Home Loan: ಇನ್ಮೇಲೆ ಒಂದು ಬಾರಿ ಮಾತ್ರ ಸಿಗುತ್ತೆ ಮನೆಸಾಲದ ಬಡ್ಡಿದರದ ತೆರಿಗೆ ವಿನಾಯಿತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಹಿಂದೆ ಮನೆಸಾಲ ಪಡೆದವರು ಬಡ್ಡಿಯನ್ನು ಪಾವತಿಸುವ ಸಂದರ್ಭದಲ್ಲಿ ಎರಡು ಬಾರಿ ಕಡಿತಕ್ಕಾಗಿ ವಿನಂತಿಸುತ್ತಿದ್ದರು. ಇನ್ನೂ ಅದು ಸಾಧ್ಯವಿಲ್ಲ. ಯಾಕೆ ಅಂತ ನೀವು ತಿಳಿದುಕೊಳ್ಳಬೇಕು.

 • Share this:

  ಭಾರತದಲ್ಲಿ (India) ಈಗ 2023ರ ಬಜೆಟ್ (Budget) ಮಂಡಿಸಿಯಾಗಿದೆ. ಈ ಬಜೆಟ್ ನ ಒಂದು ವಿಶೇಷತೆ ಎಂದರೆ ಇದು ಒಂದು ನಿರ್ದಿಷ್ಟ ಲೋಪದೋಷವೊಂದಕ್ಕೆ (Mistake) ಅಂತ್ಯ ಹಾಡಿದೆ ಎನ್ನಬಹುದು. ಈ ಹಿಂದೆ ಮನೆಸಾಲ (Home Loan) ಪಡೆದವರು ಬಡ್ಡಿಯನ್ನು (Interest Money) ಪಾವತಿಸುವ ಸಂದರ್ಭದಲ್ಲಿ ಎರಡು ಬಾರಿ ಕಡಿತಕ್ಕಾಗಿ ವಿನಂತಿಸುತ್ತಿದ್ದರು. ಇನ್ನೂ ಅದು ಸಾಧ್ಯವಿಲ್ಲ. ಹಳೆಯ ತೆರಿಗೆ ಕಾಯಿದೆ ವ್ಯವಸ್ಥೆಯಲ್ಲಿ, ಈ ಹಿಂದೆ ತೆರಿಗೆದಾರರು ಪಡೆದಿರುವ ಮನೆ ಸಾಲಕ್ಕೆ ಸಂಬಂಧಿಸಿದಂತೆ ವಾರ್ಷಿಕ ಎರಡು ಲಕ್ಷದ ಬಡ್ಡಿದರದ ಕಡಿತಕ್ಕಾಗಿ ಕ್ಲೈಮ್ ಮಾಡುತ್ತಿದ್ದರು.


  ಎಷ್ಟೋ ಖರೀದಿದಾರರು ಈ ಬಡ್ಡಿ ಮೊತ್ತವನ್ನು ಮನೆಯನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಸ್ವಾಧೀನ ಮೊತ್ತದಡಿಯಲ್ಲೂ (Acquisition Cost) ಸೇರಿಸುತ್ತಿದ್ದರು. ಇದರಿಂದ ಅವರು ಪಡೆಯುತ್ತಿದ್ದ ಆದಾಯ ಗಮನಾರ್ಹ ಮೊತ್ತವು ತೆರಿಗೆಯಿಂದ ಮುಕ್ತವಾಗಿರುತ್ತಿತ್ತು.


  ವಾಸ್ತವದಲ್ಲಿ ಸಾಕಷ್ಟು ಜನ ಖರೀದಿದಾರರು ಮನೆ ಸಾಲದ ಬಡ್ಡಿದರದಲ್ಲಿ ಕಡಿತವನ್ನು ವಾರ್ಷಿಕವಾಗಿ ಎರಡು ಬಾರಿ ಕ್ಲೈಮ್ ಮಾಡುತ್ತಿದ್ದರು. ಇದನ್ನು ತಹಬದಿಗೆ ತರಲು ಯಾವುದೇ ರೀತಿಯ ಸಮರ್ಪಕ ಕಾನೂನುಗಳಿರಲಿಲ್ಲ. ಹಾಗಾಗಿ ಅವರು ಹೆಚ್ಚು ತೆರಿಗೆ ಉಳಿತಾಯ ಮಾಡುತ್ತಿದ್ದರು.


