್ಟಿವಾ ದೇಂಗೆ" ಅಂದರೆ ಹೋಂಡಾ ಕೇಳಿದ್ರೆ ಆಕ್ಟಿವಾ ಕೊಡ್ತೀವಿ ಎಂದರ್ಥ.
ಇದನ್ನೂ ಓದಿ: ನಿಮ್ಮ ಮನೆಯ ರೂಮ್ನಲ್ಲೇ ಈ ಸಸ್ಯ ಬೆಳೆಸಿ, ತಿಂಗಳಿಗೆ 50 ಸಾವಿರ ಗಳಿಸಿ!
ಹೀಗೆ ಜೊಮ್ಯಾಟೊ, ಬ್ಲಿಂಕಿಟ್, ನೆಟ್ಫ್ಲಿಕ್ಸ್ ಬಳಸಿದ ಬಾಲಿವುಡ್ ಸಿನಿಮಾದ ಸಾಲುಗಳ ಟೆಂಪ್ಲೆಟ್ ಅನ್ನು ಮಾರ್ಕೆಟಿಂಗ್ ತಂತ್ರವಾಗಿ ಹೋಂಡಾದವರು ಸಹ ಬಳಸಿಕೊಂಡಿದ್ದಾರೆ. ಹೋಂಡಾದವರ ಈ ಪೋಸ್ಟ್ ಈಗ ವೈರಲ್ ಕೂಡ ಆಗುತ್ತಿದೆ.
ಮಾರುಕಟ್ಟೆಯಲ್ಲಿ ಆಕ್ಟಿವಾ ಸ್ಕೂಟರ್ ಮೈಲುಗೈ
ಹೊಂಡಾದವರ ಆಕ್ಟಿವಾ ಸಾಕಷ್ಟು ಜನಪ್ರಿಯ ಬೈಕ್ ಆಗಿದೆ. ಆಕ್ಟಿವಾ ಈಗ ವರ್ಷಗಳಿಂದ ಸ್ಕೂಟರ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದ್ದು, ಮಾರಾಟವು 1.5 ಲಕ್ಷ ಯೂನಿಟ್ಗಳ ಆಸುಪಾಸಿನಲ್ಲಿದೆ ಮತ್ತು ಹಬ್ಬದ ಋತುವಿನಲ್ಲಿ ಸುಮಾರು 2.5 ಲಕ್ಷ ಯುನಿಟ್ಗಳನ್ನು ತಲುಪುವುದರೊಂದಿಗೆ, ಆಕ್ಟಿವಾ ಮಾರಾಟದ ವಿಷಯದಲ್ಲಿ ಪ್ರತಿಸ್ಪರ್ಧಿಗಳನ್ನು ಧೂಳೀಪಟ ಮಾಡಿದೆ.
2022 ರಲ್ಲಿ, ಹೋಂಡಾ 20,12,515 ಯುನಿಟ್ ಆಕ್ಟಿವಾವನ್ನು ಮಾರಾಟ ಮಾಡಿದೆ. ಜುಪಿಟರ್ 6,68,829 ಯುನಿಟ್ ಮಾರಾಟ ಮಾಡಿದರೆ ಆಕ್ಸೆಸ್ 4,39,500 ಯುನಿಟ್ ಸೇಲ್ ಮಾಡಿದೆ. ಈ ಎರಡೂ ಕಂಪನಿಗಳಿಗೆ ಹೋಲಿಸಿದರೆ ಆಕ್ಟಿವಾ ಹೆಚ್ಚಿನ ಮಾರಾಟ ಸರಣಿಯನ್ನು ಹೊಂದಿದೆ.
ಇದನ್ನೂ ಓದಿ: ಎಲ್ಐಸಿ ಪಾಲಿಸಿದಾರರಿಗೆ ಇಲ್ಲಿದೆ ಗುಡ್ ನ್ಯೂಸ್, ಕಂಪನಿಯ ಪ್ರಮುಖ ನಿರ್ಧಾರ!
ಆಕ್ಟಿವಾ ಹೆಸರು ಎಷ್ಟು ಜನಪ್ರಿಯವಾಗಿದೆ ಎಂದರೆ ಹೋಂಡಾ ಕೂಡ ತಮ್ಮ ಸ್ಕೂಟರ್ ಪಾರಮ್ಯವನ್ನು ಮಾರಾಟ ಮಾಡಲು ತನ್ನ ಬ್ರ್ಯಾಂಡ್ಗಳಲ್ಲಿ ಅದನ್ನು ಬಳಸುತ್ತಿದೆ. ಹೋಂಡಾದ ಆರ್ಸೆನಲ್ನಲ್ಲಿರುವ ಇತರ ಸ್ಕೂಟರ್ಗಳಲ್ಲಿ ಡಿಯೋ ಮತ್ತು ಗ್ರಾಜಿಯಾ ಸೇರಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