  ಈಗ ಬದಲಾಗಿದೆ


  ಆದರೆ ಈ ಬಾರಿ ಮಂಡಿಸಲಾದ ಬಜೆಟ್ ಈ ಎಲ್ಲ ಗೊಂದಲಗಳಿಗೆ ಮುಕ್ತಾಯ ಹಾಡಿದೆ. ಇದೀಗ ಆದಾಯ ತೆರಿಗೆ ಕಾಯ್ದೆಯಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದೆ.


  ಅದರಲ್ಲೊಂದೆಂದರೆ ಈಗ ಮನೆ ಸಾಲದ ಬಡ್ಡಿಯ ಮೇಲೆ ಕ್ಲೈಮ್ ಮಾಡಲಾಗುವ ಕಡಿತವನ್ನು ಸ್ವಾಧೀನ ಮೊತ್ತಕ್ಕೆ (Acquisition Cost) ಸೇರಿಸುವಂತಿಲ್ಲ. ಈ ನಿಯಮವು ಪರಿಣಾಮಕಾರಿಯಾಗಿ 1 ಏಪ್ರಿಲ್ 2024ರಿಂದ ಜಾರಿಗೆ ಬರಲಿದೆ.


  charteredclub.com ನ ಸಂಸ್ಥಾಪಕರಾದ ಕರಣ್ ಬಾತ್ರಾ ಅವರು, "ಇದು ಇಲ್ಲಿಯವರೆಗೆ ಮುಕ್ತವಾಗಿತ್ತು, ನಾವು ಹಲವು ಬಾರಿ ಜನರಿಗೆ ಈ ಬಗ್ಗೆ ಎಚ್ಚರಿಸಿದ್ದೆವು. ನ್ಯಾಯಾಲಯಗಳು ಇದನ್ನು ಸಮ್ಮತಿಸಲು ಸಾಧ್ಯವಿಲ್ಲ, ಏಕೆಂದರೆ ಇದು ಒಂದು ಮೂಲ ಪ್ರಶ್ನೆಯನ್ನು ಮುನ್ನೆಲೆಗೆ ತರುತ್ತದೆ, ಅದೆಂದರೆ ಅದು ಹೇಗೆ ವಾರ್ಷಿಕವಾಗಿ ಎರಡು ಬಾರಿ ಕಡಿತದ ಕ್ಲೈಮ್ ಮಾಡುತ್ತೀರಿ?" ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.


  ಆದರೆ, ಕಾರಣಾಂತರಗಳಿಂದಾಗಿ ಯವುದೇ ಒಬ್ಬ ವ್ಯಕ್ತಿ ಸೆಕ್ಷನ್ 24 ಅಥವಾ 80EEA ಅಡಿಯಲ್ಲಿ ಇಂಟರೆಸ್ಟ್ ಅನ್ನು ಕ್ಲೈಮ್ ಮಾಡದೆ ಇದ್ದ ಸಂದರ್ಭದಲ್ಲಿ ಏನಾಗಬಹುದು ಎಂಬ ಗೊಂದಲವನ್ನು ಮೂಡಿಸಬಹುದು. ಇಂತಹ ಸಂದರ್ಭದಲ್ಲಿ ಬಾತ್ರಾ ಅವರು ಏನು ಮಾಡಬಹುದು ಎಂಬುದಕ್ಕೆ ಸ್ಪಷ್ಟನೆ ನೀಡುತ್ತಾರೆ.


  ಸಾಂದರ್ಭಿಕ ಚಿತ್ರ


  ಬಾತ್ರಾ ಅವರ ಪ್ರಕಾರ, ಈ ಮೇಲೆ ಹೇಳಿದಂತಹ ಪರಿಸ್ಥಿತಿ ಎದುರಾದಾಗ ವ್ಯಕ್ತಿಯು ಕ್ಲೈಮ್ ಅನ್ನು ಸ್ವಾಧೀನ ಮೊತ್ತದಡಿಯಲ್ಲಿ ಸೇರಿಸಿ ಬೇಕಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಅಂದರೆ ಒಟ್ಟಿನಲ್ಲಿ ಹೇಳಬೇಕೆಂದರೆ ಮನೆ ಸಾಲದ ಬಡ್ಡಿದರವನ್ನು ತೆರಿಗೆ ಕಾಯ್ದೆ ಅಡಿಯಲ್ಲಿ ಕಡಿತಕ್ಕಾಗಿ ಕ್ಲೈಮ್ ಮಾಡುವಾಗ ಅದನ್ನು ಸ್ವಾಧೀನ ಮೊತ್ತದಲ್ಲೂ (Acquisition Cost) ಸೇರಿಸಲು ಸಾಧ್ಯವಿಲ್ಲ.


  ಮನೆ/ಸ್ವತ್ತು ಮಾರಾಟದಿಂದಾಗುವ ಅಲ್ಪಾವಧಿ ಆದಾಯದ ಮೇಲೆ ಯಾವುದೇ ಇಂಡೆಕ್ಸೇಷನ್ ಇರದೆ 30% ತೆರಿಗೆ ಇದ್ದರೆ ಅದೇ ದೀರ್ಘಾವಧಿ ಆದಾಯದ ಮೇಲೆ ಇಂಡೆಕ್ಸೇಷನ್ ಸಹಿತ 20% ತೆರಿಗೆ ವಿಧಿಸಲಾಗಿದೆ. ಆದರೆ ಇಲ್ಲಿ ತೆರಿಗೆ ಅನ್ವಯವಾಗಲು ಹೋಲ್ಡಿಂಗ್ ಅವಧಿಯು 24 ತಿಂಗಳುಗಳನ್ನು ಮೀರಿರಬೇಕು ಎಂದಾಗಿದೆ.


  ಪ್ರಸ್ತುತ ಮನೆಸಾಲ ಪಡೆದವರಿಗೆ ಇರುವ ಮೂರು ಕಡಿತದ ಸೌಲಭ್ಯಗಳು ಯಾವುವು?


  ಹಳೆ ತೆರಿಗೆ ವ್ಯವಸ್ಥೆಯಂತೆ ಗೃಹಸಾಲ ಪಡೆದವರು ಗರಿಷ್ಠ 1.5 ಲಕ್ಷದವರೆಗೆ ಸೆಕ್ಷನ್ 80C ಅಡಿಯಲ್ಲಿ ಗೃಹಸಾಲದ ಪ್ರಿನ್ಸಿಪಲ್ ಮರುಪಾವತಿಯಲ್ಲಿ ಕಡಿತವನ್ನು ಕ್ಲೈಮ್ ಮಾಡಬಹುದು, ಆದರೆ ಇಲ್ಲಿ ನಿಗದಿಪಡಿಸಲಾದ ಈ ಗರಿಷ್ಠ ಕಡಿತದ ಮೊತ್ತವು ನಿಮ್ಮ ಕಡಿತದ ಸೌಲಭ್ಯಗಳನ್ನು ನೀಡುವ ಇತರೆ ಹೂಡಿಕೆಗಳಿಂದ ಮೀತಿಯನ್ನು ಮೀರಿರಬಾರದು.


  ಬಾತ್ರಾ ಅವರು ಹೇಳುವಂತೆ ಮನೆಸಾಲದ ಪ್ರಿನ್ಸಿಪಲ್ ಮೊತ್ತದ ಮರುಪಾವತಿಯ ಮೇಲೆ ಕಡಿತದ ಸೌಲಭ್ಯವನ್ನು ಮನೆ ನಿರ್ಮಾಣ ಮುಕ್ತಾಯವಾಗಿ ಅದಕ್ಕೆ ಸಂಬಂಧಿಸಿದಂತೆ ಪೂರ್ಣಗೊಂಡಿರುವ ಪ್ರಮಾಣಪತ್ರವನ್ನು ಸಲ್ಲಿಸಿದಾಗ ಮಾತ್ರ ನೀಡಲಾಗುವುದು ಎಂದಾಗಿದೆ.


  ಸಾಂದರ್ಭಿಕ ಚಿತ್ರ


  ಇದನ್ನೂ ಓದಿ:Home Loan EMI: ಹೋಮ್​ ಲೋನ್​ ಬಡ್ಡಿ ದರ ಹೆಚ್ಚಳ, ಹೀಗೆ EMI ಪ್ಲ್ಯಾನ್ ಮಾಡಿ!


  ಮನೆ ನಿರ್ಮಾಣಗೊಳ್ಳುತ್ತಿರುವ ಸಂದರ್ಭದಲ್ಲಿ ಯಾವುದೇ ರೀತಿಯ ಕಡಿತದ ಸೌಲಭ್ಯ ನೀಡಲಾಗುವುದಿಲ್ಲ ಎಂಬುದು ಮುಖ್ಯವಾದ ವಿಷಯ. ಅಲ್ಲದೆ ಕಡಿತದ ಸೌಲಭ್ಯ ಪಡೆದ ನಂತರ ಆ ಮನೆಯನ್ನು ಐದು ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ.


  ಒಂದು ವೇಳೆ ಮಾರಾಟವಾದರೆ ನಿಮಗೆ ನೀಡಿದ್ದ ಕಡಿತವನ್ನು ನಿಮ್ಮ ಆದಾಯ ಎಂದು ಪರಿಗಣಿಸಿ ಮಾರಾಟವಾದ ವರ್ಷದಲ್ಲಿ ಅದರ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಬಾತ್ರಾ ನುಡಿಯುತ್ತಾರೆ.
  ಎರಡನೇಯದಾಗಿ ಗೃಹಸಾಲದಿಂದ ಪಡೆದ ನಿಮ್ಮ ಮನೆಯಲ್ಲಿ ನೀವು ವಾಸ ಮಾಡುತ್ತಿದ್ದಾಗ ಸಾಲದ ಬಡ್ಡಿಯ ಮೇಲೆ ವಾರ್ಷಿಕವಾಗಿ ಎರಡು ಲಕ್ಷ ರೂ. ಗಳ ಕಡಿತದ ಕ್ಲೈಮ್ ಅನ್ನು ನೀವು ಸೆಕ್ಷನ್ 24ರ ಅಡಿ ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಮನೆಯನ್ನು ಖರೀದಿಸಿರಬೇಕು ಇಲ್ಲವೆ ಸಾಲ ಪಡೆದ ಐದು ಆರ್ಥಿಕ ವರ್ಷಗಳಲ್ಲಿ ನೀವು ಅದನ್ನು ನಿರ್ಮಿಸಿ ವಾಸಿಸುತ್ತಿರಬೇಕು.


  ಹೆಚ್ಚುವರಿಯಾಗಿ, ಮೊದಲ ಬಾರಿಗೆ ಮನೆ ಕೊಳ್ಳುವವರು ವಾರ್ಷಿಕವಾಗಿ 1.5 ಲಕ್ಷದವರೆಗೆ ಕಡಿತದ ಸೌಲಭ್ಯವನ್ನು ಸೆಕ್ಷನ್ 80EEA ಅಡಿಯಲ್ಲಿ ಪಡೆಯಬಹುದಾಗಿದೆ. ಆದರೆ ಈ ಸೌಲಭ್ಯವು 45 ಲಕ್ಷದ ಒಳಗಿರುವ ಆಸ್ತಿ ಹಾಗೂ ಏಪ್ರಿಲ್ 1, 2019 ರಿಂದ ಮಾರ್ಚ್ 31, 2022ರ ಮಧ್ಯದವರೆಗಿನ ಅವಧಿಗೆ ಮಾತ್ರ ಅನ್ವ್ಯವಾಗಲಿದೆ ಎನ್ನುತ್ತಾರೆ ಬಾತ್ರಾ.

  Published by:Gowtham K
  First published: